ಭವಿಷ್ಯದಲ್ಲೂ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು: ಓಲಾ ಸಿಇಒ

ಭವಿಷ್ಯದಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಬೀಳಬಹುದು ಆದರೆ ಅಂತಹ ಘಟನೆಗಳು ಅತ್ಯಂತ ಅಪರೂಪ ಎಂದು ಖಾಸಗಿ ಕಂಪನಿಯ ಸಮಾರಂಭವೊಂದರಲ್ಲಿ ಭಾರತದ ಓಲಾ ಎಲೆಕ್ಟ್ರಿಕ್‌ನ ಮುಖ್ಯ ಕಾರ್ಯನಿರ್ವಾಹಕ ಭವಿಶ್ ಅಗರ್ವಾಲ್ ಹೇಳಿದರು.

ಭವಿಷ್ಯದಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು: ಓಲಾ ಸಿಇಒ

ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಸಂಬಂಧಿಸಿದಂತೆ ಬೆಂಕಿ ಅವಘಡಗಳು ಸಂಭವಿಸಿರಬಹುದು ಆದರೆ ಅವು ತೀರಾ ಅಪರೂಪವಾಗಿ ಕಾಣಿಸಿಕೊಂಡಿವೆ. ಪ್ರಕರಣಗಳು ವಿರಳವಾದರೂ ಓಲಾ ಎಲೆಕ್ಟ್ರಿಕ್‌ನ ಮುಖ್ಯ ಗಮನವು ಸಮಸ್ಯೆಗಳನ್ನು ವಿಶ್ಲೇಷಿಸಿ ಸರಿಪಡಿಸುವುದಾಗಿದೆ ಎಂದು ಭವಿಶ್ ಅಗರ್ವಾಲ್ ಹೇಳಿದರು.

ಭವಿಷ್ಯದಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು: ಓಲಾ ಸಿಇಒ

ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿ ಅವಘಡಗಳು ಮರುಕಳಿಸುತ್ತಲೇ ಇವೆ. ಇದರಿಂದ ಆತಂಕದಲ್ಲಿರುವ ಜನರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಈಗಾಗಲೇ ಖರೀದಿಸಿರುವ ಗ್ರಾಹಕರು ಓಡಿಸಿದರೆ ಸ್ಪೋಟಗೊಳ್ಳುವ ಭಯದಲ್ಲಿದ್ದು, ವಾಹನ ಕೊಂಡರು ಸುಮ್ಮನೆ ನಿಲ್ಲಿಸುವಂತಾಗಿದೆ.

ಭವಿಷ್ಯದಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು: ಓಲಾ ಸಿಇಒ

ಗ್ರಾಹಕರಲ್ಲಿರುವ ಈ ಅನುಮಾನ ಮತ್ತು ಭಯವನ್ನು ಕಡಿಮೆ ಮಾಡಲು ಇವಿ ತಯಾರಿಕಾ ಕಂಪನಿಗಳು ಹಲವಾರು ಪ್ರಯತ್ನಗಳನ್ನು ಮಾಡುತ್ತಿವೆ. ಈ ನಿಟ್ಟಿನಲ್ಲಿ, ಓಲಾ ಎಲೆಕ್ಟ್ರಿಕ್ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗಿನ ಸಮಸ್ಯೆಗಳನ್ನು ಸರಿಪಡಿಸಲು ಬಹು-ಹಂತದ ಸಮಾಲೋಚನೆಗಳನ್ನು ಕೈಗೊಂಡು ಭವಿಷ್ಯದಲ್ಲಿ ಯಾವುದೇ ಅವಘಡಗಳು ನಡೆಯದಂತೆ ಜಾಗೃತಿ ವಹಿಸಲಾಗುತ್ತಿದೆ.

