ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ SP 125 ಬೈಕ್: ರಫ್ತು ಪ್ರಾರಂಭಿಸಿದ ಹೋಂಡಾ

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ಸ್, ತನ್ನ ಜಾಗತಿಕ ಮಾರುಕಟ್ಟೆಯನ್ನು ವಿಸ್ತರಿಸುತ್ತಿದೆ. ಹೋಂಡಾ ಇಂಡಿಯಾ ಇದೀಗ ತನ್ನ SP 125 ಅನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ರಫ್ತು ಮಾಡಲು ಪ್ರಾರಂಭಿಸಿದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ SP 125 ಬೈಕ್‌ಗೆ ಬೇಡಿಕೆ ಹೆಚ್ಚಳ: ರಫ್ತು ಪ್ರಾರಂಭಿಸಿದ ಹೋಂಡಾ

ಹೋಂಡಾ ಕಂಪನಿಯು SP 125 ಅನ್ನು CBU ಮಾರ್ಗದಲ್ಲಿ ಅಂದರೆ ಸಂಪೂರ್ಣ ನಿರ್ಮಿಸಿದ ಘಟಕವಾಗಿ ರಫ್ತು ಮಾಡುತ್ತಿದೆ. ಈ ವಿದೇಶಿ ಮಾರುಕಟ್ಟೆಗಳಲ್ಲಿ ಹೋಂಡಾ SP 125 ಅನ್ನು CB 125F ಎಂದು ಮಾರಾಟ ಮಾಡಲಾಗುತ್ತದೆ. ಬೈಕ್ ತಯಾರಕರು ಈ ತಿಂಗಳಿನಿಂದಲೇ SP 125 ರ 250 ಯುನಿಟ್‌ಗಳನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ರವಾನಿಸುತ್ತಿದ್ದಾರೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ SP 125 ಬೈಕ್‌ಗೆ ಬೇಡಿಕೆ ಹೆಚ್ಚಳ: ರಫ್ತು ಪ್ರಾರಂಭಿಸಿದ ಹೋಂಡಾ

SP125 ಅನ್ನು ಪ್ರಸ್ತುತ ಅಲ್ವಾರ್ (ರಾಜಸ್ಥಾನ) ನಲ್ಲಿರುವ ಹೋಂಡಾ ದ್ವಿಚಕ್ರ ವಾಹನಗಳ ತಪುಕರ ಸ್ಥಾವರದಲ್ಲಿ ತಯಾರಿಸಲಾಗುತ್ತಿದೆ. 2001 ರಲ್ಲಿ ಈ ಸ್ಥಾವರದಿಂದ ಹೋಂಡಾ ವಿದೇಶಗಳಿಗೆ ವಾಹನಗಳನ್ನು ರಫ್ತು ಮಾಡಲು ಪ್ರಾರಂಭಿಸಿತು. ಹೋಂಡಾ ಮೊದಲು ಆಕ್ಟಿವಾ ಸ್ಕೂಟರ್‌ಗಳನ್ನು ರಫ್ತು ಮಾಡಲು ಪ್ರಾರಂಭಿಸಿತು. ಪ್ರಸ್ತುತ ತನ್ನ 19 ಮಾದರಿಗಳನ್ನು ಪ್ರಪಂಚದಾದ್ಯಂತ 38 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ SP 125 ಬೈಕ್‌ಗೆ ಬೇಡಿಕೆ ಹೆಚ್ಚಳ: ರಫ್ತು ಪ್ರಾರಂಭಿಸಿದ ಹೋಂಡಾ

ಹೋಂಡಾ SP 125 ಕುರಿತು ಮಾತನಾಡುವುದಾದರೆ, ಇದು ಡಿಸ್ಕ್ ಮತ್ತು ಡ್ರಮ್ ಎಂಬ ಎರಡು ರೂಪಾಂತರಗಳಲ್ಲಿ ಬರುತ್ತದೆ. ಹೋಂಡಾ SP 125 ಡ್ರಮ್ ಬೆಲೆ ರೂ. 82,486 ರಿಂದ ಪ್ರಾರಂಭವಾಗುತ್ತದೆ. ಇನ್ನು ಡಿಸ್ಕ್ ಬೆಲೆ ರೂ. 86,486 ರಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ, ದೆಹಲಿ).

