125 ಸಿಸಿ ಬೈಕ್ ವಿಭಾಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಸ TVS Raider

ದೇಶದ ಜನಪ್ರಿಯ ದ್ವಿಚಕ್ರ ವಾಹನ ನಿರ್ಮಾಣ ಕಂಪನಿಯಾಗಿರುವ ಟಿವಿಎಸ್ ಮೋಟಾರ್(TVS Motor) ಕಮ್ಯೂಟರ್ ಬೈಕ್ ವಿಭಾಗಕ್ಕೆ ಮತ್ತೊಂದು ವಿನೂತನ ಉತ್ಪನ್ನವೊಂದನ್ನು ಪರಿಚಯಿಸಿದ್ದು, ಹೊಚ್ಚ ಹೊಸ ರೈಡರ್(Raider) ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆಯಾಗಿದೆ. ಟಿವಿಎಸ್ ಹೊಸ ರೈಡರ್ ಆವೃತ್ತಿಯು 125ಸಿಸಿ ಬೈಕ್ ವಿಭಾಗದಲ್ಲಿಯೇ ವಿನೂತನ ಫೀಚರ್ಸ್ ಮತ್ತು ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆಗೊಂಡಿದ್ದು, ಹೊಸ ಬೈಕ್ ಮಾದರಿಯ ಎಕ್ಸ್‌ಶೋರೂಂ ಪ್ರಕಾರ ರೂ.77,500 ಆರಂಭಿಕ ಬೆಲೆ ಹೊಂದಿದೆ.

125 ಸಿಸಿ ಬೈಕ್ ವಿಭಾಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಚ್ಚ ಹೊಸ TVS Raider ಕಮ್ಯೂಟರ್ ಬೈಕ್

ಹೊಸ ಬೈಕ್ ಮಾದರಿಯಲ್ಲಿ ಕಂಪನಿಯು ತಂತ್ರಜ್ಞಾನ ಸೌಲಭ್ಯಗಳ ಆಧಾರದ ಮೇಲೆ ಪ್ರಮುಖ ಮೂರು ವೆರಿಯೆಂಟ್ ಬಿಡುಗಡೆ ಮಾಡಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್ ಮತ್ತು ಕನೆಕ್ಟೆಡ್ ವೆರಿಯೆಂಟ್ ಖರೀದಿಸಬಹುದಾಗಿದೆ.

ಆಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ರೈಡರ್ ಬೈಕ್ ಮಾದರಿಯು ಸ್ಪೋರ್ಟಿ ಲುಕ್‌ನೊಂದಿಗೆ ಯುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಲಿದೆ. ಹೊಸ ಬೈಕಿನಲ್ಲಿ ಆಕರ್ಷಕ ಹೆಡ್‌ಲ್ಯಾಂಪ್ ಸೆಟ್‌ಅಪ್, ಎಲ್ಇಡಿ ಲೈಟಂಗ್, ವಿಭಜಿತವಾದ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಹಿಂಬದಿಯಲ್ಲೂ ಎಲ್ಇಡಿ ಟೈಲ್‌ಲ್ಯಾಂಪ್ ಪಡೆದುಕೊಂಡಿದೆ.

125 ಸಿಸಿ ಬೈಕ್ ವಿಭಾಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಚ್ಚ ಹೊಸ TVS Raider ಕಮ್ಯೂಟರ್ ಬೈಕ್

ಇದರೊಂದಿಗೆ ಹೊಸ ಬೈಕಿನಲ್ಲಿ 10-ಲೀಟರ್ ಡ್ಯುಯಲ್ ಫ್ಯೂಲ್ ಟ್ಯಾಂಕ್, ಸಿಂಗಲ್ ಪೀಸ್ ಹ್ಯಾಂಡಲ್ ಬಾರ್, ಡ್ಯುಯಲ್ ಟೋನ್ ಫ್ರಂಟ್ ಮಡ್‌ಗಾರ್ಡ್, ಕ್ರ್ಯಾಶ್ ಪ್ರೊಟೆಕ್ಟರ್, ಎಂಜಿನ್ ಸಂಪ್ ಗಾರ್ಡ್, ಸ್ಲ್ಪಿಟ್ ಸೀಟ್, ಅಪ್-ಸ್ವೆಪ್ಟ್ ಎಕ್ಸಾಸ್ಟ್, 17-ಇಂಚಿನ ಅಲಾಯ್ ವೀಲ್ಹ್, ಹೊಲೊಜೆನ್ ಟರ್ನ್ ಇಂಡಿಕೇಟರ್ ಹೊಂದಿದೆ.

