ಹೊಸ ಫೀಚರ್‌ನೊಂದಿಗೆ ಟಿವಿಎಸ್ ರೇಡಿಯಾನ್ ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ತನ್ನ ರೇಡಿಯಾನ್ ಕಮ್ಯೂಟರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಟಿವಿಎಸ್ ರೇಡಿಯಾನ್ ಬೈಕ್ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಹೊಸ ಫೀಚರ್‌ನೊಂದಿಗೆ ಟಿವಿಎಸ್ ರೇಡಿಯಾನ್ ಬೈಕ್ ಬಿಡುಗಡೆ

ಟಿವಿಎಸ್ ರೇಡಿಯಾನ್ ಮಾದರಿಯು ಕೆಲವು ಹೊಸ ವೈಶಿಷ್ಟ್ಯಗಳೊಂದಿಗೆ ಹೊಸದಾಗಿ ಬಿಡುಗಡೆಯಾದ ಹೀರೋ ಪ್ಯಾಶನ್ ಎಕ್ಸ್‌ಟೆಕ್ ಬೈಕಿಗೆ ಪೈಪೋಟಿ ನೀಡುತ್ತದೆ. ಈ ಟಿವಿಎಸ್ ರೇಡಿಯಾನ್ ಬೈಕಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.59,925 ಗಳಾಗಿದೆ. ಈ 2022ರ ಟಿವಿಎಸ್ ರೇಡಿಯಾನ್ ಬೈಕ್ ರಿವರ್ಸ್ ಮಲ್ಟಿ-ಕಲರ್ ಎಲ್ಸಿಡಿ ಡಿಜಿಟಲ್ ಕ್ಲಸ್ಟರ್ ಅನ್ನು ಹೊಂದಿದ್ದು, ಇದು ನೈಜ ಸಮಯದ ಮೈಲೇಜ್, ಟಾಪ್ ಮತ್ತು ಸರಾಸರಿ ವೇಗ, ಸರ್ವಿಸ್ ಇಂಡಿಕೇಟರ್, ಕ್ಲಾಕ್ ಮತ್ತು ಲೋ ಬ್ಯಾಟರಿ ಇಂಡಿಕೇಟರ್ ಅನ್ನು ಪ್ರದರ್ಶಿಸುತ್ತದೆ.

ಹೊಸ ಫೀಚರ್‌ನೊಂದಿಗೆ ಟಿವಿಎಸ್ ರೇಡಿಯಾನ್ ಬೈಕ್ ಬಿಡುಗಡೆ

ಈ ಹೊಸ ಟಿವಿಎಸ್ ರೇಡಿಯಾನ್ ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅದೇ ಏರ್-ಕೂಲ್ಡ್, 109.7ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 7,350 ಆರ್‌ಪಿಎಂನಲ್ಲಿ 8.4 ಬಿಹೆಚ್‌ಪಿ ಪವರ್ ಮತ್ತು 4,500 ಆರ್‌ಪಿಎಂನಲ್ಲಿ 8.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಫೀಚರ್‌ನೊಂದಿಗೆ ಟಿವಿಎಸ್ ರೇಡಿಯಾನ್ ಬೈಕ್ ಬಿಡುಗಡೆ

ಎಂಜಿನ್ ನೊಂದಿಗೆ ನಾಲ್ಕು-ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಈ ಎಂಜಿನ್ ನಲ್ಲಿ ಫ್ಯೂಯಲ್ ಇಂಜೆಕ್ಷನ್ ಅನ್ನು ಸೇರ್ಪಡಿಸಲಾಗಿದೆ. ಈ ಟಿವಿಎಸ್ ರೇಡಿಯಾನ್ ಬೈಕ್ 69.3 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಈ ಬೈಕಿನಲ್ಲಿ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್, SB ಚಾರ್ಜಿಂಗ್ ಪೋರ್ಟ್ ಮತ್ತು ಹಿಂಭಾಗದಲ್ಲಿ ಲಗೇಜ್ ರ್ಯಾಕ್ ಅನ್ನು ಒಳಗೊಂಡಿದೆ.

ಹೊಸ ಫೀಚರ್‌ನೊಂದಿಗೆ ಟಿವಿಎಸ್ ರೇಡಿಯಾನ್ ಬೈಕ್ ಬಿಡುಗಡೆ

ರೇಡಿಯಾನ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ಗಳನ್ನು ಅನ್ನು ಒಳಗೊಂಡಿರುತ್ತದೆ. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂಗಳ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 110 ಎಂಎಂ ಡ್ರಮ್ ಬ್ರೇಕ್ ಅನ್ನು ಹೊಂದಿದೆ.