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ SP 125 ಬೈಕ್‌ಗೆ ಬೇಡಿಕೆ ಹೆಚ್ಚಳ: ರಫ್ತು ಪ್ರಾರಂಭಿಸಿದ ಹೋಂಡಾ

ಈ ಎಸ್‌ಪಿ 125 ಬೈಕಿನಲ್ಲಿ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ಬೈಕಿನ ಸರಾಸರಿ ಮೈಲೇಜ್, ಚಲಿಸಿರುವ ದೂರ, ಗೇರ್ ಪೊಸಿಷನ್ ಇಂಡಿಕೇಟರ್ ಹಾಗೂ ಸರ್ವಿಸ್ ಡ್ಯೂ ಇಂಡಿಕೇಟರ್‍‍ಗಳ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಈ ಬೈಕ್ ಎಲ್‌ಇಡಿ ಹೆಡ್‌ಲ್ಯಾಂಪ್‌, ಎಂಜಿನ್ ಸ್ಟಾರ್ಟ್/ಸ್ಟಾಪ್, ಇಂಟಿಗ್ರೇಟೆಡ್ ಹೆಡ್‌ಲ್ಯಾಂಪ್ ಬೀಮ್, ಪಾಸಿಂಗ್ ಸ್ವಿಚ್, ಸ್ಪೋರ್ಟಿ ಅಲಾಯ್ ವ್ಹೀಲ್ಸ್ ಹಾಗೂ ಕ್ರೋಮ್ ಎಕ್ಸಾಸ್ಟ್ ಮಫ್ಲರ್ ಕವರ್‍‍ಗಳನ್ನು ಸಹ ಹೊಂದಿದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ SP 125 ಬೈಕ್‌ಗೆ ಬೇಡಿಕೆ ಹೆಚ್ಚಳ: ರಫ್ತು ಪ್ರಾರಂಭಿಸಿದ ಹೋಂಡಾ

ಹೋಂಡಾ ಎಸ್‍‍ಪಿ 125 ಸ್ಪೋರ್ಟಿ ಬಾಡಿ ಗ್ರಾಫಿಕ್ಸ್ ಹಾಗೂ ಸ್ಪೋರ್ಟಿ ಟ್ಯಾಂಕ್ ವಿನ್ಯಾಸವನ್ನು ಹೊಂದಿದೆ. ಈ ಹೊಸ ಬೈಕ್ ಸ್ಟ್ರೈಕಿಂಗ್ ಗ್ರೀನ್, ಇಂಪೀರಿಯಲ್ ರೆಡ್ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ ಹಾಗೂ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ SP 125 ಬೈಕ್‌ಗೆ ಬೇಡಿಕೆ ಹೆಚ್ಚಳ: ರಫ್ತು ಪ್ರಾರಂಭಿಸಿದ ಹೋಂಡಾ

ಈ ಬೈಕ್ 10bhp ಮತ್ತು 11Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ 124cc ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದೆ. ಈ ಬೈಕ್ 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಹೋಂಡಾ SP 125 BS-6 ಮಾದರಿಯಲ್ಲಿ ಹಲವು ಹೊಸ ನವೀಕರಣಗಳನ್ನು ನೀಡಲಾಗಿದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ SP 125 ಬೈಕ್‌ಗೆ ಬೇಡಿಕೆ ಹೆಚ್ಚಳ: ರಫ್ತು ಪ್ರಾರಂಭಿಸಿದ ಹೋಂಡಾ

ಇದು ಹೊಸ ಸಂಸ್ಕರಿಸಿದ ಎಂಜಿನ್, ಸೈಲೆಂಟ್ ಸ್ಟಾರ್ಟ್ ತಂತ್ರಜ್ಞಾನ, ಫ್ಯೂಯಲ್ ಇಂಜೆಕ್ಷನ್, ಕಾಂಬಿ ಬ್ರೇಕ್ ಸಿಸ್ಟಮ್ (ಸಿಬಿಎಸ್) ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. BS-6 ಎಂಜಿನ್‌ನಿಂದಾಗಿ ಬೈಕ್‌ನ ಕಾರ್ಯಕ್ಷಮತೆ ಮತ್ತು ಮೈಲೇಜ್ ಸುಧಾರಿಸಿದೆ. ಹೋಂಡಾ SP 125 2020 mm ಉದ್ದ, 785 mm ಅಗಲ ಮತ್ತು 1103 mm ಎತ್ತರವಿದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ SP 125 ಬೈಕ್‌ಗೆ ಬೇಡಿಕೆ ಹೆಚ್ಚಳ: ರಫ್ತು ಪ್ರಾರಂಭಿಸಿದ ಹೋಂಡಾ

