2022ರ ಯಮಹಾ ಎಂಟಿ-15 ಟೀಸರ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಆರಂಭ

ಜನಪ್ರಿಯ ಮೋಟಾರ್ ಸೈಕಲ್‌ ತಯಾರಕ ಕಂಪನಿಯಾದ ಯಮಹಾ ತನ್ನ 2022ರ ಎಂಟಿ -15ರ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ, ಶೀಘ್ರದಲ್ಲೇ ಬೈಕ್‌ ಅನ್ನು ಸಹ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದು, ಈಗಾಗಲೇ 2022ರ ಯಮಹಾ ಎಂಟಿ -15 ಗಾಗಿ ಬುಕಿಂಗ್ ಅನ್ನು ಪ್ರಾರಂಭಿಸಿದೆ.

2022ರ ಯಮಹಾ ಎಂಟಿ-15 ಟೀಸರ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಆರಂಭ

ಹೊಸ ಯಮಹಾ ಎಂಟಿ15 2.0 ಮಾದರಿಯನ್ನು ಆಯ್ದ ಡೀಲರ್‌ಗಳ ಮೂಲಕ ಬುಕ್ಕಿಂಗ್ ಕೂಡ ತೆರೆಯಲಾಗಿದೆ. ಬುಕಿಂಗ್ ಮೊತ್ತವು ಸುಮಾರು 2,000 ರೂ.ಗಳಿಂದ 10,000 ರೂ.ಗಳ ವರೆಗೆ ಇರಲಿದ್ದು, ಇದು ಆಯಾ ಡೀಲರ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಇನ್ನು ಗ್ರೇ, ವೈಟ್, ಗ್ಲೋಸಿ ಬ್ಲ್ಯಾಕ್ ಮತ್ತು ರೇಸಿಂಗ್ ಬ್ಲೂ ಎಂಬ 4 ಹೊಸ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.

2022ರ ಯಮಹಾ ಎಂಟಿ-15 ಮೊದಲ ಟೀಸರ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಆರಂಭ

ಕಂಪನಿಯು ಈ ಆವೃತ್ತಿಯನ್ನು 2.0 ಆಧಾರಿತ ಅಪ್‌ಗ್ರೇಡ್‌ಗಳೊಂದಿಗೆ ಹಲವಾರು ಬದಲಾವಣೆಳನ್ನು ಮಾಡಿದ್ದರೂ ಹೊಸ 2022 ಎಂಟಿ 15 ಬಹುತೇಕ ತನ್ನ ಹಳೆಯ ಆವೃತ್ತಿಯಂತೆ ಕಾಣಲಿದೆ. ಎರಡೂ ಬೈಕುಗಳು ಒಂದೇ ಅಡಿಪಾಯವನ್ನು ಹಂಚಿಕೊಂಡಿದ್ದರೂ, ಅವು ವಿಭಿನ್ನ ರೈಡಿಂಗ್ ಎರ್ಗೊನಾಮಿಕ್ಸ್ ನೊಂದಿಗೆ ವಿಭಿನ್ನ ಟಾಪ್ ಹ್ಯಾಟ್ ಗಳನ್ನು ಪ್ರದರ್ಶಿಸಲಿವೆ. ಹೊಸ 2022 ಎಂಟಿ-15ರ ವಿನ್ಯಾಸ, ಎಂಜಿನ್, ಟಾರ್ಕ್ ಹಾಗೂ ವಾಹನದ ತೂಕದಲ್ಲಿ ಹೆಚ್ಚಿನ ನವೀಕರಣಗಳು ಕಂಡುಬರುವ ನಿರೀಕ್ಷೆ ಇದೆ.

2022ರ ಯಮಹಾ ಎಂಟಿ-15 ಮೊದಲ ಟೀಸರ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಆರಂಭ

ಕಂಪನಿಯ ಡೀಲರ್‌ಗಳು ಮಾರ್ಚ್ ತಿಂಗಳಲ್ಲಿ ಈ ಬೈಕಿನ ಅಸ್ತಿತ್ವದಲ್ಲಿರುವ ಹಳೆಯ ಆವೃತ್ತಿಯ ಸ್ಟಾಕ್ ಖಾಲಿಯಾದ ಕಾರಣ ಮಾರಾಟವನ್ನು ನಿಲ್ಲಿಸಿದ್ದಾರೆ. ಆದರೆ ಈ ಬಗ್ಗೆ ಕಂಪನಿ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ, ಜೊತೆಗೆ ಈ ಹಳೆಯ ಆವೃತ್ತಿಯ ಬೈಕ್‌ ಬುಕಿಂಗ್ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಿಲ್ಲ.

