ಪುಣೆಯಲ್ಲಿ 75 ಕಿ.ಮೀ ರೇಂಜ್ ಹೊಂದಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ತನ್ನ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪುಣೆಯಲ್ಲಿ ಬಿಡುಗಡೆಗೊಳಿಸಿದೆ. ಪುಣೆಯಲ್ಲಿ ಈ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಆನ್-ರೋಡ್ ಬೆಲೆಯು ರೂ.1.11 ಲಕ್ಷಗಳಾಗಿದೆ.

ಪುಣೆಯಲ್ಲಿ 75 ಕಿ.ಮೀ ರೇಂಜ್ ಹೊಂದಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 4.4 ಕಿಲೋವ್ಯಾಟ್ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ, ಇದನ್ನು 3 ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ಗಳೊಂದಿಗೆ ಜೋಡಿಸಲಾಗಿದೆ. ಎಲೆಕ್ಟ್ರಿಕ್ ಪವರ್‌ಟ್ರೇನ್ ಒಂದೇ ಚಾರ್ಜ್‌ನಲ್ಲಿ (ಇಕೋ ಮೋಡ್) ಗರಿಷ್ಠ 75 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದರ ಟಾಪ್ ಸ್ಪೀಡ್ 80 ಕಿ.ಮೀ ಆಗಿದೆ. ಈ ಐಕ್ಯೂಬ್ 4.2 ಸೆಕೆಂಡುಗಳಲ್ಲಿ 40 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಪುಣೆಯಲ್ಲಿ 75 ಕಿ.ಮೀ ರೇಂಜ್ ಹೊಂದಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸುಮಾರು ನಾಲ್ಕು ಗಂಟೆಗಳ ಅವಧಿಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಶೇ.0 ದಿಂದ ಶೇ.75 ರಷ್ಟು ಚಾರ್ಜ್ ಆಗುತ್ತದೆ ಎಂದು ಟಿವಿಎಸ್ ಕಂಪನಿಯು ಹೇಳಿಕೊಂಡಿದೆ. ಇನ್ನು ಐದು ಗಂಟೆಗಳ ಅವಧಿಯಲ್ಲಿ ಇದು ಫುಲ್ ಚಾಚಾರ್ಜ್ ಆಗುತ್ತದೆ.

ಪುಣೆಯಲ್ಲಿ 75 ಕಿ.ಮೀ ರೇಂಜ್ ಹೊಂದಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ವಿಎಸ್ ಸ್ಮಾರ್ಟ್ ಕನೆಕ್ಟ್ ಪ್ಲಾಟ್‌ಫಾರ್ಮ್, ಸುಧಾರಿತ ಟಿಎಫ್‌ಟಿ ಕ್ಲಸ್ಟರ್ ಮತ್ತು ಟಿವಿಎಸ್ ಐಕ್ಯೂಬ್ ಅಪ್ಲಿಕೇಶನ್ ಅನ್ನು ಒಳಗೊಂಡಿದೆ. ಈ ಅಪ್ಲಿಕೇಶನ್ ಜಿಯೋ-ಫೆನ್ಸಿಂಗ್, ರಿಮೋಟ್ ಬ್ಯಾಟರಿ ಚಾರ್ಜ್ ಸ್ಟೇಟಸ್, ನ್ಯಾವಿಗೇಷನ್ ಅಸಿಸ್ಟ್, ಲಾಸ್ಟ್ ಪಾರ್ಕ್ ಲೋಕೆಷನ್ ಅನ್ನು ಕಾಲ್, ಎಸ್‌ಎಂಎಸ್ ಅಲರ್ಟ್ ಮತ್ತು ಇನ್ನಿತರ ಫೀಚರ್ಸ್ ಗಳನ್ನು ಒಳಗೊಂಡಿದೆ.

