ತನ್ನ ದ್ವಿಚಕ್ರ ವಾಹನಗಳಲ್ಲಿ ಹೊಸ ಫೀಚರ್ ನೀಡಲಿದೆ ಟಿವಿಎಸ್ ಕನೆಕ್ಟ್

ಭಾರತೀಯ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ (TVS Motor) ತನ್ನ ಟಿವಿಎಸ್ ಕನೆಕ್ಟ್ ಅಪ್ಲಿಕೇಶನ್ ಅನ್ನು ನವೀಕರಿಸಿದೆ. ಯಾವುದೇ ಸ್ಥಳಕ್ಕೆ ನ್ಯಾವಿಗೇಷನ್ ಮಾಡಲು ಬಳಸಬಹುದಾದ ಟಿವಿಎಸ್ ಕನೆಕ್ಟ್ ಅಪ್ಲಿಕೇಶನ್‌ಗೆ What3words ಅನ್ನು ಸೇರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.ಈ ಮೂಲಕ ಟಿವಿಎಸ್ ಮೋಟಾರ್ ಕಂಪನಿಯು ತನ್ನ ವಾಹನಗಳಲ್ಲಿ ಈ ಫೀಚರ್ ಅನ್ನು ತಂದ ಮೊದಲ ಭಾರತೀಯ ದ್ವಿಚಕ್ರ ವಾಹನ ತಯಾರಕ ಕಂಪನಿ ಎನಿಸಿಕೊಂಡಿದೆ.

ತನ್ನ ದ್ವಿಚಕ್ರ ವಾಹನಗಳಲ್ಲಿ ಹೊಸ ಫೀಚರ್ ನೀಡಲಿದೆ ಟಿವಿಎಸ್ ಕನೆಕ್ಟ್

What3words ಫೀಚರ್ ಅನ್ನು ಈಗ ನಾಲ್ಕು ಚಕ್ರಗಳಲ್ಲಿ ನೀಡಲಾಗುತ್ತಿದೆ. Altroz ​​ನಂತಹ ಕಾರಿನಲ್ಲಿ ನ್ಯಾವಿಗೇಷನ್ ಉದ್ದೇಶಗಳಿಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಈ ಫೀಚರ್ ಅನ್ನು ನೀಡುತ್ತಿದೆ.

ತನ್ನ ದ್ವಿಚಕ್ರ ವಾಹನಗಳಲ್ಲಿ ಹೊಸ ಫೀಚರ್ ನೀಡಲಿದೆ ಟಿವಿಎಸ್ ಕನೆಕ್ಟ್

What3word ಫೀಚರ್ ಬಗ್ಗೆ:

What3words ಫೀಚರ್ ಬಳಕೆದಾರರಿಗೆ ನಿಖರವಾದ ಸ್ಥಳವನ್ನು ಗುರುತಿಸಲು ನೆರವಾಗುತ್ತದೆ. ಈ ಫೀಚರ್, ವರ್ಡ್ ಅನ್ನು 57 ಟ್ರಿಲಿಯನ್ ಗ್ರಿಡ್‌ಗಳಾಗಿ ವಿಂಗಡಿಸಿದೆ. ಪ್ರತಿಯೊಂದೂ ವರ್ಡ್ 3 ಮೀಟರ್‌ಗಳಿಗಿಂತ ಹೆಚ್ಚು ಗಾತ್ರದಲ್ಲಿಲ್ಲ. ಪ್ರತಿಯೊಂದು ಗ್ರಿಡ್ ಅನ್ನು ಮೂರು ಪದಗಳ ವಿಶಿಷ್ಟ ಸಂಯೋಜನೆಯಿಂದ ಗುರುತಿಸಲಾಗುತ್ತದೆ. What3words ಫೀಚರ್ ಆಫ್‌ಲೈನ್‌ನಲ್ಲಿಯೂ ಸಹ ಕಾರ್ಯನಿರ್ವಹಿಸುತ್ತದೆ.

