ಡಕಾರ್ ರ‍್ಯಾಲಿ 2022: ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್

2022ರ ಡಕಾರ್ ರ‍್ಯಾಲಿಗೆ ಸೌದಿ ಅರೇಬಿಯಾದಲ್ಲಿ ಅಭೂತಪೂರ್ವ ಚಾಲನೆ ದೊರೆತಿದ್ದು, 44ನೇ ಆವೃತ್ತಿಯಲ್ಲಿನ ವಿವಿಧ ವಿಭಾಗಗಳಲ್ಲಿ ನೂರಾರು ಮೋಟಾರ್‌ಸ್ಪೋರ್ಟ್ ಸ್ಪರ್ಧಿಗಳ ಮಧ್ಯೆ ಪ್ರಶಸ್ತಿಗಾಗಿ ಸೆಣಸಾಟ ಆರಂಭವಾಗಿದೆ. ಬೈಕ್, ಕಾರ್ ಮತ್ತು ಟ್ರಕ್ ವಿಭಾಗದಲ್ಲಿನ ಸ್ಪರ್ಧಿಗಳು ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದು, ಜನವರಿ 2ರಿಂದ 14ರ ತನಕ ವಿವಿಧ ಹಂತಗಳಲ್ಲಿ ಸ್ಪರ್ಧೆ ನಡೆಯಲಿವೆ.

ಡಕಾರ್ ರ‍್ಯಾಲಿ 2022: ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್

ವಿಶ್ವದ ಅತಿ ಅಪಾಯಕಾರಿ ಮೋಟಾರ್‌ಸ್ಪೋರ್ಟ್ ರ‍್ಯಾಲಿಗಳಲ್ಲಿ ಒಂದಾಗಿರುವ ಡಕಾರ್ ರ‍್ಯಾಲಿಯ 44ನೇ ಆವೃತ್ತಿಯಲ್ಲಿ ವಿಶ್ವದ ಪ್ರಮುಖ ಮೋಟಾರ್‌ಸ್ಪೋರ್ಟ್ ತಂಡಗಳು ಭಾಗಿಯಾಗಿದ್ದು, ರಿಯಾದ್ ಸನೀಹದಲ್ಲಿರುವ ಹೈಲ್ ನಗರದಿಂದ ಆರಂಭವಾಗಿರುವ ಪ್ರಸಕ್ತ ವರ್ಷದ ಮೋಟಾರ್‌ಸ್ಪೋರ್ಟ್ ಪ್ರಮುಖ 12 ಹಂತಗಳೊಂದಿಗೆ ಜೆದ್ದಾದಲ್ಲಿ ಪೂರ್ಣಗೊಳ್ಳಲಿದೆ.

ಡಕಾರ್ ರ‍್ಯಾಲಿ 2022: ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್

44ನೇ ಆವೃತ್ತಿಯಲ್ಲಿ ಕಳೆದ ವರ್ಷದ ರ‍್ಯಾಲಿಯಲ್ಲಿ ಕೆಲವು ಅಪಾಯಕಾರಿ ಮಾರ್ಗಗಳನ್ನು ಕೈಬಿಡಲಾಗಿದ್ದು, ಕಳೆದ ಆವೃತ್ತಿಗಿಂತಲೂ ಹೊಸ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಹಲವಾರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ.

ಡಕಾರ್ ರ‍್ಯಾಲಿ 2022: ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್

14 ಹಂತಗಳನ್ನು ಒಳಗೊಂಡಿದ್ದ 43ನೇ ಡಕಾರ್ ರ‍್ಯಾಲಿಯ ಮಾರ್ಗಗಳನ್ನು 44ನೇ ಆವೃತ್ತಿಯಲ್ಲಿ 12ಕ್ಕೆ ಇಳಿಕೆ ಮಾಡಿದ್ದು, ಯಾವುದೇ ರೀತಿಯ ದುರಂತಗಳಿಗೆ ಎಡೆಮಾಡಿಕೊಡದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲಾಗಿದೆ. 2022ರ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಒಟ್ಟು ಅಂತರವನ್ನು ಕಳೆದ ಬಾರಿಯ 7 ಸಾವಿರ ಕಿ.ಮೀ ಅಂತರದಿಂದ 4 ಸಾವಿರ ಕಿ.ಮೀ ಗಳಿಗೆ ಇಳಿಕೆ ಮಾಡಲಾಗಿದೆ.

