ಭಾರತದಲ್ಲಿ ಡುಕಾಟಿ ಪಾನಿಗಲೆ ವಿ2 ಬೇಲಿಸ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇಟಲಿ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಡುಕಾಟಿ ತನ್ನ ಪಾನಿಗಲೆ ವಿ2 ಟ್ರಾಯ್ ಬೇಲಿಸ್ ಸ್ಪೆಷಲ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಡುಕಾಟಿ ಪಾನಿಗಲೆ ವಿ2 ಟ್ರಾಯ್ ಬೇಲಿಸ್ ಸ್ಪೆಷಲ್ ಎಡಿಷನ್ ಬೆಲೆಯು ರೂ.21.30 ಲಕ್ಷಗಳಾಗಿದೆ.

ಭಾರತದಲ್ಲಿ ಡುಕಾಟಿ ಪಾನಿಗಲೆ ವಿ2 ಬೇಲಿಸ್ ಸ್ಪೆಷಲ್ ಎಡಿಷನ್ ಬಿಡುಗಡೆ

ಡುಕಾಟಿ ಕಂಪನಿಯು ಪಾನಿಗಲೆ ವಿ2 ಬೇಲಿಸ್ 1ನೇ ಚಾಂಪಿಯನ್‌ಶಿಪ್ ಗೆದ್ದ 20ನೇ ವಾರ್ಷಿಕೋತ್ಸವದ ಸಂಭ್ರಮದ ಭಾಗವಾಗಿ ಈ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಪಾನಿಗಲೆ ವಿ2 ಬೇಲಿಸ್ ಮಾದರಿಯು ಟ್ರಾಯ್ ಬೇಲಿಸ್ ಅವರ ವೃತ್ತಿಜೀವನಕ್ಕೆ ಗೌರವ ಸಲ್ಲಿಸುತ್ತದೆ ಮತ್ತು ಆಸ್ಟ್ರೇಲಿಯಾದ ರೈಡರ್ ಬೇಲಿಸ್ ಗೆದ್ದ ಮೂರು ವಿಶ್ವ ಎಸ್‌ಬಿಕೆ ಪ್ರಶಸ್ತಿಗಳಲ್ಲಿ ಮೊದಲನೆದರ ಸಂಭ್ರಮದ ಭಾಗವಾಗಿದೆ. ಈ ಎಡಿಷನ್ 996ಆರ್ ನಿಂದ ಸ್ಫೂರ್ತಿ ಪಡೆದ ಗ್ರಾಫಿಕ್ಸ್ ನೊಂದಿಗೆ ವಿಶೇಷ ಲೆವೆರಿಯನ್ನು ಪಡೆದುಕೊಂಡಿದೆ. ಬೇಲಿಸ್ ಡುಕಾಟಿ ರೆಡ್ ಆಗಿದ್ದರೆ ಗ್ರೀನ್ ಮತ್ತು ವೈಟ್ ಬಣ್ಣಗಳು ಕಂಪನಿಯ ಸಂಪ್ರದಾಯಿಕ ಬಣ್ಣಗಳಾಗಿವೆ.

ಭಾರತದಲ್ಲಿ ಡುಕಾಟಿ ಪಾನಿಗಲೆ ವಿ2 ಬೇಲಿಸ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನು ಈ ಮಾದರಿಯಲ್ಲಿರುವ 21 ನೇ ಸಂಖ್ಯೆ (ಟ್ರಾಯ್ ಬೇಲಿಸ್ನ ರೇಸ್ ಸಂಖ್ಯೆ), ಶೆಲ್ ಲೋಗೊ ಮತ್ತು ಫ್ಯೂಯಲ್ ಟ್ಯಾಂಕ್‌ನಲ್ಲಿ ಟ್ರಾಯ್‌ನ ಆಟೋಗ್ರಾಫ್ ಅನ್ನು ಸಹ ಒಳಗೊಂಡಿದೆ. ಪ್ರತಿ ಸೀಮಿತ ಆವೃತ್ತಿಯ ಬೈಕ್ ಅದರ ಉತ್ಪಾದನಾ ಸರಣಿ ಸಂಖ್ಯೆಯನ್ನು ಸಹ ಹೊಂದಿರುತ್ತದೆ.

