India
YouTube

ದುಬಾರಿ ಬೆಲೆಯೊಂದಿಗೆ ಮೂರು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಎಲೆಸ್ಸಿಯಮ್ ಆಟೋಮೋಟಿವ್ಸ್

ಎಲೆಸ್ಸಿಯಮ್ ಆಟೋಮೋಟಿವ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ 3 ಹೊಸ ಇವಿ ಪ್ರೀಮಿಯಂ ಸ್ಕೂಟರ್ ಮಾದರಿಗಳನ್ನು ಹೊಸ ಸ್ಕೂಟರ್ ಮಾದರಿಗಳು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ದುಬಾರಿ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ದುಬಾರಿ ಬೆಲೆಯೊಂದಿಗೆ ಮೂರು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಎಲೆಸ್ಸಿಯಮ್ ಆಟೋಮೋಟಿವ್ಸ್

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ವಾಹನ ಉತ್ಪಾದನಾ ಕಂಪನಿಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಈ ನಿಟ್ಟಿನಲ್ಲಿ ಗ್ರಾಹಕರ ಬೇಡಿಕೆ ಆಧರಿಸಿ ಕಾಸ್ಮೊ, ಕಾಮೆಟ್ ಮತ್ತು ಝಾರ್ ಹೆಸರಿನಲ್ಲಿ ಮೂರು ಹೊಸ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಬಿಡಗಡೆ ಮಾಡಿದೆ.

ದುಬಾರಿ ಬೆಲೆಯೊಂದಿಗೆ ಮೂರು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಎಲೆಸ್ಸಿಯಮ್ ಆಟೋಮೋಟಿವ್ಸ್

ಎಲೆಸ್ಸಿಯಮ್ ಆಟೋಮೋಟಿವ್ಸ್ ನಿರ್ಮಾಣದ ಕಾಸ್ಮೊ, ಕಾಮೆಟ್ ಮತ್ತು ಝಾರ್ ಇವಿ ಸ್ಕೂಟರ್ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.44 ಲಕ್ಷಕ್ಕೆ ಮಧ್ಯಮ ಕ್ರಮಾಂಕದ ಮಾದರಿಯು ರೂ. 1.92 ಲಕ್ಷ ಮತ್ತು ಹೈ ಎಂಡ್ ಮಾದರಿಯು ರೂ. 2.16 ಲಕ್ಷ ಬೆಲೆ ಹೊಂದಿದೆ.

ದುಬಾರಿ ಬೆಲೆಯೊಂದಿಗೆ ಮೂರು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಎಲೆಸ್ಸಿಯಮ್ ಆಟೋಮೋಟಿವ್ಸ್

ಹೈದ್ರಾಬಾದ್ ಮೂಲದ ಎಲೆಸ್ಸಿಯಮ್ ಆಟೋಮೋಟಿವ್ಸ್ ಕಂಪನಿಯು ಮೂಲತಃ ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ಮೆಟಾ4 ಆಟೋಮೋಟಿವ್ ಕಂಪನಿಯ ಅಂಗಸಂಸ್ಥೆಯಾಗಿದ್ದು, ಇದು ಪ್ರೀಮಿಯಂ ಇವಿ ಸ್ಕೂಟರ್ ಮಾದರಿಗಳನ್ನು ನಿರ್ಮಾಣ ಮಾಡುವಲ್ಲಿ ಮುಂಚೂಣಿ ಸಾಧಿಸುತ್ತಿದೆ. ರೆಟ್ರೋ ಶೈಲಿ ಇವಿ ಸ್ಕೂಟರ್ ಮಾದರಿಗಳೊಂದಿಗೆ ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಎಲೆಸ್ಸಿಯಮ್ ಆಟೋಮೋಟಿವ್ಸ್ ಕಂಪನಿಯು ದೇಶಾದ್ಯಂತ ಪ್ರಮುಖ ಮಲ್ಟಿ ಬ್ರಾಂಡ್ ಇವಿ ಸ್ಟೋರ್‌ಗಳೊಂದಿಗೆ ಮಾರಾಟ ಆರಂಭಿಸುತ್ತಿದೆ.

