ಮೌಂಟೆನ್ ರೈಡಿಂಗ್'ಗಾಗಿ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಯಮಹಾ

ವಿಶ್ವಾದಾದ್ಯಂತ ಅನೇಕ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಕಾರು, ಎಲೆಕ್ಟ್ರಿಕ್ ಬೈಕ್ ಹಾಗೂ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುತ್ತಿವೆ.

ಮೌಂಟೆನ್ ರೈಡಿಂಗ್'ಗಾಗಿ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಯಮಹಾ

ಇದರ ಜೊತೆಗೆ ಕೆಲವು ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಸೈಕಲ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ಇತ್ತೀಚಿಗೆ ಜಪಾನ್ ಮೂಲದ ಖ್ಯಾತ ಬೈಕ್ ಹಾಗೂ ಸ್ಕೂಟರ್ ತಯಾರಕ ಕಂಪನಿಯಾದ ಯಮಹಾ ಹೊಸ ಎಲೆಕ್ಟ್ರಿಕ್ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ.

ಮೌಂಟೆನ್ ರೈಡಿಂಗ್'ಗಾಗಿ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಯಮಹಾ

ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಮೌಂಟೇನ್ ರೈಡಿಂಗ್ ಅಂದರೆ ಗುಡ್ಡಗಾಡು ಪ್ರದೇಶಗಳಲ್ಲಿ ಸೈಕಲ್ ಪ್ರವಾಸ ಕೈಗೊಳ್ಳುವವರಿಗಾಗಿ ಬಿಡುಗಡೆಗೊಳಿಸಲಾಗಿದೆ ಎಂದು ಯಮಹಾ ಕಂಪನಿ ಹೇಳಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮೌಂಟೆನ್ ರೈಡಿಂಗ್'ಗಾಗಿ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಯಮಹಾ

ಪರ್ವತ ಪ್ರದೇಶಗಳಿಗಾಗಿ ಇ ಸೈಕಲ್ ತಯಾರಿಸಲು ಯಮಹಾ ಕಂಪನಿಯು ತನ್ನ ಪರಿಣತಿಯನ್ನು ಬಳಸಲು ನಿರ್ಧರಿಸಿತು. ಈ ಎಲೆಕ್ಟ್ರಿಕ್ ಸೈಕಲ್ ಬಗ್ಗೆ ಯಮಹಾ ಮೋಟಾರ್ ಕಂಪನಿ ಲಿಮಿಟೆಡ್‌ನ ಕಝುಹಿರೋ ಮುರಟಾ ಮಾಹಿತಿ ನೀಡಿದ್ದಾರೆ.

ಮೌಂಟೆನ್ ರೈಡಿಂಗ್'ಗಾಗಿ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಯಮಹಾ

ಈ ಹಿಂದೆ ಉಪಯೋಗಕ್ಕೆ ಬರುವ ವಾಹನಗಳ ಮೇಲೆ ಗಮನಹರಿಸಲಾಗಿತ್ತು. ಈ ಬಾರಿ ರೋಮಾಂಚಕ ಅನುಭವ ನೀಡುವ ಉದ್ದೇಶದಿಂದ ಈ ಎಲೆಕ್ಟ್ರಿಕ್ ಸೈಕಲ್ ಅಭಿವೃದ್ಧಿಪಡಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮೌಂಟೆನ್ ರೈಡಿಂಗ್'ಗಾಗಿ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಯಮಹಾ

ಹಿಂಭಾಗ ಹಾಗೂ ಮುಂಭಾಗದಲ್ಲಿ ಸಸ್ಪೆಂಷನ್ ಸೆಟಪ್ ಹೊಂದಿರುವ ಈ ಎಲೆಕ್ಟ್ರಿಕ್ ಸೈಕಲ್ ಚಾಲನೆ ವೇಳೆಯಲ್ಲಿ ಆರಾಮದಾಯಕ ಅನುಭವ ನೀಡಲಿದೆ.ಜೊತೆಗೆ ಸವಾರಿ ಮಾಡುವಾಗ ಹೆಚ್ಚು ಸ್ಪೋರ್ಟಿ ಅನುಭವವನ್ನು ನೀಡುತ್ತದೆ ಎಂದು ಹೇಳಿದರು.

ಮೌಂಟೆನ್ ರೈಡಿಂಗ್'ಗಾಗಿ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಯಮಹಾ

ಹೊಸ ಮೌಂಟೇನ್ ಇ ಸೈಕಲ್'ನ ಪರ್ಫಾಮೆನ್ಸ್ ಪರೀಕ್ಷಿಸುವುದರ ಜೊತೆಗೆ ಈ ಎಲೆಕ್ಟ್ರಿಕ್ ಸೈಕಲ್ ಸವಾರಿ ಮಾಡಿ ಆಫ್ ರೋಡ್ ಅಡ್ವೆಂಚರ್ ಅನುಭವವನ್ನು ಪಡೆಯಲು ಸವಾರರಿಗೆ ಅವಕಾಶ ನೀಡಲಾಗಿದೆ ಎಂದು ಕಝುಹಿರೋ ಮುರಾಟಾ ಹೇಳಿದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮೌಂಟೆನ್ ರೈಡಿಂಗ್'ಗಾಗಿ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಯಮಹಾ

