ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 44ನೇ ಡಕಾರ್ ‌ರ‍್ಯಾಲಿಯಲ್ಲಿ ನಾಲ್ಕು ಹಂತಗಳು ಪೂರ್ಣಗೊಂಡಿದ್ದು, 44ನೇ ಡಕಾರ್ ‌ರ‍್ಯಾಲಿಯಲ್ಲಿ ಅತಿ ಹೆಚ್ಚು ಅಂತರ ಹೊಂದಿರುವ ನಾಲ್ಕನೇ ಹಂತವು ಸೌದಿ ರಾಜಧಾನಿ ರಿಯಾದ್‌ ತಲುಪಿದೆ.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

2022ರ ಡಕಾರ್ ‌ರ‍್ಯಾಲಿಯಲ್ಲಿ ವಿಶ್ವದ ಪ್ರಮುಖ ಮೋಟಾರ್‌ಸ್ಪೋರ್ಟ್ ಸ್ಪರ್ಧಿಗಳ ಮಧ್ಯೆ ಪ್ರಶಸ್ತಿಗಾಗಿ ಸೆಣಸಾಟ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು ಬೈಕ್, ಕಾರ್ ಮತ್ತು ಟ್ರಕ್ ವಿಭಾಗದಲ್ಲಿನ ಸ್ಪರ್ಧೆಗಳು ಭಾರೀ ಕುತೂಹಲ ಹುಟ್ಟುಹಾಕಿವೆ. ಜೆದ್ದಾ ನಗರದಿಂದ ಆರಂಭವಾಗಿರುವ ಪ್ರಸಕ್ತ ವರ್ಷದ ಮೋಟಾರ್‌ಸ್ಪೋರ್ಟ್ ಸ್ಪರ್ಧೆಗಳು ಸದ್ಯ ನಾಲ್ಕನೇ ಹಂತವನ್ನು ತಲುಪಿದ್ದು, ನಾಲ್ಕನೇ ಹಂತವು ಒಟ್ಟು 464 ಕಿ.ಮೀ ಒಳಗೊಂಡಿತ್ತು.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

ಅಲ್ ಖೈಸುಮಾದಿಂದ ಆರಂಭಗೊಂಡಿದ್ದ ನಾಲ್ಕನೇ ಹಂತವು ರಿಯಾದ್ ತಲುಪಿದ್ದು, ನಾಲ್ಕನೇ ಹಂತದ ಬೈಕ್ ವಿಭಾಗದಲ್ಲಿ 464 ಕಿ.ಮೀ ಅಂತರವನ್ನು 4 ಗಂಟೆ 06 ನಿಮಿಷ 06 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ಹೋಂಡಾ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರೈಡರ್ ಜೋನ್ ಬ್ಯಾರೆಡಾ ಮೊದಲ ಸ್ಥಾನ ಪಡೆದರು.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

ಬೈಕ್ ವಿಭಾಗದಲ್ಲಿ ಹೋಂಡಾ ತಂಡದ ಜೋನ್ ಬ್ಯಾರೆಡಾ ಸ್ಥಾನ ಪಡೆದರೆ ಮೊದಲ ವಿಜೇತ ಸ್ಪರ್ಧಿಗಿಂತ 4 ನಿಮಿಷ 37 ಸೆಕೆಂಡ್ ತಡವಾಗಿ ಗುರಿತಲುಪಿದ ಹೋಂಡಾ ತಂಡದ ಮತ್ತೊಬ್ಬ ಸ್ಪರ್ಧಿ ಪ್ಯಾಬ್ಲೊ ಕ್ವಿಂಟಾನಿಲ್ಲಾ ಎರಡನೇ ಸ್ಥಾನವನ್ನು ಮತ್ತು 6 ನಿಮಿಷ ತಡವಾಗಿ ಗುರಿತಲುಪಿದ ಟೆಕ್3 ಕೆಟಿಎಂ ತಂಡದ ಡ್ಯಾನಿಲೊ ಪೆಟ್ರುಚಿ ಮೂರನೇ ಸ್ಥಾನಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

ಮೂರನೇ ಹಂತದಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡ ಗ್ಯಾಸ್‌ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ತಂಡದ ಸ್ಯಾಮ್ ಸದರ್‌ಲ್ಯಾಂಡ್‌ 4ನೇ ಹಂತದಲ್ಲಿ 7ನೇ ಸ್ಥಾನದೊಂದಿಗೆ ಗುರಿತಲುಪಿದ್ದು, ಮೊದಲ ಮೂರು ಹಂತದಲ್ಲೂ ಉತ್ತಮ ಸಾಧನೆಯೊಂದಿಗೆ ಸದ್ಯ ಒಟ್ಟಾರೆ ಬೈಕ್ ರ‍್ಯಾಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