ದುಬಾರಿ ಬೆಲೆಯೊಂದಿಗೆ ಮೂರು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಎಲೆಸ್ಸಿಯಮ್ ಆಟೋಮೋಟಿವ್ಸ್

ಹೊಸ ಕಾಸ್ಮೊ, ಕಾಮೆಟ್ ಮತ್ತು ಝಾರ್ ಇವಿ ಸ್ಕೂಟರ್‌ಗಳ ಖರೀದಿಗಾಗಿ ಆಸಕ್ತ ಗ್ರಾಹಕರು ರೂ. 999 ಮುಂಗಡ ಮೊತ್ತದೊಂದಿಗೆ ಎಲೆಸ್ಸಿಯಮ್ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕಿಂಗ್ ಮಾಡಬಹುದಾಗಿದೆ.

ಎಲೆಸ್ಸಿಯಮ್ ಹೊಸ ಇವಿ ಸ್ಕೂಟರ್‌ಗಳಲ್ಲಿ ಕಾಸ್ಮೊ ಮಾದರಿಯು ಆರಂಭಿಕ ಆವೃತ್ತಿಯಾಗಿದ್ದು, ಇದರಲ್ಲಿ 30Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಮತ್ತು 2000 ವೋಲ್ಟ್ ಮೋಟಾರ್ ಅನ್ನು ಬಳಸಲಾಗಿದೆ. ಈ ಸ್ಕೂಟರ್ 65 ಕಿಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 80 ಕಿಮೀ ವ್ಯಾಪ್ತಿಯನ್ನು ಕ್ರಮಿಸಬಲ್ಲದು.

ದುಬಾರಿ ಬೆಲೆಯೊಂದಿಗೆ ಮೂರು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಎಲೆಸ್ಸಿಯಮ್ ಆಟೋಮೋಟಿವ್ಸ್

30Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಗರಿಷ್ಠ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದೆಂದು ಕಂಪನಿಯು ಮಾಹಿತಿ ನೀಡಿದ್ದು, ಇದರಲ್ಲಿ ಬ್ರೈಟ್ ಬ್ಲಾಕ್, ಚೆರ್ರಿ ರೆಡ್, ಲೆಮನ್ ಯೆಲ್ಲೋ, ವೈಟ್, ಬ್ಲೂ ಮತ್ತು ಗ್ರೇ ಸೇರಿದಂತೆ ಐದು ಬಣ್ಣಗಳ ಆಯ್ಕೆ ನೀಡಲಾಗಿದೆ.

ದುಬಾರಿ ಬೆಲೆಯೊಂದಿಗೆ ಮೂರು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಎಲೆಸ್ಸಿಯಮ್ ಆಟೋಮೋಟಿವ್ಸ್

ಮಧ್ಯಮ ಕ್ರಮಾಂಕದಲ್ಲಿರುವ ಕಾಮೆಟ್ ಇವಿ ಸ್ಕೂಟರ್ ಬಗೆಗೆ ಹೇಳುವುದಾದರೇ ಈ ಮಾದರಿಯು 3000 ವೊಲ್ಟ್ ಎಲೆಕ್ಟ್ರಿಕ್ ಮೋಟಾರ್ ಜೊತೆ 50Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌‌ನೊಂದಿಗೆ ಪ್ರತಿ ಗಂಟೆಗೆ 85 ಕಿ.ಮೀ ಟಾಪ್ ಸ್ಪೀಡ್ ಮೂಲಕ ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ದುಬಾರಿ ಬೆಲೆಯೊಂದಿಗೆ ಮೂರು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಎಲೆಸ್ಸಿಯಮ್ ಆಟೋಮೋಟಿವ್ಸ್

50Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌‌ ಅನ್ನು ಗರಿಷ್ಠ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದೆ. ಕಂಪನಿಯು ಕಾಮೆಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಟ್ಟು ಆರು ಬಣ್ಣಗಳ ಆಯ್ಕೆಗಳಲ್ಲಿ ಪರಿಚಯಿಸಿದ್ದು, ಶೈನಿ ಬ್ಲ್ಯಾಕ್, ಮ್ಯಾಟ್ ಬ್ಲ್ಯಾಕ್, ವೈನ್ ರೆಡ್, ರಾಯಲ್ ಬ್ಲೂ, ಬೀಜ್ ಮತ್ತು ವೈಟ್ ಬಣ್ಣಗಳನ್ನು ಹೊಂದಿದೆ.

ದುಬಾರಿ ಬೆಲೆಯೊಂದಿಗೆ ಮೂರು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಎಲೆಸ್ಸಿಯಮ್ ಆಟೋಮೋಟಿವ್ಸ್

ಹೈ ಎಂಡ್ ಮಾದರಿಯಾದ ಝಾರ್ ಮಾದರಿಯು ಮೊದಲೆರಡು ಮಾದರಿಗಳಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದು, ಇದರಲ್ಲಿ 4000 ವೊಲ್ಟ್ ಎಲೆಕ್ಟ್ರಿಕ್ ಮೋಟಾರ್ ಜೊತೆ 42Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌‌ ನೀಡಲಾಗಿದೆ.

ದುಬಾರಿ ಬೆಲೆಯೊಂದಿಗೆ ಮೂರು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಎಲೆಸ್ಸಿಯಮ್ ಆಟೋಮೋಟಿವ್ಸ್

ಝಾರ್ ಮಾದರಿಯಲ್ಲಿ ಎಲೆಕ್ಟ್ರಿಕ್ ಮೋಟಾರ್ ಶಕ್ತಿ ಹೆಚ್ಚಿಸಿದ್ದರೂ ಬ್ಯಾಟರಿ ಆಯ್ಕೆಯಲ್ಲಿ ಕಾಮೆಟ್ ಮಾದರಿಗಿಂತಲೂ ತುಸು ಇಳಿಕೆ ಮಾಡಲಾಗಿದೆ. ಆದರೂ ಕೂಡಾ ಝಾರ್ ಮಾದರಿಯು ಪ್ರತಿ ಗಂಟೆಗೆ 85 ಕಿ.ಮೀ ಟಾಪ್ ಸ್ಪೀಡ್ ಮೂಲಕ ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ದುಬಾರಿ ಬೆಲೆಯೊಂದಿಗೆ ಮೂರು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಎಲೆಸ್ಸಿಯಮ್ ಆಟೋಮೋಟಿವ್ಸ್

42Ah ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ ಅನ್ನು ಗರಿಷ್ಠ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾಗಿದ್ದು, ಒಟ್ಟು ಆರು ಬಣ್ಣ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಬ್ಲಾಕ್, ಮ್ಯಾಟೆ ಬ್ಲಾಕ್, ರೆಡ್, ಲೈಟ್ ಬ್ಲ್ಯೂ, ಮಿಂಟ್ ಗ್ರೀನ್ ಮತ್ತು ವೈಟ್‌ನಲ್ಲಿ ಲಭ್ಯವಿವೆ.

ದುಬಾರಿ ಬೆಲೆಯೊಂದಿಗೆ ಮೂರು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಎಲೆಸ್ಸಿಯಮ್ ಆಟೋಮೋಟಿವ್ಸ್

ಎಲ್ಲಾ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕಂಪನಿಯು ವಿವಿಧ ರೈಡಿಂಗ್ ಮೋಡ್‌ಗಳನ್ನು ನೀಡಿದ್ದು, ಇಕೋ, ನಾರ್ಮಲ್ ಮತ್ತು ಸ್ಪೋರ್ಟ್, ಕೀಲೆಸ್ ಸ್ಟಾರ್ಟ್, ರೀಜನರೇಟಿವ್ ಬ್ರೇಕಿಂಗ್, ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಎಲ್‌ಸಿಡಿ ಡಿಸ್ಪ್ಲೇ, ಜಿಯೋ-ಫೆನ್ಸಿಂಗ್ ಮತ್ತು ಓವರ್-ಸ್ಪೀಡಿಂಗ್ ಅಲರ್ಟ್ ಸೌಲಭ್ಯ ಹೊಂದಿವೆ.

ದುಬಾರಿ ಬೆಲೆಯೊಂದಿಗೆ ಮೂರು ಹೊಸ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಎಲೆಸ್ಸಿಯಮ್ ಆಟೋಮೋಟಿವ್ಸ್

ಹಾಗೆಯೇಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲೂ ರಿವರ್ಸ್ ಗೇರ್ ವೈಶಿಷ್ಟ್ಯವನ್ನು ಸಹ ನೀಡಲಾಗಿದ್ದು, ಬೆಲೆಗೆ ಅನುಗುಣವಾಗಿ ಕೆಲವು ಪ್ರೀಮಿಯಂ ಫೀಚರ್ಸ್ ಮಾದರಿಗಳಿಗೆ ಅನುಗುಣವಾಗಿ ತುಸು ಬದಲಾವಣೆ ಹೊಂದಿವೆ.

Most Read Articles

Kannada
English summary
Eveium cosmo comet czar e scooters launched in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X