ಭಾರತದಲ್ಲಿ ದುಬಾರಿ ಬೆಲೆಯ 'ಡುಕಾಟಿ ಡೆಸರ್ಟ್ ಎಕ್ಸ್' ಬಿಡುಗಡೆ: ಬುಕಿಂಗ್ ಆರಂಭ

ಇಟಾಲಿಯನ್ ಸೂಪರ್‌ಬೈಕ್ ತಯಾರಕ ಕಂಪನಿ 'ಡುಕಾಟಿ' ಭಾರತದಲ್ಲಿ ಬಹುನಿರೀಕ್ಷಿತ 'ಡೆಸರ್ಟ್ ಎಕ್ಸ್' ಮೋಟಾರ್‌ಸೈಕಲ್ ಬಿಡುಗಡೆ ಮಾಡಿದೆ. ಇದು ಒಂದೇ ರೂಪಾಂತರದಲ್ಲಿ ಖರೀದಿಗೆ ಲಭ್ಯವಿದೆ. ಡೆಸರ್ಟ್ ಎಕ್ಸ್ ಬೆಲೆ ರೂ.17.91 ಲಕ್ಷ (ಎಕ್ಸ್ ಶೋ ರೂಂ, ಭಾರತ) ಇದೆ. ಇದು ಮಲ್ಟಿಸ್ಟ್ರಾಡಾ V2 ಬೆಲೆಗಿಂತ ತುಸು ಹೆಚ್ಚು. (ರೂ.15.49 ಲಕ್ಷ).

ಡುಕಾಟಿ ಡೆಸರ್ಟ್ ಎಕ್ಸ್ ಮೋಟಾರ್‌ಸೈಕಲ್, ಡುಕಾಟಿ ಮಲ್ಟಿಸ್ಟ್ರಾಡಾ V2ಗಿಂತ ಹೆಚ್ಚು ಆಫ್-ರೋಡ್ ಕೇಂದ್ರೀಕೃತವಾಗಿದೆ. ಪವರ್‌ಟ್ರೇನ್‌ ಕುರಿತಂತೆ ಮಾತನಾಡುವುದಾದರೆ, ಹೊಸದಾಗಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಡುಕಾಟಿ ಡೆಸರ್ಟ್ ಎಕ್ಸ್ ಮೋಟಾರ್‌ಸೈಕಲ್, ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಹೊಂದಿರುವ ರೀತಿಯಲ್ಲೇ ಪವರ್‌ಟ್ರೇನ್‌ ಅನ್ನು ಹೊಂದಿದೆ. ಆದಾಗ್ಯೂ, ಡೆಸರ್ಟ್ ಎಕ್ಸ್ ಮೋಟಾರ್‌ಸೈಕಲ್‌ನಲ್ಲಿರುವ 937 ಸಿಸಿ, ವಾಟರ್-ಕೂಲ್ಡ್, L-ಟ್ವಿನ್ ಎಂಜಿನ್ ಅನ್ನು ಬಹುತೇಕ ಆಫ್-ರೋಡ್ ಚಾಲನೆಗೆ ಸರಿಹೊಂದುವಂತೆ ಕಂಪನಿಯು ವಿಭಿನ್ನವಾಗಿರಿಸಿದೆ ಎಂದು ಹೇಳಬಹುದು.

