ವಿನೂತನ ವೈಶಿಷ್ಟ್ಯತೆ ಹೊಂದಿರುವ ಮೂರು ಜಾಯ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆ
ವಾರ್ಡ್ ವಿಝಾರ್ಡ್ ಇನೋವೆಷನ್ ಅಂಡ್ ಮೊಬಿಲಿಟಿ ಕಂಪನಿಯು ತನ್ನ ಎಲೆಕ್ಟ್ರಿಕ್ ಟೂ ವೀಲರ್ ಬ್ರ್ಯಾಂಡ್ ಜಾಯ್ ಇ-ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಜಾಯ್ ಹೆಸರಿನಲ್ಲಿ ಒಟ್ಟು ವಿವಿಧ ಇವಿ ಸ್ಕೂಟರ್ ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ.

ಜಾಯ್(Joy) ಬ್ರಾಂಡ್ ಅಡಿಯಲ್ಲಿ ಲೋ ಸ್ಪೀಡ್ ಮತ್ತು ಹೈ ಸ್ಪೀಡ್ ಹೊಂದಿರುವ ಮೂರು ಹೊಸ ಇವಿ ಸ್ಕೂಟರ್‌ಗಳು ಮಾರುಕಟ್ಟೆ ಪ್ರವೇಶಿಸಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ತಕ್ಕಂತೆ ವುಲ್ಫ್ ಪ್ಲಸ್(Wolf+) ಮತ್ತು ನ್ಯೂ ಜನರೇಷನ್ ವೈಶಿಷ್ಟ್ಯತೆಯ ನಾನು ಪ್ಲಸ್(Nanu+) ಬಿಡುಗಡೆ ಮಾಡಿದೆ. ಜಾಯ್ ಹೊಸ ಇವಿ ಸ್ಕೂಟರ್ ಮೊದಲ ಎರಡು ಇವಿ ಸ್ಕೂಟರ್ ಸಾಮಾನ್ಯ ಖರೀದಿದಾರರಿಗಾಗಿ ಬಿಡುಗಡೆ ಮಾಡಲಾಗಿದ್ದರೆ ಫ್ಲಿಟ್ ಆಪರೇಟ್ ಕಾರ್ಯಾಚರಣೆಗಾಗಿ ಡೆಲ್ ಗೊ(Del Go) ಇವಿ ಸ್ಕೂಟರ್ ಬಿಡುಗಡೆ ಮಾಡಿದೆ.

ವುಲ್ಫ್ ಪ್ಲಸ್ ಇವಿ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.10 ಲಕ್ಷ ಬೆಲೆ ಹೊಂದಿದ್ದರೆ ನಾನು ಪ್ಲಸ್ ಸ್ಕೂಟರ್ ಮಾದರಿಯು 1.06 ಲಕ್ಷ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಹಾಗೆಯೇ ವಾಣಿಜ್ಯ ಬಳಕೆಗಾಗಿ ವಿಶೇಷವಾಗಿ ಅಭಿವೃದ್ದಿಪಡಿಸಲಾಗಿರುವ ಡೆಲ್ ಗೊ ಮಾದರಿಯು ರೂ. 1.14 ಲಕ್ಷ ಬೆಲೆ ಹೊಂದಿದ್ದು, ಹೊಸ ಸ್ಕೂಟರ್‌ಗಳ ಬೆಲೆಯು ಫೇಮ್ 2 ಮತ್ತು ವಿವಿಧ ರಾಜ್ಯಗಳಲ್ಲಿರುವ ರಾಜ್ಯಮಟ್ಟದಲ್ಲಿನ ಸಬ್ಸಡಿಯಿಂದಾಗಿ ಕೆಲವು ರಾಜ್ಯಗಳಲ್ಲಿ ಏರಿಳಿತವಾಗಬಹುದಾಗಿದೆ.