ಭಾರತದಲ್ಲಿ ಡುಕಾಟಿ ಪಾನಿಗಲೆ ವಿ2 ಬೇಲಿಸ್ ಸ್ಪೆಷಲ್ ಎಡಿಷನ್ ಬಿಡುಗಡೆ

ಈ ಡುಕಾಟಿ ಪಾನಿಗಲೆ ವಿ2 ಬೇಲಿಸ್ 1 ನೇ ಚಾಂಪಿಯನ್‌ಶಿಪ್ 20ನೇ ವಾರ್ಷಿಕೋತ್ಸವದ ಎಡಿಷನ್ ಸ್ಟ್ಯಾಂಡರ್ಡ್ ಮಾದರಿಗಿಂತ ಮೂರು ಕಿಲೋಗ್ರಾಂಗಳಷ್ಟು ಹಗುರವಾಗಿದೆ. ಕಡಿಮೆ ತೂಕವನ್ನು ಲಿಥಿಯಂ-ಐಯಾನ್ ಬ್ಯಾಟರಿ ಮತ್ತು ಸಿಂಗಲ್ ಸೀಟ್ ಸಂರಚನೆಯಿಂದ ಇದು ಸಾಧ್ಯವಾಗಿದೆ.

ಭಾರತದಲ್ಲಿ ಡುಕಾಟಿ ಪಾನಿಗಲೆ ವಿ2 ಬೇಲಿಸ್ ಸ್ಪೆಷಲ್ ಎಡಿಷನ್ ಬಿಡುಗಡೆ

ಬದಲಾವಣೆಗಳು ಕೇವಲ ಕಾಸ್ಮೆಟಿಕ್ ಗಳಿಗೆ ಸೀಮಿತವಾಗಿಲ್ಲ. ಈ ಸ್ಪೆಷಲ್ ಎಡಿಷನ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಹಾರ್ಡ್‌ವೇರ್ ಓಹ್ಲಿನ್ಸ್ ಎನ್ಎಕ್ಸ್ 30 ಫೋರ್ಕ್ಸ್ ಮತ್ತು ಟಿಟಿಎಕ್ಸ್ 36 ಶಾಕ್ ಅಬ್ಸಾರ್ಬರ್ ಮತ್ತು ಸ್ಟೀಯರಿಂಗ್ ಡ್ಯಾಂಪರ್ ಅನ್ನು ಒಳಗೊಂಡಿದೆ. ಇದು ಹೆಚ್ಚು ನಿಖರವಾದ ನಿರ್ವಹಣೆ ಮತ್ತು ಹೆಚ್ಚಿನ ಅನುಭವವನ್ನು ನೀಡುತ್ತದೆ.

ಭಾರತದಲ್ಲಿ ಡುಕಾಟಿ ಪಾನಿಗಲೆ ವಿ2 ಬೇಲಿಸ್ ಸ್ಪೆಷಲ್ ಎಡಿಷನ್ ಬಿಡುಗಡೆ

ಎಂಜಿನ್ ಆದರೂ ಸಾಮಾನ್ಯ ಪಾನಿಗಲೆ ವಿ2 ನಿಂದ ಬದಲಾಗದೆ ಉಳಿದಿದೆ. ಡುಕಾಟಿ ಪಾನಿಗಲೆ ವಿ2 ಬೇಲಿಸ್ ಎಡಿಷನ್ 955 ಸಿಸಿ, ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,750 ಆರ್‌ಪಿಎಂನಲ್ಲಿ 155 ಬಿಹೆಚ್‌ಪಿ ಮತ್ತು 9,000 ಆರ್‌ಪಿಎಂನಲ್ಲಿ 104 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಡುಕಾಟಿ ಪಾನಿಗಲೆ ವಿ2 ಬೇಲಿಸ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನು ಈ ಲಿಮಿಟೆಡ್ ಎಡಿಷನ್ ಎಲೆಕ್ಟ್ರಾನಿಕ್ ಪ್ಯಾಕೇಜ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಎಬಿಎಸ್, ಬೈ-ಡೈರಕ್ಷನ್ ಕ್ವಿಕ್‌ಶಿಫ್ಟರ್, ಟ್ರ್ಯಾಕ್ಷನ್ ಕಂಟ್ರೋಲ್, ವ್ಹೀಲಿ ಕಂಟ್ರೋಲ್ ಮತ್ತು ರೇಸ್, ಸ್ಪೋರ್ಟ್ ಮತ್ತು ಸ್ಟ್ರೀಟ್ ಎಂಬ ರೈಡಿಂಗ್ ಮೋಡ್ ಗಳನ್ನು ಹೊಂದಿದೆ.

