ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ TVS Motor

ತಮಿಳುನಾಡು ಮೂಲದ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ TVS Motor ಮುಂದಿನ ಎರಡು ವರ್ಷಗಳಲ್ಲಿ ಹೊಸ ಸರಣಿಯ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಪರಿಚಯಿಸಲಿದೆ. ಕಂಪನಿಯು ಈ ವಾಹನಗಳನ್ನು 5 ಕಿ.ವ್ಯಾನಿಂದ 25 ಕಿ.ವ್ಯಾ ಸಾಮರ್ಥ್ಯದ ವ್ಯಾಪ್ತಿಯಲ್ಲಿ ಬಿಡುಗಡೆಗೊಳಿಸಲಿದೆ.

ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ TVS Motor

ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು ಮಹತ್ವದ ಪಾತ್ರ ವಹಿಸಲಿದೆ ಎಂದು ಕಂಪನಿ ಹೇಳಿ ಕೊಂಡಿದೆ. ಕಂಪನಿಯು ಸಾಂಪ್ರದಾಯಿಕ ವಾಹನಗಳು ಹಾಗೂ ಎಲೆಕ್ಟ್ರಿಕ್ ವಾಹನಗಳಿಗಾಗಿ ರೂ. 1000 ಕೋಟಿಗಳನ್ನು ಹೂಡಿಕೆ ಮಾಡಿದೆ. ಎಲೆಕ್ಟ್ರಿಕ್ ವಾಹನಗಳ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಎಂದು TVS Motor ಕಂಪನಿಯ ಎಂಡಿ ಸುದರ್ಶನ್ ವೇಣು ತಿಳಿಸಿದ್ದಾರೆ.

ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ TVS Motor

ನಾವು ಎಲೆಕ್ಟ್ರಿಕ್ ವಾಹನಗಳಿಗಾಗಿ ಹೂಡಿಕೆ ಮಾಡುತ್ತಿದ್ದೇವೆ. ನಾವು ಈ ಕ್ಷೇತ್ರದಲ್ಲಿ ಮುಂದುವರೆಯುವ ಬಗ್ಗೆ ವಿಶ್ವಾಸವಿದೆ. ಹೊಸ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿಯಲ್ಲಿ ತೊಡಗಿರುವ 500 ಕ್ಕೂ ಹೆಚ್ಚು ಎಂಜಿನಿಯರ್‌ಗಳ ತಂಡದೊಂದಿಗೆ, ಕಂಪನಿಯು ಈ ಉದ್ಯಮದಲ್ಲಿ ರೂ. 1,000 ಕೋಟಿಗಳಿಗಿಂತ ಹೆಚ್ಚು ಹೂಡಿಕೆ ಮಾಡುತ್ತಿದೆ ಎಂದು ಅವರು ಹೇಳಿದರು.

ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ TVS Motor

ಮುಂಬರುವ ಹೊಸ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮಾತನಾಡಿದ ಅವರು, ನಾವು ಸಂಪೂರ್ಣ ಸರಣಿಯ ಇವಿ ಉತ್ಪನ್ನಗಳನ್ನು ಹೊಂದಿದ್ದೇವೆ, ಮುಂದಿನ ಎರಡು ವರ್ಷಗಳಲ್ಲಿ 5 ಕಿವ್ಯಾನಿಂದ 25 ಕಿ.ವ್ಯಾವರೆಗಿನ ದ್ವಿಚಕ್ರ ಹಾಗೂ ತ್ರಿಚಕ್ರ ಪ್ರಯಾಣಿಕರ ವಿಭಾಗದ ವಾಹನಗಳ ಉತ್ಪಾದನೆಯನ್ನು ಆರಂಭಿಸುತ್ತೇವೆ. ಎಲೆಕ್ಟ್ರಿಕ್ ವಾಹನಗಳ ಸರಕು ವಿಭಾಗವನ್ನು ಸಹ ಆರಂಭಿಸಲಾಗುವುದು ಎಂದು ಹೇಳಿದರು.

ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ TVS Motor

ಇದಲ್ಲದೇ ಮುಂಬರುವ ದಿನಗಳಲ್ಲಿ TVS iQube ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಪ್‌ಗ್ರೇಡ್ ಮಾಡಲಾಗುವುದು ಎಂದು ಅವರು ತಿಳಿಸಿದರು. iQube, TVS ಮೋಟಾರ್ ಕಂಪನಿಯ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 4.4 ಕಿವ್ಯಾ ಲಿಥಿಯಂ ಐಯಾನ್ ಬ್ಯಾಟರಿ ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ 75 ಕಿ.ಮೀಗಳವರೆಗೆ ಸಾಗಬಹುದು.

ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ TVS Motor

TVS Motor ಹೊಸ ವಾಹನ

ಇತ್ತೀಚೆಗೆ Raider 125 ಬೈಕ್ ಅನ್ನು ಬಿಡುಗಡೆಗೊಳಿಸಿರುವ TVS Motor ಕಂಪನಿಯು ಈಗ ಮತ್ತೊಂದು ಹೊಸ ವಾಹನವನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಕಂಪನಿಯು ಕಳೆದ ಶುಕ್ರವಾರ ಬಿಡುಗಡೆಗೊಳಿಸಿರುವ ಟೀಸರ್ ನಲ್ಲಿ ಈ ಸಂಗತಿ ಬಹಿರಂಗವಾಗಿದೆ. ಮೂಲಗಳ ಪ್ರಕಾರ ಹೊಸ ವಾಹನವು TVS Jupiter 125 ಸ್ಕೂಟರ್ ಆಗಿರಬಹುದು ಎಂದು ಹೇಳಲಾಗಿದೆ.

ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ TVS Motor

ಈ ಹೊಸ ವಾಹನವನ್ನು TVS Motor ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 7 ರಂದು ಬಿಡುಗಡೆಗೊಳಿಸಲಿದೆ. ಬಿಡುಗಡೆಯಾದ ನಂತರ ಈ ವಾಹನವು ದೇಶಿಯ ಮಾರುಕಟ್ಟೆಯಲ್ಲಿ Honda Activa 125, Hero Maestro Edge 125 ಹಾಗೂ Suzuki Access 125 ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದೆ.

ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ TVS Motor

TVS ಕಂಪನಿಯು ಈ ಹೊಸ ವಾಹನದ ಟೀಸರ್'ಗೆ Come Experience the More ಎಂಬ ಟ್ಯಾಗ್ ಲೈನ್ ನೀಡಿದೆ. ಈ ಹೊಸ ಉತ್ಪನ್ನದ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಾಗಿಲ್ಲದಿದ್ದರೂ, ಈ ಟ್ಯಾಗ್‌ಲೈನ್‌ನಿಂದ ಕಂಪನಿಯು ತನ್ನ ಅಸ್ತಿತ್ವದಲ್ಲಿರುವ ವಾಹನಗಳಲ್ಲಿ ಒಂದನ್ನು ಅಪ್‌ಗ್ರೇಡ್ ಮಾಡುತ್ತಿದೆ ಎಂದು ಊಹಿಸಬಹುದು.

ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ TVS Motor

ಈ ಹೊಸ ವಾಹನದಲ್ಲಿ ಡಿಜಿಟಲ್ ಸ್ಕ್ರೀನ್, ಎಕ್ಸ್ ಟರ್ನಲ್ ಫ್ಯೂಯಲ್ ಕ್ಯಾಪ್, ಸೈಲೆಂಟ್ ಸ್ಟಾರ್ಟ್, ನ್ಯಾವಿಗೇಷನ್ ಅಸಿಸ್ಟ್, ಟಾಪ್ ಸ್ಪೀಡ್ ರೆಕಾರ್ಡರ್, ಇನ್ ಬಿಲ್ಟ್ ಲ್ಯಾಪ್ ಟೈಮರ್, ಮೊಬೈಲ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಯಂತಹ ಕೆಲವು ಹೊಸ ಫೀಚರ್ ಗಳನ್ನು ನೀಡುವ ಸಾಧ್ಯತೆಗಳಿವೆ.

ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ TVS Motor

ಭಾರತದ 125 ಸಿಸಿ ಸೆಗ್ ಮೆಂಟಿನ ಬಗ್ಗೆ ಮಾತನಾಡಿದ TVS Motor ಕಂಪನಿಯ ಎಂಡಿ ಸುದರ್ಶನ ವೇಣುರವರು, ಕಳೆದ ಐದು ವರ್ಷಗಳಲ್ಲಿ 125 ಸಿಸಿ ಬೈಕ್ ಸೆಗ್ ಮೆಂಟ್ 20% ನಷ್ಟು ಬೆಳೆದಿದೆ ಎಂದು ಹೇಳಿದರು. ಈ ಸೆಗ್ ಮೆಂಟಿನಲ್ಲಿ ಹೊಸ TVS ವಾಹನಗಳನ್ನು ಬಿಡುಗಡೆಗೊಳಿಸುವ ಗುರಿ ಹೊಂದಲಾಗಿದೆ. ಭವಿಷ್ಯದಲ್ಲಿ ಈ ಸೆಗ್ ಮೆಂಟಿನಲ್ಲಿ ಮತ್ತಷ್ಟು ಬೆಳವಣಿಗೆಯಾಗಲಿದೆ ಎಂದು ಅವರು ಹೇಳಿದರು.

ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ TVS Motor

ಅಂದ ಹಾಗೆ TVS iQube ಎಲೆಕ್ಟ್ರಿಕ್ ಸ್ಕೂಟರ್ ಕಳೆದ ತಿಂಗಳ ಮಾರಾಟದಲ್ಲಿ Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹಿಂದಿಕ್ಕಿದೆ. ಕಳೆದ ತಿಂಗಳುTVS iQube ಎಲೆಕ್ಟ್ರಿಕ್ ಸ್ಕೂಟರಿನ 649 ಯುನಿಟ್‌ಗಳು ಮಾರಾಟವಾಗಿವೆ. 2020 ರ ಆಗಸ್ಟ್ ತಿಂಗಳಿನಲ್ಲಿ TVS iQube ಎಲೆಕ್ಟ್ರಿಕ್ ಸ್ಕೂಟರಿನ ಕೇವಲ 23 ಯೂನಿಟ್‌ಗಳು ಮಾರಾಟವಾಗಿದ್ದವು.

ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ TVS Motor

TVS iQube ಎಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಸ್ಮಾರ್ಟ್ ಕನೆಕ್ಟ್ ಪ್ಲಾಟ್‌ಫಾರಂ, ಸುಧಾರಿತ ಟಿಎಫ್‌ಟಿ ಕ್ಲಸ್ಟರ್, ಟಿವಿಎಸ್ ಐಕ್ಯೂಬ್ ಅಪ್ಲಿಕೇಶನ್ ಅನ್ನು ಹೊಂದಿದೆ. ಈ ಅಪ್ಲಿಕೇಶನ್ ಜಿಯೋ ಫೆನ್ಸಿಂಗ್, ರಿಮೋಟ್ ಬ್ಯಾಟರಿ ಚಾರ್ಜ್ ಸ್ಟೇಟಸ್, ನ್ಯಾವಿಗೇಷನ್ ಅಸಿಸ್ಟ್, ಲಾಸ್ಟ್ ಪಾರ್ಕ್ ಲೋಕೆಷನ್, ಕಾಲ್, ಎಸ್‌ಎಂಎಸ್ ಅಲರ್ಟ್ ಹಾಗೂ ಇನ್ನಿತರ ಫೀಚರ್ಸ್ ಗಳನ್ನು ಒಳಗೊಂಡಿದೆ. TVS iQube ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬೆಂಗಳೂರು, ಪುಣೆ, ಚೆನ್ನೈ, ಕೊಯಮತ್ತೂರು ಹಾಗೂ ದೆಹಲಿ ನಗರಗಳಲ್ಲಿ ಮಾರಾಟ ಮಾಡಲಾಗುತ್ತದೆ. TVS Motor ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ದೇಶದಾದ್ಯಂತ 20 ನಗರಗಳಿಗೆ ವಿಸ್ತರಿಸಲು ಸಜ್ಜಾಗಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Tvs motor to launch more electric vehicles in future details
Story first published: Tuesday, September 28, 2021, 12:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X