Just In
- 2 hrs ago
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- 3 hrs ago
ಫೆಬ್ರವರಿ ತಿಂಗಳಿನಲ್ಲಿ 12 ಸಾವಿರಕ್ಕೂ ಹೆಚ್ಚು ಎಂಪಿವಿಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
- 3 hrs ago
ಸಿಎನ್ಜಿ ವರ್ಷನ್ನಲ್ಲೂ ಬಿಡುಗಡೆಯಾಗಲಿದೆ ಸ್ಕೋಡಾ ರ್ಯಾಪಿಡ್ ಸೆಡಾನ್
- 4 hrs ago
ಸ್ಕ್ರ್ಯಾಪೇಜ್ ನೀತಿ ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಸಿಹಿಸುದ್ದಿ ನೀಡಿದ ಕೇಂದ್ರ ಸರ್ಕಾರ
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Movies
ಬಿಗ್ಬಾಸ್: ಪ್ರಶಾಂತ್ ಸಂಬರ್ಗಿ ಮೇಲೆ ಉರಿದು ಬಿದ್ದ ಮನೆ ಸದಸ್ಯರು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾಯ್ತು 2021ರ ಯಮಹಾ ಎಫ್‍ಜೆಡ್-ಎಫ್‍ಐ ಮತ್ತು ಎಫ್‍ಜೆಡ್‍ಎಸ್-ಎಫ್‍ಐ ಬೈಕುಗಳು
ಯಮಹಾ ಮೋಟಾರ್ ಇಂಡಿಯಾ ತನ್ನ ಜನಪ್ರಿಯ ತನ್ನ ಎಫ್‍ಜೆಡ್ ಸರಣಿಯ 2021ರ ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಎಫ್‍ಜೆಡ್-ಎಫ್‍ಐ ಮತ್ತು ಎಫ್‍ಜೆಡ್‍ಎಸ್-ಎಫ್‍ಐ ಬೈಕುಗಳು ಒಳಗೊಂಡಿದ್ದು, ಈ ಮಾದರಿಗಳು ಕೆಲವು ಹೆಚ್ಚುವರಿ ಫೀಚರ್ ಗಳನ್ನು ಪಡೆದುಕೊಂಡಿದೆ.

2021ರ ಯಮಹಾ ಎಫ್‍ಜೆಡ್-ಎಫ್‍ಐ ಬೈಕಿನ ಬೆಲೆಯು ರೂ.1.03 ಲಕ್ಷಗಳಾಗಿದ್ದರೆ, ಎಫ್‍ಜೆಡ್‍ಎಸ್-ಎಫ್‍ಐ ಬೈಕಿನ ಬೆಲೆಯು ರೂ.1.07 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ. 2021ರ ಯಮಹಾ ಎಫ್‍ಜೆಡ್-ಎಫ್‍ಐ ಮತ್ತು ಎಫ್‍ಐ ಬೈಕುಗಳು ಈಗ ಕೆಲವು ಸೂಕ್ಷ್ಮ ನವೀಕರಣಗಳನ್ನು ಪಡೆದುಕೊಂಡಿದೆ. ಇನ್ನು ಈ ಬೈಕುಗಳು ರೇಸಿಂಗ್ ಬ್ಲೂ ಮತ್ತು ಮೆಟಾಲಿಕ್ ಬ್ಲ್ಯಾಕ್ ಎಂಬ ಎರಡೂ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದೆ.

2021ರ ಯಮಹಾ ಎಫ್‍ಜೆಡ್-ಎಫ್‍ಐ ಮತ್ತು ಎಫ್‍ಜೆಡ್‍ಎಸ್-ಎಫ್‍ಐ ಬೈಕುಗಳಲ್ಲಿ ಹೊಸ ಬಣ್ಣಗಳನ್ನು ಸ್ಟ್ಯಾಂಡರ್ಡ್ ಬಣ್ಣದ ಪ್ಯಾಲೆಟ್ ಜೊತೆಗೆ ನೀಡಲಾಗುವುದು. 2021ರ ಎಫ್‍ಜೆಡ್‍ಎಸ್-ಎಫ್‍ಐ ಬೈಕ್ ಹೊಸ 3ಡಿ ಲೋಗೊವನ್ನು ಸಹ ಒಳಗೊಂಡಿವೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಯಮಹಾ ಎಫ್‍ಜೆಡ್ ಸರಣಿಯ ಎರಡು ಮಾದರಿಗಳಲ್ಲಿ ಈ ದಿನಗಳಲ್ಲಿ ಹೆಚ್ಚಿನ ಹೆಚ್ಚಿನ ಬೈಕುಗಳಲ್ಲಿ ನೀಡಲಾಗುವ ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ ಗಳಾದ ‘ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್' ನೊಂದಿಗೆ ಬರುತ್ತವೆ.

