ಭಾರತದಲ್ಲಿ ಹೊಸ 125ಸಿಸಿ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ TVS Motor

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ TVS Motor ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ TVS ಬೈಕನ್ನು ಇದೇ ತಿಂಗಳ 16 ರಂದು ಪರಿಚಯುಸಬಹುದು. ಇದೀಗ ಈ ಹೊಸ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಹೊಸ 125ಸಿಸಿ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ TVS Motor

ಈ ಹೊಸ TVS 125 ಸಿಸಿ ಬೈಕ್ ಆಗಿದೆ. ಇದು ಬ್ರ್ಯಾಂಡ್‌ನ ಸರಣಿಯಲ್ಲಿ ರೇಡಿಯನ್‌ಗಿಂತ ಮೇಲಿರುತ್ತದೆ. ಈ ಹೊಸ ಬೈಕಿಗೆ ಇದನ್ನು ಫಿಯೆರೊ 125, ರೈಡರ್ ಅಥವಾ ರೆಟ್ರಾನ್ ಎಂಬ ಹೆಸರನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ. ಟೀಸರ್ ನಲ್ಲಿ, ಹೊಸೂರು ಮೂಲದ ತಯಾರಕರು ಆರ್ ಪದವನ್ನು ಒತ್ತಿಹೇಳುತ್ತಾರೆ ಮತ್ತು ಹೀಗಾಗಿ ನಾವು ಫಿಯೆರೊ ಹೆಸರನ್ನು ತೆಗೆದುಹಾಕಬಹುದು. ಈ ಹೊಸ TVS ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ 125 ಮತ್ತು ಇತ್ತೀಚೆಗೆ ಬಿಡುಗಡೆಗೊಂಡ ಹೀರೋ ಗ್ಲಾಮರ್ ಎಕ್ಸ್‌ಟೆಕ್‌ಗೆ ಪ್ರತಿಸ್ಪರ್ಧಿಯಾಗಿ ಕಾಣುವುದರಿಂದ, ರೆಟ್ರಾನ್ ಹೆಸರನ್ನು ಭವಿಷ್ಯದ ಬಳಕೆಗಾಗಿ ಕಾಯ್ದಿರಿಸಬಹುದು. ಇದರ ಜೊತೆ 'ರೈಡರ್' ಅನ್ನು ಗಮನಕ್ಕೆ ತರುತ್ತದೆ.

ಭಾರತದಲ್ಲಿ ಹೊಸ 125ಸಿಸಿ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ TVS Motor

ಸ್ಥಳೀಯವಾಗಿ TVS ಯಾವುದೇ 125 ಸಿಸಿ ಕೊಡುಗೆಗಳನ್ನು ಹೊಂದಿಲ್ಲ ಎಂಬುದನ್ನು ಗಮನಿಸಬೇಕು. ಇನ್ನು ಬೈಕ್ ಗಳ ಮತ್ತು ಇಂಧನಗಳ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ, ಗ್ರಾಹಕರು ಕಡಿಮೆ ಬೆಲೆಯ ಮತ್ತು ಹೆಚ್ಚು ಮೈಲೇಜ್ ನೀಡುವ ಬೈಕ್ ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ TVS ಕಂಪನಿಯು 125 ಸಿಸಿ ಬೈಕ್ ಅನ್ನು ಬಿಡುಗಡೆಗೊಳಿಸುತ್ತಿದೆ ಎಂದು ನಿರೀಕ್ಷಿಸುತ್ತೇವೆ,

ಭಾರತದಲ್ಲಿ ಹೊಸ 125ಸಿಸಿ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ TVS Motor

ಟೀಸರ್ ನಲ್ಲಿ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಹೊಂದಿದ್ದು, ಅಪಾಚೆ ಸರಣಿಯಿಂದ ತ್ರಿವಳಿ ಎಲ್‌ಇಡಿ ಬೂಮರಾಂಗ್ ಮತ್ತು ಸಿ-ಆಕಾರದ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದೆ. ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಸ್ಟರ್ ಹೊಚ್ಚ ಹೊಸದು ಮತ್ತು ಕೆಳಗೆ, ನಯವಾದ ಎಲ್ಇಡಿ ಟರ್ನ್ ಸಿಗ್ನಲ್‌ಗಳು ಹೊಂದಿದೆ.