ಈ ಬೈಕ್ 1,285 ಎಂಎಂ ವ್ಹೀಲ್ ಬೇಸ್ ಮತ್ತು 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಪಡೆಯುತ್ತದೆ. ಇದು 790 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಹೈಡ್ರಾಲಿಕ್ ಸಸ್ಪೆನ್ಷನ್ ಘಟಕವನ್ನು ಹೊಂದಿದೆ. ಹಿಂದಿನ ಸಸ್ಪೆನ್ಷನ್ ಅನ್ನು ಸರಿಹೊಂದಿಸಬಹುದಾಗಿದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ SP 125 ಬೈಕ್‌ಗೆ ಬೇಡಿಕೆ ಹೆಚ್ಚಳ: ರಫ್ತು ಪ್ರಾರಂಭಿಸಿದ ಹೋಂಡಾ

ಹೋಂಡಾ SP 125 ಮುಂಭಾಗ ಮತ್ತು ಹಿಂಭಾಗದಲ್ಲಿ 18-ಇಂಚಿನ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದುಕೊಂಡಿದೆ. ಬೈಕ್ ಮ್ಯಾಟ್ ಫಿನಿಶ್‌ನಲ್ಲಿ 5-ಸ್ಪೋಕ್ ಅಲಾಯ್ ವೀಲ್‌ಗಳನ್ನು ಹೊಂದಿದೆ. ಇದು ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು 130 ಎಂಎಂ ಡ್ರಮ್ ಬ್ರೇಕ್ ಆಯ್ಕೆಯನ್ನು ನೀಡುತ್ತದೆ. ಹಿಂಭಾಗದಲ್ಲಿ ಕೇವಲ 130 ಎಂಎಂ ಡ್ರಮ್ ನೀಡಲಾಗಿದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ SP 125 ಬೈಕ್‌ಗೆ ಬೇಡಿಕೆ ಹೆಚ್ಚಳ: ರಫ್ತು ಪ್ರಾರಂಭಿಸಿದ ಹೋಂಡಾ

ಹೋಂಡಾ SP 125 ರ ಡಿಸ್ಕ್ ರೂಪಾಂತರದ ಒಟ್ಟು ತೂಕ 117 ಕೆ.ಜಿ ಇದ್ದರೆ ಡ್ರಮ್ ರೂಪಾಂತರದ ತೂಕ 116 ಕೆ.ಜಿ ಇದೆ. ಈ ಬೈಕ್ ನಲ್ಲಿ 11 ಲೀಟರ್ ಇಂಧನ ಟ್ಯಾಂಕ್ ಅಳವಡಿಸಲಾಗಿದೆ. ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಜೂನ್ 2022 ರಲ್ಲಿ 3,83,882 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ SP 125 ಬೈಕ್‌ಗೆ ಬೇಡಿಕೆ ಹೆಚ್ಚಳ: ರಫ್ತು ಪ್ರಾರಂಭಿಸಿದ ಹೋಂಡಾ

ಇದು ಒಂದು ವರ್ಷದ ಹಿಂದೆ ಇದೇ ತಿಂಗಳಿಗಿಂತ ಶೇಕಡಾ 67 ರಷ್ಟು ಹೆಚ್ಚಾಗಿದೆ. ಜೂನ್ 2022 ರಲ್ಲಿ ಹೋಂಡಾದ ದೇಶೀಯ ಮಾರುಕಟ್ಟೆ ಮಾರಾಟವು 3,55,560 ಯುನಿಟ್‌ಗಳಾಗಿದ್ದರೆ, 28,322 ಯುನಿಟ್ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಲಾಗಿದೆ. ಜೂನ್ 2021 ರಲ್ಲಿ 2,12,453 ಯುನಿಟ್‌ಗಳ ದೇಶೀಯ ಮಾರಾಟ ಮತ್ತು 20,044 ಯುನಿಟ್‌ಗಳ ರಫ್ತುಗಳನ್ನು ದಾಖಲಿಸಿದೆ.

Article Published On: Wednesday, July 27, 2022, 18:57 [IST]
English summary
Demand increases for SP 125 bike in Australia New Zealand Honda begins exports
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+