iVOOMi ಜೀತ್ ಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಜೀರೋ ಡೌನ್ ಪೇಮೆಂಟ್ ಜೊತೆಗೆ ಭರ್ಜರಿ ಡಿಸ್ಕೌಂಟ್

ಹಬ್ಬದ ಸೀಸನ್ ಹಿನ್ನೆಲೆಯಲ್ಲಿ iVOOMi ಎನರ್ಜಿ ಕಂಪನಿಯು ಜೀತ್‌ಎಕ್ಸ್‌ ಸೀಮಿತ ಆವೃತ್ತಿ (JeetX Limited Edition) ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದು ಲಿಮಿಟೆಡ್ ಎಡಿಷನ್ ಆಗಿರುವುದರಿಂದ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಜೊತೆಗೆ ಈಗ ಖರೀದಿಸುವ ಗ್ರಾಹಕರು ರೂ. 4,000 ರಿಯಾಯಿತಿ ಪಡೆಯಬಹುದು.

iVOOMi ಜೀತ್ ಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಜೀರೋ ಡೌನ್ ಪೇಮೆಂಟ್ ಜೊತೆಗೆ ಭರ್ಜರಿ ಡಿಸ್ಕೌಂಟ್

ಕಂಪನಿ ಬಿಡುಗಡೆ ಮಾಡಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ರೂ. 1.02 ಲಕ್ಷ (ಎಕ್ಸ್ ಶೋ ರೂಂ)ಇದ್ದು, ಮೇಲೆ ತಿಳಿಸಿರುವಂತೆ ಈಗಲೇ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಬಯಸುವ ಗ್ರಾಹಕರಿಗೆ ರಿಯಾಯಿತಿ ಮೂಲಕ ರೂ. 98,000 (ಎಕ್ಸ್ ಶೋ ರೂಂ) ಬೆಲೆಗೆ ಪಡೆಯಬಹುದು.

iVOOMi ಜೀತ್ ಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಜೀರೋ ಡೌನ್ ಪೇಮೆಂಟ್ ಜೊತೆಗೆ ಭರ್ಜರಿ ಡಿಸ್ಕೌಂಟ್

ಈ ಸ್ಕೂಟರ್‌ನ ಖರೀದಿಯ ಮೇಲಿನ ರಿಯಾಯಿತಿಯು 10ನೇ ನವೆಂಬರ್ 2022 ರವರೆಗೆ ಮಾತ್ರ ಲಭ್ಯವಿರುತ್ತದೆ. ಕಂಪನಿಯು ತನ್ನ 'ಬಿಗ್ ಎನರ್ಜಿ ಫೆಸ್ಟ್' ಭಾಗವಾಗಿ ತನ್ನ ಎಲೆಕ್ಟ್ರಿಕ್ ವಾಹನಗಳ ಮೇಲೆ ರಿಯಾಯಿತಿಗಳನ್ನು ಘೋಷಿಸಿದೆ. ಜೊತೆಗೆ ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಮೇಲೆ ಕೆಲವು ಪ್ರಯೋಜನಗಳನ್ನು ಸಹ ಪಡೆಯಬಹುದು.

iVOOMi ಜೀತ್ ಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಜೀರೋ ಡೌನ್ ಪೇಮೆಂಟ್ ಜೊತೆಗೆ ಭರ್ಜರಿ ಡಿಸ್ಕೌಂಟ್

ಈಗ ZeetX ಲಿಮಿಟೆಡ್ ಆವೃತ್ತಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಗ್ರಾಹಕರು 5,000 ರೂ. ಮೌಲ್ಯದ ಉಡುಗೊರೆಗಳು ಮತ್ತು ಅಕ್ಸೆಸೊರಿಗಳನ್ನು ಉಚಿತವಾಗಿ ಪಡೆಯಬಹುದು. ಆದ್ದರಿಂದ ಇದು ಹೆಚ್ಚು ಖರೀದಿದಾರರನ್ನು ಆಕರ್ಷಿಸುವ ಸಾಧ್ಯತೆಯಿದೆ.

iVOOMi ಜೀತ್ ಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಜೀರೋ ಡೌನ್ ಪೇಮೆಂಟ್ ಜೊತೆಗೆ ಭರ್ಜರಿ ಡಿಸ್ಕೌಂಟ್

ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ iVOOMi ZeetX ಸೀಮಿತ ಆವೃತ್ತಿಯ ಸ್ಕೂಟರ್ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ರೆಡ್ ಹೈಲರೆಟ್‌ಗಳೊಂದಿಗೆ ಶೈನಿ ಬ್ಲಾಕ್, ಬ್ಲೂ ಹೈಲರೆಟ್‌ಗಳೊಂದಿಗೆ ಶೈನಿ ಬ್ಲಾಕ್, ರೆಡ್ ಹೈಲರೆಟ್‌ಗಳೊಂದಿಗೆ ಮ್ಯಾಟ್ ವೈಟ್ ಮತ್ತು ಆರೆಂಜ್ ಹೈಲರೆಟ್‌ಗಳೊಂದಿಗೆ ಮ್ಯಾಟ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ.

