India
YouTube

ಹೋಂಡಾ ಸಿಬಿಆರ್1000 ಆರ್‌ಆರ್-ಆರ್ ಫೈರ್‌ಬ್ಲೇಡ್ ಬೆಲೆಯಲ್ಲಿ 10 ಲಕ್ಷ ರೂ. ಇಳಿಕೆ

ವಿಶ್ವದ ಜನಪ್ರಿಯ ಸ್ಪೋರ್ಟ್ಸ್‌ ಬೈಕ್‌ ತಯಾರಕ ಕಂಪನಿ ಹೋಂಡಾ ಮೋಟಾರ್‌ ಸೈಕಲ್ ತನ್ನ ಸ್ಪೋರ್ಟ್ಸ್ ಬೈಕ್ ಹೋಂಡಾ ಸಿಬಿಆರ್ 1000ಆರ್ಆರ್-ಆರ್‌ನ ಬೆಲೆಯನ್ನು ಬರೋಬ್ಬರಿ 10 ಲಕ್ಷ ರೂ.ಗಳಷ್ಟು ಕಡಿತಗೊಳಿಸಿದೆ. ಬೆಲೆ ಇಳಿಕೆಯ ನಂತರ, ಈ ಮೋಟಾರ್‌ಸೈಕಲ್ ಈಗ ಭಾರತದಲ್ಲಿ 23.56 ಲಕ್ಷ ರೂ.ಗಳ (ಎಕ್ಸ್ ಶೋರೂಂ) ಬೆಲೆಯಲ್ಲಿ ಲಭ್ಯವಿದೆ.

ಹೋಂಡಾ ಸಿಬಿಆರ್1000 ಆರ್‌ಆರ್-ಆರ್ ಫೈರ್‌ಬ್ಲೇಡ್ ಬೆಲೆಯಲ್ಲಿ 10 ಲಕ್ಷ ರೂ. ಇಳಿಕೆ

ಈ ಬೈಕ್‌ ಅನ್ನು ಕಳೆದ ವರ್ಷ 33 ಲಕ್ಷ ರೂ.ಗಳ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಹೋಂಡಾ ಸಿಬಿಆರ್ 1000ಆರ್ಆರ್-ಆರ್ ಸ್ಪೋರ್ಟ್ಸ್‌ ಬೈಕ್‌ನ ಬೆಲೆಯು ಈ ಹಿಂದೆ ಅದರ ತತ್ಸಮಾನ ಬೈಕ್‌ಗಳಿಗಿಂತ ಎರಡು ಪಟ್ಟು ಹೆಚ್ಚಾಗಿತ್ತು. ಈ ಬೈಕಿನ ಸ್ಪರ್ಧೆಯಲ್ಲಿ ಕವಾಸಕಿ ಝಡ್ಎಕ್ಸ್-10ಆರ್ 15.83 ಲಕ್ಷ ರೂ., ಡುಕಾಟಿ ಪಾನಿಗಲೆ ವಿ4 23.50 ಲಕ್ಷ ರೂ., ಎಪ್ರಿಲಿಯಾ ಆರ್ಎಸ್ ವಿ4 23.69 ಲಕ್ಷ ರೂ.ಗೆ ಲಭ್ಯವಿದೆ.

ಹೋಂಡಾ ಸಿಬಿಆರ್1000 ಆರ್‌ಆರ್-ಆರ್ ಫೈರ್‌ಬ್ಲೇಡ್ ಬೆಲೆಯಲ್ಲಿ 10 ಲಕ್ಷ ರೂ. ಇಳಿಕೆ

ಹೋಂಡಾ ಸಿಬಿಆರ್ 1000ಆರ್ಆರ್-ಆರ್ ರೇಸ್ ಪರ್ಫಾರ್ಮೆನ್ಸ್ ಬೈಕ್ ಆಗಿದ್ದರೂ, ಸಾಮಾನ್ಯ ರಸ್ತೆಯಲ್ಲೂ ಚಲಿಸಲು ಸ್ಟ್ರೀಟ್ ಲೀಗಲ್ ವಿನ್ಯಾಸಗೊಳಿಸಲಾಗಿದೆ. ಈ ಬೈಕಿನ ವಿನ್ಯಾಸವು ಏರೋಡೈನಾಮಿಕ್ ಆಗಿದ್ದು, ಅತ್ಯಂತ ಸ್ಪೋರ್ಟಿ ರೈಡ್ ಅನುಭವ ನೀಡುತ್ತದೆ. ಬೈಕ್ ಫುಲ್ ಫೇರಿಂಗ್ ಡಿಸೈನ್, ಸ್ಪ್ಲಿಟ್ ಎಲ್ಇಡಿ ಹೆಡ್ಲೈಟ್, ಟರ್ನ್ ಇಂಡಿಕೇಟರ್ ಆನ್ ರಿಯರ್ ವ್ಯೂ ಮಿರರ್, ಎಲ್ಇಡಿ ಟೇಲ್ ಲೈಟ್ ಮತ್ತು ಪಾರದರ್ಶಕ ವಿಂಡ್‌ಶೀಲ್ಡ್ ಹೊಂದಿದೆ.