ಭವಿಷ್ಯದಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು: ಓಲಾ ಸಿಇಒ

ಈ ಹಿನ್ನೆಲೆಯಲ್ಲಿ ಮೇ 15ರಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಓಲಾ ಎಲೆಕ್ಟ್ರಿಕ್‌ನ ವ್ಯವಸ್ಥಾಪಕ ನಿರ್ದೇಶಕ ಭವಿಷ್ ಅಗರ್‌ವಾಲ್‌, ‘ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಸಂಬಂಧಿಸಿದಂತೆ ಇನ್ನೂ ಕೆಲವು ಬೆಂಕಿ ಅವಘಡಗಳು ಕಾಣಿಸಿಕೊಂಡಿದ್ದು, ಇವು ಅಪರೂಪವಾಗಿ ಕಾಣಿಸಿಕೊಂಡಿರುವ ಪ್ರಕರಣಗಳಾಗಿದ್ದು, ಮುಂದಿನ ದಿನಗಳಲ್ಲಿ ಈ ಸಮಸ್ಯೆಗಳು ಇರುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಭವಿಷ್ಯದಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು: ಓಲಾ ಸಿಇಒ

ನಮ್ಮ ತಯಾರಕರೊಂದಿಗೆ ನಾವು ಪ್ರತಿ ಸಮಸ್ಯೆಯನ್ನು ವಿಶ್ಲೇಷಿಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಬದ್ಧತೆಯಾಗಿದೆ. ಇನ್ನೂ ಬದಲಾವಣೆಗಳಿದ್ದರೆ ನಾವು ಅವುಗಳನ್ನು ಸರಿಪಡಿಸುತ್ತೇವೆ. ಕೆಲವೊಮ್ಮೆ, ಬ್ಯಾಟರಿ ಅಥವಾ ಇನ್ನಾವುದೋ ಕೆಲವು ಸಣ್ಣ ದೋಷಗಳು ಕಂಡುಬರುವುದು ಆಂತರಿಕ ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗುತ್ತದೆ ಎಂದರು.

ಭವಿಷ್ಯದಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು: ಓಲಾ ಸಿಇಒ

ಸರಣಿ ಅಗ್ನಿ ಘಟನೆಗಳ ಕುರಿತು ಮಾತನಾಡಿ, "ಇವುಗಳು ಬಹಳ ಅಪರೂಪ ಮತ್ತು ಪ್ರತ್ಯೇಕವಾಗಿವೆ" ಎಂದ ಅವರ, ಆಗಸ್ಟ್ 2021 ರಲ್ಲಿ ಮಾರುಕಟ್ಟೆಗೆ ಬಂದ ಓಲಾ ಎಲೆಕ್ಟ್ರಿಕ್‌ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷದ ಮಾರ್ಚ್ ಅಂತ್ಯದಲ್ಲಿ ಪುಣೆಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲವಾದರೂ, ಇದು ದೇಶಾದ್ಯಂತ ವೈರಲ್ ಆಗಿದೆ.

ಭವಿಷ್ಯದಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು: ಓಲಾ ಸಿಇಒ

ಘಟನೆಯ ಕುರಿತು ಆ ಸಂದರ್ಭದಲ್ಲಿ ತಕ್ಷಣ ಪ್ರತಿಕ್ರಿಯಿಸಿದ್ದೆ. ವಿತರಿಸಲಾದ 50,000 ಎಸ್ 1 ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಕೇವಲ ಒಂದು ಸ್ಕೂಟರ್‌ಗೆ ಬೆಂಕಿ ಕಾಣಿಸಿಕೊಂಡಿದೆ, ಆದರೆ ಘಟನಾ ಸ್ಥಳದಿಂದ ಔಪಚಾರಿಕ ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಅದರ ನಂತರ ನಾವು ಓಲಾ ಎಲೆಕ್ಟ್ರಿಕ್ ಪರವಾಗಿ 1,441 S1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹಿಂಪಡೆದೆವು ಎಂದು ತಿಳಿಸಿದರು.

