2021ರ ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಯಮಹಾ

ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ತನ್ನ ಎಫ್‍‍ಜೆಡ್ ಸರಣಿಯ 2021ರ ಮಾದರಿಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಇದರಲ್ಲಿ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳು ಒಳಗೊಂಡಿದ್ದು, ಈ ಮಾದರಿಗಳು ಕೆಲವು ಹೆಚ್ಚುವರಿ ಫೀಚರ್ ಗಳನ್ನು ಪಡೆದುಕೊಂಡಿವೆ.

2021ರ ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಯಮಹಾ

ಇತ್ತೀಚೆಗೆ ಬಿಡುಗಡೆಗೊಂಡ 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಬೈಕಿನ ಬೆಲೆಯು ರೂ.1.03 ಲಕ್ಷಗಳಾಗಿದ್ದರೆ, ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ಬೆಲೆಯು ರೂ.1.07 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ. 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍ಐ ಬೈಕುಗಳು ಈಗ ಕೆಲವು ಸೂಕ್ಷ್ಮ ನವೀಕರಣಗಳನ್ನು ಪಡೆದುಕೊಂಡಿದೆ. ಇನ್ನು ಈ ಬೈಕುಗಳು ರೇಸಿಂಗ್ ಬ್ಲೂ ಮತ್ತು ಮೆಟಾಲಿಕ್ ಬ್ಲ್ಯಾಕ್ ಎಂಬ ಎರಡೂ ಹೊಸ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದೆ.

2021ರ ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಯಮಹಾ

ಇದೀಗ ಯಮಹಾ ಕಂಪನಿಯು 2021ರ ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ಟಿವಿಸಿಯನ್ನು ಬಿಡುಗಡೆಗೊಳಿಸಿದೆ. ಇದು ಎಫ್‌ಜೆಡ್ ಸರಣಿಯ ಪ್ರೀಮಿಯಂ ಆವೃತ್ತಿಯಾಗಿದೆ. ಟಿವಿಸಿಯಲ್ಲಿ ಬೈಕಿನ ಫೀಚರ್ ಗಳನ್ನು ಮತ್ತು ಪರ್ಫಾಮೆನ್ಸ್ ಅನ್ನು ಪ್ರದರ್ಶಿಸಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

2021ರ ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಯಮಹಾ

ಇನ್ನು ಹೊಸ ಯಮಹಾ ಎಎಫ್‍‍ಜೆಡ್‍ಎಸ್-ಎಫ್‍ಐ ಬೈಕ್ ಹೊಸ ಬಣ್ಣಗಳನ್ನು ಸ್ಟ್ಯಾಂಡರ್ಡ್ ಬಣ್ಣದ ಪ್ಯಾಲೆಟ್ ಜೊತೆಗೆ ನೀಡಲಾಗುವುದು. 2021ರ ಎಫ್‍‍ಜೆಡ್‍ಎಸ್-ಎಫ್‍ಐ ಬೈಕ್ ಹೊಸ 3ಡಿ ಲೋಗೊವನ್ನು ಸಹ ಒಳಗೊಂಡಿದೆ.

2021ರ ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಯಮಹಾ

ಯಮಹಾ ಎಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನಲ್ಲಿ ಈ ದಿನಗಳಲ್ಲಿ ಹೆಚ್ಚಿನ ಹೆಚ್ಚಿನ ಬೈಕುಗಳಲ್ಲಿ ನೀಡಲಾಗುವ ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ ಗಳಾದ 'ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್' ಅನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2021ರ ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಯಮಹಾ

ಇನ್ನು ಈ 2021ರ ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ತೂಕವನ್ನು 2 ಕೆಜಿಗಳಷ್ಟು ಕಡಿಮೆ ಮಾಡುವಲ್ಲಿ ಕಂಪನಿಯು ಯಶಸ್ವಿಯಾಗಿದ್ದು, ಇದರ ಸುಧಾರಿತ ಆರಾಮ, ನಿರ್ವಹಣೆ ಮತ್ತು ಕುಶಲತೆಯನ್ನು ಖಾತ್ರಿಪಡಿಸಿದೆ.

2021ರ ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಯಮಹಾ

ಆದರೆ ಯಮಹಾ ಕಂಪನಿಯ ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ತೂಕವನ್ನು ಹೇಗೆ ಇಳಿಸಿರುವುದರ ಬಗ್ಗೆ ಮಾಹಿತಿ ಬಹಿರಂಗಪಡಿಸಲಿಲ್ಲ.ಹೆಚ್ಚುವರಿಯಾಗಿ, 2021ರ ಎಫ್‍‍ಜೆಡ್‍ಎಸ್-ಎಫ್‍ಐ ಬೈಕ್ 'ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್' ತಂತ್ರಜ್ಞಾನವನ್ನು ಪಡೆದುಕೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಯಮಹಾ

ಇದು ಆನ್ಸರ್ ಬ್ಯಾಕ್, ಲೊಕೇಟ್-ಮೈ-ಬೈಕ್, ಇ-ಲಾಕ್ ಮತ್ತು ಇತರ ಹಲವು ಫೀಚರ್ ಗಳಿಂದ ಕೂಡಿರುವ ತಂತ್ರಜ್ಞಾನವಾಗಿದೆ. ಇನ್ನು ಈ ಹೊಸ ಬೈಕಿನಲ್ಲಿ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

2021ರ ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನಲ್ಲಿ 149ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 250 ಆರ್‌ಪಿಎಂನಲ್ಲಿ 12.4 ಬಿಹೆಚ್‌ಪಿ ಮತ್ತು 5500 ಆರ್‌ಪಿಎಂನಲ್ಲಿ 13.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ,

2021ರ ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ಆಕರ್ಷಕ ಟಿವಿಸಿ ಬಿಡುಗಡೆಗೊಳಿಸಿದ ಯಮಹಾ

ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. 2021ರ ಯಮಹಾ ಎಫ್‍‍ಜೆಡ್‍ಎಸ್-ಎಫ್‍ಐ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ ಜಿಕ್ಸರ್, ಬಜಾಜ್ ಪಲ್ಸರ್ ಎನ್ಎಸ್ 160, ಕೆಟಿಎಂ 125 ಡ್ಯೂಕ್ ಮತ್ತು ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

More from DriveSpark

Article Published On: Tuesday, March 9, 2021, 12:36 [IST]
English summary
2021 Yamaha FZ-S FI New TVC Highlights Updated Features. Read In Kannada.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+