TVS Raider ವಿತರಣೆ ಆರಂಭ: ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ಟಿವಿಎಸ್ ಮೋಟಾರ್(TVS Motor) ಕಂಪನಿಯು ಕಮ್ಯೂಟರ್ ಬೈಕ್ ವಿಭಾಗಕ್ಕೆ ಹೊಚ್ಚ ಹೊಸ ರೈಡರ್(Raider) 125 ಸಿಸಿ ಬೈಕ್ ಮಾದರಿಯನ್ನು ಪರಿಚಯಿಸಿದ್ದು, ಕಳೆದ ವಾರ ಬಿಡುಗಡೆಯಾಗಿದ್ದ ಹೊಸ ಬೈಕಿನ ವಿತರಣೆಗೆ ಇದೀಗ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ಟಿವಿಎಸ್ ಹೊಸ ರೈಡರ್ ಆವೃತ್ತಿಯು 125ಸಿಸಿ ಬೈಕ್ ವಿಭಾಗದಲ್ಲಿಯೇ ವಿನೂತನ ಫೀಚರ್ಸ್ ಮತ್ತು ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.77,500 ಆರಂಭಿಕ ಬೆಲೆ ಹೊಂದಿದೆ. ಹೊಸ ಬೈಕ್ ಮಾದರಿಯು ಟಿವಿಎಸ್ ಕಂಪನಿಯ ಎಲ್ಲಾ ಅಧಿಕೃತ ಡೀಲರ್ಸ್‌ಗಳಲ್ಲೂ ಸ್ಟಾಕ್ ಲಭ್ಯವಿದ್ದು, ಹೊಸ ಬೈಕ್ ವಿತರಣೆ ಪಡೆದ ಖುಷಿಗೆ ಗ್ರಾಹಕರೊಬ್ಬರುವ ತಮ್ಮ ಯೋಗ ಕೌಶಲ್ಯತೆ ಪ್ರದರ್ಶಿಸುವ ಮೂಲಕ ಸಂತಸ ವ್ಯಕ್ತಪಡಿದ್ದು ವಿಶೇಷವಾಗಿತ್ತು.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ವೃತ್ತಿಯಲ್ಲಿ ಯೋಗ ಶಿಕ್ಷಕರಾಗಿರುವ ಟಿವಿಎಸ್ ಗ್ರಾಹಕ ಮೊದಲ ಬೈಕ್ ಖರೀದಿಸಿದ ಖುಷಿಗಾಗಿ ಯೋಗ ಪ್ರದರ್ಶಿಸುವ ಮೂಲಕ ಬೈಕ್ ವಿತರಣೆ ಪಡೆದುಕೊಂಡಿದ್ದು, ಬೈಕ್ ಮೇಲೂ ಕೆಲವು ಸಾಹಸಮಯ ಯೋಗ ಕೌಶಲ್ಯತೆ ಪ್ರದರ್ಶಿಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಸಂಶೆ ವ್ಯಕ್ತವಾಗಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ಹೊಸ ಬೈಕ್ ಮಾದರಿಯಲ್ಲಿ ಕಂಪನಿಯು ತಂತ್ರಜ್ಞಾನ ಸೌಲಭ್ಯಗಳ ಆಧಾರದ ಮೇಲೆ ಪ್ರಮುಖ ಮೂರು ವೆರಿಯೆಂಟ್ ಬಿಡುಗಡೆ ಮಾಡಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್ ಮತ್ತು ಕನೆಕ್ಟೆಡ್ ವೆರಿಯೆಂಟ್ ಖರೀದಿಸಬಹುದಾಗಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ಆಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ರೈಡರ್ ಬೈಕ್ ಮಾದರಿಯು ಸ್ಪೋರ್ಟಿ ಲುಕ್‌ನೊಂದಿಗೆ ಯುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಲಿದೆ. ಹೊಸ ಬೈಕಿನಲ್ಲಿ ಆಕರ್ಷಕ ಹೆಡ್‌ಲ್ಯಾಂಪ್ ಸೆಟ್‌ಅಪ್, ಎಲ್ಇಡಿ ಲೈಟಂಗ್, ವಿಭಜಿತವಾದ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಹಿಂಬದಿಯಲ್ಲೂ ಎಲ್ಇಡಿ ಟೈಲ್‌ಲ್ಯಾಂಪ್ ಪಡೆದುಕೊಂಡಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ಇದರೊಂದಿಗೆ ಹೊಸ ಬೈಕಿನಲ್ಲಿ 10-ಲೀಟರ್ ಡ್ಯುಯಲ್ ಫ್ಯೂಲ್ ಟ್ಯಾಂಕ್, ಸಿಂಗಲ್ ಪೀಸ್ ಹ್ಯಾಂಡಲ್ ಬಾರ್, ಡ್ಯುಯಲ್ ಟೋನ್ ಫ್ರಂಟ್ ಮಡ್‌ಗಾರ್ಡ್, ಕ್ರ್ಯಾಶ್ ಪ್ರೊಟೆಕ್ಟರ್, ಎಂಜಿನ್ ಸಂಪ್ ಗಾರ್ಡ್, ಸ್ಲ್ಪಿಟ್ ಸೀಟ್, ಅಪ್-ಸ್ವೆಪ್ಟ್ ಎಕ್ಸಾಸ್ಟ್, 17-ಇಂಚಿನ ಅಲಾಯ್ ವೀಲ್ಹ್, ಹೊಲೊಜೆನ್ ಟರ್ನ್ ಇಂಡಿಕೇಟರ್ ಹೊಂದಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