ಇನ್ನು ಈ 2021ರ ಯಮಹಾ ಎಫ್‍ಜೆಡ್-ಎಫ್‍ಐ ಮತ್ತು ಎಫ್‍ಜೆಡ್‍ಎಸ್-ಎಫ್‍ಐ ಬೈಕುಗಳಲ್ಲಿ ಕಂಪನಿಯು 2 ಕೆಜಿಗಳಷ್ಟು ತೂಕವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಇದರ ಸುಧಾರಿತ ಆರಾಮ, ನಿರ್ವಹಣೆ ಮತ್ತು ಕುಶಲತೆಯನ್ನು ಖಾತ್ರಿಪಡಿಸಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಆದರೆ ಯಮಹಾ ಕಂಪನಿಯ ಈ ಎಫ್‍ಜೆಡ್-ಎಫ್‍ಐ ಮತ್ತು ಫ್‍ಜೆಡ್‍ಎಸ್-ಎಫ್‍ಐ ಬೈಕುಗಳ ತೂಕವನ್ನು ಹೇಗೆ ಇಳಿಸಿರುವುದರ ಬಗ್ಗೆ ಮಾಹಿತಿ ಬಹಿರಂಗಪಡಿಸಲಿಲ್ಲ.ಹೆಚ್ಚುವರಿಯಾಗಿ, 2021ರ ಎಫ್‍ಜೆಡ್‍ಎಸ್-ಎಫ್‍ಐ ಬೈಕ್ ‘ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್' ತಂತ್ರಜ್ಞಾನವನ್ನು ಪಡೆದುಕೊಂಡಿದೆ.

ಇದು ಆನ್ಸರ್ ಬ್ಯಾಕ್, ಲೊಕೇಟ್-ಮೈ-ಬೈಕ್, ಇ-ಲಾಕ್ ಮತ್ತು ಇತರ ಹಲವು ಫೀಚರ್ ಗಳಿಂದ ಕೂಡಿರುವ ತಂತ್ರಜ್ಞಾನವಾಗಿದೆ. ಇನ್ನು ಈ ಹೊಸ ಎರಡು ಬೈಕುಗಳಲ್ಲಿ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

2021ರ ಯಮಹಾ ಎಫ್‍ಜೆಡ್-ಎಫ್‍ಐ ಮತ್ತು ಫ್‍ಜೆಡ್‍ಎಸ್-ಎಫ್‍ಐ ಬೈಕುಗಳಲ್ಲಿ ಒಂದೇ 149ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 250 ಆರ್‌ಪಿಎಂನಲ್ಲಿ 12.4 ಬಿಹೆಚ್‌ಪಿ ಮತ್ತು 5500 ಆರ್‌ಪಿಎಂನಲ್ಲಿ 13.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ,

ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. 2021ರ ಯಮಹಾ ಎಫ್‍ಜೆಡ್-ಎಫ್‍ಐ ಮತ್ತು ಎಫ್‍ಜೆಡ್‍ಎಸ್-ಎಫ್‍ಐ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ ಜಿಕ್ಸರ್, ಬಜಾಜ್ ಪಲ್ಸರ್ ಎನ್ಎಸ್ 160, ಕೆಟಿಎಂ 125 ಡ್ಯೂಕ್ ಮತ್ತು ಟಿವಿಎಸ್ ಅಪಾಚೆ ಆರ್‍ಟಿಆರ್ 160 ಬೈಕುಗಳಿಗೆ ಪೈಪೋಟಿ ನೀಡುತ್ತದೆ.