ಹಾಗೆಯೇ ಮೋಟೊಸ್ಪೋರ್ಟ್ಸ್ ತಂಡಗಳಾದ ಹೀರೋ ಮೋಟೊಸ್ಪೋರ್ಟ್ಸ್ ಮತ್ತು ಟಿವಿಎಸ್ ಶೆರ್ಕೊ ತಂಡಗಳು ಕೂಡಾ ನಾಲ್ಕನೇ ಹಂತದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿವೆ. ಕಳೆದ ಮೂರು ವರ್ಷಗಳಿಂದ ಹೀರೋ ತಂಡವನ್ನು ಪ್ರತಿನಿಧಿಸುತ್ತಿರುವ ಪೋರ್ಚುಗೀಸ್ ರೈಡರ್ ಜೋಕ್ವಿಮ್ ರೊಡ್ರಿಗಸ್ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯ ಮೂರನೇ ಹಂತದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು, ಇಂದು ನಡೆದ ನಾಲ್ಕನೇ ಹಂತದಲ್ಲಿ 19ನೇ ಸ್ಥಾನದೊಂದಿಗೆ ಗುರಿತಲುಪಿದರು.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

ಹೀರೋ ಮೋಟೊಸ್ಪೋರ್ಟ್ಸ್ ತಂಡದ ಮತ್ತೊಬ್ಬ ಸ್ಪರ್ಧಿ ಆರೋನ್ ಮೇರ್ ಕೂಡಾ ಉತ್ತಮ ಪ್ರದರ್ಶನ ತೋರುತ್ತಿದ್ದು, ನಾಲ್ಕನೇ ಹಂತದಲ್ಲಿ 8ನೇ ಸ್ಥಾನದೊಂದಿಗೆ ನಿಗದಿತ ಗುರಿತಲುಪಿದರು. ಈ ಮೂಲಕ ಆರೋನ್ ಮೇರ್ ಪ್ರಸಕ್ತ ವರ್ಷದ ರ‍್ಯಾಲಿಯಲ್ಲಿ 12ನೇ ರ‍್ಯಾಕಿಂಗ್‌ನಲ್ಲಿ ಮುಂದುವರೆದಿದ್ದು, ಜೋಕ್ವಿಮ್ ರೊಡ್ರಿಗಸ್ ಕೂಡಾ ಮುಂದಿನ ಹಂತಗಳಲ್ಲಿ ಉತ್ತಮ ಪ್ರದರ್ಶನ ತೋರುವ ಉತ್ಸುಕದಲ್ಲಿದ್ದಾರೆ.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

ಟಿವಿಎಸ್ ಶೆರ್ಕೊ ತಂಡವು ಕೂಡಾ ನಾಲ್ಕನೇ ಹಂತದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಮೂವರು ಸ್ಪರ್ಧಿಗಳನ್ನು ಒಳಗೊಂಡಿರುವ ಟಿವಿಎಸ್ ತಂಡದ ಸ್ಪರ್ಧಿಗಳು ಟಾಪ್ 30 ಒಳಗೆ ಸ್ಥಾನ ಪಡೆದುಕೊಂಡಿದ್ದಾರೆ.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

ನಾಲ್ಕನೇ ಹಂತದಲ್ಲಿ ಕಾರುಗಳ ವಿಭಾಗವು ಕೂಡಾ ಸಾಕಷ್ಟು ರೋಚಕತೆಯಿಂದ ಕೂಡಿದ್ದು, ಮೊದಲ ಸ್ಥಾನಕ್ಕಾಗಿ ಟೊಯೊಟಾ ಮತ್ತು ಹಂಟರ್ ಟಿ1 ಬಿಆರ್‌ಎಕ್ಸ್ ನಡುವೆ ಭಾರೀ ಪೈಪೋಟಿ ಮುಂದುವರಿದೆ.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

ಗಾಜೊ ರೇಸಿಂಗ್ ಟೊಯೊಟಾ ತಂಡದ ನಾಸರ್ ಅಲ್-ಅತ್ತಿಯಾ ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಕೇವಲ 25 ಸೆಕೆಂಡುಗಳ ಅಂತರದಲ್ಲಿ ಹಂಟರ್ ಟಿ1 ಬಿಆರ್‌ಎಕ್ಸ್ ತಂಡದ ಸೆಬಾಸ್ಟಿನ್ ಲೊಯೆಬ್ ಎರಡನೇ ಸ್ಥಾನವನ್ನು ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

