ಫೇಮ್ 2 ಸಬ್ಸಡಿ: ಟಿವಿಎಸ್ ಐಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ

ಕೇಂದ್ರ ಸರ್ಕಾರವು ಹೆಚ್ಚುತ್ತಿರುವ ಇಂಧನ ಬೆಲೆ ತಗ್ಗಿಸಲು ತುರ್ತಾಗಿ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಹೆಚ್ಚಿಸುವತ್ತ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಫೇಮ್ 2 ಯೋಜನೆಯ ತಿದ್ದುಪಡಿಯ ಮೂಲಕ ಇವಿ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿ ಸಬ್ಸಡಿ ನೀಡಲು ಒಪ್ಪಿಗೆ ಸೂಚಿಸಿದೆ.

ಫೇಮ್ 2 ಸಬ್ಸಡಿ: ಟಿವಿಎಸ್ ಐಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ

ಫೇಮ್ 2 ತಿದ್ದುಪಡಿಯ ಪರಿಣಾಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿಯಾಗಿ ಇದೀಗ ರೂ. 10 ಸಾವಿರದಿಂದ ರೂ.15 ಸಾವಿರ ಹೆಚ್ಚುವರಿ ಸಬ್ಸಡಿ ದೊರೆಯುತ್ತಿದ್ದು, ಹೊಸ ಸಬ್ಸಡಿ ತಿದ್ದುಪಡಿ ಘೋಷಣೆ ಮಾಡುತ್ತಿದ್ದಂತೆ ಪ್ರಮುಖ ವಾಹನ ಕಂಪನಿಗಳು ತಮ್ಮ ಇವಿ ಸ್ಕೂಟರ್‌ಗಳ ಬೆಲೆ ಕಡಿತ ಮಾಡಿದ್ದು, ಟಿವಿಎಸ್ ಕಂಪನಿಯು ತನ್ನ ಐಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಶೇ. 5ರಿಂದ ಶೇ. 8ರಷ್ಟು ಇಳಿಕೆ ಮಾಡಿದೆ.

ಫೇಮ್ 2 ಸಬ್ಸಡಿ: ಟಿವಿಎಸ್ ಐಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ

ಐಕ್ಯೂಬ್ ಸ್ಕೂಟರ್ ಬೆಲೆಯು ಹೊಸ ಸಬ್ಸಡಿ ಅನುಮೋದನೆಗೆ ಮೊದಲು ಬೆಂಗಳೂರಿನಲ್ಲಿ ಆನ್‌-ರೋಡ್ ಪ್ರಕಾರ ರೂ.1.15 ಲಕ್ಷ ಬೆಲೆ ಹೊಂದಿತ್ತು. ಇದೀಗ ಹೊಸ ಸಬ್ಸಡಿ ದರ ಸೇರಿದ ನಂತರ ಗ್ರಾಹಕರಿಗೆ ಹೊಸ ಸ್ಕೂಟರ್ ಆನ್‌ರೋಡ್ ಪ್ರಕಾರ ರೂ. 1,10,506 ಲಭ್ಯವಾಗಿದೆ.

ಫೇಮ್ 2 ಸಬ್ಸಡಿ: ಟಿವಿಎಸ್ ಐಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ

ದೆಹಲಿಯಲ್ಲಿ ಇದೇ ಸ್ಕೂಟರ್ ಮಾದರಿಯು ಅಲ್ಲಿನ ಇವಿ ಪಾಲಿಸಿ ಅಡಿಯಲ್ಲಿನ ಕೆಲವು ವಿನಾಯ್ತಿಗಳೊಂದಿಗೆ ರೂ. 1,00,777 ಬೆಲೆ ಹೊಂದಿದ್ದು, ದೆಹಲಿಯಲ್ಲಿ ಖರೀದಿಗೆ ಲಭ್ಯವಿರುವ ಐಕ್ಯೂಬ್ ಮಾದರಿಯ ಮೇಲೆ ರೂ. 8 ಸಾವಿರದಷ್ಟು ಹೆಚ್ಚುವರಿ ಸಬ್ಸಡಿ ಲಭ್ಯವಿದೆ.

ಫೇಮ್ 2 ಸಬ್ಸಡಿ: ಟಿವಿಎಸ್ ಐಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ

ಫೇಮ್ 2 ಸಬ್ಸಡಿ ತಿದ್ದುಪಡಿಯಲ್ಲಿ ಹೆಚ್ಚುವರಿ ಸಬ್ಸಡಿ ಪಡೆದುಕೊಳ್ಳುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಡ್ಡಾಯವಾಗಿ ಪ್ರತಿ ಗಂಟೆಗೆ ಕನಿಷ್ಠ 40 ಕಿ.ಮೀ ಟಾಪ್ ಸ್ಪೀಡ್ ಜೊತೆಗೆ ಪ್ರತಿ ಚಾರ್ಜ್‌ಗೆ ಕನಿಷ್ಠ 80 ಕಿ.ಮೀ ಮೈಲೇಜ್ ಹಿಂದಿರುಗಿಸಬೇಕೆಂಬ ಮಾನದಂಡವನ್ನು ಜಾರಿಗೆ ತಂದಿದೆ.