ಡಕಾರ್ ರ‍್ಯಾಲಿ 2022: ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್

2022ರ ಆವೃತ್ತಿಯಲ್ಲಿ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣು ಒಳಗೊಂಡಿರಲಿದ್ದು, ಹಲವಾರು ದುರಂತಗಳಿಗೆ ಕಾರಣವಾಗುತ್ತಿರುವ ರುಬ್ ಅಲ್-ಕಾಲಿ ಮರಭೂಮಿ ಮಾರ್ಗವನ್ನು ಈ ಬಾರಿ ಕೈಬಿಡಲಾಗಿದೆ. ಅರ್ಹತಾ ಸುತ್ತಿನ ನಂತರ ನಿನ್ನೆ ನಡೆದ ಮೊದಲ ಹಂತದಲ್ಲಿನ 333 ಕಿ.ಮೀ ಅಂತರವನ್ನು ಕ್ರಮಿಸುವಲ್ಲಿ ಪ್ರಮುಖ ಮೋಟಾರ್‌ಸ್ಪೋರ್ಟ್ ತಂಡಗಳ ನಡುವೆ ಭಾರೀ ಪೈಪೋಟಿ ನಡೆಯಿತು.

ಡಕಾರ್ ರ‍್ಯಾಲಿ 2022: ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್

ಮೊದಲ ದಿನದ ಬೈಕ್ ವಿಭಾಗದಲ್ಲಿ ಸ್ಪರ್ಧೆಯಲ್ಲಿ 333 ಕಿ.ಮೀ ಅಂತರವನ್ನು 4 ಗಂಟೆ 38 ನಿಮಿಷ 40 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ಗ್ಯಾಸ್ ಗ್ಯಾಸ್ ಫ್ಯಾಕ್ಟರಿ ರೈಡರ್ ಡೇನಿಯಲ್ ಸ್ಯಾಂಡರ್ಸ್ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.

ಡಕಾರ್ ರ‍್ಯಾಲಿ 2022: ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್

ಗ್ಯಾಸ್ ಗ್ಯಾಸ್ ಫ್ಯಾಕ್ಟರಿ ರೈಡರ್ ಡೇನಿಯಲ್ ಸ್ಯಾಂಡರ್ಸ್ ನಂತರ 3 ನಿಮಿಷಗಳ ತಡವಾಗಿ ಗುರಿತಲುಪಿದ ಹೋಂಡಾ ರೈಡರ್ ಪ್ಯಾಬ್ಲೋ ಕ್ವಿಂಟನಿಲ್ಲಾ ಎರಡನೇ ಸ್ಥಾನವನ್ನು ಮತ್ತು 11 ನಿಮಿಷ ತಡವಾಗಿ ಗುರಿತಲುಪಿದ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ರೇಸಿಂಗ್ ತಂಡದ ಮ್ಯಾಥಿಸ್ ವಾಲ್ಕನರ್ ಮೂರನೇ ಸ್ಥಾನ ಕಾಯ್ದಕೊಂಡರು.

ಡಕಾರ್ ರ‍್ಯಾಲಿ 2022: ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್

ಮೊದಲ ದಿನದ ಬೈಕ್ ವಿಭಾಗದಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಕಂಪನಿಗಳ ಪ್ರಮುಖ ತಂಡಗಳಾದ ಟಿವಿಎಸ್ ಮತ್ತು ಹೀರೋ ಮೋಟೋ‌ಸ್ಪೋರ್ಟ್ ತಂಡಗಳ ರೈಡರ್‌ಗಳು ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಟಿವಿಎಸ್ ಶೇರ್ಕೋ ತಂಡದ ಲೊರೆಂಜೊ ಸ್ಯಾಂಟೊಲಿನೊ ಅವರು ಐದನೇ ಸ್ಥಾನದೊಂದಿಗೆ ಮೊದಲ ಹಂತವನ್ನು ಪೂರ್ಣಗೊಳಿಸಿದ್ದರೆ ಹರಿತ್ ನೋಹ್ ಅವರು ಡಾಕರ್‌ನ ಮೊದಲ ಪೂರ್ಣ ಹಂತದಲ್ಲಿ 34ನೇ ಸ್ಥಾನ ಪಡೆದರು.

