ಬಹುನಿರೀಕ್ಷಿತ 'ಟ್ರಯಂಫ್ ಸ್ಟ್ರೀಟ್ ಟ್ರಿಪಲ್ 765'ಗೆ ಮುಂಗಡ ಬುಕಿಂಗ್‌ ಪ್ರಾರಂಭ

ದೇಶೀಯ ದ್ವಿಚಕ್ರ ವಾಹನಗಳಿಗೆ ಪೈಪೋಟಿ ನೀಡಲು ವಿದೇಶಿ ಮಾಲೀಕತ್ವದ 'ಟ್ರಯಂಫ್' ಕಂಪನಿಯು ಮುಂಬರುವ 2023 'ಸ್ಟ್ರೀಟ್ ಟ್ರಿಪಲ್' 765 ಮೋಟಾರ್‌ಸೈಕಲ್‌ಗಳಿಗೆ ಫ್ರೀ-ಬುಕಿಂಗ್ ಅನ್ನು ಪ್ರಾರಂಭಿಸಿದೆ. ಈ ಬಗ್ಗೆ ಸ್ವತಃ ಟ್ರಯಂಫ್ ಇಂಡಿಯಾ ಕಂಪನಿ ಘೋಷಣೆ ಮಾಡಿದೆ. ಸ್ಟ್ರೀಟ್ ಟ್ರಿಪಲ್ ಬೈಕ್ ಯುವಕರಿಗೆ ಇಷ್ಟವಾಗುತ್ತವೆ ಎಂದೇ ಹೇಳಬಹುದು.

ಬ್ರಿಟಿಷ್ ದ್ವಿಚಕ್ರ ವಾಹನ ತಯಾರಕರ ಪ್ರಕಾರ, ಆಸಕ್ತ ಗ್ರಾಹಕರು 2023 ಸ್ಟ್ರೀಟ್ ಟ್ರಿಪಲ್ 765 ಮೋಟಾರ್‌ಸೈಕಲ್‌ಗಳನ್ನು ಭಾರತದ ಯಾವುದೇ ಟ್ರಯಂಫ್ ಮೋಟಾರ್‌ಸೈಕಲ್ ಡೀಲರ್‌ಶಿಪ್‌ನಲ್ಲಿ ಬುಕ್ ಮಾಡಬಹುದು. ಅಲ್ಲದೆ, ಮೋಟಾರ್‌ಸೈಕಲ್ ಅನ್ನು ಮಾರ್ಚ್ 2023ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತ್ತದೆ. ಜೊತೆಗೆ ಖರೀದಿದಾರರಿಗೆ ಬೈಕಿನ ವಿತರಣೆಯನ್ನು ಅದೇ ವರ್ಷದ ಏಪ್ರಿಲ್ ತಿಂಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಮುಂಗಡ ಬುಕಿಂಗ್ ಮೊತ್ತವನ್ನು 50,000 ರೂ.ಗೆ ಮಿತಿಗೊಳಿಸಿದ್ದು, ಮೋಟಾರ್‌ಸೈಕಲ್‌ ಬೆಲೆ ಕೊಂಚ ದುಬಾರಿಯಂದೇ ಹೇಳಬಹುದು.

