ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಎಫ್ಎ ಬಿಡುಗಡೆಗೆ ಸಿದ್ದವಾದ ಯಮಹಾ

ಯಮಹಾ ಇಂಡಿಯಾ ಕಂಪನಿಯು ತನ್ನ ದ್ವಿಚಕ್ರ ವಾಹನ ಉತ್ಪನ್ನಗಳಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಅಳವಡಿಸುವ ಮಹತ್ವದ ಯೋಜನೆಗೆ ಚಾಲನೆ ನೀಡಿದ್ದು, ಆರಂಭಿಕವಾಗಿ ತನ್ನ ಜನಪ್ರಿಯ ಸ್ಕೂಟರ್ ಮಾದರಿಯಾದ ಫ್ಯಾಸಿನೋ 125 ಮಾದರಿಯನ್ನು ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಲಿದೆ.

ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಎಫ್ಎ ಬಿಡುಗಡೆಗೆ ಸಿದ್ದವಾದ ಯಮಹಾ

ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಫ್ಯಾಸಿನೋ 125 ಮತ್ತು ಜೆಡ್ಆರ್ ಸರಣಿಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಯಮಹಾ ಇಂಡಿಯಾ ಕಂಪನಿಯು ಶೀಘ್ರದಲ್ಲೇ ತನ್ನ ಪ್ರಮುಖ ಸ್ಕೂಟರ್‌ಗಳಲ್ಲಿ ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಫ್ಯಾಸಿನೋ 125 ಮಾದರಿಯಲ್ಲಿ ಮೊದಲ ಬಾರಿಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳನ್ನು ಜೋಡಣೆ ಮಾಡಿ ಅನಾವರಣಗೊಳಿಸಿದೆ.

ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಎಫ್ಎ ಬಿಡುಗಡೆಗೆ ಸಿದ್ದವಾದ ಯಮಹಾ

ಅನಾವರಣಗೊಂಡಿರುವ ಹೊಸ ಫ್ಯಾಸಿನೋ 125 ಸ್ಕೂಟರ್ ಮಾದರಿಯು ಶೀಘ್ರದಲ್ಲೇ ಖರೀದಿ ಲಭ್ಯವಾಗಲಿದ್ದು, ಹೊಸ ತಂತ್ರಜ್ಞಾನದಿಂದಾಗಿ ಸ್ಕೂಟರ್ ಇಂಧನ ದಕ್ಷತೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ.

ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಎಫ್ಎ ಬಿಡುಗಡೆಗೆ ಸಿದ್ದವಾದ ಯಮಹಾ

2020ರಲ್ಲಿ ಫ್ಯಾಸಿನೋ ಮಾದರಿಯನ್ನು 125 ಸಿಸಿ ಫ್ಯೂಲ್ ಇಂಜೆಕ್ಷೆಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದ ಯಮಹಾ ಕಂಪನಿಯು ಇದೀಗ ಉನ್ನತೀಕರಿಸಿದ ಮಾದರಿಯಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಜೋಡಣೆ ಮಾಡಿದ್ದು, ಸ್ಮಾರ್ಟ್ ಮೋಟಾರ್ ಜನರೇಟರ್ (ಎಸ್‌ಎಂಜಿ) ವ್ಯವಸ್ಥೆಯು ಹೊಸ ಫ್ಯಾಸಿನೋ 125 ಹೈಬ್ರಿಡ್ ಮಾದರಿಯ ಇಂಧನ ದಕ್ಷತೆಯನ್ನು ಹೆಚ್ಚಿಸಲು ಮಹತ್ವದ ಪಾತ್ರವಹಿಸಲಿದೆ.

ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಎಫ್ಎ ಬಿಡುಗಡೆಗೆ ಸಿದ್ದವಾದ ಯಮಹಾ

ಹೈಬ್ರಿಡ್ ತಂತ್ರಜ್ಞಾನವು ಸ್ಕೂಟರ್ ಚಾಲನೆಯ ಸಂದರ್ಭದಲ್ಲಿ ಪವರ್ ಅಸಿಸ್ಟ್ ಆಗಿ ಕಾರ್ಯನಿರ್ವಹಿಸಲಿದ್ದು, ನಿಲುಗಡೆಯಾಗಿರುವ ಸ್ಕೂಟರ್ ಆನ್ ಆದ ನಂತರ ಮೂರು ಸೇಕೆಂಡ್‌ಗಳ ಕಾಲ ಎಂಜಿನ್ ಚಾಲನೆಗೆ ಸಹಕರಿಸುತ್ತದೆ.

ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಎಫ್ಎ ಬಿಡುಗಡೆಗೆ ಸಿದ್ದವಾದ ಯಮಹಾ

ಎಂಜಿನ್ ಸ್ಟಾರ್ಟ್ ತದನಂತರ ಸ್ವಯಂಚಾಲಿತವಾಗಿ ಸಂಪರ್ಕ ಕಡೆದುಕೊಳ್ಳುವ ಹೊಸ ಹೈಬ್ರಿಡ್ ತಂತ್ರಜ್ಞಾನವು ಇಂಧನ ದಹಿಸುವಿಕೆಯನ್ನು ಕಡಿಮೆಗೊಳಿಸಲು ಸಹಕಾರಿಯಾಗಿದ್ದು, ಎಂಜಿನ್ ಅನ್ನು ಆನ್ ಮಾಡಿದಾಗ ಪ್ರತಿ ಬಾರಿಯು ಅದು ಕಾರ್ಯನಿರ್ವಹಿಸುವ ಮೂಲಕ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಎಫ್ಎ ಬಿಡುಗಡೆಗೆ ಸಿದ್ದವಾದ ಯಮಹಾ

ಟ್ರಾಫಿಕ್ ದಟ್ಟನೆಯ ಸಂದರ್ಭದಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗಲಿದ್ದು, ಸಿಗ್ನಲ್‌ಗಳಲ್ಲಿ ನಿಲುಗಡೆಯಾದಾಗ ಎಂಜಿನ್ ಆಫ್ ಮಾಡಿ ನಂತರ ಆನ್ ಮಾಡುವಾಗ ಆಗಬಹುದಾದ ಇಂಧನ ವ್ಯರ್ಥವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.

ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಎಫ್ಎ ಬಿಡುಗಡೆಗೆ ಸಿದ್ದವಾದ ಯಮಹಾ

ಸ್ಕೂಟರ್ ಆನ್ ಮಾಡಿದಾಗ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಡಿಜಿಟಲ್ ಇನ್‌ಸ್ಟ್ರುಮೆಂಟ್‌ನಲ್ಲಿ ಇಂಡಿಕೇಟರ್ ಸೂಚಿಸಲಿದ್ದು, 125 ಸಿಸಿ ವಿಭಾಗದಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆ ಫ್ಯಾಸಿನೋ 125 ಮಾದರಿಗೆ ಸಲ್ಲುತ್ತದೆ.

ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಎಫ್ಎ ಬಿಡುಗಡೆಗೆ ಸಿದ್ದವಾದ ಯಮಹಾ

2021ರ ಫ್ಯಾಸಿನೋ 125 ಮಾದರಿಯಲ್ಲಿ ಯಮಹಾ ಕಂಪನಿಯು ಹೈಬ್ರಿಡ್ ಎಂಜಿನ್ ಜೊತೆಗೆ ಅಡ್ವಾನ್ಸ್ ಎಲ್ಇಡಿ ಹೆಡ್‌ಲೈಟ್ಸ್, ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಎಲ್ಇಡಿ ಟೈಲ್‌ಲೈಟ್ ಸೌಲಭ್ಯವನ್ನು ಜೋಡಿಸಿದೆ.

ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಎಫ್ಎ ಬಿಡುಗಡೆಗೆ ಸಿದ್ದವಾದ ಯಮಹಾ

ಜೊತೆಗೆ ಹೊಸ ಸ್ಕೂಟರ್ ಇದೀಗ 190 ಎಂಎಂ ಯುಬಿಎಸ್ ಫ್ರಂಟ್ ಡಿಸ್ಕ್ ಬ್ರೇಕ್ ಸಿಸ್ಟಂ, 110 ಎಂಎಂ ಟೈರ್ ಜೋಡಣೆ ಮಾಡಿದ್ದು, ಡಿಸ್ಕ್ ಬ್ರೇಕ್ ಆವೃತ್ತಿಯಲ್ಲಿ ಹೆಚ್ಚುವರಿಯಾಗಿ ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್ ಕನೆಕ್ಟ್ ಫೀಚರ್ಸ್ ನೀಡಿದೆ.

ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಎಫ್ಎ ಬಿಡುಗಡೆಗೆ ಸಿದ್ದವಾದ ಯಮಹಾ

ಕನೆಕ್ಟ್ ಎಕ್ಸ್ ಕನೆಕ್ಟೆಡ್ ಫೀಚರ್ಸ್‌ನಲ್ಲಿ ಬೈಕ್ ಸವಾರರು ಕಂಪನಿಯೊಂದಿಗೆ ತುರ್ತು ಸೇವೆಗಳಿಗಾಗಿ ಸಂಪರ್ಕಿಸಬಹುದಲ್ಲದೆ ವೆಹಿಕಲ್ ಲೋಕೆಟ್, ರೈಡಿಂಗ್ ಹಿಸ್ಟರಿ, ಪಾರ್ಕಿಂಗ್ ರೆಕಾರ್ಡ್ ಸೇರಿದಂತೆ ಹಲವಾರು ಸ್ಮಾರ್ಟ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಎಫ್ಎ ಬಿಡುಗಡೆಗೆ ಸಿದ್ದವಾದ ಯಮಹಾ

ಇನ್ನುಳಿದಂತೆ ಹೊಸ ಸ್ಕೂಟರ್‌ನಲ್ಲಿ ಎಂಜಿನ್ ಕಟ್ ಆಫ್ ಸ್ವಿಚ್, ಮಲ್ಟಿ ಫಂಕ್ಷನ್ ಕೀ, 21 ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಟೋರೇಜ್, ಫೋರ್ಡ್ ಮಾಡಬಹುದಾದ ಹುಕ್, ಸೈಡ್ ಪ್ಯಾನೆಲ್‌ಗಳಲ್ಲಿ 3ಡಿ ಯಮಹಾ ಬ್ಯಾಡ್ಜ್ ಮತ್ತು ಯುಎಸ್‌ಬಿ ಚಾರ್ಜರ್ ಸೇರಿದಂತೆ ಹೊಸ ಸ್ಕೂಟರ್ ರೆಡ್, ಯಮಹಾ ಬ್ಲ್ಯೂ, ಬ್ಲ್ಯಾಕ್ ಸೇರಿದಂತೆ ಒಟ್ಟು 9 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

More from DriveSpark

Article Published On: Tuesday, June 29, 2021, 11:47 [IST]
English summary
Yamaha Launches New Hybrid Powered Fascino 125 Fi. Read in Kannada.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+