ಭಾರತದಲ್ಲಿ ಡುಕಾಟಿ ಪಾನಿಗಲೆ ವಿ2 ಬೇಲಿಸ್ ಸ್ಪೆಷಲ್ ಎಡಿಷನ್ ಬಿಡುಗಡೆ

ಸ್ಟ್ಯಾಂಡರ್ಡ್ ಡುಕಾಟಿ ಪಾನಿಗಲೆ ವಿ2 ಬೈಕಿನಲ್ಲಿ ಸಿಗ್ನೇಚರ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ಏರ್ ಡ್ಯಾಮ್ ಮತ್ತು ವಿ-ಆಕಾರದ ಡಿಆರ್ಎಲ್ ಅನ್ನು ಹೊಂದಿದೆ. ಡುಕಾಟಿ ಪಾನಿಗಲೆ ವಿ2 ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕ್ಲಸ್ಟರ್‌ಗಾಗಿ 4.3-ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಹೊಂದಿದೆ. ಈ ಹೊಸ ಬೈಕಿನಲ್ಲಿ ಸ್ಲಂಗ್ ಅಂಡರ್ ಎಕ್ಸಾಸ್ಟ್ ಅನ್ನು ಕೂಡ ಹೊಂದಿದೆ.

ಭಾರತದಲ್ಲಿ ಡುಕಾಟಿ ಪಾನಿಗಲೆ ವಿ2 ಬೇಲಿಸ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನು ಪ್ರಮುಖವಾಗಿ ಪಾನಿಗಲೆ ವಿ2 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಬ್ರೆಂಬೊದಿಂದ 4-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ ಡ್ಯುಯಲ್ 320 ಎಂಎಂ ಫ್ಲೋಟಿಂಗ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಒಂದೇ 245 ಎಂಎಂ ಡಿಸ್ಕ್ ಅನ್ನು ಹೊಂದಿದೆ.

ಭಾರತದಲ್ಲಿ ಡುಕಾಟಿ ಪಾನಿಗಲೆ ವಿ2 ಬೇಲಿಸ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನು ಡುಕಾಟಿ ತನ್ನ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಟ್ರಿಬ್ಯೂಟ್ 1100 ಪ್ರೊ ಬೈಕ್ ಅನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಟ್ರಿಬ್ಯೂಟ್ 1100 ಪ್ರೊ ಬೈಕ್ ಬೆಲೆಯು ಎಕ್ಸ್-ಶೋ ರೂಂ ಪ್ರಕಾರ ರೂ.12.89 ಲಕ್ಷವಾಗಿದೆ. ಇಟಾಲಿಯನ್ ದ್ವಿಚಕ್ರ ವಾಹನ ಬ್ರ್ಯಾಂಡ್‌ನ ಈ ಹೊಸ ಮಾದರಿಯು 1971 ರಲ್ಲಿ ಪರಿಚಯಿಸಲಾದ ಮೊದಲ ಸ್ಕ್ರ್ಯಾಂಬ್ಲರ್‌ನ 50 ನೇ ವಾರ್ಷಿಕೋತ್ಸವದ ಪ್ರಯುಕ್ತ ಇದನ್ನು ಬಿಡುಗಡೆಗೊಳಿಸಲಾಗಿದೆ. ಹೊಸ ಸ್ಕ್ರ್ಯಾಂಬ್ಲರ್ 1100 ಟ್ರಿಬ್ಯೂಟ್ ಪ್ರೊ 1970ರ ದಶಕದ ಸಾಂಪ್ರದಾಯಿಕ ಡುಕಾಟಿ ಲೋಗೋ ಮತ್ತು ಅದರ ರೆಟ್ರೋ-ಶೈಲೆಯೊಂದಿಗೆ ಗಿಯಾಲೊ ಒಕ್ರಾ ಬಣ್ಣದೊಂದಿಗೆ ಬರುತ್ತದೆ. ಮತ್ತೊಂದೆಡೆ, ವಿನ್ಯಾಸವು ಸ್ಟ್ಯಾಂಡರ್ಡ್ ಸ್ಕ್ರ್ಯಾಂಬ್ಲರ್ 1100 ನಂತೆಯೇ ಉಳಿದಿದೆ

