ದಕ್ಷಿಣ ಆಫ್ರಿಕಾದಲ್ಲಿ 30 ಹೊಸ ಶೋರೂಂಗಳನ್ನು ತೆರೆಯಲು ಮುಂದಾದ TVS Motor

ಭಾರತೀಯ ಮೂಲದ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ TVS Motor ಜಾಗತಿಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಂಪನಿಯು ಈಗ ತನ್ನ ದ್ವಿಚಕ್ರ ವಾಹನಗಳನ್ನು ಹಾಗೂ ತ್ರಿಚಕ್ರ ವಾಹನಗಳನ್ನು 70 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಕಂಪನಿಯು ತನ್ನ ಮಾರಾಟ ಜಾಲವನ್ನು ವಿಸ್ತರಿಸುತ್ತಲೇ ಇದೆ.

ದಕ್ಷಿಣ ಆಫ್ರಿಕಾದಲ್ಲಿ 30 ಹೊಸ ಶೋರೂಂಗಳನ್ನು ತೆರೆಯಲು ಮುಂದಾದ TVS Motor

ಇತ್ತೀಚೆಗೆ TVS Motor ಕಂಪನಿಯು ದಕ್ಷಿಣ ಆಫ್ರಿಕಾದಲ್ಲಿ ತನ್ನ ವ್ಯಾಪಾರವನ್ನು ವಿಸ್ತರಿಸಲು ಇಟಿಜಿ ಲಾಜಿಸ್ಟಿಕ್ಸ್ ಜೊತೆ ಕೈ ಜೋಡಿಸಿದೆ. ಇಟಿಜಿ ಲಾಜಿಸ್ಟಿಕ್ಸ್ಬಹುರಾಷ್ಟ್ರೀಯ ಕಂಪನಿಯಾಗಿದ್ದು, 48 ಕ್ಕೂ ಹೆಚ್ಚು ದೇಶಗಳಲ್ಲಿ ವಿವಿಧ ರೀತಿಯ ಉದ್ಯಮಗಳಲ್ಲಿ ತೊಡಗಿಸಿ ಕೊಂಡಿದೆ. ಈ ಪಾಲುದಾರಿಕೆಯ ಅಡಿಯಲ್ಲಿ ಇಟಿಜಿಎಲ್ ದಕ್ಷಿಣ ಆಫ್ರಿಕಾದಲ್ಲಿ TVS Motor ಕಂಪನಿಯ 30 ಡೀಲರ್‌ಶಿಪ್‌ಗಳನ್ನು ನಿರ್ವಹಿಸಲಿದೆ.

ದಕ್ಷಿಣ ಆಫ್ರಿಕಾದಲ್ಲಿ 30 ಹೊಸ ಶೋರೂಂಗಳನ್ನು ತೆರೆಯಲು ಮುಂದಾದ TVS Motor

ಇಟಿಜಿಎಲ್ ಜೋಹಾನ್ಸ್‌ಬರ್ಗ್‌ನಲ್ಲಿ ಅಸೆಂಬ್ಲಿ ಸೆಟಪ್ ಹಾಗೂ ತರಬೇತಿ ಕೇಂದ್ರದೊಂದಿಗೆ ಮಾರಾಟ, ಸೇವೆ, ಸ್ಪರ್ಸ್ ಮತ್ತು ಗ್ರಾಹಕರ ಸಂಬಂಧ ನಿರ್ವಹಣೆಗಾಗಿ TVS Motor ಕಂಪನಿಯನ್ನು ಬೆಂಬಲಿಸಲಿದೆ. TVS Motor ಕಂಪನಿಯು ದಕ್ಷಿಣ ಆಫ್ರಿಕಾದಲ್ಲಿ TVS Apache Series, TVS HLX Series, TVS NTorq 125 ಹಾಗೂ TVS Duramax Cargo ವಾಹನಗಳನ್ನು ಮಾರಾಟ ಮಾಡಲಿದೆ.

ದಕ್ಷಿಣ ಆಫ್ರಿಕಾದಲ್ಲಿ 30 ಹೊಸ ಶೋರೂಂಗಳನ್ನು ತೆರೆಯಲು ಮುಂದಾದ TVS Motor

ಪ್ರೀಮಿಯಂ ಬೈಕ್ ಸರಣಿಯಾದ TVS Apache ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಿದರೆ, TVS HLX, ವೈಯಕ್ತಿಕ ಪ್ರಯಾಣ ಹಾಗೂ ವಾಣಿಜ್ಯ ವಿತರಣಾವಿಭಾಗಗಳಿಗೆ ಲಾಸ್ಟ್ ಮೈಲಿ ಕನೆಕ್ಟಿವಿಟಿಯನ್ನು ಒದಗಿಸುತ್ತದೆ. ಇನ್ನು TVS Ntorq 125 ಆಕರ್ಷಕವಾದ ವಿನ್ಯಾಸ ಹಾಗೂ ಬ್ಲೂಟೂತ್ ಫೀಚರ್ ಅನ್ನು ಹೊಂದಿದೆ.