ಭವಿಷ್ಯದಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು: ಓಲಾ ಸಿಇಒ

ಓಲಾ ಎಲೆಕ್ಟ್ರಿಕ್ ರೀಕಾಲ್ ಮಾಡಿ ಸ್ಕೂಟರ್‌ಗಳನ್ನು ವ್ಯಾಪಕ ದುರಸ್ತಿ ಮತ್ತು ನೈರ್ಮಲ್ಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಎಲೆಕ್ಟ್ರಿಕ್‌ನ ಸಹ-ಸಂಸ್ಥಾಪಕ ಭವಿಶ್ ಅಗರ್ವಾಲ್ ಹೇಳಿದರು. ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗಾಹುತಿಯಾದ ಘಟನೆಯ ಬಗ್ಗೆ ಓಲಾ ಮಾತ್ರವಲ್ಲದೆ ಸರ್ಕಾರವೂ ತನಿಖೆ ನಡೆಸುತ್ತಿದೆ. ಆದರೆ ತನಿಖೆಯ ಮೂಲಕ ಈ ಎರಡು ಗುಂಪುಗಳು ವಿಭಿನ್ನ ತೀರ್ಮಾನಗಳಿಗೆ ಬಂದಿವೆ.

ಭವಿಷ್ಯದಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು: ಓಲಾ ಸಿಇಒ

ಅದೇನೆಂದರೆ, ಬೆಂಕಿ ಅವಘಡಕ್ಕೆ ಸ್ಕೂಟರ್‌ನ ಬ್ಯಾಟರಿ ಪ್ಯಾಕ್‌ಗಳು ಮತ್ತು ಬ್ಯಾಟರಿ ನಿರ್ವಹಣಾ ವ್ಯವಸ್ಥೆಯೇ ಕಾರಣ ಎಂಬ ತೀರ್ಮಾನಕ್ಕೆ ಸರ್ಕಾರದ ಪರವಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಬಂದಿದ್ದಾರೆ. ಆದರೆ ವಿಪರೀತ ಶಾಖದಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಓಲಾ ಎಲೆಕ್ಟ್ರಿಕ್ ಹೇಳಿದೆ.

ಭವಿಷ್ಯದಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು: ಓಲಾ ಸಿಇಒ

ಇದು ಈ ಎರಡು ಗುಂಪುಗಳ ಪ್ರಾಥಮಿಕ ತನಿಖೆಯ ಫಲಿತಾಂಶಗಳಾಗಿರುವುದರಿಂದ, ಅಂತಿಮ ಫಲಿತಾಂಶಗಳು ಹೇಗೆ ಹೊರಹೊಮ್ಮುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. ಓಲಾ ಎಲೆಕ್ಟ್ರಿಕ್ ತನ್ನ S1 ಮತ್ತು S1 ಪ್ರೊ ಇ-ಸ್ಕೂಟರ್‌ಗಳಿಗೆ ದಕ್ಷಿಣ ಕೊರಿಯಾದ LG ಎನರ್ಜಿ ಸೊಲ್ಯೂಷನ್ಸ್‌ನಿಂದ ಬ್ಯಾಟರಿಗಳನ್ನು ಪಡೆಯಲಾಗುತ್ತಿದೆ.

ಭವಿಷ್ಯದಲ್ಲೂ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳಬಹುದು: ಓಲಾ ಸಿಇಒ

ಬೆಂಕಿಯ ಬಗ್ಗೆ ಪ್ರತಿಕ್ರಿಯಿಸಿದ LG ಎನರ್ಜಿ ಸೊಲ್ಯೂಷನ್ಸ್ ಸಂಸ್ಥೆ, "ಭಾರತ ಸರ್ಕಾರವು ತನ್ನ ತನಿಖಾ ವರದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ ಅಥವಾ ನಮ್ಮೊಂದಿಗೆ ಹಂಚಿಕೊಂಡಿಲ್ಲ, ಆದ್ದರಿಂದ ನಾವು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ" ಎಂದು ಹೇಳಿದೆ.

Most Read Articles

Kannada
English summary
E scooter fires are rare but can happen in future says ola electric
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X