125 ಸಿಸಿ ಬೈಕ್ ವಿಭಾಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಚ್ಚ ಹೊಸ TVS Raider ಕಮ್ಯೂಟರ್ ಬೈಕ್

ತಂತ್ರಜ್ಞಾನ ಸೌಲಭ್ಯಗಳು

125 ಸಿಸಿ ಕಮ್ಯೂಟರ್ ಮೋಟಾರ್‌ಸೈಕಲ್ ವಿಭಾಗದಲ್ಲೇ ವಿಶೇಷ ತಂತ್ರಜ್ಞಾನ ಮತ್ತು ವೈಶಿಷ್ಟ್ಯತೆಗಳನ್ನು ಹೊಂದಿರುವ ರೈಡರ್ ಬೈಕ್ ಮಾದರಿಯು ನಗರ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಅಗತ್ಯ ವೈಶಿಷ್ಟ್ಯತೆಗಳನ್ನು ಮತ್ತು ಅನುಕೂಲಕಲತೆಗಳನ್ನು ಹೊಸ ಬೈಕ್‌ನಲ್ಲಿ ಸೇರಿಸಲಾಗಿದೆ.

125 ಸಿಸಿ ಬೈಕ್ ವಿಭಾಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಚ್ಚ ಹೊಸ TVS Raider ಕಮ್ಯೂಟರ್ ಬೈಕ್

ಟಾಪ್-ಸ್ಪೆಕ್ ರೂಪಾಂತರವು 5-ಇಂಚಿನ ಟಿಎಫ್‌ಟಿ ಸ್ಕ್ರೀನ್ ಅನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಹೊಂದಿದ್ದು, ಇದರಲ್ಲಿ ಬ್ರ್ಯಾಂಡ್‌ನ ಸ್ಮಾರ್ಟ್‌ಎಕ್ಸ್‌ಕನೆಕ್ಟ್ ಸಂಪರ್ಕಿತ ತಂತ್ರಜ್ಞಾನವನ್ನು ಒಳಗೊಂಡಿದೆ. ಹಾಗೆಯೇ ಆರಂಭಿಕ ಮಾದರಿಯಲ್ಲಿ ಟಿಎಫ್‌ಟಿ ಬದಲಾಗಿ ಎಲ್‌ಸಿಡಿ ಯುನಿಟ್‌ ನೀಡಲಾಗುತ್ತದೆ.

125 ಸಿಸಿ ಬೈಕ್ ವಿಭಾಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಚ್ಚ ಹೊಸ TVS Raider ಕಮ್ಯೂಟರ್ ಬೈಕ್

ಹೊಸ ಬೈಕಿನಲ್ಲಿರುವ ಇನ್‌ಫಾರ್ಮೆಷನ್ ಡಿಸ್‌ಪ್ಲೇ ಮೂಲಕ ಬೈಕ್ ಚಾಲನೆಯೊಂದಿಗೆ ವಿವಿಧ ಮಾಹಿತಿಗಳನ್ನು ಒಂದೇ ಸೂರಿನಡಿ ನಿಖರವಾಗಿ ತಿಳಿಕೊಳ್ಳಬಹುದಾಗಿದ್ದು, ಹೊಸ ಫೀಚರ್ಸ್‌ಗಳು ಬೈಕ್ ಚಾಲನೆ ಮಾಡುವಾಗ ಸಾಕಷ್ಟು ಉಪಯುಕ್ತ ಮಾಹಿತಿ ಒದಗಿಸುತ್ತದೆ.

*ಮಲ್ಟಿಪಲ್ ಟ್ರಿಪ್ ಮೀಟರ್

*ಗೇರ್ ಪೋಷಿಷನ್ ಇಂಡಿಕೇಟರ್

*ಎಂಜಿನ್ ಸೈಡ್-ಸ್ಟ್ಯಾಂಡ್ ಕಟ್-ಅಪ್ ಇಂಡಿಕೇಟರ್

*ಟೈಮ್

*ಟ್ಯಾಚೊಮೀಟರ್

*ಫ್ಯೂಲ್ ರೇಂಜ್

125 ಸಿಸಿ ಬೈಕ್ ವಿಭಾಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಚ್ಚ ಹೊಸ TVS Raider ಕಮ್ಯೂಟರ್ ಬೈಕ್

ಸ್ಮಾರ್ಟ್ ಫೋನ್ ಸಂಪರ್ಕಿತ ಟಿಎಫ್‌ಟಿ ಡಿಸ್‌ಪ್ಲೇ ಮೂಲಕ ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದ್ದು, ಆರಂಭಿಕ ಮಾದರಿಗಿಂತಲೂ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಮಟ್ಟದ ಕನೆಕ್ಟೆಡ್ ಫೀಚರ್ಸ್‌ಗಳಿರಲಿವೆ.