ಹೋಂಡಾ ಸಿಬಿಆರ್1000 ಆರ್‌ಆರ್-ಆರ್ ಫೈರ್‌ಬ್ಲೇಡ್ ಬೆಲೆಯಲ್ಲಿ 10 ಲಕ್ಷ ರೂ. ಇಳಿಕೆ

ಈ ಬೈಕಿನಲ್ಲಿ ಮುಂಭಾಗದ ಅಪ್ ಸೈಡ್ ಡೌನ್ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಯುನಿಟ್ ಇದೆ. ಬ್ರೇಕಿಂಗ್ ಗಾಗಿ, ಬೈಕ್ ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್‌ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಪಡೆದುಕೊಂಡಿದೆ. ಬೈಕಿನ ಎಲೆಕ್ಟ್ರಿಕಲ್ ಉಪಕರಣವು ಸಂಪೂರ್ಣ ಎಲ್ಸಿಡಿ ಪ್ಯಾನೆಲ್ ಅನ್ನು ಒಳಗೊಂಡಿದೆ, ಇದು ಆರ್‌ಪಿಎಂ, ಗೇರ್ ಇಂಡಿಕೇಟರ್, ಟ್ರಿಪ್ ಮೀಟರ್, ಸ್ಪೀಡೋಮೀಟರ್, ಫ್ಯೂಯಲ್ ಇಂಡಿಕೇಟರ್‌ನಂತಹ ಮಾಹಿತಿಯನ್ನು ಒದಗಿಸುತ್ತದೆ.

ಹೋಂಡಾ ಸಿಬಿಆರ್1000 ಆರ್‌ಆರ್-ಆರ್ ಫೈರ್‌ಬ್ಲೇಡ್ ಬೆಲೆಯಲ್ಲಿ 10 ಲಕ್ಷ ರೂ. ಇಳಿಕೆ

ಹೋಂಡಾ ಸಿಬಿಆರ್ 1000ಆರ್ಆರ್-ಆರ್ 1000 ಸಿಸಿ ಲಿಕ್ವಿಡ್ ಕೂಲ್ಡ್ 4-ಸ್ಟ್ರೋಕ್, 16 ವಾಲ್ವ್, ಡಿಒಎಚ್‌ಸಿ ಇನ್-ಲೈನ್ ಎಂಜಿನ್ ಅನ್ನು ಹೊಂದಿದ್ದು, ಇದು 160 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ನೀಡುತ್ತದೆ. ಪ್ರಸರಣಕ್ಕಾಗಿ ಬೈಕ್‌ನಲ್ಲಿ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೋಂಡಾ ಸಿಬಿಆರ್1000 ಆರ್‌ಆರ್-ಆರ್ ಫೈರ್‌ಬ್ಲೇಡ್ ಬೆಲೆಯಲ್ಲಿ 10 ಲಕ್ಷ ರೂ. ಇಳಿಕೆ

ಏರೋಡೈನಾಮಿಕ್ ಎಫಿಶಿಯನ್ಸಿಯನ್ನು ಸುಧಾರಿಸಲು ಮೊದಲಿಗಿಂತಲೂ ತೀಕ್ಷ್ಣವಾದ ಸ್ಟೈಲಿಂಗ್ ನೀಡಲಾಗಿದೆ. ನಯವಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಸೆಂಟ್ರಲ್ ರಾಮ್ ಏರ್ ಡಕ್ಟ್ ನಿಂದ ಬೇರ್ಪಡಿಸಲಾಗಿದೆ. ಇದರಿಂದಾಗಿ ಇನ್‍‍ಟೇಕ್ ಪೋರ್ಟ್, ತಡೆರಹಿತ ಹರಿವನ್ನು ಪಡೆಯಲಿದೆ. ಇದನ್ನು ಕೀಲೆಸ್ ಇಗ್ನಿಷನ್ ಮೂಲಕ ಪಡೆಯಲಾಗಿದೆ.