ಹೊಸ ಫೀಚರ್‌ನೊಂದಿಗೆ ಟಿವಿಎಸ್ ರೇಡಿಯಾನ್ ಬೈಕ್ ಬಿಡುಗಡೆ

ಇನ್ನು ಆಯ್ಕೆಯಾಗಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಇದು ಟಿವಿಎಸ್ ಸಿಂಕ್ರೊನೈಸ್ಡ್ ಬ್ರೇಕಿಂಗ್ ತಂತ್ರಜ್ಞಾನವನ್ನು ಹೊಂದಿದೆ, ಇದು ಹೋಂಡಾದ ಸಿಬಿಎಸ್ ಅನ್ನು ಹೋಲುತ್ತದೆ. ಇನ್ನು ಡ್ಯುಯಲ್-ಟೋನ್ ಬಣ್ಣದೊಂದಿಗೆ ರೇಡಿಯಾನ್ ಬೈಕಿನ ಸ್ಟೈಲಿಂಗ್ ಗಮನಾರ್ಹ ಅಂತರದಿಂದ ಸುಧಾರಿಸಿದೆ.

ಹೊಸ ಫೀಚರ್‌ನೊಂದಿಗೆ ಟಿವಿಎಸ್ ರೇಡಿಯಾನ್ ಬೈಕ್ ಬಿಡುಗಡೆ

ಡ್ಯುಯಲ್-ಟೋನ್ ಅಂಶಗಳನ್ನು ಫ್ಯೂಯಲ್ ಟ್ಯಾಂಕ್ ಮತ್ತು ಸೈಡ್ ಪ್ಯಾನಲ್‌ಗಳಲ್ಲಿ ಕಾಣಬಹುದು. ಫ್ಯೂಯಲ್ ಟ್ಯಾಂಕ್ ಮೇಲೆ ಬಿಳಿ ಬಣ್ಣದ ಸ್ಟ್ರೀಪ್ ಮತ್ತು ಇದು ಒಟ್ಟಾರೆ ವಿನ್ಯಾಸಕ್ಕೆ ಸ್ವಲ್ಪ ಸ್ಪೋರ್ಟಿನೆಸ್ ಅನ್ನು ನೀಡಿದೆ. ಇನ್ನು ಹೆಡ್‌ಲ್ಯಾಂಪ್ ಮಾಸ್ಕ್ ಬಾಡಿ ಬಣ್ಣದಲ್ಲಿದೆ. ಈ ಬೈಕಿನ ಮುಂಭಾಗದ ಮಡ್‌ಗಾರ್ಡ್ ಮತ್ತು ಹಿಂಭಾಗದ ಬಾಡಿ ಪ್ಯಾನಲ್ ಅನ್ನು ಗ್ಲೋಷ್ ಬ್ಲ್ಯಾಕ್ ಬಣ್ಣದಿಂದ ಕೂಡಿದೆ.

ಹೊಸ ಫೀಚರ್‌ನೊಂದಿಗೆ ಟಿವಿಎಸ್ ರೇಡಿಯಾನ್ ಬೈಕ್ ಬಿಡುಗಡೆ

ಈ ಬೈಕಿನ ಒಟ್ಟಾರೆ ವಿನ್ಯಾಸವನ್ನು ಉಳಿಸಿಕೊಳ್ಳಲಾಗಿದೆ. ಇಂಜಿನ್ ಕೇಸಿಂಗ್‌ನಲ್ಲಿನ ಗೋಲ್ಡ್ ಫಿನಿಶ್ ಹಾಗೂ ಅಲಾಯ್ ವ್ಹೀಲ್‌ಗಳಲ್ಲಿ ಬ್ಲ್ಯಾಕ್ ಬಣ್ಣವನ್ನು ಸಹ ಸ್ಟ್ಯಾಂಡರ್ಡ್ ಮಾಡೆಲ್ ನಿಂದ ಉಳಿಸಿಕೊಳ್ಳಲಾಗಿದೆ. ಟಿವಿಎಸ್ ಮೋಟಾರ್ ಕಂಪನಿಯು ತನ್ನ ರೇಡಿಯಾನ್ 110ಸಿಸಿ ಬೈಕನ್ನು ಮೊದಲ ಬಾರಿಗೆ ಭಾರತದಲ್ಲಿ 2018ರ ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸಿತ್ತು.

