ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ರೂ.4 ಲಕ್ಷ ಕಡಿತ: ಗ್ರಾಹಕರಿಗೆ ಸುವರ್ಣವಕಾಶ

ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತನ್ನ 2022ರ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್ ಹಾರ್ಲೆ-ಡೇವಿಡ್ಸನ್ ತನ್ನದೇ ಆದ ಮೋಡಿ ಹೊಂದಿದೆ. ಇದು ಇಂದಿಗೂ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಬ್ರ್ಯಾಂಡ್ ಆಗಿದೆ. ಹಾರ್ಲೆ-ಡೇವಿಡ್ಸನ್ ಹೆಚ್ಚು ಕ್ರೂಸರ್ ಬೈಕ್ ಗಳಿಗೆ ಜನಪ್ರಿಯತೆಯನ್ನು ಗಳಿಸಿದೆ.

ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ರೂ.4 ಲಕ್ಷ ಕಡಿತ: ಗ್ರಾಹಕರಿಗೆ ಸುವರ್ಣವಕಾಶ

ಅಡ್ವೆಂಚರ್ ಬೈಕ್ ಗಳ ಜನಪ್ರಿಯತೆ ಏರುತ್ತಿರುವುದರಿಂದ , ಹಾರ್ಲೆ-ಡೇವಿಡ್ಸನ್ ಪ್ಯಾನ್ ಅಮೇರಿಕಾವನ್ನು ಪ್ರಾರಂಭಿಸಿತು. ಇದುವರೆಗೆ ದೊಡ್ಡದಾದ, ಪವರ್ ಫುಲ್, ವಿ-ಟ್ವಿನ್ ಕ್ರೂಸರ್‌ಗಳನ್ನು ಮಾತ್ರ ತಯಾರಿಸುತ್ತಿರುವ ಹಾರ್ಲೆಯ ಮೊದಲ ಅಡ್ವೆಂಚರ್ ಇದಾಗಿದೆ. ಇದೀಗ ಹಾರ್ಲೆ-ಡೇವಿಡ್ಸನ್ ಕಂಪನಿಯು ಪ್ಯಾನ್ ಅಮೇರಿಕಾ ಬೈಕಿನ ಬೆಲೆಯನ್ನು ರೂ.4 ಲಕ್ಷ ಕಡಿತಗೊಳಿಸಿದೆ. ಪರಿಣಾಮಕಾರಿಯಾಗಿ, ಪ್ಯಾನ್ ಅಮೇರಿಕಾ ಸ್ಟ್ಯಾಂಡರ್ಡ್ ವೆರಿಯೆಂಟ್ ಬೆಲೆಯು ರೂ.12.91 ಲಕ್ಷ ಮತ್ತು ಸ್ಪೆಷಲ್ ವೆರಿಯೆಂಟ್ ಬೆಲೆಯು ರೂ.17.11 ಲಕ್ಷವಾಗಿದೆ.

ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ರೂ.4 ಲಕ್ಷ ಕಡಿತ: ಗ್ರಾಹಕರಿಗೆ ಸುವರ್ಣವಕಾಶ

ಹಾರ್ಲೆ-ಡೇವಿಡ್‌ಸನ್ ವಿಶ್ವದ ಅತ್ಯಂತ ಪ್ರಸಿದ್ಧವಾದ ಅಮೇರಿಕನ್ ಮೋಟಾರ್‌ಸೈಕಲ್ ಕಂಪನಿಯಾಗಿದೆ. ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್. ಮೊದಲ ಬ್ಯಾಚ್‌ನಲ್ಲಿ ಇದ್ದ ಎಲ್ಲಾ ಯುನಿಟ್ ಗಳು ಕೂಡ ಮಾರಾಟವಾಗಿದೆ. ಆದರೆ ಕಂಪನಿಯು ಮೊದಲ ಬ್ಯಾಚ್‌ನಲ್ಲಿ ಎಷ್ಟು ಯುನಿಟ್ ಗಳಿತ್ತು ಎಂಬ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ,

ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ರೂ.4 ಲಕ್ಷ ಕಡಿತ: ಗ್ರಾಹಕರಿಗೆ ಸುವರ್ಣವಕಾಶ

ಭಾರತದಲ್ಲಿ ಐಷಾರಾಮಿ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಕಂಪನಿಯು ಹೇಳಿದೆ. ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್ ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಯು ಬಿಡುಗಡೆಗೊಳಿಸಿದ ಮೊದಲ ಅಡ್ವೆಂಚರ್ ಬೈಕ್ ಆಗಿದೆ.

ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ರೂ.4 ಲಕ್ಷ ಕಡಿತ: ಗ್ರಾಹಕರಿಗೆ ಸುವರ್ಣವಕಾಶ

ಭಾರತದಲ್ಲಿ ಈ ಜನಪ್ರಿಯ ಅಡ್ವೆಂಚರ್-ಟೂರರ್ ಬೈಕ್ ಅನ್ನು ಮೊದಲ ವಿತರಣೆಯನ್ನು ಪಡೆದವರು ಲೇಡೀಸ್ ಆಫ್ ಹಾರ್ಲೆಯ ಸಹಾಯಕ ನಿರ್ದೇಶಕಿ ಅನುಶ್ರೀಯ ಗುಲಾಟಿ ಅವರು ಅಗಿದ್ದಾರೆ. ಈ ಹೊಸ ಬೈಕಿನ ಎರಡು ಬೈಕಿನಲ್ಲಿ ವಿಭಿನ್ನವಾಗಿ ಫೀಚರ್ ಗಳನ್ನು ನೀಡಲಾಗಿದೆ. ಆದರೆ ಕೆಲವು ಫೀಚರ್ ಗಳು ಎರಡು ರೂಪಾಂತರಗಳಲ್ಲಿ ಒಂದೇ ರೀತಿಯಲ್ಲಿ ನೀಡಿದ್ದಾರೆ.

ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ರೂ.4 ಲಕ್ಷ ಕಡಿತ: ಗ್ರಾಹಕರಿಗೆ ಸುವರ್ಣವಕಾಶ

ಇದು ಫುಲ್-ಎಲ್ಇಡಿ ಲೈಟಿಂಗ್, ಬ್ಲೂಟೂತ್-ಕನೆಕ್ಟಿವಿಟಿ ಹೊಂದಿರುವ 6.8-ಇಂಚಿನ ಕಲರ್ ಡಿಸ್ ಪ್ಲೇ ಮತ್ತು ಯುಎಸ್‌ಬಿ ಸಿ-ಟೈಪ್ ಔಟ್ ಲೈಟ್ ಅನ್ನು ಕೂಡ ಒಳಗೊಂಡಿದೆ. ಇನ್ನು ಈ Pan America 1250 ಬೈಕ್ ಸಂಪೂರ್ಣವಾಗಿ ಹೊಸ ಬೈಕ್ ಆಗಿದ್ದು, ಇದನ್ನು ಸಂಪೂರ್ಣವಾಗಿ ಹೊಸದಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಇದರ ವಿನ್ಯಾಸದ ಬಗ್ಗೆ ಹೇಳುವುದಾದರೆ, ಅಡ್ವೆಂಚರ್ ಪ್ರಿಯರನ್ನು ಸೆಳೆಯುವಂತೆ ವಿನ್ಯಾಸದಿಂದ ಕೂಡಿದೆ.

ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ರೂ.4 ಲಕ್ಷ ಕಡಿತ: ಗ್ರಾಹಕರಿಗೆ ಸುವರ್ಣವಕಾಶ

ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ ಐದು ರೈಡಿಂಗ್ ಮೋಡ್ ಗಳನ್ನು ಪಡೆಯುತ್ತದೆ. ಇವುಗಳು ನಾಲ್ಕು ಪ್ರಿ-ಪ್ರೊಗಾಮ್ ಮಾಡಲಾದ ರೋಡ್, ಸ್ಪೋರ್ಟ್, ರೈನ್, ಆಫ್-ರೋಡ್ ಮತ್ತು ಒಂದು ಕಸ್ಟಮ್ ಮೋಡ್ ಅನ್ನು ರೈಡರ್ ತನ್ನ ಸ್ವಂತ ಆದ್ಯತೆಯ ಪ್ರಕಾರ ಹೊಂದಿಸಬಹುದು.

ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ರೂ.4 ಲಕ್ಷ ಕಡಿತ: ಗ್ರಾಹಕರಿಗೆ ಸುವರ್ಣವಕಾಶ

ಈ ಬೈಕಿನ ಟಾಪ್-ಸ್ಪೆಕ್ ಆದ ಸ್ಪೆಷಲ್ ರೂಪಾಂತರದಲ್ಲಿ ಕಸ್ಟಮೈಸ್ ಮಾಡಬಹುದಾದ ಎರಡು ಹೆಚ್ಚುವರಿ ಮೋಡ್‌ಗಳನ್ನು ಪಡೆಯುತ್ತದೆ. ಇನ್ನು ಮೆಕ್ಯಾನಿಕಲ್‌ಗಳ ವಿಷಯದಲ್ಲಿ ಎರಡು ರೂಪಾಂತರಗಳಲ್ಲಿ ಒಂದೇ ರೀತಿಯ 1,252 ಸಿಸಿ, ರೆವಲ್ಯೂಷನ್ ಮ್ಯಾಕ್ಸ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ರೂ.4 ಲಕ್ಷ ಕಡಿತ: ಗ್ರಾಹಕರಿಗೆ ಸುವರ್ಣವಕಾಶ

ಈ ಎಂಜಿನ್ 9,000 ಆರ್‌ಪಿಎಂನಲ್ಲಿ 150 ಬಿಹೆಚ್‌ಪಿ ಪವರ್ ಮತ್ತು 6,750 ಆರ್‌ಪಿಎಂನಲ್ಲಿ 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ನೊಂದಿಗೆ ಅನ್ನು ಜೋಡಿಸಿದೆ.

ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ರೂ.4 ಲಕ್ಷ ಕಡಿತ: ಗ್ರಾಹಕರಿಗೆ ಸುವರ್ಣವಕಾಶ

ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಸ್ಪೆಷಲ್ ರೂಪಾಂತರವು ಲೋಡ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಸ್ಟ್ಯಾಂಡರ್ಡ್ ಸೆಂಟರ್ ಸ್ಟ್ಯಾಂಡ್, ಹೊಂದಾಣಿಕೆ ಮಾಡಬಹುದಾದ ರಿಯರ್ ಬ್ರೇಕ್ ಪೆಡಲ್, ಅಲ್ಯೂಮಿನಿಯಂ ಸ್ಕಿಡ್-ಪ್ಲೇಟ್, ಸ್ಟೀರಿಂಗ್ ಡ್ಯಾಂಪರ್ ಮತ್ತು ಅಡಾಪ್ಟಿವ್ ರೈಡ್ ಎಂಬ ಫೀಚರ್ ಗಳನ್ನು ಹೊಂದಿವೆ.

ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ರೂ.4 ಲಕ್ಷ ಕಡಿತ: ಗ್ರಾಹಕರಿಗೆ ಸುವರ್ಣವಕಾಶ

ಇನ್ನು ಈ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿನಲ್ಲಿ ಸೆಮಿ-ಆಕ್ಟಿವ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. Pan America 1250 ಮಾದರಿಯು ಹಾರ್ಲೆ-ಡೇವಿಡ್ಸನ್‌ನಿಂದ ಬಂದ ಮೊದಲ ಅಡ್ವೆಂಚರ್ ಬೈಕ್ ಆಗಿದೆ. ಈ ಬೈಕ್ ಅಗ್ರೇಸಿವ್ ಮತ್ತು ರಗಡ್ ಲುಕ್ ಅನ್ನು ಹೊಂದಿರುವ ಫ್ಯೂಚರಿಸ್ಟಿಕ್ ಫ್ರಂಟ್ ಎಂಡ್ ಅನ್ನು ಹೊಂದಿದೆ. ಐಷಾರಾಮಿ ಅಡ್ವೆಂಚರ್ ಬೈಕ್ ಪ್ರಿಯರಿ ಇದುಗೆ ಉತ್ತಮ ಆಯ್ಕೆಯಾಗಿದೆ.

ಈ ಜನಪ್ರಿಯ ಹಾರ್ಲೆ ಡೇವಿಡ್ಸನ್ ಬೈಕ್ ಬೆಲೆ ರೂ.4 ಲಕ್ಷ ಕಡಿತ: ಗ್ರಾಹಕರಿಗೆ ಸುವರ್ಣವಕಾಶ

ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತನ್ನ ಹೊಸ ನೈಟ್‌ಸ್ಟರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಸ್ಪೋರ್ಟ್‌ಸ್ಟರ್ ಎಸ್‌ಗಿಂತ ಕೆಳಗಿರುವ ಹಾರ್ಲೆ-ಡೇವಿಡ್ಸನ್ ನೈಟ್‌ಸ್ಟರ್ ಬ್ರ್ಯಾಂಡ್‌ನ "ಸ್ಪೋರ್ಟ್" ವರ್ಗದ ಅಡಿಯಲ್ಲಿ ಬರುತ್ತದೆ ಎಂದು ವರ್ಗೀಕರಿಸುತ್ತದೆ. ಇದು ನೈಟ್‌ಸ್ಟರ್ ಅನ್ನು ಸಿಬಿಯು ಆಗಿ ಆಮದು ಮಾಡಿಕೊಳ್ಳಲಾಗುತ್ತಿದೆ. ಹೆಚ್ಚುವರಿಯಾಗಿ, ಈಗ ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ವ್ಯಾಪಾರ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿರುವ ಹೀರೋ ಮೋಟೊಕಾರ್ಪ್ ಅದರ ಹಾರ್ಲೆ ಡೇವಿಡ್ಸನ್ ಬ್ಯುಸಿನೆಸ್ ಯೂನಿಟ್‌ಗೆ ಹೊಸ ಬ್ರ್ಯಾಂಡ್ ಮ್ಯಾನೇಜರ್ ಅನ್ನು ನೇಮಕ ಮಾಡುವುದಾಗಿ ಘೋಷಿಸಿತು,

More from DriveSpark

Article Published On: Tuesday, September 13, 2022, 18:52 [IST]
English summary
Harley davidson pan america motorcycle gets rs 4 lakh a price cut details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+