ಡಕಾರ್ ರ‍್ಯಾಲಿ 2022: ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್

ಹಾಗೆಯೇ ಹೀರೋ ಮೋಟೊಸ್ಪೋರ್ಟ್ ತಂಡ ಆರನ್ ಮೇರ್ 11ನೇ ಸ್ಥಾನದೊಂದಿಗೆ ಮೊದಲ ಹಂತವನ್ನು ಪೂರ್ಣಗೊಳಿಸಿದರೆ ಹೀರೋ ಮೋಟೊಸ್ಪೋರ್ಟ್ ತಂಡ ಮತ್ತೊಬ್ಬ ಸ್ಪರ್ಧಿ ಜೋಕ್ವಿಮ್ ರೋಡ್ರಿಗಸ್ 30ನೇ ಸ್ಥಾನ ಪಡೆದರು.

ಡಕಾರ್ ರ‍್ಯಾಲಿ 2022: ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್

ಇನ್ನು ರೇಸಿಂಗ್ ಕಾರ್ ವಿಭಾಗದಲ್ಲಿ ಗಾಜೊ ರೇಸಿಂಗ್ ಟೊಯೊಟಾ ತಂಡದ ನಾಸರ್ ಅಲ್-ಅತ್ತಿಯಾ ಮೊದಲ ಹಂತದ ಸ್ಪರ್ಧೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, 514 ಕಿಲೋ ಮೀಟರ್ ಮೊದಲ ಹಂತದ ಅಂತರವನ್ನು ಕೇವಲ 3 ಗಂಟೆ 30 ನಿಮಿಷ 53 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದರು.

ಡಕಾರ್ ರ‍್ಯಾಲಿ 2022: ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್

ನಾಸರ್ ಅಲ್-ಅತ್ತಿಯಾ ನಂತರದಲ್ಲಿ ಹಂಟರ್ ಟಿ1 ಚಾಲಕ ಬಿಆರ್‌ಎಕ್ಸ್ ತಂತದ ಸೆಬಾಸ್ಟಿನ್ ಲೊಯೆಬ್ ಮತ್ತು ಫೋರ್ಡ್ ತಂಡದ ಮಾರ್ಕಿನ್ ಪ್ರೊಕ್ಲಾಪ್ ಮೂರನೇ ಸ್ಥಾನ ಕಾಯ್ದುಕೊಂಡರು.

ಡಕಾರ್ ರ‍್ಯಾಲಿ 2022: ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್

ಹಾಗೆಯೇ ಟ್ರಕ್ ವಿಭಾಗದಲ್ಲಿನ 333 ಕಿ.ಮೀ ಅಂತರವನ್ನು 4 ಗಂಟೆ 06 ನಿಮಿಷ 22 ಸೆಕೆಂಡ್ ಕಮಾಜ್ ಮಾಸ್ಟರ್ ತಂಡದ ಡಿಮಿಟ್ರಿ ಸೊಟಿಕ್ನೊವ್ ಮತ್ತು ಎಡ್ರಾಡ್ ನಿಕೊಲೆವ್ ಅವರು ಮೊದಲ ಮತ್ತು ಎರಡನೇ ಸ್ಥಾನ ಪಡೆದುಕೊಂಡಿದ್ದು, 9 ನಿಮಿಷ ಕಾಲ ತಡವಾಗಿ ಗುರಿತಲುಪಿದ ಪ್ರಾಗಾ ರೇಸ್ ತಂಡದ ಅಲೆಸ್ ಲೊಪ್ರೈಸ್ ಮೂರನೇ ಸ್ಥಾನ ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಡೇನಿಯಲ್ ಸ್ಯಾಂಡರ್ಸ್

ಸದ್ಯ 2ನೇ ಹಂತದ ಸ್ಪರ್ಧೆಗಳು ಇಂದು ಚಾಲನೆ ಪಡೆದುಕೊಂಡಿದ್ದು, 2ನೇ ಹಂತದ ರ‍್ಯಾಲಿ ಇಂದು ಹೈಲ್ ನಗರದಿಂದ ಅಲ್ ಖೈಸುಮಾ ಗೆ ತಲುಪಬೇಕಿದೆ. ಮೊದಲ ಹಂತದಲ್ಲಿನ ಮಾರ್ಗಗಳಿಂತಲೂ ಹೆಚ್ಚು ಕಠಿಣವಾಗಿರುವ ಅಲ್ ಖೈಸುಮಾ ಮಾರ್ಗವು ಹೈಲ್ ನಗರದಿಂದ 453 ಕಿ.ಮೀ ದೂರವಿದ್ದು, ಎರಡನೇ ದಿನದ ಸ್ಪರ್ಧೆಯು ಹಲವು ಸವಾಲುಗಳಿಂದ ಕೂಡಿದೆ.

More from DriveSpark

Article Published On: Monday, January 3, 2022, 18:05 [IST]
English summary
Dakar rally 2022 stage 1 results details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+