ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Harley Davidson Pan America 1250 ಬೈಕ್

ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಹಾರ್ಲೆ ಡೇವಿಡ್ಸನ್ ತನ್ನ 2022ರ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕ್ ಅನ್ನು ಅನಾವರಣಗೊಳಿಸಿದೆ. ಈ 2022ರ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 (Harley Davidson Pan America 1250) ಅಡ್ವೆಂಚರ್ ಬೈಕ್ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Harley Davidson Pan America 1250 ಬೈಕ್

2022ರ ಹಾರ್ಲೆ-ಡೇವಿಡ್ಸನ್ ಪ್ಯಾನ್ ಅಮೇರಿಕಾ 1250 ಮತ್ತು ಪ್ಯಾನ್ ಅಮೇರಿಕಾ 1250 ಸ್ಪೆಷಲ್ ಎಡಿಷನ್ TFT ಡಿಸ್ ಪ್ಲೇಯಲ್ಲಿ ಸುಧಾರಿತ ಗೋಚರತೆಯನ್ನು ಹೊಂದಿದೆ, ಇದು ಸವಾರರಿಗೆ ಡಿಸ್ ಪ್ಲೇಯ ಓದುವಿಕೆಯನ್ನು ಉತ್ತಮಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಪ್ಯಾನ್ ಅಮೇರಿಕಾ 1250 ಬೈಕ್ 10 ಸೆಕೆಂಡುಗಳಿಂದ 3-5 ನಿಮಿಷಗಳವರೆಗೆ ವಿಸ್ತರಿಸಿದ ವೆಹಿಕಲ್ ಹಿಲ್ ಹೋಲ್ಡ್ ಕಂಟ್ರೋಲ್ ಸಕ್ರಿಯ ಸಮಯವನ್ನು ಪಡೆಯುತ್ತದೆ.ಪ್ಯಾನ್ ಅಮೇರಿಕಾ 1250 ಸ್ಪೆಷಲ್‌ಗಾಗಿ ಹೊಸ ಬಣ್ಣದ ಆಯ್ಕೆಯನ್ನು ಪರಿಚಯಿಸಲಾಗಿದೆ, ಇದನ್ನು ಫಾಸ್ಟ್‌ಬ್ಯಾಕ್ ಬ್ಲೂ/ವೈಟ್ ಸ್ಯಾಂಡ್ ಎಂದು ಕರೆಯಲಾಗುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Harley Davidson Pan America 1250 ಬೈಕ್

ಭಾರತದಲ್ಲಿ ಪ್ಯಾನ್ ಅಮೇರಿಕಾ 1250 ಅಡ್ವೆಂಚರ್ ಬೈಕ್ ಅನ್ನು ಆಗಸ್ಟ್ 2021 ರಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಈಗ ಹಾರ್ಲೆ-ಡೇವಿಡ್‌ಸನ್ ಬೈಕ್‌ಗೆ ಸೂಕ್ಷ್ಮವಾದ ಟ್ವೀಕ್‌ಗಳನ್ನು ಘೋಷಿಸಿದೆ, ಜೊತೆಗೆ ಉನ್ನತ-ಸ್ಪೆಕ್ H-D ಪ್ಯಾನ್ ಅಮೇರಿಕಾ 1250 ಸ್ಪೆಷಲ್‌ಗಾಗಿ ಹೊಸ ಬಣ್ಣದ ಆಯ್ಕೆಯನ್ನು ಪ್ರಕಟಿಸಿದೆ. ನವೀಕರಿಸಿದ ಪ್ಯಾನ್ ಅಮೇರಿಕಾ 1250 ಅಡ್ವೆಂಚರ್ ಬೈಕ್ ಅನ್ನು 2022ರ ಮಧ್ಯದ ವೇಳೆಗೆ ಭಾರತದಲ್ಲಿಯೂ ಪರಿಚಯಿಸುವ ನಿರೀಕ್ಷೆಯಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Harley Davidson Pan America 1250 ಬೈಕ್

2022ರ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿನಲ್ಲಿ ಫುಲ್-ಎಲ್ಇಡಿ ಲೈಟಿಂಗ್, ಬ್ಲೂಟೂತ್-ಕನೆಕ್ಟಿವಿಟಿ ಹೊಂದಿರುವ 6.8-ಇಂಚಿನ ಕಲರ್ ಡಿಸ್ ಪ್ಲೇ ಮತ್ತು ಯುಎಸ್‌ಬಿ ಸಿ-ಟೈಪ್ ಔಟ್ ಲೈಟ್ ಅನ್ನು ಕೂಡ ಹೊಂದಿದೆ, ಈ ಬೈಕಿನ ವಿನ್ಯಾಸವು ಅಡ್ವೆಂಚರ್ ಪ್ರಿಯರನ್ನು ಸೆಳೆಯುವಂತೆ ಇದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Harley Davidson Pan America 1250 ಬೈಕ್

ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿನ ಸ್ಟ್ಯಾಂಡರ್ಡ್ ರೂಪಾಂತರದಲ್ಲಿ ಐದು ರೈಡಿಂಗ್ ಮೋಡ್ ಗಳನ್ನು ಪಡೆಯುತ್ತದೆ. ಇವುಗಳು ನಾಲ್ಕು ಪ್ರಿ-ಪ್ರೊಗಾಮ್ ಮಾಡಲಾದ ರೋಡ್, ಸ್ಪೋರ್ಟ್, ರೈನ್, ಆಫ್-ರೋಡ್ ಮತ್ತು ಒಂದು ಕಸ್ಟಮ್ ಮೋಡ್ ಅನ್ನು ರೈಡರ್ ತನ್ನ ಸ್ವಂತ ಆದ್ಯತೆಯ ಪ್ರಕಾರ ಹೊಂದಿಸಬಹುದಾಗಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Harley Davidson Pan America 1250 ಬೈಕ್

ಈ ಬೈಕಿನ ಟಾಪ್-ಸ್ಪೆಕ್ ಆದ ಸ್ಪೆಷಲ್ ರೂಪಾಂತರದಲ್ಲಿ ಕಸ್ಟಮೈಸ್ ಮಾಡಬಹುದಾದ ಎರಡು ಹೆಚ್ಚುವರಿ ಮೋಡ್‌ಗಳನ್ನು ಕೂಡ ಪಡೆಯುತ್ತದೆ. ಇನ್ನು ಮೆಕ್ಯಾನಿಕಲ್‌ಗಳ ವಿಷಯದಲ್ಲಿ ಎರಡು ರೂಪಾಂತರಗಳಲ್ಲಿ ಒಂದೇ ರೀತಿಯ 1,252 ಸಿಸಿ, ರೆವಲ್ಯೂಷನ್ ಮ್ಯಾಕ್ಸ್ ಎಂಜಿನ್ ಅನ್ನು ಪಡೆಯುತ್ತದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Harley Davidson Pan America 1250 ಬೈಕ್

ಈ ಎಂಜಿನ್ 9,000 ಆರ್‌ಪಿಎಂನಲ್ಲಿ 150 ಬಿಹೆಚ್‌ಪಿ ಪವರ್ ಮತ್ತು 6,750 ಆರ್‌ಪಿಎಂನಲ್ಲಿ 127 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ನೊಂದಿಗೆ ಜೋಡಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Harley Davidson Pan America 1250 ಬೈಕ್

ಈ ಹೊಸ ಪ್ಯಾನ್ ಅಮೇರಿಕಾ 1250 ಸ್ಪೆಷಲ್ ರೂಪಾಂತರವು ಲೋಡ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಸ್ಟ್ಯಾಂಡರ್ಡ್ ಸೆಂಟರ್ ಸ್ಟ್ಯಾಂಡ್, ಹೊಂದಾಣಿಕೆ ಮಾಡಬಹುದಾದ ರಿಯರ್ ಬ್ರೇಕ್ ಪೆಡಲ್, ಅಲ್ಯೂಮಿನಿಯಂ ಸ್ಕಿಡ್-ಪ್ಲೇಟ್, ಸ್ಟೀರಿಂಗ್ ಡ್ಯಾಂಪರ್ ಮತ್ತು ಅಡಾಪ್ಟಿವ್ ರೈಡ್ ಎಂಬ ಫೀಚರ್ ಗಳನ್ನು ಕೂಡ ಒಳಗೊಂಡಿವೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Harley Davidson Pan America 1250 ಬೈಕ್

ಇನ್ನು ಈ ಐಷಾರಾಮಿ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಅಡ್ವೆಂಚರ್ ಬೈಕಿನಲ್ಲಿ ಸೆಮಿ-ಆಕ್ಟಿವ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಪ್ಯಾನ್ ಅಮೇರಿಕಾ 1250 ಹಾರ್ಲೆ-ಡೇವಿಡ್ಸನ್‌ನಿಂದ ಬಂದ ಮೊದಲ ಅಡ್ವೆಂಚರ್ ಬೈಕ್ ಆಗಿದೆ. ಹೊಸ ಹಾರ್ಲೆ ಡೇವಿಡ್ಸನ್ ಪ್ಯಾನ್ ಅಮೆರಿಕ 1250 ಬೈಕ್ ಅಗ್ರೇಸಿವ್ ಮತ್ತು ರಗಡ್ ಲುಕ್ ಅನ್ನು ಹೊಂದಿರುವ ಫ್ಯೂಚರಿಸ್ಟಿಕ್ ಫ್ರಂಟ್ ಎಂಡ್ ಅನ್ನು ಹೊಂದಿದೆ. ಐಷಾರಾಮಿ ಅಡ್ವೆಂಚರ್ ಬೈಕ್ ಪ್ರಿಯರಿಗೆ ಈ ಮಾದರಿಯು ಉತ್ತಮ ಆಯ್ಕೆಯಾಗಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Harley Davidson Pan America 1250 ಬೈಕ್

