ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

ಎಲೆಕ್ಟ್ರಿಕ್ ವಾಹನಗಳಲ್ಲಿನ ಬ್ಯಾಟರಿ ಸ್ಪೋಟ ಹಾಗೂ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಬೆಂಕಿ ಅವಘಡಗಳ ಬಗ್ಗೆ ತನಿಖೆ ನಡೆಸುವವರೆಗೆ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡದಂತೆ ಇವಿ ವಾಹನ ತಯಾರಕರಿಗೆ ಭಾರತ ಸರ್ಕಾರ ಸೂಚಿಸಿದೆ ಎಂದು ಹೇಳಲಾಗುತ್ತಿದೆ.

ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

ಸ್ಪಷ್ಟೀಕರಣ - ಈ ನಡುವೆ ಹರಿದಾಡುತ್ತಿರುವ ಸುದ್ದಿಯ ಕುರಿತು ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಪ್ರತಿಕ್ರಿಯಿಸಿದ್ದು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಯ ನಿಲುಗಡೆಗೆ ಸಂಬಂಧಿಸಿದಂತೆ ಯಾವುದೇ ಸೂಚನೆಯನ್ನು OEM ಗಳಿಗೆ ನೀಡಲಾಗಿಲ್ಲ ಎಂದು ಟ್ವೀಟ್ ಮಾಡಿದೆ.

ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

ಆದರೆ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಏಪ್ರಿಲ್ 27 ರಂದು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರೊಂದಿಗೆ ಸಭೆ ಕರೆದು, ಇವಿ ಸಂಬಂಧಿತ ಎಲ್ಲಾ ಬೆಂಕಿ ಘಟನೆಗಳನ್ನು ತನಿಖೆ ಮಾಡುವವರೆಗೆ ಹೊಸ ಲಾಂಚ್‌ಗಳನ್ನು ನಿಲ್ಲಿಸುವಂತೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಿಗೆ ತಿಳಿಸಿದೆ ಎಂದು ವರದಿ ಮಾಡಿದೆ.

ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

ಇತ್ತೀಚಿನ ದಿನಗಳಲ್ಲಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾದ ಘಟನೆಗಳ ಹೆಚ್ಚಳವನ್ನು ಪರಿಹರಿಸಲು ಸಭೆಯಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಎಕನಾಮಿಕ್ ಟೈಮ್ಸ್ ಜೊತೆಗೆ ಮಾತನಾಡಿದ ಅಧಿಕಾರಿಯೊಬ್ಬರು ತಿಳಿಸಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರನ್ನು ಹೊಸ ವಾಹನಗಳನ್ನು ಪ್ರಾರಂಭಿಸದಂತೆ ಸರ್ಕಾರವು ಮೌಖಿಕವಾಗಿ ನಿರ್ಬಂಧಿಸಿದೆ ಎಂದು ತಿಳಿಸಿದರು.

ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

ಬೆಂಕಿ ಕಾಣಿಸಿಕೊಳ್ಳುವ ಹಿಂದಿನ ಕಾರಣದ ಬಗ್ಗೆ ಸ್ಪಷ್ಟತೆ ಬರುವವರೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅಗತ್ಯವಿರುವ ಕ್ರಮಗಳನ್ನು ದೃಢಪಡಿಸುವವರೆಗೆ, ಯಾವುದೇ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವು ಮಾರುಕಟ್ಟೆಯನ್ನು ಪ್ರವೇಶಿಸುವುದಿಲ್ಲ ಎಂದು ಸರ್ಕಾರ ದ್ವಿಚಕ್ರ ವಾಹನ ತಯಾರಕರಿಗೆ ತಿಳಿಸಿದೆ.

ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

ಇತ್ತೀಚಿನ ದಿನಗಳಲ್ಲಿ ಬೆಂಕಿಗೆ ಆಹುತಿಯಾದ ದ್ವಿಚಕ್ರ ವಾಹನ ಇವಿ ತಯಾರಕರಿಗೆ ಸ್ವಯಂಪ್ರೇರಿತವಾಗಿ ಅದೇ ಬ್ಯಾಚ್‌ನ ಎಲ್ಲಾ ವಾಹನಗಳನ್ನು ವಾಪಸ್ ಕರೆಸಿಕೊಳ್ಳುವಂತೆ ಆದೇಶಿಸಲಾಗಿದೆ. ಹೆಚ್ಚಿನ ತಯಾರಕರು ಈಗಾಗಲೇ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

ಕಳೆದ ವಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಇವಿ ದ್ವಿಚಕ್ರ ವಾಹನ ತಯಾರಕರು ತಮ್ಮ ಇ-ಸ್ಕೂಟರ್‌ಗಳನ್ನು ಹಿಂತೆಗೆದುಕೊಳ್ಳುವಂತೆ ಕರೆ ನೀಡಿದ್ದರು. ಸಚಿವರ ಕರೆಯನ್ನು ಅನುಸರಿಸಿ, ಓಲಾ ಎಲೆಕ್ಟ್ರಿಕ್, ಪ್ಯೂರ್ ಇವಿ ಮತ್ತು ಒಕಿನಾವಾ ಆಟೋಟೆಕ್‌ನಂತಹ ತಯಾರಕರು 7,000ಕ್ಕೂ ಹೆಚ್ಚು ವಾಹನಗಳಿಗೆ ವಾಪಸಾತಿಯನ್ನು ನೀಡಿದ್ದರು.

ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕರೆದ ಸಭೆಯಲ್ಲಿ ವಾಹನ ತಯಾರಕರಿಗೆ ವಾಪಸಾತಿಗೆ ಸಚಿವರ ಕರೆಯನ್ನು ಮತ್ತೊಮ್ಮೆ ರವಾನಿಸಲಾಯಿತು. ಮೋಟಾರು ವಾಹನ ಕಾಯ್ದೆಯ ಅಡಿಯಲ್ಲಿ ನಿಬಂಧನೆಗಳ ಪ್ರಕಾರ ತಪ್ಪು ಮಾಡಿದ ತಯಾರಕರ ವಾಹನಗಳನ್ನು ಬಲವಂತವಾಗಿ ವಾಪಸ್ ಕರೆಸಿಕೊಳ್ಳುವ ಮತ್ತು ದಂಡ ವಿಧಿಸುವ ಅಧಿಕಾರವನ್ನು ಹೊಂದಿದೆ ಎಂದು ಸರ್ಕಾರವು ದ್ವಿಚಕ್ರ ವಾಹನ ಇವಿ ತಯಾರಕರಿಗೆ ಎಚ್ಚರಿಕೆ ನೀಡಿದೆ.

ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

ಎಕನಾಮಿಕ್ ಟೈಮ್ಸ್‌ನೊಂದಿಗೆ ಮಾತನಾಡಿದ ಅಧಿಕಾರಿ, ಸಭೆಯಲ್ಲಿ ಹಾಜರಿದ್ದ ಇತರ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರ ಕೆಲವು ವಾಹನಗಳು ಬೆಂಕಿಗೆ ಘಟನೆಗಳಲ್ಲಿ ಭಾಗಿಯಾಗಿಲ್ಲ ಎಂಬ ಮಾಹಿತಿಯನ್ನು ಸಹ ನೀಡಿದರು ಎಂದು ಅಧಿಕಾರಿಯು ಎಕನಾಮಿಕ್ ಟೈಮ್ಸ್‌ಗೆ ತಿಳಿಸಿದರು.

ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

"ಬೆಂಕಿ ಕಾಣಿಸಿಕೊಳ್ಳದ ಇವಿ ದ್ವಿಚಕ್ರ ವಾಹನಗಳ ತಯಾರಕರು ಕೂಡ ತಮ್ಮ ಮಾರಾಟವಾದ ವಾಹನಗಳ ಮೇಲೆ ಮತ್ತೊಮ್ಮೆ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಚ್ಚರಿಸಿದ್ದಾರೆ. ಚಾರ್ಜ್ ಸುರಕ್ಷತೆ ಮತ್ತು ಬೆಂಕಿಯನ್ನು ಹೇಗೆ ತಡೆಯುವುದು ಎಂಬುದರ ಕುರಿತು ಗ್ರಾಹಕರಿಗೆ ತಿಳಿಸಲು ಸಚಿವಾಲಯವು EV ತಯಾರಕರನ್ನು ಕೇಳಿದೆ.

ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

ಕಳೆದ ಕೆಲವು ವಾರಗಳಿಂದ ವಿದ್ಯುತ್ ದ್ವಿಚಕ್ರ ವಾಹನಗಳಿಂದ ಉಂಟಾದ ಬೆಂಕಿಯ ಅಬ್ಬರವು ಕೆಲವು ಘಟನೆಗಳಲ್ಲಿ ಗಾಯಗಳಿಗೆ ಕಾರಣವಾದರೆ ಇನ್ನೂ ಕೆಲವು ಘಟನೆಗಳಲ್ಲಿ ದುರದೃಷ್ಟವಶಾತ್ ಒಬ್ಬರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ EV ಬೆಂಕಿ ಘಟನೆಗಳ ವಿರುದ್ಧದ ಕೂಗು ಹೆಚ್ಚುತ್ತಿದ್ದು, ಸರ್ಕಾರವು ಅಂತಿಮವಾಗಿ ಆತಂಕಕಾರಿ ವಿದ್ಯಮಾನವನ್ನು ಎದುರಿಸಲು ನಿರ್ಧರಿಸಿದೆ.

ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆಗಳಿಗೆ ವಿರಾಮ ನೀಡುವ ಮೂಲಕ, ಸರ್ಕಾರವು ತನ್ನ ಸಾರ್ವಜನಿಕರ ಆರೋಗ್ಯದ ಕುರಿತು ತನ್ನ ಜವಾಬ್ದಾರಿಯನ್ನು ತೋರಿಸಿದೆ. ಈ ಇವಿ ತಯಾರಕರು ಅಸುರಕ್ಷತೆಯ ಮೇಲೆ ಲಾಭವನ್ನು ಮುಂದುವರಿಸುವುದು ತಪ್ಪು ಎಂದು ಎಚ್ಚರಿಕೆ ನೀಡಿದೆ.

ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

ಆಶಾದಾಯಕವಾಗಿ ಭಾರತ ಸರ್ಕಾರದ ಈ ಬಲವಾದ ಹೆಜ್ಜೆಯು ಅಂತಿಮವಾಗಿ ಭಾರತದಲ್ಲಿನ EV ತಯಾರಕರು ತಮ್ಮ ಗ್ರಾಹಕರನ್ನು ನಂತರದ ಆಲೋಚನೆಯಂತೆ ಪರಿಗಣಿಸುವ ಬದಲು ಅವರ ಸುರಕ್ಷತೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ಖಚಿತಪಡಿಸುತ್ತದೆ.

ಬೆಂಕಿ ಅವಘಡಗಳಿಗೆ ಕಾರಣ ಕೇಳಿ ಇವಿ ಸ್ಕೂಟರ್‌ಗಳ ಬಿಡುಗಡೆ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ!

ಈ ಬೆಂಕಿ ಅವಘಡಗಳು ಈಗಾಗಲೇ EV ಗಳ ಖ್ಯಾತಿಗೆ ಸರಿಪಡಿಸಲಾಗದ ಹಾನಿಯನ್ನುಂಟುಮಾಡಿದೆ. ರಸ್ತೆಯಲ್ಲಿರುವ ಪ್ರತಿಯೊಬ್ಬರಿಗೂ ವಾಹನಗಳನ್ನು ಸುರಕ್ಷಿತವಾಗಿಸಲು ಪ್ರಯತ್ನಿಸುತ್ತಿರುವ ಇತ್ತೀಚಿನ ದಿನಮಾನಗಳಲ್ಲಿ ವಾಹನಗಳಿಂದಲೇ ಜೀವಹಾನಿಯಾಗಿರುವುದು ಜನರಿಗೆ ಅಸಹ್ಯಕರವಾದ ಭಾವನೆಯನ್ನು ಮೂಡಿಸಿದೆ.

{document1}

Most Read Articles

Kannada
English summary
Government stops electric two wheeler launches
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X