ಭಾರತದಲ್ಲಿ ಹೊಸ 125ಸಿಸಿ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ TVS Motor

ಇದು ಬೋಲ್ಡ್ ಸ್ಪೀಡೋ ಓದುವಿಕೆ, ಆರ್‌ಪಿಎಮ್ ಗ್ರಾಫ್, 9,000 ಆರ್‌ಪಿಎಮ್‌ನಲ್ಲಿ ರೇಡ್ ಲೈನ್, ಗೇರ್ ಪೊಸಿಷನ್ ಇಂಡಿಕೇಟರ್ ಮತ್ತು ರೈಡ್ ಮೋಡ್‌ಗಳನ್ನು ಸಹ ಒಳಗೊಂಡಿದೆ. ಇನ್ನು ಟೀಸರ್‌ಗಳ ಇತರ ಮುಖ್ಯಾಂಶಗಳು ಮತ್ತು ಟ್ವಿನ್ ಬೂಮರಾಂಗ್ ಆಕಾರದ ಎಲ್‌ಇಡಿ ಟೈಲ್ ಲ್ಯಾಂಪ್ ಗ್ರಾಫಿಕ್ಸ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ 125ಸಿಸಿ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ TVS Motor

ಇನ್ನು TVS ವರ್ಡಿಂಗ್ ಹೊಂದಿರುವ ಸೆಂಟ್ರಲ್ ಕ್ಲಾಂಪ್ ಹೊಂದಿರುವ ವಿಶಾಲವಾದ ಹ್ಯಾಂಡಲ್‌ಬಾರ್ ಸೆಟಪ್, ಗ್ಲೋಷ್ ಬ್ಲ್ಯಾಕ್ ಇಂಧನ ಟ್ಯಾಂಕ್ ವಿಸ್ತರಣೆಗಳೊಂದಿಗೆ ರೋಮಾಂಚಕ ಬೇಸ್ ಬಾಡಿ ಬಣ್ಣ, 3ಡಿ TVS ಲೋಗೋ ಮತ್ತು ಗ್ರೇ ಪ್ಯಾನಲ್‌ಗಳು ಮತ್ತು ಸಿಂಗಲ್-ಫೀಸ್ ರೈಲ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ 125ಸಿಸಿ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ TVS Motor

ಇದರೊಂದಿಗೆ ಫೈ ಸ್ಟಿಕ್ಕರ್, ಸ್ಪ್ಲಿಟ್ ಸೀಟುಗಳು, ಸೈಡ್ ಪ್ಯಾನಲ್‌ಗಳು ಮತ್ತು ಫ್ಯೂಯಲ್ ಟ್ಯಾಂಕ್, ಅಪಾಚೆ 160 4ವಿ, ಸಿಂಗಲ್-ಚಾನೆಲ್ ಎಬಿಎಸ್ ಸಿಸ್ಟಂ, ಅಲಾಯ್ ವ್ಹೀಲ್ ಗಳು ಮತ್ತು ಹಿಂಭಾಗದಲ್ಲಿ ಕೀಹೋಲ್ ಇತ್ಯಾದಿಗಳನ್ನು ಹಂಚಿಕೊಂಡ ಸ್ವಿಚ್ ಗೇರ್ ಅನ್ನು ಒಳಗೊಂಡಿದೆ,

ಭಾರತದಲ್ಲಿ ಹೊಸ 125ಸಿಸಿ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ TVS Motor

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಹೊಸ TVS 125 ಬೈಕಿನಲ್ಲಿ 125 ಸಿಸಿ ಇಂಧನ-ಇಂಜೆಕ್ಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 11-12 ಬಿಹೆಚ್‍ಪಿ ಪವರ್ ಮತ್ತು 11 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಇದನ್ನು ಐದು-ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಇನ್ನು ಕ್ಸಾಸ್ಟ್ ನೋಟ್ ಟೀಸರ್ ತುಂಬಾ ಧ್ವನಿಸುವುದಿಲ್ಲ ಮತ್ತು ಅಪಾಚೆ ಸರಣಿಯಂತೆ ಸೂಕ್ಷ್ಮವಾದ ಅನುಭವವನ್ನು ನೀಡುತ್ತದೆ.

ಭಾರತದಲ್ಲಿ ಹೊಸ 125ಸಿಸಿ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ TVS Motor

TVS Motor ಕಂಪನಿಯು ಜಾಗತಿಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಂಪನಿಯು ಈಗ ತನ್ನ ದ್ವಿಚಕ್ರ ವಾಹನಗಳನ್ನು ಹಾಗೂ ತ್ರಿಚಕ್ರ ವಾಹನಗಳನ್ನು 70 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಕಂಪನಿಯು ತನ್ನ ಮಾರಾಟ ಜಾಲವನ್ನು ವಿಸ್ತರಿಸುತ್ತಲೇ ಇದೆ. ಇತ್ತೀಚೆಗೆ TVS Motor ಕಂಪನಿಯು ದಕ್ಷಿಣ ಆಫ್ರಿಕಾದಲ್ಲಿ ತನ್ನ ವ್ಯಾಪಾರವನ್ನು ವಿಸ್ತರಿಸಲು ಇಟಿಜಿ ಲಾಜಿಸ್ಟಿಕ್ಸ್ ಜೊತೆ ಕೈ ಜೋಡಿಸಿದೆ.