ಈ ಹೊಸ ಬೈಕಿನ ವಿವರಗಳ ಬಗ್ಗೆ ಹೇಳುವುದಾದರೆ, ಮುಂಬರುವ 2023 ಸ್ಟ್ರೀಟ್ ಟ್ರಿಪಲ್ 765 ಮೋಟಾರ್‌ಸೈಕಲ್ ಎರಡು ರೂಪಾಂತರಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, ಅವುಗಳೆಂದರೆ, ಸ್ಟ್ರೀಟ್ ಟ್ರಿಪಲ್ R ಮತ್ತು ಸ್ಟ್ರೀಟ್ ಟ್ರಿಪಲ್ RS. ಈ ರೂಪಾಂತಗಳು ಉತ್ತಮ ವೈಶಿಷ್ಟ್ಯಗಳು, ಹಾರ್ಡ್‌ವೇರ್ ಮತ್ತು ಹೆಚ್ಚು ಶಕ್ತಿಶಾಲಿ ಪವರ್‌ಟ್ರೇನ್‌ ಅನ್ನು ಹೊಂದಿದೆ ಎಂದು ಹೇಳಬಹುದು. ಆದರೆ, ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಸ್ವಲ್ಪ ದುಬಾರಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ನೂತನ ಬೈಕಿನ ಎಂಜಿನ್ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ, ಟ್ರಯಂಫ್ ಪ್ರಕಾರ, 2023 ಸ್ಟ್ರೀಟ್ ಟ್ರಿಪಲ್ R ಮೋಟಾರ್‌ಸೈಕಲ್ ಹೊಸ ಕಂಬುಸ್ಟಿವ್ನ್ ಚೇಂಬರ್, ಹೆಚ್ಚಿದ ಸಿಲಿಂಡರ್ ಪ್ರೆಷರ್ ಲಿಮಿಟ್ಸ್, ಹೆಚ್ಚಿದ ಕಂಪ್ರೆಶನ್ ರೇಶಿಯೋ ಮತ್ತು ಹೊಸ ಪಿಸ್ಟನ್‌ಗಳನ್ನು ಹೊಂದಿರತ್ತದೆ. ಇದರಿಂದಾಗಿ, ಮೂರು-ಸಿಲಿಂಡರ್, ಎಂಜಿನ್ ಇದೀಗ 118 bhp ಗರಿಷ್ಠ ಪವರ್ ಮತ್ತು 80 Nm ಪೀಕ್ ಟಾರ್ಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವರದಿಯಾಗಿದೆ.

ಅದರ ಜೊತೆಗೆ, ಮುಂಬರುವ 2023 ಸ್ಟ್ರೀಟ್ ಟ್ರಿಪಲ್ RS ಬೈಕ್ ಕೂಡ ಅಪ್ರೇಟೆಡ್ ಪವರ್ಟ್ರೇನ್ ಅನ್ನು ಹೊಂದಿದೆ. ಆದಾಗ್ಯೂ, ಸ್ಟ್ರೀಟ್ ಟ್ರಿಪಲ್ RS ಮೋಟಾರ್‌ಸೈಕಲ್‌ನಲ್ಲಿರುವ ಮೂರು-ಸಿಲಿಂಡರ್ ಎಂಜಿನ್ 128 bhp ಗರಿಷ್ಠ ಪವರ್ (ಸ್ಟ್ರೀಟ್ ಟ್ರಿಪಲ್ Rಗಿಂತ 10 bhp ಅಧಿಕ) ಮತ್ತು 80 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹೆಚ್ಚುವರಿಯಾಗಿ, ಉತ್ತಮ ವೇಗವರ್ಧನೆ ಮತ್ತು ಸ್ಪಂದಿಸುವಿಕೆಗಾಗಿ ಮೋಟಾರ್‌ಸೈಕಲ್‌ನ ಗೇರಿಂಗ್ ಅನ್ನು ಸಹ ಪರಿಷ್ಕರಿಸಲಾಗಿದೆ.

ವೈಶಿಷ್ಟ್ಯಗಳ ವಿಷಯಗಳ ಬಗ್ಗೆ ಹೇಳುವುದಾದರೆ, 2023 ಟ್ರಯಂಫ್ ಸ್ಟ್ರೀಟ್ ಟ್ರಿಪಲ್ R & RS ಮೋಟಾರ್‌ಸೈಕಲ್‌ಗಳು ABS ಯುನಿಟ್, ಸ್ವಿಚ್ ಮಾಡಬಹುದಾದ ಟ್ರಾಕ್ಷನ್ ಕಂಟ್ರೋಲ್ (TC) ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗಲಿದೆ. ಆದಾಗ್ಯೂ, ಮುಂಬರುವ ಸ್ಟ್ರೀಟ್ ಟ್ರಿಪಲ್ ಆರ್ ಮೋಟಾರ್‌ಸೈಕಲ್ ಕೇವಲ 4 ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಸ್ಟ್ರೀಟ್ ಟ್ರಿಪಲ್ ಆರ್‌ಎಸ್ ಮೋಟಾರ್‌ಸೈಕಲ್‌ನಲ್ಲಿ 5 ರೈಡಿಂಗ್ ಮೋಡ್‌ಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು.