ಭಾರತದಲ್ಲಿ ಡುಕಾಟಿ ಪಾನಿಗಲೆ ವಿ2 ಬೇಲಿಸ್ ಸ್ಪೆಷಲ್ ಎಡಿಷನ್ ಬಿಡುಗಡೆ

ಈ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಟ್ರಿಬ್ಯೂಟ್ 1100 ಪ್ರೊ ಬೈಕ್ ವಿನ್ಯಾಸವು ಸ್ಟ್ಯಾಂಡರ್ಡ್ ಸ್ಕ್ರ್ಯಾಂಬ್ಲರ್ 1100 ನಂತೆಯೇ ಉಳಿದಿದೆ ಮತ್ತು ಟ್ರಿಬ್ಯೂಟ್ ಪ್ರೊ ಒಂದು ಸುತ್ತಿನ ಹೆಡ್‌ಲೈಟ್, ಚಿಕ್ಕ ಮುಂಭಾಗದ ಫೆಂಡರ್, ಅಪ್‌ಸ್ವೆಪ್ಟ್ ಸೀಟ್, ಸೈಡ್-ಸ್ಲಂಗ್ ಟ್ವಿನ್-ಪಾಡ್ ಎಕ್ಸಾಸ್ಟ್‌ಗಳು ಮತ್ತು ವೈರ್-ಸ್ಪೋಕ್ ವೀಲ್‌ಗಳನ್ನು ಉಳಿಸಿಕೊಂಡಿದೆ. ಸ್ಕ್ರ್ಯಾಂಬ್ಲರ್ 1100 ಟ್ರಿಬ್ಯೂಟ್ ಪ್ರೊ ಒಂದೇ ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ ಗಿಯಾಲೊ ಓಕ್ರಾ. ಪ್ರಕಾಶಮಾನವಾದ ಹಳದಿ ಬಣ್ಣದ ಥೀಮ್ ಸ್ಯಾಡಲ್ಗಾಗಿ ಕಂದು ಬಣ್ಣದ ಕವರ್ ನಿಂದ ಪೂರಕವಾಗಿದೆ. ವಿನ್ಯಾಸದಂತೆಯೇ, ವೈಶಿಷ್ಟ್ಯಗಳ ಪಟ್ಟಿಯು ಸಹ ಸ್ಟ್ಯಾಂಡರ್ಡ್ ಮೋಟಾರ್‌ಸೈಕಲ್‌ನಂತೆಯೇ ಉಳಿದಿದೆ.

ಭಾರತದಲ್ಲಿ ಡುಕಾಟಿ ಪಾನಿಗಲೆ ವಿ2 ಬೇಲಿಸ್ ಸ್ಪೆಷಲ್ ಎಡಿಷನ್ ಬಿಡುಗಡೆ

ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಟ್ರಿಬ್ಯೂಟ್ 1100 ಪ್ರೊ ಬೈಕ್ 1970 ರ ದಶಕದ ಐಕಾನಿಕ್ ಏರ್-ಕೂಲ್ಡ್ ಡುಕಾಟಿಸ್‌ಗೆ ಉತ್ತಮವಾದ ಥ್ರೋಬ್ಯಾಕ್ ಆಗಿದೆ. ಈ ಐಕಾನಿಕ್ ಮಾದರಿಯು ಆಕರ್ಷಕ ರೆಟ್ರೋ ವಿನ್ಯಾಸವನ್ನು ಹೊಂದಿದೆ. ಇನ್ನು ಹೊಸದಾಗಿ ಬಿಡುಗಡೆಗೊಂಡ ಡುಕಾಟಿ ಪಾನಿಗಲೆ ವಿ2 ಟ್ರಾಯ್ ಬೇಲಿಸ್ ಸ್ಪೆಷಲ್ ಎಡಿಷನ್ ಸೀಮಿತ ಸಂಖ್ಯೆಯಲ್ಲಿ ಲಭ್ಯವಿರುತ್ತದೆ.

Article Published On: Thursday, March 17, 2022, 12:50 [IST]
English summary
Ducati launched panigale v2 troy bayliss special edition in india details
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+