ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ದುಬಾರಿ ಬೆಲೆ ಪರಿಣಾಮ ಇವಿ ವಾಹನಗಳ ಮಾರಾಟವು ಮುಂಚೂಣಿ ಸಾಧಿಸುತ್ತಿದ್ದು, ಹೊಸ ವಾಹನ ಖರೀದಿದಾರರು ಇವಿ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಆದರೆ ಇತ್ತೀಚೆಗೆ ವರದಿಯಾಗಿರುವ ಕೆಲವು ಇವಿ ವಾಹನಗಳ ಬೆಂಕಿ ಅವಘಡ ಪ್ರಕರಣಗಳು ಇವಿ ವಾಹನಗಳ ಸುರಕ್ಷತೆ ಕುರಿತಂತೆ ಗ್ರಾಹಕರಲ್ಲಿ ಸಂಶಯ ಹುಟ್ಟುಹಾಕಿದ್ದು, ಇದನ್ನು ತಡೆಯಲು ಕೇಂದ್ರ ಸರ್ಕಾರವು ಹೊಸ ಕ್ರಮಗಳನ್ನು ಜಾರಿಗೊಳಿಸುತ್ತಿದೆ.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಎಲೆಕ್ಟ್ರಿಕ್ ವಾಹನಗಳನ್ನು ಪ್ರೊತ್ಸಾಹಿಸಲು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ರಾಜ್ಯ ಮಟ್ಟದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಇಂಧನಗಳ ಬೆಲೆ ಹೆಚ್ಚಳ ಮತ್ತು ಇವಿ ವಾಹನಗಳಿಗೆ ನೀಡಲಾಗುತ್ತಿರುವ ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನ ಮಾರಾಟವು ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಇವಿ ಸ್ಕೂಟರ್ ಮಾರಾಟ ಸದ್ಯ ಹೆಚ್ಚಿನ ಬೇಡಿಕೆಯಲ್ಲಿವೆ.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಇವಿ ಸ್ಕೂಟರ್ ವಿಭಾಗದಲ್ಲಿ ಇತ್ತೀಚೆಗೆ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ವಿವಿಧ ಇವಿ ಸ್ಕೂಟರ್ ಮಾದರಿಗಳೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ. ಆದರೆ ಇವಿ ಸ್ಕೂಟರ್ ಬೇಡಿಕೆ ಹೆಚ್ಚುತ್ತಿದ್ದರೂ ಭವಿಷ್ಯದ ವಾಹನಗಳ ಕುರಿತಾಗಿ ಗ್ರಾಹಕರಲ್ಲಿ ಇನ್ನು ಕೂಡಾ ಹಲವಾರು ಅನುಮಾನ ಮತ್ತು ಗೊಂದಲಗಳಿದ್ದು, ಅದು ಇತ್ತೀಚೆಗೆ ಸಂಭವಿಸಿದ ಬೆಂಕಿ ಅವಘಡ ಪ್ರಕರಣಗಳು ಗ್ರಾಹಕರಲ್ಲಿ ಇನ್ನಷ್ಟು ಗೊಂದಲ ಸೃಷ್ಠಿಸಿವೆ.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಇವಿ ಸ್ಕೂಟರ್‌ಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳುವುದು, ಬಿಡಿಭಾಗಗಳು ಬಹುಬೇಗನೆ ಹಾಳಾಗುತ್ತಿರುವ ಪ್ರಕರಣಗಳು ಗ್ರಾಹಕರಲ್ಲಿ ಇವಿ ವಾಹನಗಳ ಬಗೆಗೆ ವಿಶ್ವಾಸ ಮೂಡಿಸುವ ಬದಲಾಗಿ ಅನುಮಾನ ಹುಟ್ಟುಹಾಕುತ್ತಿವೆ.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಹೊಸ ವಾಹನಗಳ ಬಿಡುಗಡೆಗೂ ಮುನ್ನ ವಿವಿಧ ಹಂತದ ಸಂಶೋಧನೆ, ಪರೀಕ್ಷಾರ್ಥ ಮಾದರಿಗಳನ್ನು ನಿರಂತರವಾಗಿ ಬದಲಾವಣೆಗೊಳಿಸುವ ಪ್ರಕ್ರಿಯೆಯಲ್ಲಿ ಅವಸರದ ನೀತಿ ಅನುಸರಿಸುತ್ತಿರುವುದೇ ಭವಿಷ್ಯ ವಾಹನಗಳ ಬಗೆಗೆ ಗೊಂದಲಗಳು ಸೃಷ್ಠಿಯಾಗುತ್ತಿದ್ದು, ಇದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಕಠಿಣ ಕ್ರಮಕೈಗೊಳ್ಳುವುತ್ತಿರುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇವಿ ವಾಹನ ಕಂಪನಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ತುರ್ತಾಗಿ ತಮ್ಮತ್ತ ಸೆಳೆಯುವ ಉದ್ದೇಶದಿಂದ ಯಾವುದೇ ದೀರ್ಘಾವಧಿಯ ಸಂಶೋಧನೆಗಳನ್ನು ಮಾಡದೆ, ವಿವಿಧ ಹಂತದ ಕಾರ್ಯಕ್ಷಮತೆಯ ಪರೀಕ್ಷಾರ್ಥ ಮಾದರಿಗಳನ್ನು ಬಳಸದೆ ನೇರವಾಗಿ ವಾಹನ ಉತ್ಪಾದನೆ ಮಾಡುವುದು ಮತ್ತು ಬಿಡುಗಡೆ ಮಾಡುವ ಪ್ರಕ್ರಿಯೆಗಳು ಭವಿಷ್ಯದಲ್ಲಿ ಬಹುದೊಡ್ಡ ಹೊಡೆತ ನೀಡುವ ಮುನ್ಸೂಚನೆ ನೀಡುತ್ತಿವೆ.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಅದರಲ್ಲೂ ಓಲಾದಂತಹ ಬೃಹತ್ ಇವಿ ಸ್ಕೂಟರ್ ಉತ್ಪಾದನಾ ಕಂಪನಿಯು ಸಹ ಕೇವಲ ಒಂದೇ ವರ್ಷದಲ್ಲಿ ಇವಿ ಕಂಪನಿಯ ಸ್ಥಾಪನೆ ಮಾಡಿ, ಇವಿ ಸ್ಕೂಟರ್‌ಗಳನ್ನು ಅಭಿವೃದ್ದಿಗೊಳಿಸಿದ್ದಲ್ಲದೆ ಉತ್ಪಾದನಾ ಘಟಕವನ್ನು ಆರಂಭಿಸಿ ಮಾರುಕಟ್ಟೆಯಲ್ಲಿ ಪ್ರವೇಶ ಪಡೆಯಿತು.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಆದರೆ ಹೊಸ ಇವಿ ಸ್ಕೂಟರ್ ಬಿಡುಗಡೆಗೂ ಮುನ್ನ ಹೊಸ ಸ್ಕೂಟರ್ ಕಾರ್ಯಕ್ಷಮತೆ ಕುರಿತಂತೆ ವಿವಿಧ ಹಂತದ ಪರೀಕ್ಷಾರ್ಥ ಮಾದರಿಗಳ ಅಭಿವೃದ್ದಿ, ಸಂಶೋಧನೆ, ಸುರಕ್ಷತೆ ಕುರಿತಂತೆ ಹೆಚ್ಚು ತಲೆಕೆಡಿಸಿಕೊಳ್ಳದ ಓಲಾ ಕಂಪನಿಯು ಕೇವಲ ಹೆಚ್ಚು ಮೈಲೇಜ್ ನೀಡುವ ಭರವಸೆಯೊಂದಿಗೆ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಠಿಸಿತು.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಪರಿಣಾಮ ಇದೀಗ ಓಲಾ ಇವಿ ಸ್ಕೂಟರ್ ಮಾದರಿಗಳ ಬಳಕೆದಾರರಿಂದ ದಾಖಲಾಗುತ್ತಿರುವ ದೂರಗಳು ಹೊಸ ಇವಿ ಸ್ಕೂಟರ್‌ಗಳ ಕಾರ್ಯಕ್ಷಮತೆ ಮತ್ತು ಗುಣಮಟ್ಟದ ಬಗೆಗೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದು, ಅದರಲ್ಲೂ ಸ್ಕೂಟರಿನ ಬ್ಯಾಟರಿ ಪ್ಯಾಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿ ಅವಘಡ ಪ್ರಕರಣಗಳು ಸ್ಕೂಟರ್‌ಗಳ ತಂತ್ರಜ್ಞಾನ ಅಭಿವೃದ್ದಿಯಲ್ಲಿ ಇನ್ನಷ್ಟು ಸುಧಾರಿಸುವ ಅವಶ್ಯಕತೆ ಸ್ಪಷ್ಟವಾಗಿದೆ.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಹೀಗಾಗಿ ಕೇಂದ್ರ ಸಚಿವರು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಟ್ವೀಟ್‌ನಲ್ಲಿ 'ನಾವು ಕರ್ತವ್ಯಲೋಪ ಎಸಗುವ ಆಟೋ ಕಂಪನಿಗಳ ಮೇಲೆ ಅಗತ್ಯ ಕ್ರಮಕೈಗೊಳ್ಳಲಿದ್ದು, ನಾವು ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳಿಗೆ ಗುಣಮಟ್ಟದ ಕೇಂದ್ರಿತ ಮಾರ್ಗಸೂಚಿಗಳನ್ನು ನೀಡುತ್ತೇವೆ. ಯಾವುದೇ ಕಂಪನಿಯು ತನ್ನ ಕಾರ್ಯವಿಧಾನಗಳಲ್ಲಿ ನಿರ್ಲಕ್ಷ್ಯ ವಹಿಸಿದರೆ ಭಾರೀ ದಂಡವನ್ನು ವಿಧಿಸಲಾಗುವುದು' ಎಂದಿದ್ದಾರೆ.