*ಟರ್ನ್-ಬೈ-ಟರ್ನ್ ನ್ಯಾವಿಗೇಷನ್

*ವಾಯ್ಸ್ ಅಸಿಸ್ಟೆನ್ಸ್

*ಕಾರ್ ಮ್ಯಾನೆಜ್‌ಮೆಂಟ್

*ಮೇಸೆಜ್ ನೋಟಿಫಿಕೇಷನ್ ಅಲರ್ಟ್

*ಹೈ ಸ್ಪೀಡ್ ಅಲರ್ಟ್

*ಲೋ ಫ್ಯೂಲ್ ಅಸಿಸ್ಟೆನ್ಸ್

*ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್

125 ಸಿಸಿ ಬೈಕ್ ವಿಭಾಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಚ್ಚ ಹೊಸ TVS Raider ಕಮ್ಯೂಟರ್ ಬೈಕ್

ಇದರ ಜೊತೆಗೆ ಹೊಸ ಬೈಕಿನ ಟಿಎಫ್‌ಟಿ ಡಿಸ್‌ಪ್ಲೇನಲ್ಲಿ ಆಟೋ ಬ್ರೈಟ್‌ನೆಸ್ ವೈಶಿಷ್ಟ್ಯತೆಯನ್ನು ಒಳಗೊಂಡಿದ್ದು, ಬೈಕ್ ಚಾಲನೆ ವೇಳೆ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಹೆಡ್‌ಲ್ಯಾಂಪ್ ಬೆಳಕಿನ ಪ್ರಮಾಣವನ್ನು ಏರಿತ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಹೊಸ ಬೈಕಿನ ಹಿಂಬದಿಯ ಆಸನ ಕೆಳಗೂ ಸ್ಟೋರೇಜ್ ಫೇಸ್ ನೀಡಲಾಗಿದ್ದು, ಸಣ್ಣಗಾತ್ರದಲ್ಲಿರುವ ಸ್ಟೋರೇಜ್ ಫೇಸ್‌ನಲ್ಲಿ ಅಗತ್ಯವಿರುವ ವಸ್ತುಗಳು ಸಂಗ್ರಹ ಮಾಡಬಹುದಾಗಿದೆ.

125 ಸಿಸಿ ಬೈಕ್ ವಿಭಾಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಚ್ಚ ಹೊಸ TVS Raider ಕಮ್ಯೂಟರ್ ಬೈಕ್

ಎಂಜಿನ್ ಮತ್ತು ಪರ್ಫಾಮೆನ್ಸ್

ಟಿವಿಎಸ್ ಮೋಟಾರ್ ಕಂಪನಿಯು ಹೊಸ ರೈಡರ್ ಬೈಕ್ ಮಾದರಿಯಲ್ಲಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ 124.8 ಸಿಸಿ ಎಂಜಿನ್ ಜೋಡಣೆ ಮಾಡಿದ್ದು, ಇದು 5-ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 11.2 ಬಿಎಚ್‌ಪಿ ಮತ್ತು 11.2 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹಾಗೆಯೇ ಹೊಸ ಬೈಕ್ ಮಾದರಿಯು ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದ್ದು, ರೈಡರ್ ಬೈಕ್ ಮಾದರಿಯು ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳೊಂದಿಗೆ ಪ್ರತಿ ಲೀಟರ್‌ಗೆ 67 ಕಿ.ಮೀ ಮೈಲೇಜ್ ಹಿಂದಿರುಗಿಸುವುದಾಗಿ ಟಿವಿಎಸ್ ಕಂಪನಿಯು ಹೇಳಿಕೊಂಡಿದೆ.