iVOOMi ಜೀತ್ ಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಜೀರೋ ಡೌನ್ ಪೇಮೆಂಟ್ ಜೊತೆಗೆ ಭರ್ಜರಿ ಡಿಸ್ಕೌಂಟ್

ಇವೆಲ್ಲವೂ ಸಹ ಉತ್ತಮ ಡಿಸೈನ್‌ನೊಂದಿಗೆ ಬಹಳ ಆಕರ್ಷಕವಾಗಿವೆ. ಈ ಹೊಸ ಸೀಮಿತ ಆವೃತ್ತಿಯ JeetX ಅದರ ಪ್ರಮಾಣಿತ ಮಾದರಿಗಿಂತ ಹೆಚ್ಚು ದುಬಾರಿಯಾಗಿದೆ. ಆದರೆ ಸೀಮಿತ ಆವೃತ್ತಿಯಾಗಿರುವುದರಿಂದ ಹೆಚ್ಚಿನ ವಿನ್ಯಾಸ ಹಾಗೂ ಫೀಚರ್ಸ್ ಇದರ ಪ್ರಮುಖ ಆಕರ್ಷಣೆಯಾಗಿರುತ್ತವೆ.

iVOOMi ಜೀತ್ ಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಜೀರೋ ಡೌನ್ ಪೇಮೆಂಟ್ ಜೊತೆಗೆ ಭರ್ಜರಿ ಡಿಸ್ಕೌಂಟ್

ಜೀಟ್‌ಎಕ್ಸ್ ಲಿಮಿಟೆಡ್ ಆವೃತ್ತಿಯ ಬಿಡುಗಡೆಯ ಸಂದರ್ಭದಲ್ಲಿ, ಐವೊಮಿ ಎನರ್ಜಿ ಸಿಇಒ ಮತ್ತು ಸಹ-ಸಂಸ್ಥಾಪಕ ಅಶ್ವಿನ್ ಭಂಡಾರಿ ಮಾತನಾಡಿ, ದೇಶೀಯ ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

iVOOMi ಜೀತ್ ಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಜೀರೋ ಡೌನ್ ಪೇಮೆಂಟ್ ಜೊತೆಗೆ ಭರ್ಜರಿ ಡಿಸ್ಕೌಂಟ್

ಹಾಗಾಗಿ ಕಂಪನಿಯು ಇದನ್ನು ಗಮನದಲ್ಲಿಟ್ಟುಕೊಂಡು ಮತ್ತು ಭಾರತೀಯ ರೈಡಿಂಗ್ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಸೀಮಿತ ಆವೃತ್ತಿಯನ್ನು ವಿನ್ಯಾಸಗೊಳಿಸಿದೆ ಎಂದರು. ಕಂಪನಿಯು ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಎಲ್ಲಾ ಕೊಡುಗೆಗಳನ್ನು iVOOMi ಡೀಲರ್‌ಶಿಪ್‌ಗಳಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

iVOOMi ಜೀತ್ ಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಜೀರೋ ಡೌನ್ ಪೇಮೆಂಟ್ ಜೊತೆಗೆ ಭರ್ಜರಿ ಡಿಸ್ಕೌಂಟ್

ಇದಲ್ಲದೆ, ಕಂಪನಿಯು ಈಗ ಖರೀದಿಯನ್ನು ಇನ್ನಷ್ಟು ಸುಲಭಗೊಳಿಸಲು 07% ಬಡ್ಡಿದರದೊಂದಿಗೆ ಶೂನ್ಯ ಡೌನ್ ಪೇಮೆಂಟ್ ಆಫರ್ ಅನ್ನು ಸಹ ತಂದಿದೆ. ಈ ಮೂಲಕ ಖರೀದಿದಾದರರು ಯಾವುದೇ ಪಾವತಿಯಿಲ್ಲದೇ ವಾಹನ ಪಡೆದು ಬಳಿಕ ತಿಂಗಳ ಕಂತುಗಳನ್ನು ಕಟ್ಟಿಕೊಳ್ಳಬಹುದು, ಇದು ಖರೀದಿದಾರರಿಗೆ ಹೆಚ್ಚು ಅನುಕೂಲಕರವಾಗಿದೆ.

iVOOMi ಜೀತ್ ಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಜೀರೋ ಡೌನ್ ಪೇಮೆಂಟ್ ಜೊತೆಗೆ ಭರ್ಜರಿ ಡಿಸ್ಕೌಂಟ್