ತನ್ನ ದ್ವಿಚಕ್ರ ವಾಹನಗಳಲ್ಲಿ ಹೊಸ ಫೀಚರ್ ನೀಡಲಿದೆ ಟಿವಿಎಸ್ ಕನೆಕ್ಟ್

ಅಂದರೆ ಬೈಕ್ ಸವಾರರು ಇಂಟರ್ನೆಟ್ ಸಂಪರ್ಕವನ್ನು ಹೊಂದದೇ ಇರುವ ಸ್ಥಳಗಳಲ್ಲಿಯೂ ಸಹ ಈ ಫೀಚರ್ ಅನ್ನು ಬಳಸಬಹುದು. ಈ ಫೀಚರ್ ಸಂಪೂರ್ಣವಾಗಿ ವಿಶ್ವಾಸಾರ್ಹವಾಗಿದ್ದು, ಬೈಕ್ ಸವಾರರಿಗೆ ಅತ್ಯಂತ ನಿಖರವಾದ ನ್ಯಾವಿಗೇಷನ್ ಅನ್ನು ಒದಗಿಸುತ್ತದೆ. ಟಿವಿಎಸ್ ಮೋಟಾರ್ ಕಂಪನಿಯು ಆರಂಭದಲ್ಲಿ ಈ ಫೀಚರ್ ಅನ್ನು ಅಪಾಚೆ ಬೈಕ್ ಸರಣಿಯಲ್ಲಿ ಪರಿಚಯಿಸಲಿದೆ.

ತನ್ನ ದ್ವಿಚಕ್ರ ವಾಹನಗಳಲ್ಲಿ ಹೊಸ ಫೀಚರ್ ನೀಡಲಿದೆ ಟಿವಿಎಸ್ ಕನೆಕ್ಟ್

ನಂತರ ಇತರ ಮಾದರಿಗಳಲ್ಲಿ ಪರಿಚಯಿಸಲಿದೆ. ಟಿವಿಎಸ್ ಮೋಟಾರ್ ಕಂಪನಿಯು ನವೆಂಬರ್ ತಿಂಗಳಲ್ಲಿ ಒಟ್ಟು 2,57,863 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 2020ರ ನವೆಂಬರ್ ತಿಂಗಳಿನಲ್ಲಿ 3,11,519 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಮಾರಾಟ ಪ್ರಮಾಣವು ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ನವೆಂಬರ್ ತಿಂಗಳಿನಲ್ಲಿ 17% ನಷ್ಟು ಕುಸಿತವಾಗಿದೆ.

ತನ್ನ ದ್ವಿಚಕ್ರ ವಾಹನಗಳಲ್ಲಿ ಹೊಸ ಫೀಚರ್ ನೀಡಲಿದೆ ಟಿವಿಎಸ್ ಕನೆಕ್ಟ್

ಈ ಮಾರಾಟ ಪ್ರಮಾಣವು ದೇಶಿಯ ಮಾರುಕಟ್ಟೆಯ ಮಾರಾಟ ಹಾಗೂ ರಫ್ತು ಎರಡನ್ನೂ ಒಳಗೊಂಡಿದೆ. ಇದೇ ವೇಳೆ ಕಂಪನಿಯು 2021ರ ನವೆಂಬರ್ ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 1,75,940 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ 2,47,789 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಸ್ಕೂಟರ್ ಮಾರಾಟದ ಬಗ್ಗೆ ಹೇಳುವುದಾದರೆ ಕಂಪನಿಯು ಕಳೆದ ತಿಂಗಳು 75,022 ಯುನಿಟ್‌ ಸ್ಕೂಟರ್'ಗಳನ್ನು ಮಾರಾಟ ಮಾಡಿದೆ.

ತನ್ನ ದ್ವಿಚಕ್ರ ವಾಹನಗಳಲ್ಲಿ ಹೊಸ ಫೀಚರ್ ನೀಡಲಿದೆ ಟಿವಿಎಸ್ ಕನೆಕ್ಟ್

2020ರ ನವೆಂಬರ್'ನಲ್ಲಿ 1,06,196 ಯುನಿಟ್‌ ಸ್ಕೂಟರ್'ಗಳನ್ನು ಮಾರಾಟ ಮಾಡಲಾಗಿತ್ತು. ಕಂಪನಿಯ ರಫ್ತಿನ ಬಗ್ಗೆ ಹೇಳುವುದಾದರೆ ಕಂಪನಿಯು 2020ರ ನವೆಂಬರ್ ತಿಂಗಳಿನಲ್ಲಿ 74,074 ಯುನಿಟ್‌ ವಾಹನಗಳನ್ನು ರಫ್ತು ಮಾಡಿತ್ತು. ಈ ವರ್ಷದ ನವೆಂಬರ್‌ನಲ್ಲಿ ಕಂಪನಿಯು 96,000 ಯುನಿಟ್‌ ವಾಹನಗಳನ್ನು ರಫ್ತು ಮಾಡುವ ಮೂಲಕ ಕಳೆದ ವರ್ಷಕ್ಕಿಂತ 30% ನಷ್ಟು ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ.

