ರೇ ಜೆಡ್ಆರ್ ಸರಣಿಗಳಲ್ಲೂ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಜೋಡಿಸಲಿದೆ ಯಮಹಾ
ದ್ವಿಚಕ್ರ ವಾಹನಗಳ ಉತ್ಪಾದನೆ ತನ್ನದೆ ಆದ ಜನಪ್ರಿಯತೆ ಹೊಂದಿರುವ ಯಮಹಾ ಇಂಡಿಯಾ ಕಂಪನಿಯು ಶೀಘ್ರದಲ್ಲೇ ತನ್ನ ಪ್ರಮುಖ ಉತ್ಪನ್ನ ಸುಧಾರಿತ ತಂತ್ರಜ್ಞಾನದೊಂದಿಗೆ ಉನ್ನತೀಕರಿಸುವ ಸಿದ್ದತೆಯಲ್ಲಿದ್ದು, ರೇ ಜೆಡ್ಆರ್ ಮಾದರಿಗಳಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಜೋಡಣೆ ಮಾಡುವ ಮಾಡುವ ಸುಳಿವು ನೀಡಿದೆ.

ಯಮಹಾ ಕಂಪನಿಯು ಫ್ಯಾಸಿನೋ 125 ಪ್ರೀಮಿಯಂ ಸ್ಕೂಟರ್ ಮಾದರಿಯಲ್ಲಿ ಮೈಲ್ಡ್ ಹೈಬ್ರಿಡ್ ಜೋಡಣೆ ಮಾಡಿ ಈಗಾಗಲೇ ಅಧಿಕೃತವಾಗಿ ಪ್ರದರ್ಶನಗೊಳಿಸಲಾಗಿದ್ದು, ಶೀಘ್ರದಲ್ಲೇ ಹೊಸ ಸ್ಕೂಟರ್ ಖರೀದಿಗೆ ಲಭ್ಯವಾಗುವುದಾಗಿ ಕಂಪನಿಯೇ ಹೇಳಿಕೊಂಡಿದೆ. ಫ್ಯಾಸಿನೋ 125 ಜೊತೆಗೆ ಒಂದೇ ಮಾದರಿಯ ಎಂಜಿನ್ ಆಯ್ಕೆ ಹೊಂದಿರುವ ಜೆಡ್ಆರ್ ಮಾದರಿಗಳಲ್ಲೂ ಮೈಲ್ಡ್ ಹೈಬ್ರಿಡ್ ಜೋಡಣೆಯಾಗಲಿದೆ.

ಮೊದಲ ಹಂತದಲ್ಲಿ ಯಮಹಾ ಕಂಪನಿಯ ಫ್ಯಾಸಿನೋ 125 ಮಾದರಿಗಾಗಿ ಮೈಲ್ಡ್ ಹೈಬ್ರಿಡ್ ಆವೃತ್ತಿಯನ್ನು ಬಿಡುಗಡೆ ಮಾಡಲಿದ್ದು, ತದನಂತರವಷ್ಟೇ ರೇ ಜೆಡ್ಆರ್ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ ಎಡಿಷನ್‌ಗಳಲ್ಲೂ ಹೊಸ ತಂತ್ರಜ್ಞಾನವನ್ನು ಅಳವಡಿಸಲಿದೆ.

2020ರಲ್ಲಿ ಫ್ಯಾಸಿನೋ ಮತ್ತು ರೇ ಜೆಡ್ಆರ್ ಮಾದರಿಯನ್ನು 125 ಸಿಸಿ ಫ್ಯೂಲ್ ಇಂಜೆಕ್ಷೆಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದ ಯಮಹಾ ಕಂಪನಿಯು ಇದೀಗ ಉನ್ನತೀಕರಿಸಿದ ಮಾದರಿಗಳಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸದಾಗಿ ಅಭಿವೃದ್ದಿಗೊಳಿಸಿರುವ ಸ್ಮಾರ್ಟ್ ಮೋಟಾರ್ ಜನರೇಟರ್ (ಎಸ್‌ಎಂಜಿ) ವ್ಯವಸ್ಥೆಯು ಹೊಸ ಫ್ಯಾಸಿನೋ 125 ಹೈಬ್ರಿಡ್ ಮಾದರಿಯ ಇಂಧನ ದಕ್ಷತೆಯನ್ನು ಹೆಚ್ಚಿಸಲು ಮಹತ್ವದ ಪಾತ್ರವಹಿಸಲಿದ್ದು, ಹೈಬ್ರಿಡ್ ತಂತ್ರಜ್ಞಾನ ಸ್ಕೂಟರ್ ಚಾಲನೆಯ ಸಂದರ್ಭದಲ್ಲಿ ಅದು ಪವರ್ ಅಸಿಸ್ಟ್ ಆಗಿ ಕಾರ್ಯನಿರ್ವಹಿಸುತ್ತದೆ.

