2021ರ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಸ್ಪೆಷಲ್ ಎಡಿಷನ್ ವಿಶೇಷತೆಗಳೇನು?

ಟಿವಿಎಸ್ ಮೋಟಾರ್(TVS Motor) ಕಂಪನಿಯು ತನ್ನ ಜನಪ್ರಿಯ ಅಪಾಚೆ ಆರ್‌ಟಿಆರ್ 160 4ವಿ ಮಾದರಿಯಲ್ಲಿ ಸ್ಪೆಷಲ್ ಎಡಿಷನ್(Apache RTR 160 4v Special Edition) ಬಿಡುಗಡೆಗೊಳಿಸಿದೆ.

ಹೊಸ ಅಪಾಚೆ ಆರ್‌ಟಿಆರ್ 160 4ವಿ ಮಾದರಿಯಲ್ಲಿ ಸ್ಪೆಷಲ್ ಎಡಿಷನ್ ಬೈಕ್ ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಬೈಕ್ ಮಾದರಿಯಲ್ಲಿ ಕಂಪನಿಯು ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದೆ. ಅಪಾಚೆ ಸರಣಿ ಬೈಕ್ ಮಾದರಿಗಳು ಪ್ರಪಂಚದಾದ್ಯಂತ ಇದುವರೆಗೆ 4 ಮಿಲಿಯನ್(40 ಲಕ್ಷ) ಯುನಿಟ್ ಮಾರಾಟಗೊಂಡಿದ್ದು, ಹೊಸ ಮಾರಾಟ ಮೈಲಿಗಲ್ಲು ವಿಶೇಷವಾಗಿ ಸ್ಫೆಷಲ್ ಎಡಿಷನ್ ಪರಿಚಯಿಸಲಾಗಿದೆ.

ಟಿವಿಎಸ್ ಕಂಪನಿಯು ಹೊಸ ಅಪಾಚೆ ಆರ್‌ಟಿಆರ್ 160 4ವಿ ಮಾದರಿಯಲ್ಲಿ ಸ್ಪೆಷಲ್ ಎಡಿಷನ್‌ನಲ್ಲಿ ರೆಡ್ ವ್ಹೀಲ್, ರೆಡ್ ಆಕ್ಸೆಂಟ್ ಸ್ಪೋರ್ಟಿ ಸೀಟ್, ಬ್ಲೂಟೂತ್ ಕನೆಕ್ಟಿವಿಟಿ, ಎಲ್ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಹಲವಾರು ಫೀಚರ್ಸ್‌ಗಳನ್ನು ಜೋಡಿಸಿದ್ದು, ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಎಂಜಿನ್‌ ಆಯ್ಕೆಯನ್ನು ಸ್ಫೆಷಲ್ ಎಡಿಷನ್‌ನಲ್ಲೂ ಮುಂದುವರಿಸಲಾಗಿದೆ.


ವಿಶೇಷ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ 159.7 ಸಿಸಿ ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್, ಬಿಎಸ್ 6 ಎಂಜಿನ್ ಪಡೆದುಕೊಂಡಿದ್ದು, ಈ ಎಂಜಿನ್ 9,250 ಆರ್‌ಪಿಎಂನಲ್ಲಿ 17.38 ಬಿಎಚ್‌ಪಿ ಪವರ್ ಮತ್ತು 7250 ಆರ್‌ಪಿಎಂನಲ್ಲಿ 14.73 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬೈಕ್ ರೇಸ್ ಟ್ಯೂನ್ಡ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಮ್ ಅನ್ನು ಪಡೆದುಕೊಂಡಿರುವುದರಿಂದ ಹೆಚ್ಚು ಥ್ರೊಟಲ್ ಪ್ರತಿಕ್ರಿಯೆಯನ್ನು ನೀಡುತ್ತದೆ.

ಹೊಸ ಬೈಕ್‌ನಲ್ಲಿ ಬ್ರೇಕಿಂಗ್ ಸೌಲಭ್ಯವನ್ನು ಸುಧಾರಿಸಲು ಸಿಂಗಲ್ ಚಾನೆಲ್ ಎಬಿಎಸ್ ಕೂಡಾ ನೀಡಲಾಗಿದ್ದು, ಹೊಸ ಅಪಾಚೆ ಆರ್‌ಟಿಆರ್ 160 4ವಿ ಡ್ಯುಯಲ್ ಪೆಟಲ್ ಡಿಸ್ಕ್ ಬ್ರೇಕ್‌ಗಳೊಂದಿಗೆ 6-ಸ್ಪೋಕ್ ಅಲಾಯ್ ಚಕ್ರಗಳನ್ನು ಪಡೆಯುತ್ತದೆ. ಈ ಬೈಕ್‌ನಲ್ಲಿ, ಕಂಪನಿಯು ಅಪಾಚೆ ಆರ್‌ಟಿಆರ್ 4ವಿ ಸರಣಿಯ ಡಬಲ್-ಬ್ಯಾರೆಲ್ ಸೈಲೆನ್ಸರ್ ಅನ್ನು ನೀಡಿದ್ದು, ಇದು ಅದರ ಶೈಲಿಯನ್ನು ಹೆಚ್ಚು ಸ್ಪೋರ್ಟಿಯನ್ನಾಗಿ ಮಾಡುತ್ತದೆ.

Most Read Articles

Kannada
English summary
Tvs apache rtr 160 4v special edition walkaround video
Story first published: Thursday, October 28, 2021, 12:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X