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಜೊತೆಗೆ ದೋಷಯುಕ್ತ ವಾಹನಗಳು ಕಂಡುಬಂದಲ್ಲಿ ಆಯಾ ಸರಣಿಯಲ್ಲಿ ಎಲ್ಲಾ ವಾಹನಗಳನ್ನು ಹಿಂಪಡೆಯಲು ಆದೇಶವನ್ನು ಸಹ ನೀಡಲಾಗುವುದು ಎಂದು ಎಚ್ಚರಿಸಿದ್ದು, ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಂಪನಿಗಳು ಪೂರ್ವಭಾವಿಯಾಗಿ ಕ್ರಮ ಕೈಗೊಳ್ಳಬೇಕೆಂದು ಗಡ್ಕರಿಯವರು ಒತ್ತಾಯಿಸಿದ್ದಾರೆ.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಇನ್ನು ಭವಿಷ್ಯದ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಬೆಂಕಿ ಅವಘಡ ಪ್ರಕರಣಗಳು ಮಾರಕ ಎಂದಿರುವ ಆಟೋಮೊಬೈಲ್ ತಜ್ಞರು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಉದ್ಯಮ ವೇಗಕ್ಕೆ ಮಾರಕವಾಗಿರುವ ಇಂತಹ ಘಟನೆಗಳನ್ನು ತಗ್ಗಿಸಲು ಸರ್ಕಾರ ಕೂಡಲೇ ಕಠಿಣ ಕ್ರಮ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಕೇಂದ್ರ ಸರ್ಕಾರದ ಅಗ್ನಿಶಾಮಕ ಮತ್ತು ಪರಿಸರ ಸಂಸ್ಥೆ (CFEEA) ವಾಹನಗಳಲ್ಲಿನ ಬೆಂಕಿ ಅವಘಡಗಳಿಗೆ ನಿಖರ ಕಾರಣ ಕುರಿತಂತೆ ಎಲೆಕ್ಟ್ರಿಕ್ ವಾಹನ ತಯಾರಕರಿಗೆ ನೋಟಿಸ್ ಸಹ ಕಳುಹಿಸಿದ್ದು, ರಸ್ತೆ ಮತ್ತು ಸಾರಿಗೆ ಸಚಿವಾಲಯವು ಇಂತಹ ಘಟನೆಗಳನ್ನು ತಡೆಗಟ್ಟಲು ಹೊಸ ಕ್ರಮಗಳನ್ನು ಸೂಚಿಸುವಂತೆ ಅಗ್ನಿಶಾಮಕ ಮತ್ತು ಪರಿಸರ ಸಂಸ್ಥೆಗೆ ನಿರ್ದೇಶನ ನೀಡಿದೆ.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಹಾಗೆಯೇ ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಪ್ರಕರಣಗಳಲ್ಲದೆ ಗ್ರಾಹಕರು ಇನ್ನು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವಿ ಸ್ಕೂಟರ್‌ಗಳ ಕಳಪೆ ನಿರ್ಮಾಣ ಗುಣಮಟ್ಟ, ಸಾಫ್ಟ್‌ವೇರ್ ವೈಫಲ್ಯ ಮತ್ತು ತ್ವರಿತವಾಗಿ ಚಾರ್ಜ್‌ ಕುಸಿತ ದೂರಗಳು ಸಾಮಾನ್ಯವಾಗುತ್ತಿವೆ.

ಇವಿ ವಾಹನಗಳಲ್ಲಿ ಬೆಂಕಿ ಅವಘಡ: ಜಾರಿಯಾಗಲಿದೆ ಇವಿ ವಾಹನ ಕಂಪನಿಗಳ ವಿರುದ್ದ ಕಠಿಣ ಕ್ರಮ!

ಹೀಗಾಗಿ ಗ್ರಾಹಕರಲ್ಲಿ ವಿಶ್ವಾಸ ಉಳಿಸಿಕೊಳ್ಳಬೇಕಾದಲ್ಲಿ ಹೊಸ ಇವಿ ಉತ್ಪನ್ನಗಳಲ್ಲಿನ ಗುಣಮಟ್ಟ, ಸುರಕ್ಷತೆ ಕುರಿತಂತೆ ಇನ್ನು ಸಾಕಷ್ಟು ಬದಲಾವಣೆಯ ಅವಶ್ಯಕತೆಯಿದ್ದು, ಇವಿ ಉತ್ಪಾದನೆಗಾಗಿ ಸರ್ಕಾರದ ಕಠಿಣ ಮಾರ್ಗಸೂಚಿಗಳು ಮಾತ್ರವೇ ಭವಿಷ್ಯದ ವಾಹನಗಳಿಗೆ ಉಳಿಗಾಲ ಎನ್ನಬಹುದು.

Most Read Articles

Kannada
English summary
E scooter fire accidents nitin gadkari warns of heavy penalty details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X