Ivomi ಎನರ್ಜಿ ಲಿಮಿಟೆಡ್ ಎಡಿಷನ್ ಹೊರತುಪಡಿಸಿ, ಇತ್ತೀಚೆಗೆ 'JeetX' ಮೂಲ ಮಾದರಿ ಸ್ಕೂಟರ್ ಅನ್ನು ರೂ. 99,999 (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಇದು ಸ್ಕಾರ್ಲೆಟ್ ರೆಡ್, ಇಂಕ್ ಬ್ಲೂ, ಪೋಶ್ ವೈಟ್ ಮತ್ತು ಸ್ಪೇಸ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

iVOOMi ಜೀತ್ ಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಜೀರೋ ಡೌನ್ ಪೇಮೆಂಟ್ ಜೊತೆಗೆ ಭರ್ಜರಿ ಡಿಸ್ಕೌಂಟ್

ಈ ಸ್ಕೂಟರ್ 'ZeetX' ಮತ್ತು 'ZeetX 180' ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಕಂಪನಿಯು ಬಿಡುಗಡೆ ಮಾಡಿದ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ ಮೈಲೇಜ್ ಅನ್ನು ನೋಡುವುದಾದರೆ, ಮೂಲ ರೂಪಾಂತರವಾದ JeetX ರೈಡರ್ ಮೋಡ್‌ನಲ್ಲಿ 90 ಕಿ.ಮೀ ಮತ್ತು ಇಕೋ ಮೋಡ್‌ನಲ್ಲಿ 100 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ.

iVOOMi ಜೀತ್ ಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಜೀರೋ ಡೌನ್ ಪೇಮೆಂಟ್ ಜೊತೆಗೆ ಭರ್ಜರಿ ಡಿಸ್ಕೌಂಟ್

JeetX 180 ಮಾದರಿಯು ಇಕೋ ಮೋಡ್‌ನಲ್ಲಿ 200 ಕಿ.ಮೀ ಮತ್ತು ಸ್ಪೋರ್ಟ್ಸ್ ಮೋಡ್‌ನಲ್ಲಿ 180 ಕಿ.ಮೀ ಮೈಲೇಜ್ ನೀಡುತ್ತದೆ. ಸದ್ಯ ಮಾರುಕಟ್ಟೆಯಲ್ಲಿನ ಓಲಾ, ಎಥರ್‌ನಂತಹ ದೊಡ್ಡ ಪೈಪೋಟಿದಾರರೊಂದಿಗೆ Ivomi ಎನರ್ಜಿ ಸ್ಪರ್ಧಿಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಗಳನ್ನು ಬಿಡುಗಡೆ ಮಾಡಲಿದೆ.

iVOOMi ಜೀತ್ ಎಕ್ಸ್ ಲಿಮಿಟೆಡ್ ಎಡಿಷನ್ ಬಿಡುಗಡೆ: ಜೀರೋ ಡೌನ್ ಪೇಮೆಂಟ್ ಜೊತೆಗೆ ಭರ್ಜರಿ ಡಿಸ್ಕೌಂಟ್

ಡ್ರೈವ್ ಸ್ಪಾರ್ಕ್ ಪ್ರತಿಕ್ರಿಯೆ:

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಜನಪ್ರಿಯತೆ ಗಳಿಸುತ್ತಿರುವ ಸಮಯದಲ್ಲಿ, ಐವೊಮಿ ಎನರ್ಜಿ ಈ ಸೀಮಿತ ಆವೃತ್ತಿಯ ಸ್ಕೂಟರ್‌ಗೆ ಉತ್ತಮ ರಿಯಾಯಿತಿ ಮತ್ತು ಶೂನ್ಯ ಡೌನ್ ಪಾವತಿಯನ್ನು ನೀಡುತ್ತಿದೆ. ಈ ರೀತಿಯ ಇನ್ನಷ್ಟು ಆಸಕ್ತಿದಾಯಕ ಸಂಗತಿಗಳ ಜೊತೆಗೆ ಕಾಲಕಾಲಕ್ಕೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಬೈಕ್‌ಗಳು ಮತ್ತು ಕಾರುಗಳ ಬಗ್ಗೆ ತಿಳಿಯಲು ಕನ್ನಡ ಡ್ರೈವ್‌ಸ್ಪಾರ್ಕ್ ವೆಬ್‌ಸೈಟ್‌ ಸಂಪರ್ಕದಲ್ಲಿರಿ.

More from DriveSpark

Article Published On: Friday, October 28, 2022, 12:56 [IST]
English summary
Ivoomi jeet x limited edition released huge discount if you buy now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+