ಭಾರತದಲ್ಲಿ ದುಬಾರಿ ಬೆಲೆಯ ಡುಕಾಟಿ ಡೆಸರ್ಟ್ ಎಕ್ಸ್ ಬಿಡುಗಡೆ: ಬುಕಿಂಗ್ ಆರಂಭ

ಡುಕಾಟಿ ಡೆಸರ್ಟ್ ಎಕ್ಸ್ ಮೋಟಾರ್‌ಸೈಕಲ್‌ನಲ್ಲಿರುವ ಎಂಜಿನ್ 9,250 ಆರ್‌ಪಿಎಂನಲ್ಲಿ 108.5 ಬಿಹೆಚ್‌ಪಿ ಗರಿಷ್ಠ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 92 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜೊತೆಗೆ ಈ ಪವರ್‌ಟ್ರೇನ್ ಅದರ ಹಿಂದಿನ ಮಾದರಿಗಿಂತ 1.7 ಕಿಲೋಗ್ರಾಂಗಳಷ್ಟು ಹಗುರವಾಗಿದೆ ಎಂದು ಹೇಳಲಾಗುತ್ತದೆ. 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಜೊತೆಗೆ ಆಫ್-ರೋಡ್ ರೈಡಿಂಗ್‌ಗಾಗಿ ಶಾರ್ಟ್ ಫಸ್ಟ್ ಮತ್ತು ಸೆಕೆಂಡ್ ಗೇರ್‌ನೊಂದಿಗೆ ಬರುತ್ತಿದ್ದು, ಹೆದ್ದಾರಿಯ ಪ್ರಯಾಣಕ್ಕಾಗಿ ಟಾಲ್ ಆರನೇ ಗೇರ್‌ನೊಂದಿಗೆ ಬರುತ್ತದೆ.

ಈ ಹೊಸ ಡುಕಾಟಿ ಡೆಸರ್ಟ್ ಎಕ್ಸ್ ಮೋಟಾರ್‌ಸೈಕಲ್‌ನಲ್ಲಿ ಆರು ರೈಡಿಂಗ್ ಮೋಡ್‌ಗಳನ್ನು ತನ್ನ ಕಂಪನಿ ಖರೀದಿದಾರರಿಗೆ ನೀಡುತ್ತಿದೆ. ಸ್ಪೋರ್ಟ್, ಟೂರಿಂಗ್, ಅರ್ಬನ್, ವೆಟ್, ಎಂಡ್ಯೂರೋ ಮತ್ತು ರ‍್ಯಾಲಿ. ಇವುಗಳಲ್ಲಿ, ಮೊದಲ ನಾಲ್ಕು ರೈಡಿಂಗ್ ಮೋಡ್‌ಗಳನ್ನು ದೈನಂದಿನ ಪ್ರಯಾಣಕ್ಕಾಗಿ ವಿನ್ಯಾಸ ಮಾಡಲಾಗಿದೆ. ಆದರೆ, ಕೊನೆಯ ಎರಡು ರೈಡಿಂಗ್ ಮೋಡ್‌ಗಳನ್ನು ನಿರ್ದಿಷ್ಟವಾಗಿ ಆಫ್-ರೋಡ್ ರೈಡಿಂಗ್‌ಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಬೈಕ್ ಪ್ರಿಯರಿಗೆ ಜಾಸ್ತಿ ಇಷ್ಟವಾಗುತ್ತದೆ ಎಂದು ಹೇಳಬಹುದು.

ಹೊಸ ಡುಕಾಟಿ ಡೆಸರ್ಟ್ ಎಕ್ಸ್ ಬೈಕಿನಲ್ಲಿರುವ ಮೆಕ್ಯಾನಿಕಲ್‌ ಅಂಶಗಳ ಬಗ್ಗೆ ಮಾತನಾಡುವುದಾದರೆ, ಈ ಮೋಟಾರ್‌ಸೈಕಲ್ ಹೊಸ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಹೊಂದಿದ್ದು, ಕಯಾಬಾದಿಂದ ಮಾಡಲಾದ ಫ್ರಂಟ್ ಮತ್ತು ರೇರ್ ಸಸ್ಪೆನ್ಷನ್ ಇದೆ. ಫ್ರಂಟ್, ಸಸ್ಪೆನ್ಷನ್ 46 ಎಂಎಂ USD ಫೋರ್ಕ್ ಆಗಿದೆ. ಆದರೆ ರೇರ್, ಅಲ್ಯೂಮಿನಿಯಂ ಸ್ವಿಂಗರ್ಮ್ ಜೊತೆ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ. ಆಫ್-ರೋಡ್ ಕೇಂದ್ರೀಕೃತ ಮೋಟಾರ್‌ಸೈಕಲ್ ಆಗಿರುವುದರಿಂದ, ಡುಕಾಟಿ ಡೆಸರ್ಟ್ ಎಕ್ಸ್, ಮುಂಭಾಗದಲ್ಲಿ 90/90 ಟೈರ್‌ಗಳೊಂದಿಗೆ 21-ಇಂಚಿನ ವೀಲ್ ಮತ್ತು 150/70 ಟೈರ್‌ಗಳೊಂದಿಗೆ 18-ಇಂಚಿನ ವೀಲ್ ಅನ್ನು ಹೊಂದಿದೆ.