ಮೂರನೇ ಹಂತದ ಕಾರುಗಳ ವಿಭಾಗದಲ್ಲಿ ಮೊದಲ ಬಾರಿಗೆ ದಾಖಲೆ ನಿರ್ಮಿಸಿದ್ದ ಆಡಿ ಇ-ಟ್ರಾನ್ ತಂಡವು ನಾಲ್ಕನೇ ಹಂತದಲ್ಲಿ ತಾಂತ್ರಿಕ ಕಾರಣಕ್ಕೆ ಹಿನ್ನಡೆ ಅನುಭವಿಸಿತು. ಗುರಿತಲಪಲು ಕೇವಲ 100 ಕಿ.ಮೀ ಬಾಕಿಯಿರುವಾಗಲೇ ಹಿಂಭಾಗದ ಆಕ್ಸೆಲ್ ತುಂಡರಿಸಿದ ಪರಿಣಾಮ ನಾಲ್ಕನೇ ಹಂತದ ಸ್ಪರ್ಧೆಯಿಂದ ಹೊರನಡೆಯಿತು.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

ಹಾಗೆಯೇ ಟ್ರಕ್ ವಿಭಾಗದಲ್ಲಿ ಸ್ಪರ್ಧೆಯಲ್ಲಿ ಕಮಾಜ್ ಮಾಸ್ಟರ್ ತಂಡವು ಅತ್ಯುತ್ತಮ ಚಾಲನಾ ಕೌಶಲ್ಯತೆಯೊಂದಿಗೆ ಅಗ್ರಸ್ಥಾನದೊಂದಿಗೆ ಮುಂದುವರೆದಿದ್ದು, ಮೊದಲ ಸ್ಥಾನವನ್ನು ಕಮಾಜ್ ಮಾಸ್ಟರ್ ತಂಡದ ಡಿಮಿಟ್ರಿ ಸೊಟಿಕ್ನೊವ್, ಆಂಡ್ರೆ ಕಾರ್ಗಿನೋವ್ ಎರಡನೇ ಸ್ಥಾನವನ್ನು ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

ಇನ್ನು 44ನೇ ಆವೃತ್ತಿಯಲ್ಲಿ ಕಳೆದ ವರ್ಷದ ರ‍್ಯಾಲಿಯಲ್ಲಿ ಕೆಲವು ಅಪಾಯಕಾರಿ ಮಾರ್ಗಗಳನ್ನು ಕೈಬಿಡಲಾಗಿದ್ದು, ಕಳೆದ ಆವೃತ್ತಿಗಿಂತಲೂ ಹೊಸ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಹಲವಾರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

14 ಹಂತಗಳನ್ನು ಒಳಗೊಂಡಿದ್ದ 43ನೇ ಡಕಾರ್ ರ‍್ಯಾಲಿಯ ಮಾರ್ಗಗಳನ್ನು 44ನೇ ಆವೃತ್ತಿಯಲ್ಲಿ 12ಕ್ಕೆ ಇಳಿಕೆ ಮಾಡಿದ್ದು, ಯಾವುದೇ ರೀತಿಯ ದುರಂತಗಳಿಗೆ ಎಡೆಮಾಡಿಕೊಡದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲಾಗಿದೆ. 2022ರ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಒಟ್ಟು ಅಂತರವನ್ನು ಕಳೆದ ಬಾರಿಯ 7 ಸಾವಿರ ಕಿ.ಮೀ ಅಂತರದಿಂದ 4 ಸಾವಿರ ಕಿ.ಮೀ ಗಳಿಗೆ ಇಳಿಕೆ ಮಾಡಲಾಗಿದೆ.

ಡಕಾರ್ ರ‍್ಯಾಲಿ 2022: ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಮಿಂಚಿದ ಹೋಂಡಾ ತಂಡದ ಜೋನ್ ಬ್ಯಾರೆಡಾ

2022ರ ಆವೃತ್ತಿಯಲ್ಲಿ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣು ಒಳಗೊಂಡಿರಲಿದ್ದು, ಹಲವಾರು ದುರಂತಗಳಿಗೆ ಕಾರಣವಾಗುತ್ತಿರುವ ರುಬ್ ಅಲ್-ಕಾಲಿ ಮರಭೂಮಿ ಮಾರ್ಗವನ್ನು ಈ ಬಾರಿ ಕೈಬಿಡಲಾಗಿದೆ.

Most Read Articles

Kannada
English summary
Dakar rally 2022 stage 4 results honda s joan barreda wins stage 4
Story first published: Thursday, January 6, 2022, 0:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X