ಕವಾಸಕಿ ವರ್ಸಿಸ್ 650 ಬೈಕ್ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ಇಂಡಿಯಾ ಸರಣಿಯಲ್ಲಿರುವ ವರ್ಸಿಸ್ 650 ಬೈಕ್ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಕವಾಸಕಿ ಇಂಡಿಯಾ ತನ್ನ ಮಿಡಲ್‌ವೇಟ್ ಅಡ್ವೆಂಚರ್-ಟೂರರ್ ಮೋಟಾರ್‌ಸೈಕಲ್, ವರ್ಸಿಸ್ 650 ಗಾಗಿ ಗುಡ್ ಟೈಮ್ಸ್ ವೋಚರ್ ಆಫರ್ ಗಳನ್ನು ವಿಸ್ತರಿಸಿದೆ.

ಈ ಕೊಡುಗೆಯು ಈ ತಿಂಗಳ ಅಂತ್ಯದವರೆಗೂ ಮಾನ್ಯವಾಗಿರುತ್ತದೆ, ಇದು ಬೈಕಿನ ಮೇಲೆ ರೂ,70,000 ವರೆಗಿನ ಪ್ರಯೋಜನಗಳನ್ನು ಪಡೆಯಬಹುದು. ವೋಚರ್ ಅನ್ನು ಕವಾಸಕಿ ವರ್ಸಿಸ್ 650 ಬೈಕಿನ ಎಕ್ಸ್ ಶೋರೂಂ ಬೆಲೆಗೆ ರಿಡೀಮ್ ಮಾಡಿಕೊಳ್ಳಬಹುದು. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ವರ್ಸಿಸ್ 650 ಬೈಕಿನ 2022ರ ಮಾದರಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪ್ರಸ್ತುತ ಮಾದರಿಯ ಮಾರಾಟವನ್ನು ಹೆಚ್ಚಿಸಲು ಈ ಆಫರ್ ಅನ್ನು ವಿಸ್ತರಿಸಿರಬಹುದು.

ಕವಾಸಕಿ ವರ್ಸಿಸ್ 650 ಜಪಾನಿನ ಬ್ರಾಂಡ್‌ನ ಪೋರ್ಟ್ಫೋಲಿಯೊದಲ್ಲಿ ಅತ್ಯಂತ ಉತ್ತಮ ಅಡ್ವೆಂಚರ್ ಮಾದರಿಯಾಗಿದೆ. ಈ ಕವಾಸಕಿ ವರ್ಸಿಸ್ 650 ಬೈಕಿನಲ್ಲಿ 649 ಸಿಸಿ, ಲಿಕ್ವಿಡ್-ಕೂಲ್ಡ್ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 8500 ಆರ್‌ಪಿಎಂನಲ್ಲಿ 65 ಬಿಹೆಚ್‌ಪಿ ಪವರ್ ಮತ್ತು 7000 ಆರ್‌ಪಿಎಂನಲ್ಲಿ 61 ಎನ್‌ಎಂ ಪೀಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಇಂದಿನ ಮಾದರಿಗೆ ಹೋಲಿಸಿದರೆ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಕಡಿಮೆಯಾಗಿದೆ.

ಇನ್ನು ಕವಾಸಕಿ ವರ್ಸಿಸ್ 650 ಬೈಕಿನಲ್ಲಿ ನಿಂಜಾ 650 ಮಾದರಿಯಲ್ಲಿರುವಂತಹ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿ ಕಲರ್ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ಫೀಚರ್ ಗಳನ್ನು ಹೊಂದಿಲ್ಲ.

ಈ ಕವಾಸಕಿ ವರ್ಸಿಸ್ 650 ಬೈಕಿನಲ್ಲಿ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ 41 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 145 ಎಂಎಂ ಆಫ್ಸೆಟ್ ಲೇಡೌನ್ ಮೊನೊಶಾಕ್ ಸೆಟಪ್ ಅನ್ನು ಅಳವಡಿಸಲಾಗಿದೆ.

ಇನ್ನು ಈ ಹೊಸ ಕವಾಸಕಿ ವರ್ಸಿಸ್ 650 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ 300 ಎಂಎಂ ಪೆಟಲ್ ಡಿಸ್ಕ್ ಮತ್ತು ಡ್ಯುಯಲ್-ಪಿಸ್ಟನ್ ಕ್ಯಾಲಿಪರ್‌ಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 250 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಕವಾಸಕಿ ವರ್ಸಿಸ್ 650 ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

ಕವಾಸಕಿ ತನ್ನ ಹೊಸ 2022ರ ನಿಂಜಾ 300 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಕವಾಸಕಿ ನಿಂಜಾ 300 ಬೈಕಿನ ಬೆಲೆಯು ರೂ.3.37 ಲಕ್ಷವಾಗಿದೆ. 2022ರ ಕವಾಸಕಿ ನಿಂಜಾ 300 ಬೈಕ್ ಬದಲಾವಣೆಗಳು ನವೀಕರಿಸಿದ ಗ್ರಾಫಿಕ್ಸ್ ರೂಪದಲ್ಲಿ ಸ್ಟೈಲಿಂಗ್ ಪರಿಷ್ಕರಣೆಗಳಿಗೆ ಸೀಮಿತವಾಗಿವೆ. ಈ ಹೊಸ ಬೈಕಿನಲ್ಲಿ ತಾಜಾವಾಗಿರಿಸಲು,

ಕವಾಸಕಿ ನಿಯಮಿತವಾಗಿ ತನ್ನ ಬೈಕ್‌ಗಳಿಗೆ ಹೊಸ ಬಣ್ಣದ ಆಯ್ಕೆಗಳನ್ನು ಪರಿಚಯಿಸುತ್ತದೆ. ಅದರ ಪ್ರಸ್ತುತ ರೂಪದಲ್ಲಿ, ನಿಂಜಾ 300 ಲೈಮ್ ಗ್ರೀನ್, ಕ್ಯಾಂಡಿ ಲೈಮ್ ಗ್ರೀನ್ ಮತ್ತು ಎಬೊನಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. 2022ರ ನಿಂಜಾ 300 ಬೈಕಿನಲ್ಲಿ ನವೀಕರಿಸಿದ ಬಾಡಿ ಗ್ರಾಫಿಕ್ಸ್‌ನೊಂದಿಗೆ ಇದೇ ಬಣ್ಣದ ಆಯ್ಕೆಗಳು ಆಫರ್‌ನಲ್ಲಿದೆ.