ಬ್ರೇಕಿಂಗ್‌ಗೆ ಬಗ್ಗೆ ಹೇಳುವುದಾದರೆ, ಡುಕಾಟಿ ಡೆಸರ್ಟ್ ಎಕ್ಸ್ ಮೋಟಾರ್‌ಸೈಕಲ್ ಮುಂಭಾಗದಲ್ಲಿ 4-ಪಿಸ್ಟನ್ ಕ್ಯಾಲಿಪರ್‌ನಿಂದ ಕೂಡಿದ ಎರಡು 320 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇದಲ್ಲದೆ, ಈ ಮೋಟಾರ್‌ಸೈಕಲ್ 875 ಎಂಎಂ ಸೀಟ್ ಹೈಟ್ ನೊಂದಿಗೆ ಬರುತ್ತದೆ. ಆದರೆ, ಲೊ- ಸೀಟ್-ಅಕ್ಸೆಸ್ಸೋರಿ ಮೂಲಕ ಇದನ್ನು 865 ಎಂಎಂಗೆ ಕಡಿಮೆ ಮಾಡಬಹುದು. ಜೊತೆಗೆ ಡುಕಾಟಿ ಡೆಸರ್ಟ್ ಎಕ್ಸ್ 250 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 202 ಕಿಲೋಗ್ರಾಂಗಳಷ್ಟು ಕರ್ಬ್ ತೂಕದೊಂದಿಗೆ ಖರೀದಿಗೆ ಲಭ್ಯವಿದೆ.

ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಡ್ಯುಕಾಟಿ ಡೆಸರ್ಟ್ ಎಕ್ಸ್ ಟ್ರಾಕ್ಷನ್ ಕಂಟ್ರೋಲ್, ವೀಲಿ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಎಂಜಿನ್ ಬ್ರೇಕ್ ಕಂಟ್ರೋಲ್, ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್, ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಫುಲ್ ಎಲ್‌ಇಡಿ ಲೈಟಿಂಗ್, 5-ಇಂಚಿನ ಬಣ್ಣದ ಟಿಎಫ್‌ಟಿ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಬ್ಲೂಟೂತ್ ಕನೆಕ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು. ಇದನ್ನು ಆಫ್-ರೋಡ್ ಚಾಲನೆಯನ್ನು ಇಷ್ಟಪಡುವ ರೈಡರ್ ಗಳು ತುಂಬಾ ಲೈಕ್ ಮಾಡುತ್ತಾರೆ.

ಡುಕಾಟಿ ಡೆಸರ್ಟ್ ಎಕ್ಸ್ ಬಗ್ಗೆ ಆಲೋಚನೆಗಳು:
ಡುಕಾಟಿ ಡೆಸರ್ಟ್ ಎಕ್ಸ್ ಬಹಳ ಆಕರ್ಷಕವಾಗಿ ಕಾಣುವ ಮೋಟಾರ್ ಸೈಕಲ್ ಆಗಿದೆ. ಮತ್ತು ಡಸರ್ಟ್ ಎಕ್ಸ್ ಜೊತೆಗೆ ಡಸರ್ಟ್ ಎಕ್ಸ್ ಅತ್ಯಂತ ಸಮರ್ಥವಾದ ಬೈಕ್ ಎಂದು ಡುಕಾಟಿ ಕಂಪನಿ ಹೇಳಿಕೊಂಡಿದೆ. ಹೋಂಡಾ ಆಫ್ರಿಕನ್ ಟ್ವಿನ್ ಮತ್ತು ಟ್ರಯಂಫ್ ಟೈಗರ್ 900 ರ‍್ಯಾಲಿಯಂತಹ ಆಫ್-ರೋಡ್ ಬೈಕುಗಳಿಗೆ ಭಾರೀ ಪೈಪೋಟಿ ನೀಡಲು ಈ ಡುಕಾಟಿ ಡೆಸರ್ಟ್ ಎಕ್ಸ್ ಮೋಟಾರ್‌ಸೈಕಲ್ ಖಂಡಿತವಾಗಿಯೂ ಉತ್ತಮ ಆಯ್ಕೆ ಎಂದೇ ಹೇಳಬಹುದು.

More from DriveSpark

Article Published On: Tuesday, December 13, 2022, 11:55 [IST]
English summary
Ducati desert x launch booking start India
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+