ಈ ಎಲೆಕ್ಟ್ರಿಕ್ ಸೈಕಲ್'ನ ಅತ್ಯುತ್ತಮ ವಿಷಯವೆಂದರೆ ಎಲೆಕ್ಟ್ರಿಕ್ ಡ್ರೈವ್ ಘಟಕದ ಸಹಾಯದಿಂದ ಈ ಸೈಕಲ್ ಮೋಜಿನ ಅನುಭವವನ್ನು ನೀಡುತ್ತದೆ. ಈ ಬಗ್ಗೆ ಮಾತನಾಡಿದ ಯಮಹಾ ಮೋಟಾರ್ ಕಂಪನಿ ಲಿಮಿಟೆಡ್‌ನ ಯಾಸುವೊ ​​ಒಕಾಡಾರವರು ಹಲವು ಮಾಹಿತಿ ನೀಡಿದರು.

ಮೌಂಟೆನ್ ರೈಡಿಂಗ್'ಗಾಗಿ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಯಮಹಾ

ಈ ಎಲೆಕ್ಟ್ರಿಕ್ ಸೈಕಲ್ ಹೈ ಸ್ಪೆಕ್ ಮೌಂಟೇನ್ ಬೈಕ್‌ ಹಾಗೂ ಇ ಬೈಕ್‌ಗಳ ಫೀಚರ್'ಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸೈಕಲ್'ನಲ್ಲಿ ನಾವು ಮೊದಲ ಬಾರಿಗೆ ಫ್ರಂಟ್ ಸಸ್ಪೆಂಷನ್ ಹಾಗೂ ಬ್ಯಾಕ್ ಸಸ್ಪೆಂಷನ್ ಬಳಸಿದ್ದೇವೆ ಎಂದು ಹೇಳಿದ್ದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮೌಂಟೆನ್ ರೈಡಿಂಗ್'ಗಾಗಿ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಯಮಹಾ

ಈ ಎಲೆಕ್ಟ್ರಿಕ್ ಸೈಕಲ್'ನಲ್ಲಿರುವ ಕುಶನ್ ಹಳೆಯ ಮಾದರಿಗಳಿಗಿಂತ ಹೆಚ್ಚು ಆರಾಮದಾಯಕ ಅನುಭವವನ್ನು ನೀಡುತ್ತದೆ. ಈ ಕಾರಣಕ್ಕೆ ವಿಭಿನ್ನ ಪ್ರದೇಶಗಳಲ್ಲಿಯೂ ಸಹ ಸ್ಥಿರವಾದ ಸವಾರಿ ಪಡೆಯಬಹುದು.

ಮೌಂಟೆನ್ ರೈಡಿಂಗ್'ಗಾಗಿ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಯಮಹಾ

ಮೌಂಟೇನ್ ಬೈಕ್ ಕ್ರಾಸ್ ಕಂಟ್ರಿ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಯಾದಾಗಿನಿಂದ ಜನರು ಮೌಂಟೇನ್ ಬೈಕಿಂಗ್‌ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮೌಂಟೆನ್ ರೈಡಿಂಗ್'ಗಾಗಿ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಯಮಹಾ

ಇನ್ನು ಯಮಹಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಹೊಸ ಎಫ್‌ಝಡ್-ಎಕ್ಸ್ ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಈ ಬೈಕನ್ನು ನಿರಂತರವಾಗಿ ಪರೀಕ್ಷಿಸುತ್ತಿದೆ.

ಮೌಂಟೆನ್ ರೈಡಿಂಗ್'ಗಾಗಿ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆಗೊಳಿಸಿದ ಯಮಹಾ

ಇತ್ತೀಚೆಗೆ ಈ ಬೈಕಿಗೆ ಸಂಬಂಧಿಸಿದ ಮಾಹಿತಿ ಹೊರಬಂದಿದ್ದು, ಅದರಲ್ಲಿ ಈ ಬೈಕ್ ಅನ್ನು ಹಲವು ರೀತಿ ಪರೀಕ್ಷೆ ಮಾಡುತ್ತಿರುವುದು ಕಂಡುಬಂದಿದೆ. ಕೆಲವು ದಿನಗಳ ಹಿಂದೆ ಬಹಿರಂಗಗೊಂಡಿದ್ದ ಚಿತ್ರಗಳು ಯಮಹಾ ಎಫ್‌ಝಡ್-ಎಕ್ಸ್‌ ಬೈಕ್ ಆಧುನಿಕ ರೆಟ್ರೊ ಸ್ಟೈಲಿಂಗ್ ಹೊಂದಿರುವುದನ್ನು ತೋರಿಸಿದ್ದವು.

Most Read Articles

Kannada
Read more on ಯಮಹಾ yamaha
English summary
Yamaha introduces new electric bicycle for mountain riding. Read in Kannada.
Story first published: Saturday, April 17, 2021, 18:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X