ಪುಣೆಯಲ್ಲಿ 75 ಕಿ.ಮೀ ರೇಂಜ್ ಹೊಂದಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಎಲೆಕ್ಟ್ರಿಕ್ ಸ್ಕೂಟರ್ ಕ್ಯೂ-ಪಾರ್ಕ್ ಅಸಿಸ್ಟ್, ಮಲ್ಟಿ-ಸೆಲೆಕ್ಟ್ ಎಕಾನಮಿ ಮತ್ತು ಪವರ್ ಮೋಡ್, ಡೇ&ನೈಟ್ ಡಿಸ್ ಪ್ಲೇಮ್ ರಿಜನರೇಟಿವ್ ಬ್ರೇಕಿಂಗ್ ಮುಂತಾದ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದರಲ್ಲಿ ಎಲ್ಇಡಿ ಹೆಡ್ ಲ್ಯಾಂಪ್ ಗಳು, ಆಲ್-ಎಲ್ಇಡಿ ಟೈಲ್-ಲ್ಯಾಂಪ್ ಗಳು ಮತ್ತು ಪ್ರಕಾಶಮಾನವಾದ ಲೋಗೊವನ್ನು ಹೊಂದಿದೆ.

ಪುಣೆಯಲ್ಲಿ 75 ಕಿ.ಮೀ ರೇಂಜ್ ಹೊಂದಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಖರೀದಿಸಲು ಬಯಸುವ ಆಸಕ್ತ ಗಾಹ್ರಕರು ಟಿವಿಎಸ್ ವೆಬ್‌ಸೈಟ್ ಮೂಲಕ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆನ್‌ಲೈನ್‌ನಲ್ಲಿ ಟೋಕನ್ ಮೊತ್ತ ರೂ.5,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಪುಣೆಯಲ್ಲಿ 75 ಕಿ.ಮೀ ರೇಂಜ್ ಹೊಂದಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಪ್ರಸ್ತುತ ಬೆಂಗಳೂರು, ಪುಣೆ, ಚೆನ್ನೈ, ಕೊಯಮತ್ತೂರು ಮತ್ತು ದೆಹಲಿಯಲ್ಲಿ ಲಭ್ಯವಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ದೇಶದಾದ್ಯಂತ 20 ನಗರಗಳಿಗೆ ವಿಸ್ತರಿಸಲು ಕಂಪನಿಯು ಸಜ್ಜಾಗಿದೆ. ಇದರಲ್ಲಿ ಮುಂಬೈ, ಹೈದರಾಬಾದ್, ಅಹಮದಾಬಾದ್, ಕೋಲ್ಕತಾ ಮತ್ತು ಇತರ ನಗರಗಳು ಕೂಡ ಸೇರಿವೆ.

ಪುಣೆಯಲ್ಲಿ 75 ಕಿ.ಮೀ ರೇಂಜ್ ಹೊಂದಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಕಂಪನಿಯು ಹೆಚ್ಚುವರಿ ರೂ.10,000 ಗಳಿಗೆ ಸ್ಮಾರ್ಟ್ ಎಕ್ಸ್ ಹೋಮ್ ಎಂಬ ಎಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಸಹ ಒದಗಿಸುತ್ತಿದೆ. ಚಾರ್ಜರ್ ಅನ್ನು ಕಂಪನಿಯು ಉಚಿತವಾಗಿ ಅಳವಡಿಸುತ್ತದೆ.

ಪುಣೆಯಲ್ಲಿ 75 ಕಿ.ಮೀ ರೇಂಜ್ ಹೊಂದಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಈ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಈಗ ಪುಣೆ ಸೇರಿದಂತೆ ಐದು ನಗರಗಳಲ್ಲಿ ಲಭ್ಯವಿದೆ. ಫೇಮ್ 2 ಸಬ್ಸಿಡಿಯಿಂದ ಟಿವಿಎಸ್ ಕಂಪನಿಯು ತನ್ನ ಐಕ್ಯೂಬ್ ಸ್ಕೂಟರ್ ಬೆಲೆಯನ್ನು ಇಳಿಕೆ ಮಾಡಿದೆ. ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿರುವ ಎಥರ್ 450ಎಕ್ಸ್ , ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಒಕಿನಾವ ಸ್ಕೂಟರ್‌ಗಳಿಗೆ ಪೈಪೋಟಿ ನೀಡುತ್ತಿದೆ.

Most Read Articles

Kannada
English summary
TVS iQube Electric Scooter Launched In Pune. Read In Kannada.
Story first published: Thursday, July 1, 2021, 15:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X