ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ 2021ರ ಯಮಹಾ ಎನ್‌ವಿಎಕ್ಸ್ ಸ್ಕೂಟರ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ಸ್ಪೋರ್ಟಿ ಲುಕ್ ಹೊಂದಿರುವ ಹೊಸ ಎನ್‌ವಿಎಕ್ಸ್ ಸ್ಕೂಟರ್ ಅನ್ನು ಮಲೇಷ್ಯಾದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. 2021ರ ಯಮಹಾ ಎನ್‌ವಿಎಕ್ಸ್ ಸ್ಕೂಟರ್ ಸ್ಟ್ಯಾಂಡರ್ಡ್ ಮತ್ತು ಎಬಿಎಸ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಹೊಸ ಯಮಹಾ ಎನ್‌ವಿಎಕ್ಸ್ ಸ್ಕೂಟರ್ ಅಗ್ರೇಸಿವ್ ವಿನ್ಯಾಸವನ್ನು ಹೊಂದಿದೆ. ಇದರ ಶಾರ್ಪ್ ಲೈನ್ ಗಳು ಇದರ ಅಗ್ರೇಸಿವ್ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಸ್ಕೂಟರ್ ನಲ್ಲಿ ಎಲ್ಇಡಿ ಲ್ಯಾಂಪ್ ಗಳೊಂದಿಗೆ ಸಾಕಷ್ಟು ತೆಳುವಾದ, ತೀಕ್ಷ್ಣವಾದ ಬಾಡಿ ಲೈನ್ ಗಳನ್ನು ಹೊಂದಿದೆ. ಅಲ್ಲದೆ ಸುತ್ತಲೂ ಇರುವ ಸ್ಪೋರ್ಟಿ ಬಾಡಿ ಪ್ಯಾನೆಲ್‌ಗಳನ್ನು ಒಳಗೊಂಡಿದೆ. ಈ ಸ್ಕೂಟರ್ ನಲ್ಲಿರುವ ಬ್ಲ್ಯಾಕ್ ಔಟ್ ಆಗಿರುವ ಅಲಾಯ್ ವ್ಹೀಲ್ ಗಳು ಆಕರ್ಷಕವಾಗಿ ಕಾಣುತ್ತವೆ.

ಈ 2021ರ ಯಮಹಾ ಎನ್‌ವಿಎಕ್ಸ್ ಸ್ಕೂಟರ್ ನಲ್ಲಿ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದೆ. ಇದರಲ್ಲಿ ಕೀ ಲೆಸ್ ಸ್ಟಾರ್ಟ್, ಎಲ್‌ಇಡಿ ಲ್ಯಾಂಪ್, ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಂ ಮತ್ತು 12ವಿ ಡಿಸಿ ಔಟ್ ಲೆಟ್ ಅನ್ನು ಹೊಂದಿದೆ.
MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಇನ್ನು ಸಂಪೂರ್ಣ ಡಿಜಿಟಲ್ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಕನೆಕ್ಟಿವಿಟಿ ತಂತ್ರಜ್ಞಾನದಂತಹ ಹಲವಾರು ವೈಶಿಷ್ಟ್ಯಗಳನ್ನು ಎನ್‌ವಿಎಕ್ಸ್ ಪಡೆಯುತ್ತದೆ. ಈ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಫ್ಯೂಯಲ್ ಬಳಿಕೆ, ಸರ್ವಿಸ್ ರಿಮೈಂಡರ್, ಸ್ಪೀಡ್ ಮತ್ತು ಇತರ ಮಾಹಿತಿಗಳನ್ನು ಕೂಡ ಪ್ರದರ್ಶಿಸುತ್ತದೆ.

ಇದರೊಂದಿಗೆ ಯಮಹಾ ಮೀಸಲಾದ ವೈ-ಕನೆಕ್ಟ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ನೊಂದಿಗೆ ಇದನ್ನು ಜೋಡಿಸಬಹುದು. ಮೆಕ್ಯಾನಿಕಲ್‌ಗಳ ವಿಷಯದಲ್ಲಿ ಎನ್‌ವಿಎಕ್ಸ್ ಸ್ಕೂಟರ್‌ನ ಮೆಕ್ಯಾನಿಕಲ್‌ಗಳ ವಿಷಯದಲ್ಲಿ, ಇದರಲ್ಲಿ 155 ಸಿಸಿ ವಿವಿಎ ಎಂಜಿನ್ ಅನ್ನು ಅಳವಡಿಸಲಾಗಿದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಈ ಎಂಜಿನ್ 8000 ಆರ್‌ಪಿಎಂನಲ್ಲಿ 15.19 ಬಿಹೆಚ್‌ಪಿ ಪವರ್ ಮತ್ತು 9000 ಆರ್‌ಪಿಎಂನಲ್ಲಿ 13.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನು ಹೊಂದಿದೆ. ಇದು ಪವರ್ ಪೂಲ್ ಎಂಜಿನ್ ಆಗಿದೆ.

2021ರ ಯಮಹಾ ಎನ್‌ವಿಎಕ್ಸ್ ಸ್ಕೂಟರ್ ಸಸ್ಪಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸ್ವಿಂಗಾರ್ಮ್ ಸಸ್ಪೆಂಕ್ಷನ್ ಸೆಟಪ್ ಅನ್ನು ನೀಡಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಪ್ರಮುಖವಾಗಿ ಈ ಸ್ಕೂಟರ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಮತ್ತು ಡ್ರಮ್ ಬ್ರೇಕ್ ಅನ್ನು ನೀಡಲಾಗಿದೆ. ಇನ್ನು ಈ ಸ್ಕೂಟರ್ 5.5 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

2021ರ ಯಮಹಾ ಎನ್‌ವಿಎಕ್ಸ್ ಸ್ಕೂಟರ್ ಸ್ಟ್ಯಾಂಡರ್ಡ್ ರೂಪಾಂತರವು ಎನ್ವಿಎಕ್ಸ್ ರೆಡ್ ಮತ್ತು ಸಯಾನ್ ಎಂಬ ಎರಡು ಬಣ್ಣ ಆಯ್ಕೆಗಳನ್ನು ಪಡೆದರೆ, ಎಬಿಎಸ್ ರೂಪಾಂತರವು ಪ್ಲ್ಯಾಟಿನಮ್ ಎಸ್ಇ ಮತ್ತು ಜಿಪಿ ಬ್ಲೂ ಬಣ್ಣಗಳೊಂದಿಗೆ ಲಭ್ಯವಿದೆ.ಇದು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.


Click it and Unblock the Notifications