125 ಸಿಸಿ ಬೈಕ್ ವಿಭಾಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಚ್ಚ ಹೊಸ TVS Raider ಕಮ್ಯೂಟರ್ ಬೈಕ್

ಪ್ರತಿ ಗಂಟೆಗೆ 99 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ಬೈಕಿನಲ್ಲಿ ಕಂಪನಿಯು ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಸುರಕ್ಷತೆಗೂ ಆದ್ಯತೆ ನೀಡಿದ್ದು, 30 ಎಂಎಂ ಫ್ರಂಟ್ ಟೆಲಿಸ್ಕೋಫಿಕ್ ಸಸ್ಷೆಂಷನ್ ಮತ್ತು 5 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ರಿಯರ್ ಮೊನೊಶಾಕ್ ಪ್ರಿ-ಲೋಡ್ ಅಡ್ಜೆಸ್ಟ್ ಸಸ್ಷೆಂಷನ್ ಜೋಡಣೆ ಹೊಂದಿದೆ.

125 ಸಿಸಿ ಬೈಕ್ ವಿಭಾಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಚ್ಚ ಹೊಸ TVS Raider ಕಮ್ಯೂಟರ್ ಬೈಕ್

ಹೊಸ ಬೈಕಿನಲ್ಲಿ ಟಿವಿಎಸ್ ಕಂಪನಿಯು ಯುರೋಗ್ರಿಪ್ ರಿಮೊರಾ ಟ್ಯೂಬ್‌ಲೆಸ್ ಟೈರ್‌ನೊಂದಿಗೆ ಫ್ರಂಟ್ ಮತ್ತು ರಿಯರ್‌ನಲ್ಲಿ 17 ಇಂಚಿನ ಅಲಾಯ್ ವ್ಹೀಲ್, ಮುಂಭಾಗದ ಚಕ್ರದಲ್ಲಿ 240ಎಂಎಂ ಪೆಟಲ್ ಡಿಸ್ಕ್, ಹಿಂಬದಿಯ ಚಕ್ರದಲ್ಲಿ 130ಎಂಎಂ ಡ್ರಮ್ ಬ್ರೇಕ್ ನೀಡಲಾಗಿದೆ.

125 ಸಿಸಿ ಬೈಕ್ ವಿಭಾಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಚ್ಚ ಹೊಸ TVS Raider ಕಮ್ಯೂಟರ್ ಬೈಕ್

ರೈಡರ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಬೈಕ್ ಡಿಸೈನ್‌ಗೆ ಹೊಂದುವ ಸ್ಟ್ರೀಕಿಂಗ್ ರೆಡ್, ಬ್ಲೇಜಿಂಗ್ ಬ್ಲ್ಯೂ, ಬ್ಲ್ಯಾಕ್ ಮತ್ತು ಫ್ಲೈರಿ ರೆಡ್ ಎಂಬ ನಾಲ್ಕು ಬಣ್ಣಗಳ ಆಯ್ಕೆ ನೀಡಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಬಣ್ಣದ ಆಯ್ಕೆ ಖರೀದಿಗೆ ಲಭ್ಯವಿರಲಿವೆ.

125 ಸಿಸಿ ಬೈಕ್ ವಿಭಾಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಹೊಚ್ಚ ಹೊಸ TVS Raider ಕಮ್ಯೂಟರ್ ಬೈಕ್

ಈ ಮೂಲಕ ಹೊಸ ಬೈಕ್ ಮಾದರಿಯು ಮಾರುಕಟ್ಟೆಯಲ್ಲಿರುವ 125ಸಿಸಿ ಜನಪ್ರಿಯ ಬೈಕ್ ಮಾದರಿಗಳಾದ ಬಜಾಜ್ ಪಲ್ಸರ್ 125, ಬಜಾಜ್ ಎನ್ಎಸ್125, ಹೋಂಡಾ ಶೈನ್ ಮತ್ತು ಹೀರೋ ಗ್ಲ್ಯಾಮರ್ ಸೇರಿ ಪ್ರಮುಖ ಬೈಕ್ ಮಾದರಿಗಳಿಗೆ ಪೈಪೋಟಿ ನೀಡಲಿದ್ದು, ಹೊಸ ಬೈಕ್ ಬುಕ್ಕಿಂಗ್ ಮತ್ತು ವಿತರಣೆಯು ಇಂದಿನಿಂದಲೇ ಆರಂಭವಾಗಿದೆ.

Most Read Articles

Kannada
English summary
Tvs raider launched in india at rs 77 500 engine features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X