ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಜ್ಜಾದ ಯಮಹಾ

ಯಮಹಾ ಕಂಪನಿಯು ಬೈಕ್‌ ಹಾಗೂ ಸ್ಕೂಟರ್‌ಗಳ ಮಾರಾಟಕ್ಕೆ ಹೆಸರುವಾಸಿಯಾಗಿದೆ. ಟಿವಿಎಸ್ ಹಾಗೂ ಬಜಾಜ್ ಸೇರಿದಂತೆ ಹಲವು ಕಂಪನಿಗಳು ತಮ್ಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿರುವ ಹಿನ್ನೆಲೆಯಲ್ಲಿ ಯಮಹಾ ಕಂಪನಿಯು ಸಹ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಜ್ಜಾದ ಯಮಹಾ

ಸದ್ಯಕ್ಕೆ ಯಮಹಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಭವಿಷ್ಯವು ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಸದ್ದು ಮಾಡಿದರೂ ಸಹ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಪೆಟ್ರೋಲ್ ಚಾಲಿತ ವಾಹನಗಳನ್ನು ಸಂಪೂರ್ಣವಾಗಿ ಬದಲಿಸಲು ಸಾಧ್ಯವಿಲ್ಲವೆಂದು ಯಮಹಾ ಕಂಪನಿಯು ತಿಳಿಸಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಜ್ಜಾದ ಯಮಹಾ

ಕಂಪನಿಯು ತನ್ನ ಎಲ್ಲಾ ಉತ್ಪನ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಪ್ರಯತ್ನಿಸುತ್ತಿದೆ. ಈ ಕಾರಣಕ್ಕೆ ಕಂಪನಿಯು ಆರ್ ಅಂಡ್ ಡಿಯಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ. ಅಸ್ತಿತ್ವದಲ್ಲಿರುವ ಪೆಟ್ರೋಲ್ ವಾಹನಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಕಂಪನಿಯು ಉದ್ದೇಶಿಸಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಜ್ಜಾದ ಯಮಹಾ

ಇದರಿಂದಾಗಿ ಪೆಟ್ರೋಲ್ ಬಳಕೆ ಕಡಿಮೆಯಾಗುವುದರ ಜೊತೆಗೆ ವಾಯು ಮಾಲಿನ್ಯವನ್ನು ಸಹ ನಿಯಂತ್ರಿಸಬಹುದು. ಯಮಹಾ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳ ತಂತ್ರಜ್ಞಾನದ ಬಗ್ಗೆಯೂ ಕಾರ್ಯನಿರ್ವಹಿಸುತ್ತಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಜ್ಜಾದ ಯಮಹಾ

ಬ್ಯಾಟರಿ ಹಾಗೂ ಎಲೆಕ್ಟ್ರಿಕ್ ಘಟಕ ವ್ಯವಸ್ಥೆಗಳ ಕುರಿತು ಅಧ್ಯಯನ ನಡೆಸಲು ಯಮಹಾ ಕಂಪನಿಯು ಜಪಾನ್‌ನ ಇತರ ಮೂರು ದೊಡ್ಡ ಬೈಕ್ ಕಂಪನಿಗಳಾದ ಹೋಂಡಾ, ಸುಜುಕಿ, ಕವಾಸಕಿ ಜೊತೆ ಹೂಡಿಕೆ ಮಾಡಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಜ್ಜಾದ ಯಮಹಾ

ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ ಮೂಲಸೌಕರ್ಯಗಳನ್ನು ಒದಗಿಸಲು ಯಮಹಾ ಕಂಪನಿಯು ನಿರ್ಧರಿಸಿದೆ. ಎಲೆಕ್ಟ್ರಿಕ್ ವಾಹನಗಳಿಂದ ಭವಿಷ್ಯದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲವೆಂದು ಯಮಹಾ ಕಂಪನಿ ಹೇಳಿಕೊಂಡಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಜ್ಜಾದ ಯಮಹಾ

ಯಮಹಾ ಮೋಟಾರ್ ಇಂಡಿಯಾ ಕಂಪನಿಯು 2020ರ ಡಿಸೆಂಬರ್ ತಿಂಗಳ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ಅಂಕಿ ಅಂಶಗಳ ಪ್ರಕಾರ ಕಂಪನಿಯು 2020ರ ಡಿಸೆಂಬರ್‌ ತಿಂಗಳಿನಲ್ಲಿ 39,224 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಜ್ಜಾದ ಯಮಹಾ

