ಆಗಸ್ಟ್ ತಿಂಗಳ ಮಾರಾಟದಲ್ಲಿ Bajaj Chetak ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ TVS iQube

ಭಾರತದಲ್ಲಿ ಇಂಧನ ಬೆಲೆ ಏರಿಕೆಯ ಬಳಿಕ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಿಭಾಗದಲ್ಲಿ ಟಿವಿಎಸ್ ಐಕ್ಯೂಬ್(TVS iQube) ಮತ್ತು ಬಜಾಜ್ ಚೇತಕ್(Bajaj Chetak) ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳಾಗಿವೆ. ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳು ನಮ್ಮ ದೇಶದಲ್ಲಿ ಉತ್ತಮ ಮಾರಾಟವಾಗುತ್ತಿವೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ Bajaj Chetak ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ TVS iQube

ಟಿವಿಎಸ್ ಐಕ್ಯೂಬ್ ಕಳೆದ ತಿಂಗಳ ಮಾರಾಟದಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದೆ. ಕಳೆದ ತಿಂಗಳು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ 649 ಯುನಿಟ್‌ಗಳು ಮಾರಾಟವಾಗಿವೆ. ಟಿವಿಎಸ್ ಐಕ್ಯೂಬ್ ಕಳೆದ ತಿಂಗಳು 2,721.74 ಶೇಕಡದಷ್ಟು ಬೃಹತ್ ವರ್ಷದಿಂದ ವರ್ಷಕ್ಕೆ (YoY) ಬೆಳವಣಿಗೆಯನ್ನು ದಾಖಲಿಸಿದೆ, ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ 23 ಯೂನಿಟ್‌ಗಳು ಮಾರಾಟವಾಗಿತು.

ಆಗಸ್ಟ್ ತಿಂಗಳ ಮಾರಾಟದಲ್ಲಿ Bajaj Chetak ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ TVS iQube

ಇನ್ನು ಬಜಾಜ್ ಚೇತಕ್‌ಗೆ ಸಂಬಂಧಿಸಿದಂತೆ ಕಳೆದ ತಿಂಗಳು ಇದರ 364 ಯುನಿಟ್‌ಗಳು ಮಾರಾಟವಾಗಿವೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಕಳೆದ ತಿಂಗಳು 89.58 ಶೇಕಡಾ YoY ಮಾರಾಟದ ಬೆಳವಣಿಗೆಯನ್ನು ದಾಖಲಿಸಿದೆ, ಇನ್ನು ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಚೇತಕ್ ಮಾದರಿಯ 192 ಯೂನಿಟ್‌ಗಳು ಮಾರಾಟವಾಗಿತ್ತು.

ಆಗಸ್ಟ್ ತಿಂಗಳ ಮಾರಾಟದಲ್ಲಿ Bajaj Chetak ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ TVS iQube

ಜಾಗತಿಕ ಸೆಮಿಕಂಡಕ್ಟರ್ ಕೊರತೆಯಿಂದಾಗಿ, ಎಲ್ಲಾ ವಾಹನ ತಯಾರಕರು ಉತ್ಪಾದನಾ ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ. ಸೀಮಿತ ಉತ್ಪಾದನಾ ಸಾಮರ್ಥ್ಯದಿಂದಾಗಿ ಬಜಾಜ್ ಚೇತಕ್ ಗಾಗಿ ಹಲವು ಬಾರಿ ಬುಕಿಂಗ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಇ-ಸ್ಕೂಟರ್‌ಗಾಗಿ ಬುಕ್ಕಿಂಗ್ ಸ್ವೀಕರಿಸುತ್ತಿದ್ದಾರೆ, ಆದರೆ ಪ್ರಸ್ತುತ ಬ್ಯಾಚ್ ಇರುವವರೆಗೆ ಮಾತ್ರ. ಬುಕ್ಕಿಂಗ್ ಮಾಡಿದ ಗ್ರಾಹಕರು ವಿತರಣೆಯನ್ನು ಪಡೆಯಲು ಹೆಚ್ಚು ಸಮಯ ಕಾಯಬೇಕಾಗಿಲ್ಲ ಎಂದು ಇದು ಖಚಿತಪಡಿಸುತ್ತದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ Bajaj Chetak ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ TVS iQube

ಭಾರತೀಯರ ನೆಚ್ಚಿನ ಸ್ಕೂಟರ್ ಆಗಿದ್ದ ಚೇತಕ್ ಅನ್ನು ಎಲೆಕ್ಟ್ರಿಕ್ ರೂಪದಲ್ಲಿ ಕಳೆದ ವರ್ಷ ಬಜಾಜ್ ಕಂಪನಿಯು ಬಿಡುಗಡೆಗೊಳಿಸಿದ್ದರು. ಈ ಐಕಾನಿಕ್ ಚೇತಕ್ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನು ಮೂಡಿಸುವ ಪ್ರಯತ್ನವನ್ನು ಬಜಾಜ್ ಕಂಪನಿಯು ಮಾಡಿತು.