ದಕ್ಷಿಣ ಆಫ್ರಿಕಾದಲ್ಲಿ 30 ಹೊಸ ಶೋರೂಂಗಳನ್ನು ತೆರೆಯಲು ಮುಂದಾದ TVS Motor

ಇನ್ನು Duramax ತ್ರಿ ಚಕ್ರ ವಾಹನವು ಸರಕು ವಿತರಣಾ ಅಗತ್ಯಗಳನ್ನು ಪೂರೈಸುವ ಕೈಗೆಟುಕುವ ವಾಹನವಾಗಿದೆ. ಇದೇ ವೇಳೆ TVS Motor ಕಂಪನಿಯು ತನ್ನ ಆಗಸ್ಟ್ ತಿಂಗಳ ಮಾರಾಟ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ಅಂಕಿ ಅಂಶಗಳ ಪ್ರಕಾರ, ಆಗಸ್ಟ್ ತಿಂಗಳಿನಲ್ಲಿ TVS Motor ಕಂಪನಿಯು ಒಟ್ಟು 2,90,694 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ದಕ್ಷಿಣ ಆಫ್ರಿಕಾದಲ್ಲಿ 30 ಹೊಸ ಶೋರೂಂಗಳನ್ನು ತೆರೆಯಲು ಮುಂದಾದ TVS Motor

ಕಂಪನಿಯು 2020ರ ಆಗಸ್ಟ್ ತಿಂಗಳಿನಲ್ಲಿ 2,87,398 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ TVS Motor ಕಂಪನಿಯ ಮಾರಾಟ ಪ್ರಮಾಣವು 1.15% ನಷ್ಟು ಹೆಚ್ಚಳವಾಗಿದೆ. ಈ ಮೂಲಕ ಕಂಪನಿಯು 2021 ರ ಆಗಸ್ಟ್ ತಿಂಗಳಿನಲ್ಲಿ ಅಲ್ಪ ಪ್ರಮಾಣದ ಬೆಳವಣಿಗೆಯನ್ನು ಸಾಧಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ 30 ಹೊಸ ಶೋರೂಂಗಳನ್ನು ತೆರೆಯಲು ಮುಂದಾದ TVS Motor

ಈ ಅಂಕಿ ಅಂಶಗಳು ಕಂಪನಿಯ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಮಾರಾಟವನ್ನು ಒಳಗೊಂಡಿವೆ. ಕಳೆದ ತಿಂಗಳು ಕಂಪನಿಯು ಒಟ್ಟು 2,74,313 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ, ಇದರಲ್ಲಿ ಕಂಪನಿಯು 1,79,999 ದ್ವಿಚಕ್ರ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.

ದಕ್ಷಿಣ ಆಫ್ರಿಕಾದಲ್ಲಿ 30 ಹೊಸ ಶೋರೂಂಗಳನ್ನು ತೆರೆಯಲು ಮುಂದಾದ TVS Motor

ಇದೇ ವೇಳೆ ಕಂಪನಿಯು 94,314 ಯುನಿಟ್ ವಾಹನಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ. ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣವು ದೇಶಿಯ ಮಾರುಕಟ್ಟೆಯಲ್ಲಿ 17.56% ನಷ್ಟು ಇಳಿಕೆಯಾಗಿದೆ. ಮತ್ತೊಂದೆಡೆ ದ್ವಿಚಕ್ರ ವಾಹನಗಳ ರಫ್ತು ಪ್ರಮಾಣವು 60.16% ನಷ್ಟು ಏರಿಕೆಯಾಗಿದೆ. TVS Motor ಕಂಪನಿಯು ಕಳೆದ ತಿಂಗಳು ಒಟ್ಟು 768 ಯುನಿಟ್ ತ್ರಿ ಚಕ್ರ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದೆ.