125 ಸಿಸಿ ಕಮ್ಯೂಟರ್ ಮೋಟಾರ್‌ಸೈಕಲ್ ವಿಭಾಗದಲ್ಲೇ ವಿಶೇಷ ತಂತ್ರಜ್ಞಾನ ಮತ್ತು ವೈಶಿಷ್ಟ್ಯತೆಗಳನ್ನು ಹೊಂದಿರುವ ರೈಡರ್ ಬೈಕ್ ಮಾದರಿಯು ನಗರ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಅಗತ್ಯ ವೈಶಿಷ್ಟ್ಯತೆಗಳನ್ನು ಮತ್ತು ಅನುಕೂಲಕಲತೆಗಳನ್ನು ಹೊಸ ಬೈಕ್‌ನಲ್ಲಿ ಸೇರಿಸಲಾಗಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ಟಾಪ್-ಸ್ಪೆಕ್ ರೂಪಾಂತರವು 5-ಇಂಚಿನ ಟಿಎಫ್‌ಟಿ ಸ್ಕ್ರೀನ್ ಅನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಹೊಂದಿದ್ದು, ಇದರಲ್ಲಿ ಬ್ರ್ಯಾಂಡ್‌ನ ಸ್ಮಾರ್ಟ್‌ಎಕ್ಸ್‌ಕನೆಕ್ಟ್ ಸಂಪರ್ಕಿತ ತಂತ್ರಜ್ಞಾನವನ್ನು ಒಳಗೊಂಡಿದೆ. ಹಾಗೆಯೇ ಆರಂಭಿಕ ಮಾದರಿಯಲ್ಲಿ ಟಿಎಫ್‌ಟಿ ಬದಲಾಗಿ ಎಲ್‌ಸಿಡಿ ಯುನಿಟ್‌ ನೀಡಲಾಗುತ್ತದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ಹೊಸ ಬೈಕಿನಲ್ಲಿರುವ ಇನ್‌ಫಾರ್ಮೆಷನ್ ಡಿಸ್‌ಪ್ಲೇ ಮೂಲಕ ಬೈಕ್ ಚಾಲನೆಯೊಂದಿಗೆ ವಿವಿಧ ಮಾಹಿತಿಗಳನ್ನು ಒಂದೇ ಸೂರಿನಡಿ ನಿಖರವಾಗಿ ತಿಳಿಕೊಳ್ಳಬಹುದಾಗಿದ್ದು, ಮಲ್ಟಿಪಲ್ ಟ್ರಿಪ್ ಮೀಟರ್, ಗೇರ್ ಪೋಷಿಷನ್ ಇಂಡಿಕೇಟರ್, ಎಂಜಿನ್ ಸೈಡ್-ಸ್ಟ್ಯಾಂಡ್ ಕಟ್-ಅಪ್ ಇಂಡಿಕೇಟರ್, ಟೈಮ್, ಟ್ಯಾಚೊಮೀಟರ್, ಫ್ಯೂಲ್ ರೇಂಜ್ ಸೇರಿದಂತೆ ಪ್ರಮುಖ ಉಪಯುಕ್ತ ಮಾಹಿತಿ ಒದಗಿಸುತ್ತದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ಸ್ಮಾರ್ಟ್ ಫೋನ್ ಸಂಪರ್ಕಿತ ಟಿಎಫ್‌ಟಿ ಡಿಸ್‌ಪ್ಲೇ ಮೂಲಕವೂ ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದ್ದು, ಆರಂಭಿಕ ಮಾದರಿಗಿಂತಲೂ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಮಟ್ಟದ ಕನೆಕ್ಟೆಡ್ ಫೀಚರ್ಸ್‌ಗಳಿರಲಿವೆ. ಟಿಎಫ್‌ಟಿ ಸ್ಕೀನ್ ಹೊಂದಿರುವ ಮಾದರಿಯ ಮೂಲಕ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ವಾಯ್ಸ್ ಅಸಿಸ್ಟೆನ್ಸ್, ಕಾಲ್ ಮ್ಯಾನೆಜ್‌ಮೆಂಟ್, ಮೇಸೆಜ್ ನೋಟಿಫಿಕೇಷನ್ ಅಲರ್ಟ್, ಹೈ ಸ್ಪೀಡ್ ಅಲರ್ಟ್, ಲೋ ಫ್ಯೂಲ್ ಅಸಿಸ್ಟೆನ್ಸ್, ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್ ಸೌಲಭ್ಯವಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ಇದರ ಜೊತೆಗೆ ಹೊಸ ಬೈಕಿನ ಟಿಎಫ್‌ಟಿ ಡಿಸ್‌ಪ್ಲೇನಲ್ಲಿ ಆಟೋ ಬ್ರೈಟ್‌ನೆಸ್ ವೈಶಿಷ್ಟ್ಯತೆಯನ್ನು ಒಳಗೊಂಡಿದ್ದು, ಬೈಕ್ ಚಾಲನೆ ವೇಳೆ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಹೆಡ್‌ಲ್ಯಾಂಪ್ ಬೆಳಕಿನ ಪ್ರಮಾಣವನ್ನು ಏರಿತ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಹೊಸ ಬೈಕಿನ ಹಿಂಬದಿಯ ಆಸನ ಕೆಳಗೂ ಸ್ಟೋರೇಜ್ ಫೇಸ್ ನೀಡಲಾಗಿದ್ದು, ಸಣ್ಣಗಾತ್ರದಲ್ಲಿರುವ ಸ್ಟೋರೇಜ್ ಫೇಸ್‌ನಲ್ಲಿ ಅಗತ್ಯವಿರುವ ವಸ್ತುಗಳು ಸಂಗ್ರಹ ಮಾಡಬಹುದಾಗಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ಟಿವಿಎಸ್ ಮೋಟಾರ್ ಕಂಪನಿಯು ಹೊಸ ರೈಡರ್ ಬೈಕ್ ಮಾದರಿಯಲ್ಲಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ 124.8 ಸಿಸಿ ಎಂಜಿನ್ ಜೋಡಣೆ ಮಾಡಿದ್ದು, ಇದು 5-ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 11.2 ಬಿಎಚ್‌ಪಿ ಮತ್ತು 11.2 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ರೈಡರ್ ಬೈಕ್ ಮಾದರಿಯು ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳೊಂದಿಗೆ ಪ್ರತಿ ಲೀಟರ್‌ಗೆ 67 ಕಿ.ಮೀ ಮೈಲೇಜ್ ಹಿಂದಿರುಗಿಸುವುದಾಗಿ ಟಿವಿಎಸ್ ಕಂಪನಿಯು ಹೇಳಿಕೊಂಡಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ಪ್ರತಿ ಗಂಟೆಗೆ 99 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಬೈಕಿನಲ್ಲಿ ಕಂಪನಿಯು ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಸುರಕ್ಷತೆಗೂ ಆದ್ಯತೆ ನೀಡಿದ್ದು, 30 ಎಂಎಂ ಫ್ರಂಟ್ ಟೆಲಿಸ್ಕೋಫಿಕ್ ಸಸ್ಷೆಂಷನ್ ಮತ್ತು 5 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ರಿಯರ್ ಮೊನೊಶಾಕ್ ಪ್ರಿ-ಲೋಡ್ ಅಡ್ಜೆಸ್ಟ್ ಸಸ್ಷೆಂಷನ್ ಜೋಡಣೆ ಹೊಂದಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ಹೊಸ ಬೈಕಿನಲ್ಲಿ ಟಿವಿಎಸ್ ಕಂಪನಿಯು ಯುರೋಗ್ರಿಪ್ ರಿಮೊರಾ ಟ್ಯೂಬ್‌ಲೆಸ್ ಟೈರ್‌ನೊಂದಿಗೆ ಫ್ರಂಟ್ ಮತ್ತು ರಿಯರ್‌ನಲ್ಲಿ 17 ಇಂಚಿನ ಅಲಾಯ್ ವ್ಹೀಲ್, ಮುಂಭಾಗದ ಚಕ್ರದಲ್ಲಿ 240ಎಂಎಂ ಪೆಟಲ್ ಡಿಸ್ಕ್, ಹಿಂಬದಿಯ ಚಕ್ರದಲ್ಲಿ 130ಎಂಎಂ ಡ್ರಮ್ ಬ್ರೇಕ್ ನೀಡಲಾಗಿದೆ.