ಹೋಂಡಾ ಸಿಬಿಆರ್1000 ಆರ್‌ಆರ್-ಆರ್ ಫೈರ್‌ಬ್ಲೇಡ್ ಬೆಲೆಯಲ್ಲಿ 10 ಲಕ್ಷ ರೂ. ಇಳಿಕೆ

ಇದು ಕೀ ಬ್ಯಾರೆಲ್ ಅನ್ನು ತೆಗೆದುಹಾಕಲು ಹೋಂಡಾಗೆ ನೆರವಾಗಲಿದೆ. ಹೊಸ ಫೇರಿಂಗ್‍‍ಗಳು, ವಿಂಗ್ಲೆಟ್‍‍ಗಳ ಪಕ್ಕದಲ್ಲಿವೆ. ಸ್ಟ್ಯಾಂಡರ್ಡ್ ಅಕ್ರಪೋವಿಕ್ ಎಕ್ಸಾಸ್ಟ್ ಸಿಸ್ಟಂ, ಉದ್ದವಾದ ಟೇಲ್ ಪೈಪ್ ಹೊಂದಿದ್ದು, ಇನ್-ಲೈನ್-ಫೋರ್ ಸೌಂಡ್ ಮಾಡಲಿದೆ. ಹೊಸ ಎಂಜಿನ್‌ನ ಬೋರ್ ಎಕ್ಸ್ ಸ್ಟ್ರೋಕ್ ಅಂಕಿಅಂಶಗಳು ಮೋಟೋ ಜಿಪಿ ಬೈಕಿನ ಎಂಜಿನ್ ಅನ್ನು ಹೋಲುತ್ತವೆ.

ಹೋಂಡಾ ಸಿಬಿಆರ್1000 ಆರ್‌ಆರ್-ಆರ್ ಫೈರ್‌ಬ್ಲೇಡ್ ಬೆಲೆಯಲ್ಲಿ 10 ಲಕ್ಷ ರೂ. ಇಳಿಕೆ

ಸುಧಾರಿತ ರೈಡರ್ ಭಾವನೆಗಾಗಿ ಹೆಚ್ಚಿನ ಫ್ಲೆಕ್ಸ್‌ನೊಂದಿಗೆ ಎಂಜಿನ್ ಅನ್ನು ಹೊಸ ಅಲ್ಯೂಮಿನಿಯಂ ಚಾಸಿಸ್‍‍ನಲ್ಲಿ ನೀಡಲಾಗಿದೆ. ಹೊಸ ಸ್ವಿಂಗಾರ್ಮ್ ಸಹ ಇದ್ದು, ವ್ಹೀಲ್‌ಬೇಸ್ 1,455 ಎಂಎಂ ಆಗಿರುವುದರಿಂದ, ಇದು ಮಧ್ಯದಲ್ಲಿರುವ ಕಾರ್ನರ್ ಸ್ಟಾಬಿಲಿಟಿ ಹಾಗೂ ಫೀಲ್ ಅನ್ನು ಹೆಚ್ಚಿಸುತ್ತದೆ. ಇದು 2018 ಹೋಂಡಾ ಆರ್‍‍ಸಿ 2013ವಿ ಮೋಟೋ ಜಿಪಿ ಯಂತ್ರಕ್ಕೆ ಸಮಾನವಾದ ಕ್ಲೈಮ್ಡ್ ಡೌನ್‍‍ಫೋರ್ಸ್ ಅನ್ನು ಉತ್ಪಾದಿಸುತ್ತದೆ.