ಈ ಕವಾಸಕಿ ನಿಂಜಾ 300 ಬೈಕ್ ವಿನ್ಯಾಸದ ವಿಷಯದಲ್ಲಿ, ಈ ಹೊಸ ಬೈಕ್ ಮೊದಲಿನಂತೆಯೇ ಇರುತ್ತದೆ. ಇದು ನಿಂಜಾ 600 ಬೈಕಿನಂತಹ ಅದರ ದೊಡ್ಡ ಸಾಮರ್ಥ್ಯದ ಒಡಹುಟ್ಟಿದವರ ಹೆಚ್ಚಿನ ಶೈಲಿಯನ್ನು ಎರವಲು ಪಡೆಯುತ್ತದೆ. ಅಗ್ರೇಸಿವ್ ಡ್ಯುಯಲ್ ಹೆಡ್‌ಲ್ಯಾಂಪ್‌ಗಳು, ಫ್ಲೋಟಿಂಗ್-ಸ್ಟೈಲ್ ವಿಂಡ್‌ಸ್ಕ್ರೀನ್ ಮತ್ತು ಫ್ರಂಟ್ ಕೌಲ್ ಮೌಂಟೆಡ್ ಕಾಂಪ್ಯಾಕ್ಟ್ ರಿಯರ್ ವ್ಯೂ ಮಿರರ್‌ಗಳನ್ನು ಹೊಂದಿವೆ. ಈ ಬೈಕಿನಲ್ಲಿ ಸ್ಕಲಟಡ್ ಇಂಧನ ಟ್ಯಾಂಕ್, ಸ್ಪೋರ್ಟಿ ಗ್ರಾಫಿಕ್ಸ್, ಸ್ಟೆಪ್-ಅಪ್ ಸೀಟ್, ಶಾರ್ಟ್ ಟೈಲ್ ಸೆಕ್ಷನ್ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಕೆಲವು ಪ್ರಮುಖ ವೈಶಿಷ್ಟ್ಯಗಳಾಗಿವೆ.ಇದು ಸೂಪರ್‌ಸ್ಪೋರ್ಟ್ ಸರಣಿಗೆ ಸೇರಿದ್ದರೂ ಸಹ, ನಿಂಜಾ 300 ಬೈಕ್ ಆರಾಮದಾಯಕ ರೈಡಿಂಗ್ ಏರೋಗೊಮಿಕ್ಸ್ ಹೊಂದಿದೆ.

ಇದು ನಗರ ಪ್ರಯಾಣಕ್ಕೆ ಮತ್ತು ಹೆದ್ದಾರಿಗಳಲ್ಲಿ ದೂರದ ಸವಾರಿ ಎರಡಕ್ಕೂ ಕೆಲಸ ಮಾಡಬಹುದು. ವಿಮರ್ಶೆಗಳ ಪ್ರಕಾರ, ನಿಂಜಾ 300 ಬೈಕ್ 100-120 ಕಿಮೀ ವೇಗದಲ್ಲಿ ಚಲಿಸಿದಾಗಲೂ ಯಾವುದೇ ಅಹಿತಕರ ಕಂಪನಗಳನ್ನು ಉಂಟುಮಾಡುವುದಿಲ್ಲ. ಈ ಕವಾಸಕಿ ನಿಂಜಾ 300 ಬೈಕ್ ಗಮನಹರಿಸಬೇಕಾದ ಸಮಸ್ಯೆಗಳಲ್ಲಿ ಒಂದು ಗ್ರೌಂಡ್ ಕ್ಲಿಯರೆನ್ಸ್ ಆಗಿದೆ. ಅಸ್ತಿತ್ವದಲ್ಲಿರುವ ಮಾದರಿಯು 140 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಹೆದ್ದಾರಿಗಳಿಗೆ ಇದು ಉತ್ತಮವಾಗಿದ್ದರೂ, ಹೊಂಡಗಳು ಮತ್ತು ಸ್ಪೀಡ್ ಬ್ರೇಕರ್‌ಗಳಂತಹ ಸ್ಥಳಗಳಲ್ಲಿ ಸಾಗುವಾಗ ನಗರದ ಪರಿಸ್ಥಿತಿಗಳಲ್ಲಿ ಇದು ಸ್ವಲ್ಪ ಕಠಿಣವಾಗಿದೆ.

ಪ್ರಸ್ತುತ ಕವಾಸಕಿ ವರ್ಸಿಸ್ 650 ಮಾದರಿಯ ಮಾರಾಟವನ್ನು ಹೆಚ್ಚಿಸಲು ಈ ಆಫರ್ ಅನ್ನು ವಿಸ್ತರಿಸಿರಬಹುದು. ಈ ಭರ್ಜರಿ ಆಪರ್ ನಿಂದ ಈ ಬೈಕಿನ ಮಾರಾಟವು ಹೆಚ್ಚಾಗಬಹುದು. ಇನ್ನು 2022ರ ಕವಾಸಕಿ ವರ್ಸಿಸ್ 650 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications