ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿಶೇಷತೆಗಳು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ತನ್ನ ಡಬ್ಲ್ಯು175 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಕವಾಸಕಿ ಡಬ್ಲ್ಯು175 ಬೈಕ್ ಭಾರತದಲ್ಲಿ ಹಲವು ಬಾರಿ ರೋಡ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿಶೇಷತೆಗಳು

ಈ 2022ರ ಕವಾಸಕಿ ಡಬ್ಲ್ಯು175 ಬೈಕ್ ಸೆಪ್ಟೆಂಬರ್ 25 ರಂದು ಬಿಡುಗಡೆಯಾಗಲಿದೆ. ಅದರ ಅಧಿಕೃತ ಬಿಡುಗಡೆಗೆ ಮುಂಚಿತವಾಗಿ, ಕಂಪನಿಯು ಇತ್ತೀಚೆಗೆ ತನ್ನ ಡಬ್ಲ್ಯು175 ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿತ್ತು. ಕವಾಸಕಿ ಡಬ್ಲ್ಯು175 ರೆಟ್ರೊ ಕ್ರೂಸರ್‌ಗಳನ್ನು ಒಳಗೊಂಡಿರುವ ಕವಾಸಕಿ 'W' ಕುಟುಂಬದ ಚಿಕ್ಕ ಸದಸ್ಯ. ವಾಸ್ತವವಾಗಿ, ಬಿಡುಗಡೆಯಾದ ನಂತರ, ಡಬ್ಲ್ಯು175 ದೇಶದಲ್ಲಿ ಕವಾಸಕಿಯ ಅತ್ಯಂತ ಕೈಗೆಟುಕುವ ಮೋಟಾರ್‌ಸೈಕಲ್ ಆಗಿರುತ್ತದೆ. ಇದರ ಬೆಲೆ ಸುಮಾರು 1.5 ಲಕ್ಷ ರೂಪಾಯಿ (ಎಕ್ಸ್ ಶೋರೂಂ) ಎಂದು ನಿರೀಕಕ್ಷಿಸುತ್ತೇವೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿಶೇಷತೆಗಳು

ಜಪಾನಿನ ತಯಾರಕರು ಈ ವರ್ಷ ಭಾರತದಲ್ಲಿ ಈ ಸರಣಿಯ ಡಬ್ಲ್ಯು175 ಎಂಬ ಅತ್ಯಂತ ಚಿಕ್ಕ ಮಾದರಿಯನ್ನು ಬಿಡುಗಡೆಗೊಳಿಸಲಿದೆ ಇತ್ತೀಚೆಗೆ ಭಾರತದಲ್ಲಿ ಕವಾಸಕಿ ಡಬ್ಲ್ಯು 175 ಬೈಕ್ ಸ್ಪಾಟ್ ಟೆಸ್ಟ್ ಅನ್ನು ನಡೆಸಿತು.ಕವಾಸಕಿ ಡಬ್ಲ್ಯು 175 ಬೈಕ್ ಈಗಾಗಲೇ ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ಕೆಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿಶೇಷತೆಗಳು

ಈ ಬೈಕನ್ನು ಭಾರತಕ್ಕೆ ಸಿಕೆಡಿ ಮಾರ್ಗಗಳ ಮೂಲಕ ತರಲಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಭಾರತದಲ್ಲಿ ಬೈಕು ಜೋಡಿಸುವುದು ಕವಾಸಕಿ ಕಂಪನಿಯ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹೊಸ ಕವಾಸಕಿ ಡಬ್ಲ್ಯು175 ಬೈಕಿಗೆ ಸ್ಪರ್ಧಾತ್ಮಕವಾಗಿ ಬೆಲೆಯನ್ನು ನಿಗದಿಪಡಿಸಬಹುದು.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿಶೇಷತೆಗಳು

ಕವಾಸಕಿ ಡಬ್ಲ್ಯು 175 ಬೈಕನ್ನು ಸ್ಪರ್ಧಾತ್ಮಕವಾಗಿ ಬೆಲೆಯಲ್ಲಿ ಬಿಡುಗಡೆಗೊಳಿಸಿದರೆ ಹೆಚ್ಚಿನ ರೆಟ್ರೋ ಶೈಲಿ ಬೈಕು ಪ್ರಿಯರನ್ನು ಸೆಳಯಬಹುದು ಎಂದು ನಿರೀಕ್ಷಿಸುತ್ತೇವೆ. ಈ ಹೊಸ ಕವಾಸಕಿ ಡಬ್ಲ್ಯು 175 ಬೈಕಿನ ಬಗ್ಗೆ ಹೆಚ್ಚಿನ ವಿಶೇಷತೆಗಳು ಇಲ್ಲಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿಶೇಷತೆಗಳು

ಎಂಜಿನ್

ಹೊಸ ಕವಾಸಕಿ ಡಬ್ಲ್ಯು175 ಬೈಕಿನಲ್ಲಿ 177ಸಿಸಿ, ಏರ್-ಕೂಲ್ಡ್, ಎಸ್‌ಒಹೆಚ್‌ಸಿ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 12.9 ಬಿಹೆಚ್‍ಪಿ ಪವರ್ ಮತ್ತು 13.2 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಪವರ್ ಅಂಕಿಅಂಶಗಳು ಹೆಚ್ಚು ಪ್ರಭಾವಶಾಲಿಯಾಗಿಲ್ಲ, ಆದರೆ ಈ ಬೈಕ್ ಸಾಕಷ್ಟು ಹಗುರವಾಗಿರುತ್ತದೆ ಮತ್ತು ಆಕರ್ಷಕವಾಗಿದೆ. ಈ ಡಬ್ಲ್ಯು175 ಬೈಕ್ ಫ್ಯೂಯಲ್ ಇಂಜೆಕ್ಷನ್ ಅನ್ನು ಸೇರಿಸಬಹುದು.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿಶೇಷತೆಗಳು

ವಿನ್ಯಾಸ

ಈ ಬೈಕ್ ಅತ್ಯಂತ ಸರಳವಾದ ವಿನ್ಯಾಸವನ್ನು ಹೊಂದಿದೆ. ಈ ಬೈಕಿನಲ್ಲಿ ರೌಂಡ್ ಹೆಡ್‌ಲ್ಯಾಂಪ್, ಟಿಯರ್‌ಡ್ರಾಪ್ ಆಕಾರದ ಫ್ಯೂಯಲ್ ಟ್ಯಾಂಕ್, ವೈರ್-ಸ್ಪೋಕ್ ವ್ಹೀಲ್ಸ್ ಮತ್ತು ಪಿ-ಶೂಟರ್ ಎಕ್ಸಾಸ್ಟ್ ಹೊಂದಿದೆ. ಹೊಸ ಕವಾಸಕಿ ಡಬ್ಲ್ಯು175 ಬೈಕ್ ಫುಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಸ್ಪೀಡೋ, ಓಡೋಮೀಟರ್ ಮತ್ತು ಟ್ರಿಪ್‌ಮೀಟರ್ ಜೊತೆಗೆ ಟೆಲ್-ಟೇಲ್ ಲ್ಯಾಂಪ್ ಅನ್ನು ಹೊಂದಿವೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿಶೇಷತೆಗಳು

ಈ ಬೈಕಿನಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಡ್ಯುಯಲ್ ರಿಯರ್ ಶಾಕ್ ಅಬ್ಸಾರ್ಬರ್ ಗಳನ್ನು ಹೊಂದಿರುತ್ತದೆ, ಈ ಹೊಸ ಕವಾಸಕಿ ಡಬ್ಲ್ಯು175 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಯಾವುದೇ ನೇರ ಪ್ರತಿಸ್ಪರ್ಧಿಗಳನ್ನು ಹೊಂದಿರುವುದಿಲ್ಲ. ಏಕೆಂದರೆ ಭಾರತದಲ್ಲಿ ಮಾರಾಟವಾಗುವ ರೆಟ್ರೊ-ಶೈಲಿಯ ಬೈಕ್‌ಗಳು 250 ಸಿಸಿಗಿಂತ ಹೆಚ್ಚಾಗಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿಶೇಷತೆಗಳು

ಪ್ರತಿಸ್ಪರ್ಧಿಗಳು

ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ರಾಯಲ್ ಎನ್‌ಫೀಲ್ಡ್ ಹಂಟರ್ 350, ಯಮಹಾ ಎಫ್‌ಜೆಡ್-ಎಕ್ಸ್ ಮತ್ತು ಟಿವಿಎಸ್ ರೋನಿನ್ 225 ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಕವಾಸಕಿ ಕಂಪನಿಯು 'ಡಬ್ಲ್ಯು' ಸರಣಿಯ ಸುಂದರವಾದ ರೆಟ್ರೊ-ಶೈಲಿಯ ಬೈಕುಗಳನ್ನು ಒಳಗೊಂಡಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿಶೇಷತೆಗಳು

ಇದನ್ನು 2020 ರಲ್ಲಿ ಭಾರತದಲ್ಲಿ ಹಲವಾರು ಬಾರಿ ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿತ್ತು, ಆದರೆ ಕೋವಿಡ್ -19 ಸಾಂಕ್ರಾಮಿಕ ರೋಗ ಹರಡುವಿಕೆಯಿಂದಾಗಿ ಯೋಜನೆಗಳು ವಿಳಂಬವಾಗಿದ್ದವು. ಕವಾಸಕಿ ಪ್ರಸ್ತುತ ಭಾರತದಲ್ಲಿ ಡ್ಯುಯಲ್-ಸಿಲಿಂಡರ್ ಎಂಜಿನ್‌ಗಳಿಗೆ ಹೆಸರುವಾಸಿಯಾಗಿದ್ದರೂ, ಬಜಾಜ್ ಜೊತೆಗೆ ಭಾರತದಲ್ಲಿ ಬಾಕ್ಸರ್‌ನಂತಹ ಬಜೆಟ್ ಬೈಕ್‌ಗಳನ್ನು ಮಾರಾಟ ಮಾಡಿರುವ ಇತಿಹಾಸವನ್ನು ಹೊಂದಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿಶೇಷತೆಗಳು

ಇಂಡೋನೇಷ್ಯಾದಂತಹ ದೇಶಗಳಲ್ಲಿ ಇದು ಲಭ್ಯವಿರುವುದರಿಂದ, ಕವಾಸಕಿಯು ಅಲ್ಲಿ ಮಾಡಿದ ಅದೇ ತಂತ್ರಗಳನ್ನು ಇಲ್ಲಿಯೂ ಬಳಸಲಿದೆ ಎಂದು ಹೇಳಲಾಗುತ್ತಿದೆ. ಕವಾಸಕಿ ಡಬ್ಲ್ಯು175 ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಟಿಆರ್, ಟಿಆರ್ಎಸ್ಇ ಮತ್ತು ಕೆಫೆ ರೇಸರ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಮೊದಲ ಟಿಆರ್ ಆವೃತ್ತಿಯು ಸ್ಕ್ರ್ಯಾಂಬ್ಲರ್ ಆಗಿದ್ದರೆ, ಟಿಆರ್‌ಎಸ್‌ಇ ರೋಡ್‌ಸ್ಟರ್ ಶೈಲಿಯನ್ನು ಅಳವಡಿಸಿಕೊಂಡಿದೆ. ಇನ್ನು ಕೆಫೆ ರೇಸರ್ ನಿಖರವಾಗಿ ಹೆಸರೇ ಸೂಚಿಸುವಂತೆ ಇದು ರೇಸಿಂಗ್ ಮಾದರಿ ಇದಾಗಿದೆ,

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿಶೇಷತೆಗಳು

ಇನ್ನು ಕವಾಸಕಿ, ಇತ್ತೀಚಿಗೆ ತಾನು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿ ಸುದ್ದಿಯಲ್ಲಿದೆ. ಜಪಾನ್ ಮೂಲದ ಈ ಕಂಪನಿಯು 2035ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ಆಧಾರಿತ ವಾಹನಗಳನ್ನು ಹೊಂದಲು ಯೋಜಿಸಿದೆ. ಇದರ ಭಾಗವಾಗಿ, ಕವಾಸಕಿ ಇತ್ತೀಚೆಗೆ ಝಡ್250 ಪ್ರೀಮಿಯಂ ಮಾದರಿಯನ್ನು ಹೋಲುವ ಸಂಪೂರ್ಣ ಎಲೆಕ್ಟ್ರಿಕ್ ಮೂಲಮಾದರಿಯನ್ನು ಮತ್ತು ನಿಂಜಾ 250 ಆವೃತ್ತಿಯನ್ನು ಹೋಲುವ ಹೈಬ್ರಿಡ್ ಮಾದರಿಯನ್ನು ಪ್ರದರ್ಶಿಸಿದೆ.

ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೆ ಸಜ್ಜಾದ ಹೊಸ ಕವಾಸಕಿ ಡಬ್ಲ್ಯು175 ಬೈಕ್ ವಿಶೇಷತೆಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಹೊಸ ಕವಾಸಕಿ ಡಬ್ಲ್ಯು175 ಬೈಕನ್ನು ಎಕ್ಸ್ ಶೋರೂಂ ಪ್ರಕಾರ ರೂ.2 ಲಕ್ಷಗಿಂತ ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇದು ಜಪಾನಿನ ತಯಾರಕರಿಂದ ಅತ್ಯಂತ ಕೈಗೆಟುಕುವ ಮೋಟಾರ್‌ಸೈಕಲ್ ಆಗಲಿದೆ ಭಾರತ-ಸ್ಪೆಕ್ ಆವೃತ್ತಿಯು ಎಫ್ಐ ತಂತ್ರಜ್ಞಾನವನ್ನು ಹೊಂದಿರಲಿದೆ. ಇದು ಬಾಕ್ಸ್ ಮಾದರಿಯ ಸ್ವಿಂಗರ್ಮ್‌ನೊಂದಿಗೆ ಸೆಮಿ ಡಬಲ್-ಕ್ರೇಡಲ್ ಚಾಸಿಸ್‌ ಆಗಿರುತ್ತದೆ.

More from DriveSpark

Article Published On: Sunday, September 18, 2022, 13:00 [IST]
English summary
Find here some top highlights of new kawasaki w175 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+