ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ TVS Motor ಕಂಪನಿ

ತಮಿಳುನಾಡಿನ ಹೊಸೂರಿನಲ್ಲಿ ಉತ್ಪಾದನಾ ಘಟಕವನ್ನು ಹೊಂದಿರುವ TVS Motor ಕಂಪನಿಯು ಕಳೆದ ತಿಂಗಳು ಒಟ್ಟು 3,47,156 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. TVS Motor ಕಂಪನಿಯ ಈ ವರ್ಷದ ಸೆಪ್ಟೆಂಬರ್ ತಿಂಗಳ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳ ಮಾರಾಟ ಪ್ರಮಾಣಕ್ಕಿಂತ 6% ನಷ್ಟು ಹೆಚ್ಚಾಗಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ TVS Motor ಕಂಪನಿಯು 3,27,692 ಯುನಿಟ್ TVS ವಾಹನಗಳನ್ನು ಮಾರಾಟ ಮಾಡಿತ್ತು.

ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ TVS Motor ಕಂಪನಿ

ಹಾಗೆಯೇ ಸೆಪ್ಟೆಂಬರ್‌ ತಿಂಗಳ ಮಾರಾಟ ಪ್ರಮಾಣವು ಆಗಸ್ಟ್ ತಿಂಗಳ ಮಾರಾಟಕ್ಕಿಂತ 19.42% ನಷ್ಟು ಚ್ಚಾಗಿದೆ. ಆಗಸ್ಟ್ ತಿಂಗಳಿನಲ್ಲಿ TVS Motor ಕಂಪನಿಯು 3 ಲಕ್ಷಕ್ಕಿಂತ ಕಡಿಮೆ ಅಂದರೆ 2,90,694 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಕಳೆದ ತಿಂಗಳು TVS Motor ಮಾರಾಟ ಮಾಡಿರುವ 3,47,156 ಯುನಿಟ್ ವಾಹನಗಳಲ್ಲಿ ‌ದ್ವಿ ಚಕ್ರ ವಾಹನಗಳು ಮಾತ್ರವಲ್ಲದೆ ತ್ರಿಚಕ್ರ ವಾಹನಗಳೂ ಸಹ ಸೇರಿವೆ.

ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ TVS Motor ಕಂಪನಿ

ದ್ವಿಚಕ್ರ ಚಕ್ರ ವಾಹನ ಮಾರಾಟದ ಬಗ್ಗೆ ಹೇಳುವುದಾದರೆ TVS Motor ಕಂಪನಿಯು ಕಳೆದ ತಿಂಗಳು 3,32,511 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 3,13,332 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದರೆ, ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ 2,74,313 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ TVS Motor ಕಂಪನಿ

ಈ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಕಳೆದ ತಿಂಗಳು TVS ದ್ವಿಚಕ್ರ ವಾಹನಗಳ ಮಾರಾಟದಲ್ಲಿ 58,000 ಕ್ಕಿಂತ ಹೆಚ್ಚು ಏರಿಕೆ ಕಂಡು ಬಂದಿದೆ. ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಕಳೆದ ತಿಂಗಳು TVS ದ್ವಿಚಕ್ರ ವಾಹನಗಳ ದೇಶಿಯ ಮಾರಾಟವು 35.60% ನಷ್ಟು ಹೆಚ್ಚಾಗಿದೆ. ಇನ್ನು ಕಂಪನಿಯ ತ್ರಿಚಕ್ರ ವಾಹನಗಳ ಮಾರಾಟದ ಬಗ್ಗೆ ಹೇಳುವುದಾದರೆ ಸೆಪ್ಟೆಂಬರ್ ತಿಂಗಳಿಗಿಂತೆ ಆಗಸ್ಟ್ ತಿಂಗಳಿನಲ್ಲಿ ಹೆಚ್ಚು ತ್ರಿ ಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ.

ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ TVS Motor ಕಂಪನಿ

ಕಳೆದ ಆಗಸ್ಟ್‌ನಲ್ಲಿ 16,381 ಯುನಿಟ್‌ ತ್ರಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದ್ದರೆ, ಸೆಪ್ಟೆಂಬರ್ ತಿಂಗಳಿನಲ್ಲಿ 14,645 ಯುನಿಟ್ ತ್ರಿ ಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದೆ. 2020ರ ಸೆಪ್ಟೆಂಬರ್‌ ತಿಂಗಳಿನಲ್ಲಿ 14,360 ಯುನಿಟ್ ತ್ರಿ ಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಕಳೆದ ತಿಂಗಳು ರಫ್ತು ಮಾಡಲಾದ TVS ಕಂಪನಿಯ ತ್ರಿ ಚಕ್ರಗಳ ಮಾರಾಟ ಪ್ರಮಾಣವು ಆಗಸ್ಟ್ ತಿಂಗಳಿಗಿಂತ 11.41% ನಷ್ಟು ಕಡಿಮೆಯಾಗಿದೆ.

ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ TVS Motor ಕಂಪನಿ

ಕಂಪನಿಯು ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ 13,832 ಯುನಿಟ್ ತ್ರಿ ಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. TVS Motor ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಒಟ್ಟು 2,44,897 ವಾಹನಗಳನ್ನು ಮಾರಾಟ ಮಾಡಿದೆ. ಈ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 2,42,529 ಯುನಿಟ್ ಹಾಗೂ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ 1,80,767 ಯುನಿಟ್‌ಗಳಾಗಿತ್ತು.

ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ TVS Motor ಕಂಪನಿ

ಕಳೆದ ತಿಂಗಳು TVS Motor ಕಂಪನಿಯು ದ್ವಿಚಕ್ರ ವಾಹನ ಹಾಗೂ ತ್ರಿ ಚಕ್ರ ವಾಹನಗಳು ಸೇರಿದಂತೆ ಒಟ್ಟು 1,02,259 ಯುನಿಟ್ ವಾಹನಗಳನ್ನು ವಿದೇಶಕ್ಕೆ ರಫ್ತು ಮಾಡಿದೆ. ಈ ಪ್ರಮಾಣವು 2021ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ 6.98% ನಷ್ಟು ಕಡಿಮೆಯಾಗಿದ್ದರೆ, 2020ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 20.07% ನಷ್ಟು ಹೆಚ್ಚಾಗಿದೆ. ಆಗಸ್ಟ್ ತಿಂಗಳಿನಲ್ಲಿ 1,09,927 ಯುನಿಟ್ ವಾಹನಗಳನ್ನು ರಫ್ತು ಮಾಡಲಾಗಿದ್ದರೆ, 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 85,163 ಯುನಿಟ್ ವಾಹನಗಳನ್ನು ರಫ್ತು ಮಾಡಲಾಗಿದೆ.

ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ TVS Motor ಕಂಪನಿ

TVS Motor ಕಂಪನಿಯ ಬೈಕುಗಳ ಮಾರಾಟವು 1,66,046 ಯೂನಿಟ್‌ಗಳಿಗೆ ಏರಿಕೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಕಂಪನಿಯು 1.40 ಲಕ್ಷ ಯುನಿಟ್ ಬೈಕುಗಳನ್ನು ಮಾರಾಟ ಮಾಡಿತ್ತು. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಕಂಪನಿಯು ಒಟ್ಟು 1.34 ಲಕ್ಷ ಯುನಿಟ್ ಬೈಕುಗಳನ್ನು ಮಾರಾಟ ಮಾಡಿತ್ತು. ಇದೇ ವೇಳೆ TVS Motor ಕಂಪನಿಯ ಸ್ಕೂಟರ್‌ಗಳ ಮಾರಾಟವೂ ಹೆಚ್ಚಾಗಿದೆ.

ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ TVS Motor ಕಂಪನಿ

TVS Motor ಕಂಪನಿಯು ಕಳೆದ ತಿಂಗಳು 1,04,091 ಯುನಿಟ್ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಇನ್ನು TVS ಮೊಪೆಡ್‌ಗಳ ಮಾರಾಟದಲ್ಲಿ ಯಾವುದೇ ದೊಡ್ಡ ಬದಲಾವಣೆಯಾಗಿಲ್ಲ. ಪ್ರಸಕ್ತ ಹಣಕಾಸು ವರ್ಷವಾದ 2021 - 22ರ ಎರಡನೇ ತ್ರೈಮಾಸಿಕದಲ್ಲಿ TVS Motor ಕಂಪನಿಯು ಒಟ್ಟು 8.70 ಲಕ್ಷ ಯುನಿಟ್ ವಾಹನಗಳನ್ನು ವಿಶ್ವಾದ್ಯಂತ ಮಾರಾಟ ಮಾಡಿದೆ.

ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ TVS Motor ಕಂಪನಿ

ಆದರೆ 2020 - 21ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕೇವಲ 8.34 ಲಕ್ಷ ಯುನಿಟ್ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಈ ಬಾರಿ ಕಂಪನಿಯ ಮಾರಾಟ ಪ್ರಮಾಣವು 4% ನಷ್ಟು ಕಡಿಮೆಯಾಗಿದೆ. TVS Motor ಕಂಪನಿಯ ತ್ರಿ ಚಕ್ರ ವಾಹನಗಳ ಮಾರಾಟ ಪ್ರಮಾಣವು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 41% ನಷ್ಟು ಹೆಚ್ಚಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ TVS Motor ಕಂಪನಿಯು ಸುಮಾರು 47,000 ಯುನಿಟ್ ತ್ರಿ ಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಏರಿಕೆ ದಾಖಲಿಸಿದ TVS Motor ಕಂಪನಿ

ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 33,000 ತ್ರಿ ಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. TVS Motor ಕಂಪನಿಯು ಇತ್ತೀಚಿಗಷ್ಟೇ ತನ್ನ Jupiter 125 ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಸ್ಕೂಟರ್ ಅನ್ನು ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ Jupiter 125 ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 73,400 ಗಳಾಗಿದೆ.

Most Read Articles

Kannada
English summary
Tvs motor company sales increases by 6 percent in september 2021 details
Story first published: Monday, October 11, 2021, 12:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X