ಫೇಮ್ 2 ಸಬ್ಸಡಿ: ಟಿವಿಎಸ್ ಐಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ

ಎಕಾನಮಿ ಮೋಡ್‌ನಲ್ಲಿ ಐಕ್ಯೂಬ್ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 75 ಕಿಮೀ ಮೈಲೇಜ್ ಮತ್ತು ಪವರ್ ಮೋಡ್‌ ರೈಡಿಂಗ್‌ನಲ್ಲಿ ಗರಿಷ್ಠ 70 ಕಿಮೀ ಮೈಲೇಜ್ ಹಿಂದಿರುಗಿಸಲಿದ್ದರೂ ಉತ್ತಮ ಬ್ಯಾಟರಿ ಪ್ಯಾಕ್‌ನೊಂದಿಗೆ ಟಾಪ್ ಸ್ಪೀಡ್‌ನಲ್ಲಿ ಗಮನಸೆಳೆಯುತ್ತಿದ್ದು, ಇದೇ ಕಾರಣಕ್ಕಾಗಿ ಐಕ್ಯೂಬ್ ಮಾದರಿಗಾಗಿ ಗರಿಷ್ಠ ಸಬ್ಸಡಿ ಲಭ್ಯವಾಗಿಲ್ಲವಾದರೂ ಹೊಸ ಸ್ಕೂಟರ್ ಖರೀದಿದಾರರಿಗೆ ತುಸು ಉಳಿತಾಯವಾಯವಾಗಲಿದೆ.

ಫೇಮ್ 2 ಸಬ್ಸಡಿ: ಟಿವಿಎಸ್ ಐಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮಾನದಂಡಗಳನ್ನು ಪಾಲನೆ ಮಾಡುತ್ತಿರುವ ಪ್ರಮುಖ ಸ್ಕೂಟರ್‌ಗಳಿಗೆ ರೂ.15 ಸಾವಿರ ತನಕ ಹೆಚ್ಚುವರಿ ಸಬ್ಸಡಿ ನೀಡಲಾಗುತ್ತಿದ್ದು, ಐಕ್ಯೂಬ್ ಮಾದರಿಗಾಗಿ ರೂ.5 ಸಾವಿರದಿಂದ ರೂ.7 ಸಾವಿರದಷ್ಟು ಸಬ್ಸಡಿ ಲಭ್ಯವಾಗಿದೆ.

ಫೇಮ್ 2 ಸಬ್ಸಡಿ: ಟಿವಿಎಸ್ ಐಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಎಲೆಕ್ಟ್ರಿಕ್ ಸ್ಕೂಟರ್‌ಗಿಂತಲೂ ಆಕರ್ಷಕ ವಿನ್ಯಾಸ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಹೊತ್ತುಬಂದಿದ್ದು, ಹೊಸ ಸ್ಕೂಟರ್‌ನಲ್ಲಿ 4.4kW ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯದೊಂದಿಗೆ ಉತ್ತಮ ಮೈಲೇಜ್ ಹೊಂದಿದ್ದು, ಪ್ರತಿ ಗಂಟೆಗೆ ಗರಿಷ್ಠ 78 ಕಿಮೀ ಟಾಪ್ ಸ್ಪೀಡ್‌ನೊಂದಿಗೆ ಎಕಾನಮಿ ಮತ್ತು ಪವರ್ ಮೊಡ್ ಮೂಲಕ ಅತ್ಯುತ್ತಮ ರೈಡಿಂಗ್ ಸೌಲಭ್ಯವನ್ನು ಒದಗಿಸುತ್ತದೆ.

ಫೇಮ್ 2 ಸಬ್ಸಡಿ: ಟಿವಿಎಸ್ ಐಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ

ವಿಶೇಷ ಅಂದ್ರೆ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಹೋಮ್ ಚಾರ್ಜರ್ ಜೊತೆಗೆ ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳ ಸೇವೆಯನ್ನು ನೀಡಲಾಗುತ್ತಿದ್ದು, ಹೊಸ ಸ್ಕೂಟರ್‌ನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಹಲವಾರು ಫೀಚರ್ಸ್‌ಗಳಿವೆ.

ಫೇಮ್ 2 ಸಬ್ಸಡಿ: ಟಿವಿಎಸ್ ಐಕ್ಯೂಬ್ ಸ್ಕೂಟರ್ ಬೆಲೆಯಲ್ಲಿ ಇಳಿಕೆ

ಹೊಸ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಎಥರ್ 450ಎಕ್ಸ್ , ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಒಕಿನಾವ ಸ್ಕೂಟರ್‌ಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಬೆಂಗಳೂರು ಮತ್ತು ದೆಹಲಿ ನಂತರ ಕಂಪನಿಯು ಮುಂದಿನ ಕೆಲವೇ ತಿಂಗಳಿನಲ್ಲಿ ಹೊಸ ಸ್ಕೂಟರ್ ಮಾರಾಟವನ್ನು ದೇಶದ ಪ್ರಮುಖ ನಗರಗಳಿಗೆ ಪರಿಚಯಿಸಲಾಗುತ್ತಿದೆ.

Most Read Articles

Kannada
English summary
TVS Motor Company announces new prices for the iQube electric scooter. Read in Kannada.
Story first published: Wednesday, June 16, 2021, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X