ನಿಲುಗಡೆಯಾಗಿರುವ ಸ್ಕೂಟರ್ ಆನ್ ಆದ ನಂತರ ಮೂರು ಸೇಕೆಂಡ್‌ಗಳ ಕಾಲ ಎಂಜಿನ್ ಚಾಲನೆಗೆ ಸಹಕರಿಸಲಿದ್ದು, ತದನಂತರ ಸ್ವಯಂಚಾಲಿತವಾಗಿ ಸಂಪರ್ಕ ಕಡೆದುಕೊಳ್ಳುತ್ತದೆ. ಇದು ಎಂಜಿನ್ ಸ್ಟಾರ್ಟ್ ಸಂದರ್ಭದಲ್ಲಿ ಇಂಧನ ದಹಿಸುವಿಕೆಯನ್ನು ಕಡಿಮೆಗೊಳಿಸಲು ಸಹಕಾರಿಯಾಗುತ್ತದೆ.

ಎಂಜಿನ್ ಅನ್ನು ಆನ್ ಮಾಡಿದಾಗ ಪ್ರತಿ ಬಾರಿಯು ಅದು ಕಾರ್ಯನಿರ್ವಹಿಸುವ ಮೂಲಕ ಇಂಧನ ದಕ್ಷತೆಯನ್ನು ಹೆಚ್ಚಿಸಲಿದ್ದು, ಟ್ರಾಫಿಕ್ ದಟ್ಟನೆಯ ಸಂದರ್ಭದಲ್ಲಿ ಚಾಲನೆ ಮಾಡುವಾದ ಅದು ನಿಮ್ಮ ಅನುಭವಕ್ಕೆ ಬರುತ್ತದೆ.

ಸಿಗ್ನಲ್‌ಗಳಲ್ಲಿ ನಿಲುಗಡೆಯಾದಾಗ ಎಂಜಿನ್ ಆಫ್ ಮಾಡಿ ನಂತರ ಆನ್ ಮಾಡುವಾಗ ಆಗಬಹುದಾದ ಇಂಧನ ವ್ಯರ್ಥವನ್ನು ಪರಿಣಾಮಕಾರಿಯಾಗಿ ತಗ್ಗಲಿದ್ದು, ಹೆಚ್ಚುತ್ತಿರುವ ಇಂಧನಗಳ ಪರಿಣಾಮ ಹೊಸ ತಂತ್ರಜ್ಞಾನವು ಸಾಕಷ್ಟು ಸಹಕಾರಿಯಾಗಿದೆ.

ಸ್ಕೂಟರ್ ಆನ್ ಮಾಡಿದಾಗ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಡಿಜಿಟಲ್ ಇನ್‌ಸ್ಟ್ರುಮೆಂಟ್‌ನಲ್ಲಿ ಇಂಡಿಕೇಟರ್ ಸೂಚಿಸಲಿದ್ದು, 125 ಸಿಸಿ ವಿಭಾಗದಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಮೊದಲ ಸ್ಕೂಟರ್‌ಗಳು ಎಂಬ ಹೆಗ್ಗಳಿಕೆ ಯಮಹಾ ಸ್ಕೂಟರ್‌ಗಳಿಗೆ ಸಲ್ಲುತ್ತದೆ.

ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಯಮಹಾ ಕಂಪನಿಯು ಶೀಘ್ರದಲ್ಲೇ ಹೊಸ ಸ್ಕೂಟರ್ಗಳ ಬೆಲೆ ಮಾಹಿತಿಯನ್ನು ಹಂಚಿಕೊಳ್ಳಲಿದ್ದು, ಹೊಸ ಸ್ಕೂಟರ್‌ಗಳಲ್ಲಿ ಹೊಸದಾಗಿ ಅಡ್ವಾನ್ಸ್ ಎಲ್ಇಡಿ ಹೆಡ್‌ಲೈಟ್ಸ್, ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಎಲ್ಇಡಿ ಟೈಲ್‌ಲೈಟ್ ಮತ್ತು ಆಯ್ದ ಮಾದರಿಗಳಲ್ಲಿ ಸ್ಕೂಟರ್ ಕನೆಕ್ಟ್ ಟೆಕ್ನಾಲಜಿ ಸೌಲಭ್ಯವನ್ನು ಜೋಡಿಸಲಾಗಿದೆ.


Click it and Unblock the Notifications