ಈ ರೈಡ್ ಮೋಡ್‌ಗಳಲ್ಲಿ ರೋಡ್, ರೈನ್, ಸ್ಪೋರ್ಟ್, ರೈಡರ್ ಮತ್ತು ಟ್ರ್ಯಾಕ್ ಸೇರಿವೆ. ಅದರಲ್ಲಿನ ಟ್ರ್ಯಾಕ್ ಮೋಡ್ ಮೋಟಾರ್‌ಸೈಕಲ್‌ನ ಸ್ಟ್ರೀಟ್ ಟ್ರಿಪಲ್ RS ರೂಪಾಂತರಕ್ಕೆ ಪ್ರತ್ಯೇಕವಾಗಿ ನೀಡಲಾಗಿದೆ. ಮಾರುಕಟ್ಟೆಗೆ ಬರಲಿರುವ ಸ್ಟ್ರೀಟ್ ಟ್ರಿಪಲ್ R ಮತ್ತು RS ಮೋಟಾರ್‌ಸೈಕಲ್‌ಗಳು ಸೂಕ್ಷ್ಮವಾದ ಸ್ಟೈಲಿಂಗ್ ನವೀಕರಣನ್ನು ಹೊಂದಿವೆ. LED DRLಗಳೊಂದಿಗಿನ ಟ್ವಿನ್ LED ಹೆಡ್‌ಲ್ಯಾಂಪ್‌ಗಳು, ಹೊಸ 15-ಲೀಟರ್ ಫ್ಯೂಯೆಲ್ ಟ್ಯಾಂಕ್,ದಪ್ಪನಾದ ಸೈಲೆನ್ಸರ್‌ನಂತಹ ಹೊಸ ವಿನ್ಯಾಸ ಅಂಶಗಳನ್ನು ಹೊಂದಿದೆ. ಜೊತೆಗೆ ನವೀಕರಿಸಿದ ರೇಡಿಯೇಟರ್ ಕೌಲ್ ಸಹ ಇದೆ.

2023 ಟ್ರಯಂಫ್ ಸ್ಟ್ರೀಟ್ ಟ್ರಿಪಲ್ R & RS ಮೋಟಾರ್‌ಸೈಕಲ್‌ಗಳ ಕುರಿತು ಆಲೋಚನೆಗಳು
ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಮೋಟಾರ್‌ಸೈಕಲ್‌ಗಳು ವಿಶ್ವದ ಅತ್ಯಾಕರ್ಷಕ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. 2023ಕ್ಕೆ ಬ್ರಿಟಿಷ್ ದ್ವಿಚಕ್ರ ವಾಹನ ತಯಾರಕರು ಮೋಟಾರ್‌ಸೈಕಲ್‌ಗೆ ಸೂಕ್ಷ್ಮ ಮತ್ತು ಪರಿಣಾಮಕಾರಿ ನವೀಕರಣಗಳನ್ನು ಸೇರಿಸುವ ಮೂಲಕ ಇನ್ನಷ್ಟು ಉತ್ತಮಗೊಳಿಸಿದ್ದಾರೆ. ಬೆಲೆ ವಿಚಾರಕ್ಕೆ ಬಂದರೇ ಕೊಂಚ ದುಬಾರಿಯಾಗಿದೆ. ಆದರೆ, ಬೈಕ್ ಪ್ರಿಯರಿಗೆ ಖಂಡಿತ ಇಷ್ಟವಾಗುತ್ತದೆ. ಆದರೆ, ಈ ಬೈಕ್ ದರವನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.

Most Read Articles

Kannada
English summary
Advance bookings open for the much awaited triumph street triple
Story first published: Saturday, December 17, 2022, 10:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X