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ತೀವ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ಪ್ರಮುಖ ಇವಿ ಸ್ಟಾರ್ಟ್ಅಪ್ ಕಂಪನಿಗಳು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ಆವೃತ್ತಿಗಳನ್ನು ಪರಿಚಯಿಸುವ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ದುಬಾರಿ ಇಂಧನಗಳ ದರ ಪರಿಣಾಮ ಎಲೆಕ್ಟ್ರಿಕ್ ವಾಹನ ಬಳಕೆ ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳಿಂದಾಗಿ ಇವಿ ವಾಹನಗಳ ಮಾರಾಟವು ಸಾಕಷ್ಟು ಏರಿಕೆಯಾಗಿದೆ.

ಹೀಗಾಗಿ ಸ್ಟಾರ್ಟ್ಅಪ್ ಕಂಪನಿಗಳು ವಿವಿಧ ಮಾದರಿಯ ಹಲವಾರು ಇವಿ ಆವೃತ್ತಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ವಡೋದರಾ ಮೂಲದ ಸ್ಟಾರ್ಟ್ಅಪ್ ಕಂಪನಿಯಾಗಿರುವ ಜಾಯ್ ಕೂಡಾ ಹೊಸ ವಿನ್ಯಾಸದೊಂದಿಗೆ ಹೆಚ್ಚಿನ ಮೈಲೇಜ್ ರೇಂಜ್ ಹೊಂದಿರುವ ಮೂರು ಇವಿ ಸ್ಕೂಟರ್ ಬಿಡುಗಡೆ ಮಾಡಿದೆ.

ವುಲ್ಫ್ ಪ್ಲಸ್, ಹೊಸ ತಲೆಮಾರಿನ ನಾನು ಪ್ಲಸ್ ಮತ್ತು ಡೆಲ್ ಗೊ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸ್ಥಳೀಕರಣವನ್ನು ಕೇಂದ್ರೀಕರಿಸಿ ಅಭಿವೃದ್ಧಿಪಡಿಸಲಾದ ಮಾದರಿಗಳಾಗಿದ್ದು, ಎಲ್ಲಾ ಮೂರು ಸ್ಕೂಟರ್‌ಗಳು ಆಧುನಿಕ ಸೌಲಭ್ಯಗಳನ್ನು ಹೊಂದಿವೆ.

ಹೊಸ ಸ್ಕೂಟರ್‌ಗಳಲ್ಲಿ ವುಲ್ಫ್ ಪ್ಲಸ್ ಮಾದರಿಯು ಟೂರಿಂಗ್ ವಿನ್ಯಾಸವನ್ನು ಹೊಂದಿದ್ದರೆ ನಾನು ಪ್ಲಸ್ ಮಾದರಿಯ ಹೊಸ ಸ್ಟೈಲಿಶ್ ವಿನ್ಯಾಸುವ ಕಿರಿಯ ಗ್ರಾಹಕರನ್ನು ಸೆಳೆಯಲಿದೆ. ಹಾಗೆಯೇ ಹೊಸ ಸ್ಕೂಟರ್‌ಗಳಲ್ಲಿ ಜಾಯ್ ಕಂಪನಿಯು 60V 35Ah ಸುಧಾರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಬಿಎಲ್‌ಡಿಸಿ ಮೋಟಾರ್ ಜೋಡಿಸಿದ್ದು, ಪ್ರತಿ ಚಾರ್ಜ್‌ಗೆ ಕನಿಷ್ಠ 100 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ಜಾಯ್ ಕಂಪನಿಯು ನಗರ ಪ್ರದೇಶಗಳಲ್ಲಿನ ಟ್ರಾಫಿಕ್ ದಟ್ಟಣೆಯನ್ನು ಆಧರಿಸಿ ಹೊಸ ಸ್ಕೂಟರ್‌ಗಳಲ್ಲಿ ಪ್ರತಿ ಗಂಟೆ 55 ಕಿ.ಮೀ ಟಾಪ್ ಸ್ಪೀಡ್ ನೀಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಪೋರ್ಟಬಲ್ ಬ್ಯಾಟರಿ ಆಯ್ಕೆಯಿರುವುದರಿಂದ ಅನುಕೂಲಕ್ಕೆ ತಕ್ಕಂತೆ ಚಾರ್ಜ್ ಮಾಡುವ ಅವಕಾಶವಿದೆ.