ಆಗಸ್ಟ್ ತಿಂಗಳ ಮಾರಾಟದಲ್ಲಿ Bajaj Chetak ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ TVS iQube

ಈ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಎಂಟ್ರಿ ಲೆವೆಲ್ ಅರ್ಬೈನ್ ಸ್ಕೂಟರ್ ಸಿಟ್ರಶ್ ರಶ್ ಮತ್ತು ಸೈಬರ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಪ್ರೀಮಿಯಂ ರೂಪಾಂತರವು ಹ್ಯಾಝಲ್ನಟ್, ಬ್ರೂಕ್ಲಿನ್ ಬ್ಲ್ಯಾಕ್, ಸಿಟ್ರಸ್ ರಶ್, ವೆಲುಟ್ಟೊ ರೊಸ್ಸೊ ಮತ್ತು ಇಂಡಿಗೊ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ Bajaj Chetak ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ TVS iQube

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ 4ಕೆ ಡಬ್ಲ್ಯು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಇಕೋ‌ ಮೋಡ್‍ನಲ್ಲಿ ಪ್ರತಿ ಚಾರ್ಜ್‌ಗೆ 95ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಚಾರ್ಜ್‌ಗೆ 85 ಕಿ.ಮೀ ವರೆಗೂ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ರಿರ್ವಸ್ ಅಸಿಸ್ಟ್ ಮೋಡ್ ಅನ್ನು ಕೂಡ ಹೊಂದಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ Bajaj Chetak ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ TVS iQube

ಚೇತಕ್ ಸ್ಕೂಟರ್ ಮೊದಲ ನೋಟದಲ್ಲಿ ವೆಸ್ಪಾ ಸ್ಕೂಟರ್‍‍ನಂತೆ ಕಾಣುತ್ತದೆ. ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿ ಬಳಕೆ ಮಾಡಲಾಗಿರುವ ಬ್ಯಾಟರಿ ಬರೋಬ್ಬರಿ 70 ಸಾವಿರ ಕಿ.ಮೀ ನಷ್ಟು ಕಾರ್ಯಕ್ಷಮತೆ ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‍‍ನಲ್ಲಿರುವ ಬಜಾಜ್ ಅಪ್ಲಿಕೇಶನ್ ಹೆಚ್ಚು ಅನುಕೂಲಕವಾಗಿದೆ. ಈ ಆ್ಯಪ್‍‍ನಲ್ಲಿ ಲೈವ್ ಟ್ರ್ಯಾಕಿಂಗ್ ಜೊತೆಗೆ ಟ್ರಿಪ್ ಅಂಕಿ ಅಂಶಗಳು, ಬಳಕೆದಾರರ ಮಾಹಿತಿ ಮತ್ತು ಹಲವಾರು ಸುರಕ್ಷತಾ ಮತ್ತು ಅನುಕೂಲಕರ ಫೀಚರ್ಸ್‍‍ಗಳಿವೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ Bajaj Chetak ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ TVS iQube

ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಕೂಡ ಬಜಾಜ್ ಚೇತಕ್‌ನಂತೆಯೇ ಬ್ರ್ಯಾಂಡ್‌ನ‌ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 4.4 ಕಿಲೋವ್ಯಾಟ್ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ, ಇದನ್ನು 3 ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಜೋಡಿಸಲಾಗಿದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ Bajaj Chetak ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ TVS iQube