2022ರ ಯಮಹಾ ಎಂಟಿ-15 ಮೊದಲ ಟೀಸರ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಆರಂಭ

ಕೆಲವು ತಿಂಗಳ ಹಿಂದೆ, ಯಮಹಾ ಎಂಟಿ -15ಗೆ ಹಲವಾರು ಪ್ರಮುಖ ನವೀಕರಣಗಳನ್ನು ನೀಡಲಾಗುವುದು ಎಂದು ಟೈಪ್ ಅಪ್ರೂವಲ್ ದಾಖಲೆಗಳು ಬಹಿರಂಗಪಡಿಸಿದ್ದವು. ಸದ್ಯ ಅಸ್ತಿತ್ವದಲ್ಲಿರುವ ಮಾದರಿಯ ಮೋಟಾರ್‌ಸೈಕಲ್ ಉತ್ಪಾದನೆಯನ್ನು ನಿಲ್ಲಿಸಿ ನವೀಕರಿಸಿದ ಆವೃತ್ತಿಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ.

2022ರ ಯಮಹಾ ಎಂಟಿ-15 ಮೊದಲ ಟೀಸರ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಆರಂಭ

ಕಂಪನಿಯ ದಾಖಲೆಯಲ್ಲಿ, ಮೋಟಾರ್‌ಸೈಕಲ್‌ನ ಗಾತ್ರ, ಎಂಜಿನ್‌ ಶಕ್ತಿ, ಟಾರ್ಕ್ ಹಾಗೂ ವಾಹನದ ತೂಕದಲ್ಲಿನ ಬದಲಾವಣೆಗಳನ್ನು ಪಟ್ಟಿ ಮಾಡಲಾಗಿದೆ. ಯಮಹಾ ಎಂಟಿ-15ನ ವಿನ್ಯಾಸದಲ್ಲಿ ಬದಲಾವಣೆ ಮತ್ತು ಎಂಜಿನ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುವುದು, ಬಹುಶಃ ಅಪ್ ಸೈಡ್ ಡೌನ್ ಫೋಕಸ್ ಅನ್ನು ಸೇರಿಸಲಾಗುವುದು ಎಂದು ತಿಳಿದುಬಂದಿದೆ.

2022ರ ಯಮಹಾ ಎಂಟಿ-15 ಮೊದಲ ಟೀಸರ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಆರಂಭ

ಈ ಹೊಸ ಯಮಹಾ ಎಂಟಿ-15 ಬೈಕಿನಲ್ಲಿ ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೊಡಣೆ ಮಾಡಲಾಗಿದೆ. ಆಕರ್ಷಕ ಫ್ಯೂಲ್ ಟ್ಯಾಂಕ್ ಕೂಡಾ ಬೈಕಿನ ಬಲಿಷ್ಠತೆಗೆ ಮತ್ತಷ್ಟು ಮೆರಗು ತರಲಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಂಟಿ-10 ಬೈಕಿನಿಂದಲೂ ಕೆಲವು ವಿನ್ಯಾಸಗಳನ್ನು ಎಂಟಿ-15 ಮಾದರಿಯಲ್ಲಿ ಎರವಲು ಪಡೆಯಲಾಗಿದೆ.

2022ರ ಯಮಹಾ ಎಂಟಿ-15 ಮೊದಲ ಟೀಸರ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಆರಂಭ

ಈ ಎಂಜಿನ್ ಬಗ್ಗೆ ಮಾತನಾಡುವುದಾದರೆ, ಇದು ಲಿಕ್ವಿಡ್-ಕೂಲ್ಡ್, ವಿವಿಎ-ಸಜ್ಜಿತ 155 ಸಿಸಿ ಎಂಜಿನ್ ಅನ್ನು ಬಳಸುತ್ತದೆ. ಈ ಎಂಜಿನ್ 18.5 ಬಿಹೆಚ್‌ಪಿ ಪವರ್ ಮತ್ತು 13.9 ಎನ್ಎಂ ಟಾರ್ಕ್ ಅನ್ನು ಒದಗಿಸುತ್ತದೆ. ಇದರಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಈ ಮೋಟಾರ್‌ಸೈಕಲ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸಿಂಗಲ್-ಚಾನೆಲ್ ಎಬಿಎಸ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

2022ರ ಯಮಹಾ ಎಂಟಿ-15 ಮೊದಲ ಟೀಸರ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಆರಂಭ

ಯಮಹಾ ಕಂಪನಿಯು ಎಂಟಿ-15 ಬೈಕ್ ಅನ್ನು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಕಳೆದ 2020 ಮಾರ್ಚ್ ತಿಂಗಳಲ್ಲಿ ಬಿಡುಗಡೆಗೊಳಿಸಿತು. ಈ ಯಮಹಾ ಎಂಟಿ-15 ಬೈಕ್ ಬಿಡುಗಡೆಯಾದ ಮೊದಲ ತಿಂಗಳಲ್ಲಿ 5,203 ಯುನಿಟ್ ಗಳು ಮಾರಾಟವಾಗಿತ್ತು.

