ಅಕ್ಟೋಬರ್ 7ರಂದು ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲಿದೆ TVS Motor ಕಂಪನಿ

ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ TVS ಇತ್ತೀಚೆಗಷ್ಟೇ ತನ್ನ Raider 125 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಹೊಸ ಬೈಕ್ ಭಾರತೀಯ ಗ್ರಾಹಕರಲ್ಲಿ ವ್ಯಾಪಕ ಸ್ವಾಗತವನ್ನು ಪಡೆದಿದೆ. ಈ ಬೈಕಿನ ಬಿಡುಗಡೆಯ ನಂತರ TVS Motor ಕಂಪನಿಯು ತನ್ನ ಮತ್ತೊಂದು ಹೊಸ ಉತ್ಪನ್ನವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.

ಅಕ್ಟೋಬರ್ 7ರಂದು ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲಿದೆ TVS Motor ಕಂಪನಿ

ಈ ಹೊಸ ವಾಹನವು ಅಕ್ಟೋಬರ್ 7 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಆದರೆ TVS ಕಂಪನಿಯು ತನ್ನ ಹೊಸ ದ್ವಿಚಕ್ರ ವಾಹನದ ವಿವರಗಳನ್ನು ಗೌಪ್ಯವಾಗಿರಿಸಿದೆ. ಈ ಹೊಸ ವಾಹನವು 125 ಸಿಸಿ ಸ್ಕೂಟರ್ ಆಗಿರಬಹುದು ಎಂದು ನಂಬಲಾಗಿದೆ. ಆಟೋ ಮೊಬೈಲ್ ಉದ್ಯಮವು TVS ಕಂಪನಿಯ ಹೊಸ ವಾಹನವು Jupiter 125 ಸ್ಕೂಟರ್ ಆಗಿರಬಹುದು ಎಂದು ಊಹಿಸುತ್ತಿದೆ.

ಅಕ್ಟೋಬರ್ 7ರಂದು ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲಿದೆ TVS Motor ಕಂಪನಿ

ಈ ರೀತಿ ಊಹೆ ಮಾಡುತ್ತಿರುವುದರ ಹಿಂದೆ ಕೆಲವು ಕಾರಣಗಳಿವೆ. TVS ಕಂಪನಿಯು 125 ಸಿಸಿ ಕಮ್ಯೂಟರ್ ಸೆಗ್ ಮೆಂಟಿನಲ್ಲಿ ಎರಡು ಹೊಸ ವಾಹನಗಳನ್ನು ಬಿಡುಗಡೆ ಮಾಡಲಿದೆ ಎಂಬ ವದಂತಿಗಳು ಹರಡಿದ್ದವು. ಅದರಂತೆ ಕಂಪನಿಯು ಕೆಲವು ದಿನಗಳ ಹಿಂದಷ್ಟೇ Raider 125 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಸರಣಿಯ ಎರಡನೇ ವಾಹನವು Jupiter 125 ಸ್ಕೂಟರ್ ಆಗಿರಬಹುದು ಎಂದು ಹೇಳಲಾಗುತ್ತಿದೆ.

ಅಕ್ಟೋಬರ್ 7ರಂದು ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲಿದೆ TVS Motor ಕಂಪನಿ

ಇದರಿಂದ ಅಕ್ಟೋಬರ್ 7 ರಂದು ಬಿಡುಗಡೆಯಾಗಲಿರುವ TVS ಕಂಪನಿಯ ಹೊಸ ವಾಹನವು Jupiter 125 ಸ್ಕೂಟರ್ ಆಗುವ ನಿರೀಕ್ಷೆಗಳಿವೆ. ಈ ಮಾಹಿತಿ ನಿಜವಾದರೆ ಹೊಸ TVS Jupiter 125 ಸ್ಕೂಟರ್ ಈ ಸೆಗ್ ಮೆಂಟಿನಲ್ಲಿ Honda Activa 125, Hero Maestro Edge 125 ಹಾಗೂ Suzuki Access 125 ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದೆ.