ಹೊಸ ಫೀಚರ್‌ನೊಂದಿಗೆ ಟಿವಿಎಸ್ ರೇಡಿಯಾನ್ ಬೈಕ್ ಬಿಡುಗಡೆ

ಈ ಟಿವಿಎಸ್ ರೇಡಿಯಾನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಇದು ಹೊಸ ನವೀಕರಣಗಳನ್ನು ಬಿಡುಗಡೆಗೊಂಡಿರುವುದರಿಂದ ಈ ಟಿವಿಎಸ್ ರೇಡಿಯಾನ್ ಬೈಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

ಹೊಸ ಫೀಚರ್‌ನೊಂದಿಗೆ ಟಿವಿಎಸ್ ರೇಡಿಯಾನ್ ಬೈಕ್ ಬಿಡುಗಡೆ

ಇನ್ನು ಟಿವಿಎಸ್ ಕಂಪನಿಯು ಕಳೆದ ತಿಂಗಳ ಹಿಂದಷ್ಟೇ ತನ್ನ ಮೊದಲ ಇವಿ ಸ್ಕೂಟರ್ ಮಾದರಿಯಾದ ಐಕ್ಯೂಬ್ 2022ರ ಮಾದರಿಯನ್ನು ಬಿಡುಗಡೆ ಮಾಡಿದ್ದು, ಕಂಪನಿಯು ಈಗಾಗಲೇ ಹೊಸ ಇವಿ ಸ್ಕೂಟರ್ ವಿತರಣೆ ಆರಂಭಿಸಿದೆ. 2022ರ ಐಕ್ಯೂಬ್ ಇವಿ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ಎಸ್‌ಟಿ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, ಸದ್ಯ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್‌ಗಳ ಬೆಲೆ ಬಹಿರಂಗಪಡಿಸುವ ಮೂಲಕ ವಿತರಣೆಗೆ ಚಾಲನೆ ನೀಡಿದೆ.

ಹೊಸ ಫೀಚರ್‌ನೊಂದಿಗೆ ಟಿವಿಎಸ್ ರೇಡಿಯಾನ್ ಬೈಕ್ ಬಿಡುಗಡೆ

ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್‌ಗಳಿಂತಲೂ ಐಕ್ಯೂಬ್ ಎಸ್‌ಟಿ ವೆರಿಯೆಂಟ್ ಹೆಚ್ಚಿನ ಫೀಚರ್ಸ್ ಮತ್ತು ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ದುಬಾರಿ ಬೆಲೆ ಪಡೆದುಕೊಂಡಿದ್ದು, ಕಂಪನಿಯು ಟಾಪ್ ಎಂಡ್ ವೆರಿಯೆಂಟ್ ಬೆಲೆ ಮಾಹಿತಿಯನ್ನು ಇದುವರೆಗೂ ಅಧಿಕೃತವಾಗಿ ಹಂಚಿಕೊಂಡಿಲ್ಲ. ಸದ್ಯಕ್ಕೆ ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್‌ ಬೆಲೆ ಮಾಹಿತಿ ಬಹಿರಂಗಪಡಿಸಿರುವ ಟಿವಿಎಸ್ ಕಂಪನಿಯು ಮುಂಬರುವ ಅಗಸ್ಟ್ ಹೊತ್ತಿಗೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್ ಬೆಲೆ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದು, ಟಾಪ್ ಎಂಡ್ ವೆರಿಯೆಂಟ್ ಮೊದಲೆರಡು ವೆರಿಯೆಂಟ್‌ಗಳಿಂತಲೂ ಹೆಚ್ಚಿನ ಬೆಲೆ ಪಡೆದುಕೊಂಡಿರಲಿದೆ.

ಹೊಸ ಫೀಚರ್‌ನೊಂದಿಗೆ ಟಿವಿಎಸ್ ರೇಡಿಯಾನ್ ಬೈಕ್ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟಿವಿಎಸ್ ರೇಡಿಯಾನ್ ಬೈಕ್ ಯಾವಾಗಲೂ ಆಕರ್ಷಕ ಬೈಕ್ ಆಗಿದೆ. ಇದು ಸಮರ್ಥವಾದ ಚಾಸಿಸ್, ಯೋಗ್ಯವಾದ-ಶಕ್ತಿಯುತ ಎಂಜಿನ್ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಇದೀಗ ಹೊಸ ನವೀಕರಣಗಳ ಮೂಲಕ ಟಿವಿಎಸ್ ರೇಡಿಯಾನ್ ಬೈಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಟಿವಿಎಸ್ ರೇಡಿಯಾನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಡಿ 110 ಡ್ರೀಮ್ ಡಿಎಕ್ಸ್, ಬಜಾಜ್ ಪ್ಲಾಟಿನಾ ಇಎಸ್ 100 ಮತ್ತು ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2022 tvs radeon launched in india gets new features price details
Story first published: Thursday, June 30, 2022, 18:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X