ನೇಪಾಳದಲ್ಲಿ ಬಿಎಸ್6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ತನ್ನ ಬಿಎಸ್6 ಎನ್‌ಟಾರ್ಕ್ 125 ಸ್ಕೂಟರನ್ನು ನೇಪಾಳದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಐದು ರೂಪಾಂತರಗಳಲ್ಲಿ ಬಿಡುಗಡಯಾಗಿದೆ.

ನೇಪಾಳದಲ್ಲಿ ಬಿಎಸ್6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ನೇಪಾಳದಲ್ಲಿ ಹೊಸ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಡ್ರಮ್, ಡಿಸ್ಕ್, ರೇಸ್ ಎಡಿಷನ್, ರೇಸ್ ಎಡಿಷನ್ ಬಿಎಸ್6 ಎಫ್‌ಐ ಮತ್ತು ಸೂಪರ್‌ಸ್ಕ್ವಾಡ್ ಎಡಿಷನ್ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಎನ್‌ಟಾರ್ಕ್ 125 ಸ್ಕೂಟರ್ ಕನೆಕ್ಟಿವಿಟಿ ಫೀಚರ್ಸ್ ಗಳನ್ನು ಮತ್ತು ಥೋರ್ಟಿ ಎಕ್ಸಾಸ್ಟ್ ನೋಟ್ ನಿಂದ ಸ್ಕೂಟರ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಿತು. ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಮಾರಾಟವನ್ನು ದಕ್ಷಿಣ ಏಷ್ಯಾ, ಲ್ಯಾಟಿನ್ ಅಮೆರಿಕ. ಮಧ್ಯಪ್ರಾಚ್ಯ ಮತ್ತು ಏಷ್ಯಾದ ಮಾರುಕಟ್ಟೆಗಳು ಸೇರಿದಂತೆ ಹಲವು ದೇಶಗಳಿಗೆ ವಿಸ್ತರಿಸಲಾಗಿದೆ.

ನೇಪಾಳದಲ್ಲಿ ಬಿಎಸ್6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಈ ಬಿಎಸ್6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ರೇಸ್-ಟ್ಯೂನ್ಡ್ ಮತ್ತು ಫ್ಯೂಯಲ್ ಇಂಜೆಕ್ಟಡ್ 124.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,000 ಆರ್‌ಪಿಎಂನಲ್ಲಿ 9.1 ಬಿಹೆಚ್‌ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 10.5 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ನೇಪಾಳದಲ್ಲಿ ಬಿಎಸ್6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಈ ಎಂಜಿನ್ ಅನ್ನು ಸಿವಿಟಿ ಯುನಿಟ್ ನೊಂದಿಗೆ ಜೋಡಿಸಲಾಗಿದೆ. ನೇಪಾಳದಲ್ಲಿ ಬಿಡುಗಡೆಗೊಂಡ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ 5.8-ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ನೇಪಾಳದಲ್ಲಿ ಬಿಎಸ್6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ನೇಪಾಳದಲ್ಲಿ ಬಿಡುಗಡೆಗೊಂಡ ಮೊದಲ ಬ್ಲೂಟೂತ್ ಕನೆಕ್ಟಿವಿಟಿ ಫೀಚರ್ ಹೊಂದಿರುವ ಸ್ಕೂಟರ್ ಈ ಟಿವಿಎಸ್ ಎನ್‌ಟಾರ್ಕ್ 125 ಆಗಿದೆ. ಈ ಎನ್‌ಟಾರ್ಕ್ 125 ಸ್ಕೂಟರ್ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ.

ನೇಪಾಳದಲ್ಲಿ ಬಿಎಸ್6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಇದು ಕಂಪನಿಯ ಸ್ಮಾರ್ಟ್ ಎಕ್ಸ್ ಕನೆಕ್ಟ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ಫೀಚರ್ ಮೂಲಕ ಸ್ಮಾರ್ಟ್ ಫೋನ್ ಅನ್ನು ಬ್ಲೂಟೂತ್ ಮೂಲಕ ಸ್ಕೂಟರ್'ಗೆ ಕನೆಕ್ಟ್ ಮಾಡಿ ಹಲವಾರು ಫೀಚರ್ಸ್ ಗಳನ್ನು ಕೂಡ ಬಳಸಬಹುದು.