ಇಟಿಜಿ ಲಾಜಿಸ್ಟಿಕ್ಸ್ ಬಹುರಾಷ್ಟ್ರೀಯ ಕಂಪನಿಯಾಗಿದ್ದು, 48 ಕ್ಕೂ ಹೆಚ್ಚು ದೇಶಗಳಲ್ಲಿ ವಿವಿಧ ರೀತಿಯ ಉದ್ಯಮಗಳಲ್ಲಿ ತೊಡಗಿಸಿ ಕೊಂಡಿದೆ. ಈ ಪಾಲುದಾರಿಕೆಯ ಅಡಿಯಲ್ಲಿ ಇಟಿಜಿಎಲ್ ದಕ್ಷಿಣ ಆಫ್ರಿಕಾದಲ್ಲಿ TVS Motor ಕಂಪನಿಯ 30 ಡೀಲರ್‌ಶಿಪ್‌ಗಳನ್ನು ನಿರ್ವಹಿಸಲಿದೆ.ಇಟಿಜಿಎಲ್ ಜೋಹಾನ್ಸ್‌ಬರ್ಗ್‌ನಲ್ಲಿ ಅಸೆಂಬ್ಲಿ ಸೆಟಪ್ ಹಾಗೂ ತರಬೇತಿ ಕೇಂದ್ರದೊಂದಿಗೆ ಮಾರಾಟ, ಸೇವೆ, ಸ್ಪರ್ಸ್ ಮತ್ತು ಗ್ರಾಹಕರ ಸಂಬಂಧ ನಿರ್ವಹಣೆಗಾಗಿ TVS Motor ಕಂಪನಿಯನ್ನು ಬೆಂಬಲಿಸಲಿದೆ.

ಭಾರತದಲ್ಲಿ ಹೊಸ 125ಸಿಸಿ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ TVS Motor

TVS Motor ಕಂಪನಿಯು ದಕ್ಷಿಣ ಆಫ್ರಿಕಾದಲ್ಲಿ TVS Apache Series, TVS HLX Series, TVS NTorq 125 ಹಾಗೂ TVS Duramax Cargo ವಾಹನಗಳನ್ನು ಮಾರಾಟ ಮಾಡಲಿದೆ.ಪ್ರೀಮಿಯಂ ಬೈಕ್ ಸರಣಿಯಾದ TVS Apache ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಿದರೆ, TVS HLX, ವೈಯಕ್ತಿಕ ಪ್ರಯಾಣ ಹಾಗೂ ವಾಣಿಜ್ಯ ವಿತರಣಾವಿಭಾಗಗಳಿಗೆ ಲಾಸ್ಟ್ ಮೈಲಿ ಕನೆಕ್ಟಿವಿಟಿಯನ್ನು ಒದಗಿಸುತ್ತದೆ. ಇನ್ನು TVS Ntorq 125 ಆಕರ್ಷಕವಾದ ವಿನ್ಯಾಸ ಹಾಗೂ ಬ್ಲೂಟೂತ್ ಫೀಚರ್ ಅನ್ನು ಹೊಂದಿದೆ.

ಭಾರತದಲ್ಲಿ ಹೊಸ 125ಸಿಸಿ ಬೈಕ್ ಬಿಡುಗಡೆಗೊಳಿಸಲು ಸಜ್ಜಾದ TVS Motor

ಈ ಹೊಸ TVS ಬೈಕ್ ಇದೇ ತಿಂಗಳ 16 ರಂದು ಪರಿಚಯುಸಬಹುದು. ಇನ್ನು ಈ ಹೊಸ TVS 125 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಜಾಜ್ ಪಲ್ಸರ್ 125 ಮತ್ತು ಇತ್ತೀಚೆಗೆ ಬಿಡುಗಡೆಗೊಂಡ ಹೀರೋ ಗ್ಲ್ಯಾಮರ್ ಎಕ್ಸ್‌ಟೆಕ್‌ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Tvs motor teased new 125cc motorcycle ahead of launch details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X