ಈ ಎಲೆಕ್ಟ್ರಿಕ್ ಪವರ್‌ಟ್ರೇನ್ ಒಂದೇ ಚಾರ್ಜ್‌ನಲ್ಲಿ (ಇಕೋ ಮೋಡ್) ಗರಿಷ್ಠ 75 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದರ ಟಾಪ್ ಸ್ಪೀಡ್ 80 ಕಿ.ಮೀ ಆಗಿದೆ. ಈ ಐಕ್ಯೂಬ್ 4.2 ಸೆಕೆಂಡುಗಳಲ್ಲಿ 40 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಸುಮಾರು ನಾಲ್ಕು ಗಂಟೆಗಳ ಅವಧಿಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಶೇ.0 ದಿಂದ ಶೇ.75 ರಷ್ಟು ಚಾರ್ಜ್ ಆಗುತ್ತದೆ ಎಂದು ಟಿವಿಎಸ್ ಕಂಪನಿಯು ಹೇಳಿಕೊಂಡಿದೆ. ಇನ್ನು ಐದು ಗಂಟೆಗಳ ಅವಧಿಯಲ್ಲಿ ಇದು ಫುಲ್ ಚಾಚಾರ್ಜ್ ಆಗುತ್ತದೆ.

ಆಗಸ್ಟ್ ತಿಂಗಳ ಮಾರಾಟದಲ್ಲಿ Bajaj Chetak ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ TVS iQube

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ವಿಎಸ್ ಸ್ಮಾರ್ಟ್ ಕನೆಕ್ಟ್ ಪ್ಲಾಟ್‌ಫಾರ್ಮ್, ಸುಧಾರಿತ ಟಿಎಫ್‌ಟಿ ಕ್ಲಸ್ಟರ್ ಮತ್ತು ಟಿವಿಎಸ್ ಐಕ್ಯೂಬ್ ಅಪ್ಲಿಕೇಶನ್ ಅನ್ನು ಒಳಗೊಂಡಿದೆ. ಈ ಅಪ್ಲಿಕೇಶನ್ ಜಿಯೋ-ಫೆನ್ಸಿಂಗ್, ರಿಮೋಟ್ ಬ್ಯಾಟರಿ ಚಾರ್ಜ್ ಸ್ಟೇಟಸ್, ನ್ಯಾವಿಗೇಷನ್ ಅಸಿಸ್ಟ್, ಲಾಸ್ಟ್ ಪಾರ್ಕ್ ಲೋಕೆಷನ್ ಅನ್ನು ಕಾಲ್, ಎಸ್‌ಎಂಎಸ್ ಅಲರ್ಟ್ ಮತ್ತು ಇನ್ನಿತರ ಫೀಚರ್ಸ್ ಗಳನ್ನು ಒಳಗೊಂಡಿದೆ.ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೆಂಗಳೂರು, ಪುಣೆ, ಚೆನ್ನೈ, ಕೊಯಮತ್ತೂರು ಮತ್ತು ದೆಹಲಿಯಲ್ಲಿ ಲಭ್ಯವಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ದೇಶದಾದ್ಯಂತ 20 ನಗರಗಳಿಗೆ ವಿಸ್ತರಿಸಲು ಕಂಪನಿಯು ಸಜ್ಜಾಗಿದೆ

ಆಗಸ್ಟ್ ತಿಂಗಳ ಮಾರಾಟದಲ್ಲಿ Bajaj Chetak ಎಲೆಕ್ಟ್ರಿಕ್ ಸ್ಕೂಟರನ್ನು ಹಿಂದಿಕ್ಕಿದ TVS iQube

ಈ ಎಲೆಕ್ಟ್ರಿಕ್ ಸ್ಕೂಟರ್ ಕ್ಯೂ-ಪಾರ್ಕ್ ಅಸಿಸ್ಟ್, ಮಲ್ಟಿ-ಸೆಲೆಕ್ಟ್ ಎಕಾನಮಿ ಮತ್ತು ಪವರ್ ಮೋಡ್, ಡೇ&ನೈಟ್ ಡಿಸ್ ಪ್ಲೇಮ್ ರಿಜನರೇಟಿವ್ ಬ್ರೇಕಿಂಗ್ ಮುಂತಾದ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದರಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಗಳು, ಆಲ್-ಎಲ್ಇಡಿ ಟೈಲ್-ಲ್ಯಾಂಪ್ ಗಳು ಮತ್ತು ಪ್ರಕಾಶಮಾನವಾದ ಲೋಗೊವನ್ನು ಹೊಂದಿದೆ. ಈ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿರುವ ಎಥರ್ 450ಎಕ್ಸ್ , ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಒಕಿನಾವ ಸ್ಕೂಟರ್‌ಗಳಿಗೆ ಪೈಪೋಟಿ ನೀಡುತ್ತಿದೆ.

Most Read Articles

Kannada
English summary
Tvs iqube beats bajaj chetak electric scooter in august 2021 sales details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X