ತನ್ನ ದ್ವಿಚಕ್ರ ವಾಹನಗಳಲ್ಲಿ ಹೊಸ ಫೀಚರ್ ನೀಡಲಿದೆ ಟಿವಿಎಸ್ ಕನೆಕ್ಟ್

ಇನ್ನು ದ್ವಿಚಕ್ರ ವಾಹನ ರಫ್ತುಗಳ ಬಗ್ಗೆ ಹೇಳುವುದಾದರೆ ಕಂಪನಿಯು 2020ರ ನವೆಂಬರ್ ತಿಂಗಳಿನಲ್ಲಿ 63,730 ಯುನಿಟ್‌ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಿತ್ತು. 2021 ರ ನವೆಂಬರ್‌ ತಿಂಗಳಿನಲ್ಲಿ ಕಂಪನಿಯು 81,923 ಯುನಿಟ್‌ ದ್ವಿಚಕ್ರ ವಾಹನಗಳನ್ನು ರಫ್ತು ಮಾಡುವ ಮೂಲಕ 29% ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ.

ತನ್ನ ದ್ವಿಚಕ್ರ ವಾಹನಗಳಲ್ಲಿ ಹೊಸ ಫೀಚರ್ ನೀಡಲಿದೆ ಟಿವಿಎಸ್ ಕನೆಕ್ಟ್

ಚೆನ್ನೈ ಮೂಲದ ಟಿವಿಎಸ್ ಮೋಟಾರ್ ಕಂಪನಿಯು ಮುಂದಿನ ನಾಲ್ಕು ವರ್ಷಗಳಲ್ಲಿ ತಮಿಳುನಾಡಿನಲ್ಲಿ ಫ್ಯೂಚರಿಸ್ಟಿಕ್ ತಂತ್ರಜ್ಞಾನ ಹಾಗೂ ಎಲೆಕ್ಟ್ರಿಕ್ ವಾಹನಗಳ ಮೇಲೆ ರೂ. 1,200 ಕೋಟಿ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಈ ನಿಟ್ಟಿನಲ್ಲಿ ತಮಿಳುನಾಡು ಸರಕಾರದೊಂದಿಗೆ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಟಿವಿಎಸ್ ಮೋಟಾರ್ ಈ ಹೂಡಿಕೆಯನ್ನು ಪ್ರಾಥಮಿಕವಾಗಿ ವಿನ್ಯಾಸ, ಅಭಿವೃದ್ಧಿ, ಹೊಸ ಉತ್ಪನ್ನಗಳ ತಯಾರಿಕೆ ಹಾಗೂ ಇವಿ ವಲಯದಲ್ಲಿ ಸಾಮರ್ಥ್ಯ ವಿಸ್ತರಣೆಗಾಗಿ ಮಾಡುತ್ತದೆ.

ತನ್ನ ದ್ವಿಚಕ್ರ ವಾಹನಗಳಲ್ಲಿ ಹೊಸ ಫೀಚರ್ ನೀಡಲಿದೆ ಟಿವಿಎಸ್ ಕನೆಕ್ಟ್

ಕಂಪನಿಯು ಅಪಾಚೆ ಸರಣಿಯಲ್ಲಿರುವ RTR 160 4V, Apache RTR 200 4V ಹಾಗೂ Apache RR 310 ಬೈಕುಗಳಲ್ಲಿ ಟಿವಿಎಸ್ ಕನೆಕ್ಟ್ ಅಪ್ಲಿಕೇಶನ್ ಫೀಚರ್ ಅನ್ನು ನೀಡುತ್ತದೆ. ಇದರ ಜೊತೆಗೆ ಟಿವಿಎಸ್ ಕನೆಕ್ಟ್ ಆ್ಯಪ್ ಫೀಚರ್ ಅನ್ನು ಎನ್‌ಟಾರ್ಕ್ 125 ಸ್ಕೂಟರ್‌ನಲ್ಲಿ ನೀಡುತ್ತದೆ.