ಅಕ್ಟೋಬರ್ 7ರಂದು ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲಿದೆ TVS Motor ಕಂಪನಿ

TVS Motor ಕಂಪನಿಯ ಹೊಸ ವಾಹನವು Jupiter 125 ಸ್ಕೂಟರ್ ಆಗಿರಲು ಇನ್ನೂ ಕೆಲವು ಕಾರಣಗಳಿವೆ. TVS ಕಂಪನಿಯು ತನ್ನ ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲು ತನ್ನ ಆಹ್ವಾನದಲ್ಲಿ ಕಮ್ ಎಕ್ಸ್‌ಪೀರಿಯನ್ಸ್ ದಿ ಮೋರ್ ಎಂಬ ಟ್ಯಾಗ್‌ಲೈನ್ ಅನ್ನು ಬಳಸಿದೆ. ಬಹುಶಃ Jupiter 125 ಗ್ರಾಹಕರು ಹೆಚ್ಚು ಪವರ್, ಸೌಲಭ್ಯಗಳನ್ನು ಪಡೆಯುತ್ತಾರೆ ಎಂದು ಸೂಚಿಸಲು ಈ ಟ್ಯಾಗ್‌ಲೈನ್ ಅನ್ನು ಬಳಸಲಾಗಿದೆ ಎಂದು ಹೇಳಲಾಗುತ್ತಿದೆ.

ಅಕ್ಟೋಬರ್ 7ರಂದು ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲಿದೆ TVS Motor ಕಂಪನಿ

TVS ತನ್ನ ಟೀಸರ್ ಚಿತ್ರದಲ್ಲಿ ಹೊಸದಾಗಿ ಬಿಡುಗಡೆ ಮಾಡಲಾಗುವ ದ್ವಿಚಕ್ರ ವಾಹನದ ಎಲ್ಇಡಿ ಡಿ‌ಆರ್‌ಎಲ್ ಗಳನ್ನು ಶೇರ್ ಮಾಡಿದೆ. ಈ ಎಲ್ಇಡಿ ಡಿ‌ಆರ್‌ಎಲ್ ಗಳು Jupiter 125 ಸ್ಕೂಟರಿನ ಮುಂಭಾಗದ ಏಪ್ರನ್'ಗೆ ಹೊಂದಿಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ ಹೊಸ ವಾಹನವು Jupiter 125 ಸ್ಕೂಟರ್ ಆಗಿದ್ದರೆ TVS ಕಂಪನಿಯು ಈ ಸ್ಕೂಟರಿನಲ್ಲಿ 124.8 ಸಿಸಿ, ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟ್ ಇಂಜಿನ್ ಅಳವಡಿಸುವ ಸಾಧ್ಯತೆಗಳಿವೆ.

ಅಕ್ಟೋಬರ್ 7ರಂದು ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲಿದೆ TVS Motor ಕಂಪನಿ

ಈ ಎಂಜಿನ್ 7,000 ಆರ್‌ಪಿಎಂನಲ್ಲಿ ಗರಿಷ್ಠ 9.1 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 10.5 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಭಾರತದ 125 ಸಿಸಿ ದ್ವಿಚಕ್ರ ವಾಹನ ವಿಭಾಗವು ಅಗಾಧವಾಗಿ ಬೆಳೆಯುವ ನಿರೀಕ್ಷೆಗಳಿವೆ. ಈ ಹಿನ್ನೆಲೆಯಲ್ಲಿ ಈ ಸೆಗ್ ಮೆಂಟಿನಲ್ಲಿ ಹೆಚ್ಚು ಹೆಚ್ಚು ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸಲು ಹಲವು ಕಂಪನಿಗಳು ಸಜ್ಜಾಗಿವೆ.

ಅಕ್ಟೋಬರ್ 7ರಂದು ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲಿದೆ TVS Motor ಕಂಪನಿ

ಇದೇ ಕಾರಣದಿಂದಾಗಿ TVS ಕಂಪನಿಯು ಸಹ ಈ ಸೆಗ್ ಮೆಂಟಿನಲ್ಲಿ ಬಲವಾದ ನೆಲೆಯನ್ನು ಹೊಂದಲು ನಿರ್ಧರಿಸಿದೆ ಎಂಬುದು ಗಮನಾರ್ಹ. ಇನ್ನು ಇತ್ತೀಚೆಗೆ ಬಿಡುಗಡೆಯಾದ ಕಂಪನಿಯ Raider 125 ಬೈಕ್ ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಬೈಕಿನ ವಿನ್ಯಾಸವು ಯುವಜನರನ್ನು ಹೆಚ್ಚು ಆಕರ್ಷಿಸುತ್ತಿದೆ. TVS Raider 125 ಬೈಕ್ ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿದೆ.