ಹಾಗೆಯೇ ಹೊಸ ಸ್ಕೂಟರ್‌ಗಳಲ್ಲಿ ಡ್ಯುಯಲ್ ಫೋರ್ಕ್ ಹೈಡ್ರಾಲಿಕ್ ಸಸ್ಪೆನ್ಷನ್ ಮತ್ತು ಮೊನೊ ಶಾಕ್ ಸಸ್ಪೆನ್ಷನ್ ನೀಡಲಾಗಿದ್ದು, 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ 1.6 ಮೀಟರ್ ಟರ್ನಿಂಗ್ ರೇಡಿಯಸ್ ಹೊಂದಿವೆ.

ಜೊತೆಗೆ ಹೊಸ ಸ್ಕೂಟರ್‌ಗಳಲ್ಲಿ ಕೀ ಲೆಸ್ ಸ್ಟಾರ್ಟ್ / ಸ್ಟಾಪ್ ಸ್ವಿಚ್, ವಿಭಿನ್ನ ಸೆನ್ಸಾರ್‌ಗಳ ಬಳಕೆಗಾಗಿ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯತೆ ಹೊಂದಿದ್ದು, ಜಾಯ್ ಇ-ಕನೆಕ್ಟ್ ಅಪ್ಲಿಕೇಶನ್ ಅನ್ನು ಬ್ಲೂಟೂತ್ ಮೂಲಕ ನಿಯಂತ್ರಣ ಮಾಡಬಹುದಾಗಿದೆ.

ಜಾಯ್ ಕಂಪನಿಯು ಫ್ಲಿಟ್ ಆಪರೇಟ್ ಕಾರ್ಯಾಚರಣೆಗಾಗಿ ಅಭಿವೃದ್ದಿಪಡಿಸಲಾದ ಡೆಲ್ ಗೊ ಮಾದರಿಯು ವಾಣಿಜ್ಯ ಕಾರ್ಯಾಚರಣೆಗೆ ಅನುಗುಣವಾಗಿ ವ್ಯಯಕ್ತಿಕರಣಗೊಳಿಸಿದ ಪ್ಯಾಕೇಜ್ ಪಡೆದುಕೊಳ್ಳಲಿದ್ದು, ಈ ತಿಂಗಳಾಂತ್ಯಕ್ಕೆ ಹೊಸ ಇವಿ ಸ್ಕೂಟರ್‌ಗಳು ಗ್ರಾಹಕರ ಕೈಸೇರಲಿವೆ.

ಹೊಸ ಇವಿ ಸ್ಕೂಟರ್‌ಗಳಲ್ಲಿ ವುಲ್ಫ್ ಪ್ಲಸ್ ಮಾದರಿಯು ಮ್ಯಾಟೆ ಬ್ಲ್ಯಾಕ್, ಗ್ರೆ, ಡೀಪ್ ವೈನ್, ನಾನು ಪ್ಲಸ್ ಮಾದರಿಯು ಮಿಡ್‌ನೈಟ್ ಬ್ಲ್ಯಾಕ್, ಮ್ಯಾಟೆ ವೈಟ್ ಮತ್ತು ಡೆಲ್ ಗೊ ಮಾದರಿಯು ಬ್ಲ್ಯಾಕ್, ಗ್ರೆ ಬಣ್ಣಗಳ ಆಯ್ಕೆ ಹೊಂದಿದ್ದು, ಎಲ್ಲಾ ಮಾದರಿಗಳ ಮೇಲೂ ಕಂಪನಿಯು ಸ್ಟ್ಯಾಂಡರ್ಡ್ ಆಗಿ ಮೂರು ವರ್ಷಗಳ ವಾರಂಟಿ ನೀಡುತ್ತದೆ.


Click it and Unblock the Notifications








