ಪ್ರತಿ ಲೀಟರ್‌ಗೆ 67 ಕಿ.ಮೀ ಮೈಲೇಜ್ ಜೊತೆ ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಟಿವಿಎಸ್ ರೈಡರ್ ವಿಡಿಯೋ ರಿವ್ಯೂ

ಕಮ್ಯೂಟರ್ ಬೈಕ್ ವಿಭಾಗದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿರುವ ಟಿವಿಎಸ್ ಮೋಟಾರ್(TVS Motor) ಕಂಪನಿಯು ಹೊಸದಾಗಿ ರೈಡರ್(Raider) 125ಸಿಸಿ ಬೈಕ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು 125 ಸಿಸಿ ಬೈಕ್ ವಿಭಾಗದಲ್ಲೇ ವಿನೂತನ ಫೀಚರ್ಸ್ ಜೊತೆ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿದೆ.

ಹೊಸ ರೈಡರ್ ಬಿಡುಗಡೆಯ ಜೊತೆಗೆ ಫಸ್ಟ್ ರೈಡ್ ಆಯೋಜಿಸಿದ್ದ ಟಿವಿಎಸ್ ಮೋಟಾರ್ ಕಂಪನಿಯು ಹೊಸೂರಿನಲ್ಲಿರುವ ತನ್ನ ಟೆಸ್ಟ್ ಟ್ರ್ಯಾಕ್‌ನಲ್ಲಿ ಡ್ರೈವ್‌ಸ್ಪಾರ್ಕ್ ತಂಡಕ್ಕೂ ವಿಶೇಷ ರೈಡ್ ಕಲ್ವಿಸಿತ್ತು. ತಂತ್ರಜ್ಞಾನ ಸೌಲಭ್ಯಗಳ ಆಧಾರದ ಮೇಲೆ ಪ್ರಮುಖ ಮೂರು ವೆರಿಯೆಂಟ್‌ಗಳನ್ನು ಹೊಂದಿರುವ ಹೊಸ ರೈಡರ್ ಬೈಕ್ ಮಾದರಿಯು ಏನೆಲ್ಲಾ ವಿಶೇಷತೆಗಳನ್ನು ಹೊತ್ತು ಬಂದಿದೆ ಮತ್ತು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೇಗೆ ಭಿನ್ನವಾಗಿ ಗ್ರಾಹಕರನ್ನು ಸೆಳೆಯಲಿದೆ ಎನ್ನುವುದನ್ನು ಈ ರಿವ್ಯೂ ವಿಡಿಯೋದಲ್ಲಿ ತಿಳಿಯೋಣ.

ಹೊಸ ಬೈಕ್ ಮಾದರಿಯ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಗಿ ರೂ.77,500 ಆರಂಭಿಕ ಬೆಲೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್ ಮತ್ತು ಕನೆಕ್ಟೆಡ್ ವೆರಿಯೆಂಟ್ ಖರೀದಿಸಬಹುದಾಗಿದೆ.

125 ಸಿಸಿ ಕಮ್ಯೂಟರ್ ಮೋಟಾರ್‌ಸೈಕಲ್ ವಿಭಾಗದಲ್ಲೇ ವಿಶೇಷ ತಂತ್ರಜ್ಞಾನ ಮತ್ತು ವೈಶಿಷ್ಟ್ಯತೆಗಳನ್ನು ಹೊಂದಿರುವ ರೈಡರ್ ಬೈಕ್ ಮಾದರಿಯು ನಗರ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಅಗತ್ಯ ವೈಶಿಷ್ಟ್ಯತೆಗಳನ್ನು ಮತ್ತು ಅನುಕೂಲಕಲತೆಗಳನ್ನು ಹೊಸ ಬೈಕ್‌ನಲ್ಲಿ ಸೇರಿಸಲಾಗಿದ್ದು, ಒಂದೇ ಸೂರಿನಡಿ ವಿವಿಧ ಮಾಹಿತಿ ಮತ್ತು ಸೇವೆಗಳನ್ನು ಪಡೆದುಕೊಳ್ಳಬಹುದಾದ ಸ್ಮಾರ್ಟ್ ಫೋನ್ ಸಂಪರ್ಕಿತ ಸ್ಮಾರ್ಟ್‌ಎಕ್ಸ್‌ಕನೆಕ್ಟ್ ಸೌಲಭ್ಯವು ಈ ಬೈಕಿನ ಪ್ರಮುಖ ಆಕರ್ಷಣೆಯಾಗಿದೆ.

 ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಟಿವಿಎಸ್ ರೈಡರ್ ವಿಡಿಯೋ ರಿವ್ಯೂ

ರೈಡರ್ ಬೈಕ್ ಮಾದರಿಯಲ್ಲಿ ಆಯಿಲ್ ಕೂಲ್ಡ್, ಸಿಂಗಲ್ ಸಿಲಿಂಡರ್ 124.8 ಸಿಸಿ ಎಂಜಿನ್ ಜೋಡಣೆ ಮಾಡಿದ್ದು, ಇದು 5-ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 11.2 ಬಿಎಚ್‌ಪಿ ಮತ್ತು 11.2 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹಾಗೆಯೇ ಹೊಸ ಬೈಕ್ ಮಾದರಿಯು ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದ್ದು, ರೈಡರ್ ಬೈಕ್ ಮಾದರಿಯು ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳೊಂದಿಗೆ ಪ್ರತಿ ಲೀಟರ್‌ಗೆ 67 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

Article Published On: Thursday, September 16, 2021, 20:42 [IST]
English summary
Tvs raider 125 review video first riding impressions
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+