ನೇಪಾಳದಲ್ಲಿ ಬಿಎಸ್6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಇದರ ಕ್ಲಸ್ಟರ್ ನ್ಯಾವಿಗೇಷನ್ ಅಸಿಸ್ಟ್, ಟಾಪ್ ಸ್ಪೀಡ್ ರೆಕಾರ್ಡರ್, ಇನ್ ಬಿಲ್ಡ್ ಲ್ಯಾಪ್-ಟೈಮರ್, ಫೋನ್-ಬ್ಯಾಟರಿ ಸಾಮರ್ಥ್ಯ, ಸರ್ವಿಸ್ ರಿಮೈಂಡರ್, ಟ್ರಿಪ್ ಮೀಟರ್ ಮತ್ತು ಸ್ಟ್ರೀಟ್ ಮತ್ತು ಸ್ಪೋರ್ಟ್‌ನಂತಹ ಮಲ್ಟಿ-ರೈಡ್ ಸ್ಟ್ಯಾಟಿಸ್ಟಿಕ್ ಮೋಡ್‌ಗಳನ್ನು ಪ್ರದರ್ಶಿಸುತ್ತದೆ.

ನೇಪಾಳದಲ್ಲಿ ಬಿಎಸ್6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ರೇಸ್ ಎಡಿಷನ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಎಕ್ಸಾಸ್ಟ್ ಸಿಸ್ಟಂ ಬದಲಾವಣೆ ಮಾಡಿರುವುದು ಈ ಬಾರಿ ಪ್ರಮುಖ ಆಕರ್ಷಣೆಯಾಗಿದೆ. ಹಲವು ಮಾರುಕಟ್ಟೆಯಲ್ಲಿ ರೇಸ್ ಎಡಿಷನ್ ಎನ್‌ಟಾರ್ಕ್ ಸ್ಕೂಟರ್ ಮಾರಾಟವನ್ನು ಹೆಚ್ಚಿಸಲು ಸಹಾಯವಾಗಿದೆ.

ನೇಪಾಳದಲ್ಲಿ ಬಿಎಸ್6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಪರ್ಫಾಮೆನ್ಸ್ ಪ್ರಿಯರಿಗಾಗಿ ಎನ್‌ಟಾರ್ಕ್ ರೇಸ್ ಎಡಿಷನ್ ಸಹ ಖರೀದಿಗೆ ಲಭ್ಯವಿರಲಿದೆ. ಸ್ಟ್ಯಾಂಡರ್ಡ್ ಮಾದರಿಗಿಂತಲೂ ಇದು ಹಲವಾರು ಕಾಸ್ಮೆಟಿಕ್ ಹಾಗೂ ಪ್ರೀಮಿಯಂ ಫೀಚರ್ಸ್ ಅಪ್‌ಡೇಟ್‌ಗಳನ್ನು ಮಾಡಲಾಗಿದೆ.

ನೇಪಾಳದಲ್ಲಿ ಬಿಎಸ್6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಿಡುಗಡೆ

ಹೊಸ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಒಂಬತ್ತು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಸ್ಟ್ಯಾಂಡರ್ಡ್ ಎನ್‌ಟಾರ್ಕ್ 125 ಮ್ಯಾಟ್ ರೆಡ್, ಮೆಟಾಲಿಕ್ ಗ್ರೇ, ಮೆಟಾಲಿಕ್ ರೆಡ್, ಮೆಟಾಲಿಕ್ ಬ್ಲೂ. ರೇಸ್ ಎಡಿಷನ್ (ಬಿಎಸ್6 ಎಫ್‌ಐ ಸೇರಿದಂತೆ) ರೆಡ್-ಬ್ಲ್ಯಾಕ್ ಮತ್ತು ಯೆಲ್ಲೊ-ಬ್ಲ್ಯಾಕ್‌ನಲ್ಲಿ ಲಭ್ಯವಿದೆ, ಇನ್ನು ಸೂಪರ್‌ಸ್ಕ್ವಾಡ್ ಎಡಿಷನ್ ಕಾಂಬೋಟ್ ಬ್ಲೂ, ಇನ್ ವಿಸಿಬಲ್ ರೆಡ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಮೂರು ಬಣ್ಣಗಳನ್ನು ಪಡೆಯುತ್ತದೆ.

Most Read Articles

Kannada
English summary
TVS Ntorq 125 BS6 Launched In Nepal. Read In Kannada.
Story first published: Monday, July 26, 2021, 18:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X