2022ರ ಯಮಹಾ ಎಂಟಿ-15 ಮೊದಲ ಟೀಸರ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಆರಂಭ

ಎಲೆಕ್ಟ್ರಿಕ್ ಸ್ಕೂಟರ್‌ ತರಲು ಚಿಂತನೆ

ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಆದರೆ ಅದಕ್ಕೂ ಮೊದಲು ಇದನ್ನು ಏಪ್ರಿಲ್ 11, 2022 ರಂದು ಬಹಿರಂಗಪಡಿಸಬಹುದು, ಇದಕ್ಕಾಗಿ ಕಂಪನಿಯು ಮಾಧ್ಯಮ ಆಹ್ವಾನಗಳನ್ನು ಸಹ ಕಳುಹಿಸಿದೆ. ಆಹ್ವಾನವು ಹೆಚ್ಚಿನದನ್ನು ಬಹಿರಂಗಪಡಿಸದಿದ್ದರೂ, ಉತ್ಪನ್ನವು ಸ್ಟೈಲಿಶ್ ಮತ್ತು ಸ್ಪೋರ್ಟಿಯಾಗಿರಲಿದೆ ಎಂದು ತಿಳಿದುಬಂದಿದೆ.

2022ರ ಯಮಹಾ ಎಂಟಿ-15 ಮೊದಲ ಟೀಸರ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಆರಂಭ

ಇದು ಯಮಹಾದೊಂದಿಗೆ ರೋಮಾಂಚಕಾರಿ ಹೊಸ ಭವಿಷ್ಯವಾಗಲಿದೆ ಎಂದು ಕಂಪನಿ ಹೇಳುತ್ತಿದೆ. ಇದು ಸಂಭಾವ್ಯವಾಗಿ ಮುಂಬರುವ ಉತ್ಪನ್ನವನ್ನು ಎಲೆಕ್ಟ್ರಿಕ್ ವಾಹನ ಎಂದು ಸೂಚಿಸುತ್ತಿದೆ. ಯಮಹಾ ಈಗಾಗಲೇ ಭಾರತದಲ್ಲಿ ಇ01 ಹೆಸರನ್ನು ನೋಂದಾಯಿಸಿದೆ. ಇದಲ್ಲದೆ, ಕಂಪನಿಯು ಇಸಿ -05 ಎಂಬ ಹೆಸರನ್ನು ಸಹ ನೋಂದಾಯಿಸಿದೆ. ವಿಶೇಷವೆಂದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಈಗಾಗಲೇ ತೈವಾನ್‌ನಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

2022ರ ಯಮಹಾ ಎಂಟಿ-15 ಮೊದಲ ಟೀಸರ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಆರಂಭ

ಇವಿ ಮತ್ತು ಬ್ಯಾಟರಿ ವಿನಿಮಯ ಮೂಲಸೌಕರ್ಯಗಳ ಪ್ರಮುಖ ಪೂರೈಕೆದಾರರಲ್ಲಿ ಒಂದಾದ ತೈವಾನ್ ಮೂಲದ ಗೊಗೊರೊ ಇಂಕ್ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಯಮಹಾದ ಭಾರತ್-ಸ್ಪೆಕ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ. ಕಾರ್ಯಕ್ಷಮತೆಯಲ್ಲಿ ಇದನ್ನು 110 ಸಿಸಿ ಪೆಟ್ರೋಲ್ ಸ್ಕೂಟರ್‌ಗೆ ಹೋಲಿಸಬಹುದು.

2022ರ ಯಮಹಾ ಎಂಟಿ-15 ಮೊದಲ ಟೀಸರ್ ಬಿಡುಗಡೆಯೊಂದಿಗೆ ಬುಕ್ಕಿಂಗ್ ಆರಂಭ

ಸದ್ಯ ಯಮಹಾ ತನ್ನ ವಾಹನಗಳನ್ನು ನವೀಕರಿಸುವಲ್ಲಿ ನಿರತವಾಗಿದೆ, ಕಂಪನಿಯು ತನ್ನ ಜನಪ್ರಿಯ ಬೈಕನ್ನು ಹೊಸ ನವೀಕರಣಗಳೊಂದಿಗೆ ತರುತ್ತಿದ್ದು, ಕಂಪನಿಯು ಈ ಬೈಕನ್ನು ಯಾವಾಗ ತರಲಿದೆ ಮತ್ತು ಅದರ ಬೆಲೆ ಎಷ್ಟು ಹೆಚ್ಚಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
Read more on ಯಮಹಾ yamaha
English summary
Bookings begin with the launch of the first teaser of Yamaha MT 15 of 2022
Story first published: Saturday, April 2, 2022, 13:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X