2019ರ ಡಿಸೆಂಬರ್ ತಿಂಗಳಿನಲ್ಲಿ 29,486 ಯುನಿಟ್‌ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿತ್ತು. 2019ರ ಡಿಸೆಂಬರ್ ತಿಂಗಳ ಮಾರಾಟಕ್ಕಿಂತ 2020ರ ಡಿಸೆಂಬರ್‌ ತಿಂಗಳ ಮಾರಾಟವು 33%ನಷ್ಟು ಏರಿಕೆಯಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಜ್ಜಾದ ಯಮಹಾ

ಇತ್ತೀಚೆಗೆ ಯಮಹಾ ಕಂಪನಿಯು ಎಫ್‌ಝಡ್-ಎಕ್ಸ್ ಹೆಸರಿನ ಬೈಕ್ ಅನ್ನು ನೋಂದಾಯಿಸಿದೆ. 250 ಸಿಸಿ ಎಂಜಿನ್ ಆಧಾರಿತ ಈ ಬೈಕ್ ಮಧ್ಯಮ ಗಾತ್ರದ ಅಡ್ವೆಂಚರ್ ಬೈಕ್ ಆಗಿರಲಿದೆ ಎಂದು ಹೇಳಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಜ್ಜಾದ ಯಮಹಾ

ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಹಾಗೂ ಕೆಟಿಎಂನ 250-300 ಸಿಸಿ ಅಡ್ವೆಂಚರ್ ಬೈಕ್ ಗಳಿಗೆ ಪೈಪೋಟಿ ನೀಡಲಿದೆ. ಈ ಬೈಕಿನ ವಿನ್ಯಾಸವು ಯಮಹಾ ಎಫ್‌ಝಡ್ -25 ಅಥವಾ ಎಫ್‌ಝಡ್ಎಸ್ -25 ಪ್ಲಾಟ್ ಫಾರಂ ಅನ್ನು ಆಧರಿಸಿರುವ ಸಾಧ್ಯತೆಗಳಿವೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಜ್ಜಾದ ಯಮಹಾ

ಕಂಪನಿಯು ಈ ಹಿಂದೆ ಶೀಘ್ರದಲ್ಲೇ ಭಾರತದಲ್ಲಿ ಸಣ್ಣ ಅಡ್ವೆಂಚರ್ ಬೈಕುಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿತ್ತು. ಈ ಬೈಕ್ ಅಡ್ವೆಂಚರ್ ಬೈಕ್ ಗಳು ಹೊಂದಿರುವ ಎಲ್ಲಾ ಫೀಚರ್'ಗಳನ್ನು ಹೊಂದಿರಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಜ್ಜಾದ ಯಮಹಾ

ಯಮಹಾ ಕಂಪನಿಯು ತನ್ನ ಗ್ರಾಹಕರಿಗಾಗಿ ಟೆಸ್ಟ್ ರೈಡ್ ಅಭಿಯಾನವನ್ನು ಆರಂಭಿಸುವುದಾಗಿ ತಿಳಿಸಿದೆ. ಈ ಅಭಿಯಾನದ ಭಾಗವಾಗಿ ಕಂಪನಿಯು ತನ್ನ ಗ್ರಾಹಕರಿಗೆ ತಮ್ಮ ಯಮಹಾ ಸ್ಕೂಟರ್‌ಗಳನ್ನು ಟೆಸ್ಟ್ ರೈಡ್ ಗಾಗಿ ತಮಗೆ ಪರಿಚಯವಿರುವ ಜನರಿಗೆ ನೀಡುವಂತೆ ಮನವಿ ಮಾಡಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗೊಳಿಸಲು ಸಜ್ಜಾದ ಯಮಹಾ

ಯಮಹಾ ಕಂಪನಿಯು ಇತ್ತೀಚೆಗೆ ತನ್ನ 125 ಸಿಸಿ ಸ್ಕೂಟರ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಯಮಹಾ ಕಂಪನಿಯು ಫಸಿನೊ 125 ಹಾಗೂ ಆರ್‌ ಝಡ್‌ಆರ್ 125 ಸ್ಕೂಟರ್'ಗಳ ಬೆಲೆಯನ್ನು ಏರಿಕೆ ಮಾಡಿದೆ.

Most Read Articles

Kannada
Read more on ಯಮಹಾ yamaha
English summary
Yamaha company to launch electric two wheeler in domestic market. Read in Kannada.
Story first published: Wednesday, January 6, 2021, 15:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X