ಇದರೊಂದಿಗೆ ಹಾರ್ಲೆ ಡೇವಿಡ್ಸನ್ ಹೊಸ ಬೈಕ್ ಅನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಇದರ ಭಾಗವಾಗಿ ಹಾರ್ಲೆ ಡೇವಿಡ್ಸನ್ ಕಂಪನಿಯು ಹೊಸ ಟೀಸರ್ ಚಿತ್ರವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಬಿಡುಗಡೆಗೊಳಿಸಿದೆ. ಹಾರ್ಲೆ ಡೇವಿಡ್ಸನ್ ಕಂಪನಿಯು ತನ್ನ ಹೊಸ ಬೈಕ್ ಅನ್ನು ಮುಂದಿನ ವರ್ಷ ಜನವರಿ 26 ರಂದು ತನ್ನ ಜಾಗತಿಕ ಪ್ರಥಮ ಪ್ರದರ್ಶನವನ್ನು ಮಾಡಲಿದೆ ಎಂದು ಟೀಸರ್ ನಲ್ಲಿ ತಿಳಿಸಿದೆ, ಟೀಸರ್ ನಲ್ಲಿ "Further Faster" ಎಂಬ ಟ್ಯಾಗ್ ಲೈನ್ ಅನ್ನು ನೀಡಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Harley Davidson Pan America 1250 ಬೈಕ್

ಇದನ್ನು ಹೊರತುಪಡಿಸಿ ಕಂಪನಿಯು ಉಳಿದಂತೆ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸಲಿಲ್ಲ, ಮುಂಬರುವ ಹೊಸ ಬೈಕ್ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಯಾವುದೇ ಮಾದರಿಯ ರೂಪಾಂತರವಾಗಿರಬಹುದು ಅಥವಾ ಇದು ಸಂಪೂರ್ಣವಾಗಿ ಹೊಸ ಮಾದರಿಯಾಗಿರಬಹುದು, ಆದರೆ ಈ ಮಾದರಿಯ ಬಗ್ಗೆ ನಿಖರವಾಗಿ ಈಗಲೇ ಹೇಳಲು ಸಾಧ್ಯವಿಲ್ಲ. ಈ ಹಾರ್ಲೆ ಡೇವಿಡ್ಸನ್ ಕಂಪನಿಯು ಮುಂದಿನ ವರ್ಷಕ್ಕೆ ಕೆಲವು ಪ್ರಮುಖ ಯೋಜನೆಗಳನ್ನು ಹೊಂದಿದೆ. ಕಂಪನಿಯು ತನ್ನ ಪ್ರೀಮಿಯಂ ಇವಿ ಬ್ರ್ಯಾಂಡ್ ಲೈವ್‌ವೈರ್ ಅಡಿಯಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ಬೈಕ್‌ಗಳನ್ನು ಪರಿಚಯಿಸಲು ಯೋಜಿಸುತ್ತಿದೆ.

ಹೊಸ ನವೀಕರಣಗಳೊಂದಿಗೆ ಅನಾವರಣಗೊಂಡ 2022ರ Harley Davidson Pan America 1250 ಬೈಕ್

ಇತ್ತೀಚಿನ ಜಾಗತಿಕ ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಮುಂದಿನ ಕೆಲವು ವರ್ಷಗಳಲ್ಲಿ ಲೈವ್‌ವೈರ್ ‘ಎಸ್2 ಡೆಲ್ ಮಾರ್' ಅನ್ನು ಪರಿಚಯಿಸುತ್ತದೆ.ಹೊಸ ಬೈಕ್ ಗಳು ಕಂಪನಿಯ ಹೊಸ ಸ್ಕೇಲೆಬಲ್ ಮಾಡ್ಯುಲರ್ ‘ಆರೋ' ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರಲಿವೆ. ಈ ಹೊಸ ಪ್ಲಾಟ್‌ಫಾರ್ಮ್ ಅನ್ನು ಮಿಡಲ್‌ವೇಟ್ ವಿಭಾಗಕ್ಕೆ ಗುರುತಿಸಲಾಗಿದೆ. ಇದೇ ಪ್ಲಾಟ್‌ಫಾರ್ಮ್ ಬಳಸಿಕೊಂಡು ಭವಿಷ್ಯದಲ್ಲಿ ಹೆಚ್ಚಿನ ಮಾದರಿಗಳನ್ನು ಸೇರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

More from DriveSpark

Article Published On: Thursday, January 13, 2022, 10:29 [IST]
English summary
Harley davidson unveiled 2022 pan america 1250 with new updates details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+