ಅಕ್ಟೋಬರ್ 7ರಂದು ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲಿದೆ TVS Motor ಕಂಪನಿ

TVS ಕಂಪನಿಯ ಹೊಸ Raider 125 ಬೈಕ್ ಮುಂಬರುವ ದಿನಗಳಲ್ಲಿ ಪ್ರತಿ ತಿಂಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ನಿರೀಕ್ಷೆಗಳಿವೆ. TVS Motor ಜಾಗತಿಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಂಪನಿಯು ಈಗ ತನ್ನ ದ್ವಿಚಕ್ರ ವಾಹನಗಳನ್ನು ಹಾಗೂ ತ್ರಿಚಕ್ರ ವಾಹನಗಳನ್ನು 70 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಕಂಪನಿಯು ತನ್ನ ಮಾರಾಟ ಜಾಲವನ್ನು ವಿಸ್ತರಿಸುತ್ತಲೇ ಇದೆ.

ಅಕ್ಟೋಬರ್ 7ರಂದು ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲಿದೆ TVS Motor ಕಂಪನಿ

ಇತ್ತೀಚೆಗೆ TVS Motor ಕಂಪನಿಯು ದಕ್ಷಿಣ ಆಫ್ರಿಕಾದಲ್ಲಿ ತನ್ನ ವ್ಯಾಪಾರವನ್ನು ವಿಸ್ತರಿಸಲು ಇಟಿಜಿ ಲಾಜಿಸ್ಟಿಕ್ಸ್ ಜೊತೆ ಕೈ ಜೋಡಿಸಿದೆ. ಇಟಿಜಿ ಲಾಜಿಸ್ಟಿಕ್ಸ್ ಬಹು ರಾಷ್ಟ್ರೀಯ ಕಂಪನಿಯಾಗಿದ್ದು, 48 ಕ್ಕೂ ಹೆಚ್ಚು ದೇಶಗಳಲ್ಲಿ ವಿವಿಧ ರೀತಿಯ ಉದ್ಯಮಗಳಲ್ಲಿ ತೊಡಗಿಸಿ ಕೊಂಡಿದೆ. ಈ ಪಾಲುದಾರಿಕೆಯ ಅಡಿಯಲ್ಲಿ ಇಟಿಜಿಎಲ್ ದಕ್ಷಿಣ ಆಫ್ರಿಕಾದಲ್ಲಿ TVS Motor ಕಂಪನಿಯ 30 ಡೀಲರ್‌ಶಿಪ್‌ಗಳನ್ನು ನಿರ್ವಹಿಸಲಿದೆ.

ಅಕ್ಟೋಬರ್ 7ರಂದು ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲಿದೆ TVS Motor ಕಂಪನಿ

ಇಟಿಜಿಎಲ್ ಜೋಹಾನ್ಸ್‌ಬರ್ಗ್‌ನಲ್ಲಿ ಅಸೆಂಬ್ಲಿ ಸೆಟಪ್ ಹಾಗೂ ತರಬೇತಿ ಕೇಂದ್ರದೊಂದಿಗೆ ಮಾರಾಟ, ಸೇವೆ, ಸ್ಪರ್ಸ್ ಮತ್ತು ಗ್ರಾಹಕರ ಸಂಬಂಧ ನಿರ್ವಹಣೆಗಾಗಿ TVS Motor ಕಂಪನಿಯನ್ನು ಬೆಂಬಲಿಸಲಿದೆ. TVS Motor ಕಂಪನಿಯು ದಕ್ಷಿಣ ಆಫ್ರಿಕಾದಲ್ಲಿ TVS Apache Series, TVS HLX Series, TVS NTorq 125 ಹಾಗೂ TVS Duramax Cargo ವಾಹನಗಳನ್ನು ಮಾರಾಟ ಮಾಡಲಿದೆ.

ಅಕ್ಟೋಬರ್ 7ರಂದು ಹೊಸ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಲಿದೆ TVS Motor ಕಂಪನಿ

TVS Motor ಕಂಪನಿಯು 2020ರ ಆಗಸ್ಟ್ ತಿಂಗಳಿನಲ್ಲಿ 2,87,398 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ TVS Motor ಕಂಪನಿಯ ಮಾರಾಟ ಪ್ರಮಾಣವು 1.15% ನಷ್ಟು ಹೆಚ್ಚಳವಾಗಿದೆ. ಈ ಮೂಲಕ ಕಂಪನಿಯು 2021 ರ ಆಗಸ್ಟ್ ತಿಂಗಳಿನಲ್ಲಿ ಅಲ್ಪ ಪ್ರಮಾಣದ ಬೆಳವಣಿಗೆಯನ್ನು ಸಾಧಿಸಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Tvs company to launch a new two wheeler on october 7th in domestic market details
Story first published: Saturday, September 25, 2021, 12:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X