ದಕ್ಷಿಣ ಆಫ್ರಿಕಾದಲ್ಲಿ 30 ಹೊಸ ಶೋರೂಂಗಳನ್ನು ತೆರೆಯಲು ಮುಂದಾದ TVS Motor

ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ ಒಟ್ಟು 713 ಯುನಿಟ್ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಈ ವರ್ಷದ ಆಗಸ್ಟ್‌ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ತ್ರಿಚಕ್ರ ವಾಹನಗಳ ಮಾರಾಟ ಪ್ರಮಾಣವು 7.71% ನಷ್ಟು ಏರಿಕೆಯಾಗಿದೆ. ಕಂಪನಿಯ ತ್ರಿ ಚಕ್ರ ವಾಹನಗಳ ರಫ್ತು ಬಗ್ಗೆ ಹೇಳುವುದಾದರೆ TVS Motor ಕಂಪನಿಯು ಕಳೆದ ತಿಂಗಳು 15,613 ಯುನಿಟ್ ವಾಹನಗಳನ್ನು ರಫ್ತು ಮಾಡಿದೆ.

ದಕ್ಷಿಣ ಆಫ್ರಿಕಾದಲ್ಲಿ 30 ಹೊಸ ಶೋರೂಂಗಳನ್ನು ತೆರೆಯಲು ಮುಂದಾದ TVS Motor

2020ರ ಆಗಸ್ಟ್ ತಿಂಗಲಿನಲ್ಲಿ ಒಟ್ಟು 9,459 ಯುನಿಟ್ ತ್ರಿ ಚಕ್ರ ವಾಹನಗಳನ್ನು ರಫ್ತು ಮಾಡಲಾಗಿತ್ತು. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಕಂಪನಿಯು ತ್ರಿ ಚಕ್ರ ವಾಹನಗಳ ರಫ್ತಿನಲ್ಲಿ 65.06% ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಂಪನಿಯು ಈಗ ತನ್ನ ಹೊಸ TVS Apache RR 310 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 2.59 ಲಕ್ಷಗಳಾಗಿದೆ. ಕಂಪನಿಯು ಶೀಘ್ರದಲ್ಲೇ ಈ ಬೈಕಿನ ಬುಕ್ಕಿಂಗ್ ಗಳನ್ನು ಆರಂಭಿಸಲಿದೆ.

ದಕ್ಷಿಣ ಆಫ್ರಿಕಾದಲ್ಲಿ 30 ಹೊಸ ಶೋರೂಂಗಳನ್ನು ತೆರೆಯಲು ಮುಂದಾದ TVS Motor

TVS Motor ಕಂಪನಿಯು ನೇಪಾಳದಲ್ಲಿಯೂ ತನ್ನ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತದೆ. ಕಂಪನಿಯು ಇತ್ತೀಚಿಗಷ್ಟೇ ತನ್ನ ಬಿಎಸ್ 6 NTorq 125 ಸ್ಕೂಟರ್ ಅನ್ನು ನೇಪಾಳದಲ್ಲಿ ಬಿಡುಗಡೆಗೊಳಿಸಿದೆ. ನೇಪಾಳದಲ್ಲಿ ಬಿಡುಗಡೆಯಾಗಿರುವ ಹೊಸ TVS NTorq 125 ಸ್ಕೂಟರ್ ಅನ್ನು ಡ್ರಮ್, ಡಿಸ್ಕ್, ರೇಸ್ ಎಡಿಷನ್, ರೇಸ್ ಎಡಿಷನ್ ಬಿಎಸ್ 6 ಎಫ್‌ಐ ಹಾಗೂ ಸೂಪರ್‌ಸ್ಕ್ವಾಡ್ ಎಡಿಷನ್ ಎಂಬ ಐದು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ 30 ಹೊಸ ಶೋರೂಂಗಳನ್ನು ತೆರೆಯಲು ಮುಂದಾದ TVS Motor

TVS NTorq 125 ಸ್ಕೂಟರ್ ತನ್ನ ಕನೆಕ್ಟಿವಿಟಿ ಫೀಚರ್ಸ್ ಹಾಗೂ ಥೋರ್ಟಿ ಎಕ್ಸಾಸ್ಟ್ ನೋಟ್ ಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆದಿದೆ. TVS NTorq 125 ಸ್ಕೂಟರ್ ಅನ್ನು ದಕ್ಷಿಣ ಏಷ್ಯಾ, ಲ್ಯಾಟಿನ್ ಅಮೆರಿಕಾ, ಮಧ್ಯಪ್ರಾಚ್ಯ ಹಾಗೂ ಏಷ್ಯಾದ ಹಲವು ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ.

Most Read Articles

Kannada
English summary
Tvs motor company to start 30 new showrooms in south africa details
Story first published: Wednesday, September 8, 2021, 15:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X