ಹೋಂಡಾ ಸಿಬಿಆರ್1000 ಆರ್‌ಆರ್-ಆರ್ ಫೈರ್‌ಬ್ಲೇಡ್ ಬೆಲೆಯಲ್ಲಿ 10 ಲಕ್ಷ ರೂ. ಇಳಿಕೆ

ಇದಾದ ನಂತರ ಮೊದಲಿಗಿಂತಲೂ ಚಿಕ್ಕದಾದ ಫ್ಯೂಯಲ್ ಟ್ಯಾಂಕ್ ಇದ್ದು, ಸವಾರನಿಗೆ ಫೇರಿಂಗ್ ಹಿಂದೆ ಸರಿಯಾಗಿ ಕೂರಲು ಅನುವು ಮಾಡಿಕೊಡುತ್ತದೆ. ಟೇಲ್ ಪೀಸ್ ಸಾಕಷ್ಟು ಮಂದವಾಗಿದ್ದು, ಒಟ್ಟಾರೆಯಾಗಿ ಹೋಂಡಾ ಕಾಂಪ್ಯಾಕ್ಟ್ ಲೀಟರ್-ಕ್ಲಾಸ್ ಮಿಷಿನ್‍‍ನೊಂದಿಗೆ ಬಂದಿದೆ. ಹೊಸ ಫೈರ್‌ಬ್ಲೇಡ್ ಹಳೆಯ ಬೈಕಿಗಿಂತ 5 ಕೆ.ಜಿ ಹೆಚ್ಚು ತೂಕವನ್ನು ಹೊಂದಿದ್ದು, ಒಟ್ಟಾರೆಯಾಗಿ 201 ಕೆ.ಜಿ ತೂಕವನ್ನು ಹೊಂದಿದೆ.

ಹೋಂಡಾ ಸಿಬಿಆರ್1000 ಆರ್‌ಆರ್-ಆರ್ ಫೈರ್‌ಬ್ಲೇಡ್ ಬೆಲೆಯಲ್ಲಿ 10 ಲಕ್ಷ ರೂ. ಇಳಿಕೆ

ಹೋಂಡಾ ದ್ವಿಚಕ್ರ ವಾಹನವು ಮಾರ್ಚ್ 2022 ರಲ್ಲಿ ಭಾರತದಲ್ಲಿ ಒಟ್ಟು 3,21,343 ಯುನಿಟ್‌ಗಳ ವಾಹನ ಮಾರಾಟವನ್ನು ದಾಖಲಿಸಿದೆ. ಅದೇ ತಿಂಗಳಲ್ಲಿ ಕಂಪನಿಯ ದೇಶೀಯ ಮಾರಾಟವು 3,09,549 ಯುನಿಟ್‌ಗಳಾಗಿದ್ದು, 11,794 ಯುನಿಟ್ ಗಳನ್ನು ಭಾರತದಿಂದ ರಫ್ತು ಮಾಡಲಾಗಿದೆ. 2021-2022ರ ಹಣಕಾಸು ವರ್ಷದ ಅಂತ್ಯದ ವೇಳೆಗೆ, ಕಂಪನಿಯ ಮಾರಾಟವು 37,99,680 ಯುನಿಟ್‌ಗಳಷ್ಟಿತ್ತು. ಇದರಲ್ಲಿ 34,68,828 ಯುನಿಟ್‌ಗಳ ದೇಶೀಯ ಮಾರಾಟ ಮತ್ತು 3,30,852 ಯುನಿಟ್ ಗಳ ರಫ್ತು ಸೇರಿವೆ.

ಹೋಂಡಾ ಸಿಬಿಆರ್1000 ಆರ್‌ಆರ್-ಆರ್ ಫೈರ್‌ಬ್ಲೇಡ್ ಬೆಲೆಯಲ್ಲಿ 10 ಲಕ್ಷ ರೂ. ಇಳಿಕೆ

2020-21ರ ಆರ್ಥಿಕ ವರ್ಷದಲ್ಲಿ 2,09,789 ಯುನಿಟ್ ವಾಹನಗಳನ್ನು ಮಾರಾಟ ಮಾಡಿದ್ದರೆ, 2021-2022 ರ ಆರ್ಥಿಕ ವರ್ಷದಲ್ಲಿ ಮಾರಾಟವು ಶೇಕಡಾ 58 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಕಂಪನಿಯು 2001 ರಿಂದ ಭಾರತದಲ್ಲಿ 50 ಮಿಲಿಯನ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಕಂಪನಿಯು ತನ್ನ ಪ್ರೀಮಿಯಂ ಡೀಲರ್‌ಶಿಪ್‌ಗಳನ್ನು 100ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಿದೆ.

Most Read Articles

Kannada
Read more on ಹೋಂಡಾ honda
English summary
Honda CBR1000RR R Fireblade price cut by Rs 10 lakh
Story first published: Saturday, April 2, 2022, 15:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X