ಹೊಸ ಬೈಕ್ ಪಡೆದ ಖುಷಿಯಲ್ಲಿ ಯೋಗ ಪ್ರದರ್ಶಿಸಿದ ಶಿಕ್ಷಕ!

ಹೊಸ ಬೈಕಿನಲ್ಲಿ ಎಬಿಎಸ್ ಬದಲಾಗಿ ಸಿಬಿಎಸ್ ಬ್ರೇಕಿಂಗ್ ಸಿಸ್ಟಂ ನೀಡಲಾಗಿದ್ದು, ಸ್ಟ್ರೀಕಿಂಗ್ ರೆಡ್, ಬ್ಲೇಜಿಂಗ್ ಬ್ಲ್ಯೂ, ಬ್ಲ್ಯಾಕ್ ಮತ್ತು ಫ್ಲೈರಿ ರೆಡ್ ಎಂಬ ನಾಲ್ಕು ಬಣ್ಣಗಳ ಆಯ್ಕೆ ನೀಡಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಬಣ್ಣದ ಆಯ್ಕೆ ಖರೀದಿಗೆ ಲಭ್ಯವಿರಲಿವೆ.

Image Courtesy: Power On Wheel

Article Published On: Monday, September 20, 2021, 11:22 [IST]
English summary
Tvs motor starts new raider 125 bike delivery in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+