ತನ್ನ ದ್ವಿಚಕ್ರ ವಾಹನಗಳಲ್ಲಿ ಹೊಸ ಫೀಚರ್ ನೀಡಲಿದೆ ಟಿವಿಎಸ್ ಕನೆಕ್ಟ್

ಇತ್ತೀಚೆಗೆ ಟಿವಿಎಸ್ ಮೋಟಾರ್ ಹಾಗೂ ಬಿಎಂಡಬ್ಲ್ಯು ಮೊಟೊರಾಡ್ ಕಂಪನಿಗಳು ಜಂಟಿಯಾಗಿ ಹೊಸ ಸರಣಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅಭಿವೃದ್ಧಿಪಡಿಸಲು ಪಾಲುದಾರಿಕೆಯನ್ನು ಮಾಡಿಕೊಂಡಿವೆ. ಪಾಲುದಾರಿಕೆಯ ಭಾಗವಾಗಿ ಭಾರತದಲ್ಲಿ ಸ್ಕೂಟರ್‌ಗಳಿಂದ ಮೋಟಾರ್‌ಸೈಕಲ್‌ಗಳವರೆಗೆ ಹಲವಾರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಲು ಈ ಎರಡು ಕಂಪನಿಗಳು ಜಂಟಿಯಾಗಿ ಎಲೆಕ್ಟ್ರಿಕ್ ವೆಹಿಕಲ್ ಪ್ಲಾಟ್‌ಫಾರಂ ಅನ್ನು ಅಭಿವೃದ್ಧಿಪಡಿಸುತ್ತಿವೆ.

ತನ್ನ ದ್ವಿಚಕ್ರ ವಾಹನಗಳಲ್ಲಿ ಹೊಸ ಫೀಚರ್ ನೀಡಲಿದೆ ಟಿವಿಎಸ್ ಕನೆಕ್ಟ್

ಹೊಸ ಸರಣಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಟಿವಿಎಸ್ ಮೋಟಾರ್ ಕಂಪನಿಯ ಭಾರತದಲ್ಲಿರುವ ಉತ್ಪಾದನಾ ಘಟಕಗಳಲ್ಲಿ ಉತ್ಪಾದಿಸಲಾಗುತ್ತದೆ. ಈ ವಾಹನಗಳನ್ನು ಭಾರತದಲ್ಲಿ ಮಾರಾಟ ಮಾಡುವುದರ ಜೊತೆಗೆ ಪ್ರಪಂಚದ ಇತರ ಭಾಗಗಳಿಗೂ ರಫ್ತು ಮಾಡಲಾಗುತ್ತದೆ.

ತನ್ನ ದ್ವಿಚಕ್ರ ವಾಹನಗಳಲ್ಲಿ ಹೊಸ ಫೀಚರ್ ನೀಡಲಿದೆ ಟಿವಿಎಸ್ ಕನೆಕ್ಟ್

ಟಿವಿಎಸ್ ಹಾಗೂ ಬಿಎಂಡಬ್ಲ್ಯು ಕಂಪನಿಯು ಈಗಾಗಲೇ ಭಾರತದಲ್ಲಿ 310 ಸಿಸಿ ಮೋಟಾರ್‌ಸೈಕಲ್‌ಗಳನ್ನು ಸಹಭಾಗಿತ್ವದ ಅಡಿಯಲ್ಲಿ ಒಂದು ರೀತಿಯ ವೇದಿಕೆಯಲ್ಲಿ ಅಭಿವೃದ್ಧಿಪಡಿಸುತ್ತಿವೆ. ಈ ಪ್ಲಾಟ್‌ಫಾರಂನಲ್ಲಿ ಅಭಿವೃದ್ಧಿಪಡಿಸಲಿರುವ ದ್ವಿಚಕ್ರ ವಾಹನಗಳನ್ನು ಟಿವಿಎಸ್‌ನ ಹೊಸೂರು (ತಮಿಳುನಾಡು) ಘಟಕದಲ್ಲಿ ತಯಾರಿಸಲಾಗುತ್ತದೆ.

Most Read Articles

Kannada
English summary
Tvs motor company updates connect x app with what3word feature details
Story first published: Tuesday, December 21, 2021, 16:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X