ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇಟಲಿ ಮೂಲದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಡುಕಾಟಿ ತನ್ನ ಹೊಸ ಮಲ್ಟಿಸ್ಟ್ರಾಡಾ ವಿ2 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದೀಗ ಡುಕಾಟಿ ಕಂಪನಿಯು ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕಿನ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಿದೆ.

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಏಪ್ರಿಲ್ 25 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಸ್ಟ್ಯಾಂಡರ್ಡ್ ಮತ್ತು ಎಸ್ ಎಂಬ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಈ ಅಡ್ವೆಂಚರ್ ಬೈಕ್ ಹಲವು ನವೀಕರಣಗಳೊಂದಿಗೆ, 5 ಕೆಜಿ ತೂಕದ ಕಡಿತ ಸೇರಿದಂತೆ, ಮತ್ತು ಈಗ ಡುಕಾಟಿ ಸ್ಕೈಹೂಕ್ ಅನ್ನು ಒಳಗೊಂಡಿದೆ. ಇನ್ನು ಈ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ದೊಡ್ಡ ಮಲ್ಟಿಸ್ಟ್ರಾಡಾ 1260 ನಿಂದ ಸ್ಫೂರ್ತಿ ಪಡೆದ. ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ ಫ್ಲೇರ್ಡ್ ಏರ್-ಇಂಟೇಕ್ ಮತ್ತು ಸ್ಪ್ಲಿಟ್, ಫುಲ್-ಎಲ್ಇಡಿ ಹೆಡ್ ಲ್ಯಾಂಪ್ ಗಳನ್ನು ಹೊಂದಿದೆ. ಇನ್ನು ದೊಡ್ಡ ವಿಂಡ್‌ಸ್ಕ್ರೀನ್ ಮತ್ತು ಫ್ಯೂಯಲ್ ಟ್ಯಾಂಕ್ ಜೊತೆಗೆ ಎಲ್‌ಇಡಿ ಟೈಲ್ ಲ್ಯಾಂಪ್ ವಿನ್ಯಾಸವನ್ನು ಹೊಂದಿದೆ.

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ನವೀಕರಣವು ಸ್ಟ್ರೀಟ್ ಗ್ರೇ ಎಂಬ ಹೊಸ ಬಣ್ಣವನ್ನು ಪಡೆದುಕೊಂಡಿದೆ. ಸ್ಟ್ರೀಟ್ ಗ್ರೇ ಪೇಂಟ್ ಸ್ಕೀಮ್ ಕೆಂಪು ರಿಮ್‌ಗಳನ್ನು ಒಳಗೊಂಡಿದೆ. ಮತ್ತೊಂದೆಡೆ ಡುಕಾಟಿ ರೆಡ್ ಒಂದೇ ಆಗಿರುತ್ತದೆ ಮತ್ತು ಎರಡೂ ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ.

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಅಡ್ವೆಂಚರ್ ಬೈಕಿನಲ್ಲಿ ಮಲ್ಟಿಸ್ಟ್ರಾಡಾ 950 ಮಾದರಿಯಂತೆಯೇ 937 ಸಿಸಿ ಟೆಸ್ಟಾಸ್ಟ್ರೆಟ್ಟಾ, ಟ್ವಿನ್-ಸಿಲಿಂಡರ್ ಎಂಜಿನ್ ನೊಂದಿಗೆ ಮುಂದುವರಿಯುತ್ತದೆ. ಇದು ಹಿಂದಿನಂತೆಯೇ 111.5 ಬಿಹೆಚ್ ಪಿ ಪವರ್ ಮತ್ತು 94 ನಿಂದ 96 ವರೆಗೆ ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಇದರ ಪರಿಣಾಮವಾಗಿ ಮಲ್ಟಿ ವಿ 2 950 ಗಿಂತ 5 ಕೆಜಿ ಹಗುರವಾಗಿರುತ್ತದೆ.

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಡುಕಾಟಿ ಟ್ರಾಕ್ಷನ್ ಕಂಟ್ರೋಲ್, ವೆಹಿಕಲ್ ಹೋಲ್ಡ್ ಕಂಟ್ರೋಲ್ ಮತ್ತು ಸ್ಪೋರ್ಟ್, ಟೂರಿಂಗ್, ಅರ್ಬನ್ ಮತ್ತು ಎಂಡ್ಯೂರೋ ಎಂಬ ನಾಲ್ಕು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿವೆ.

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಮೊದಲೇ ಹೇಳಿದಂತೆ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಎರಡು ರೂಪಾಂತರಗಳಲ್ಲಿ ಲಭ್ಯವಿದೆ, ಎಸ್ ವೇರಿಯಂಟ್, ಡುಕಾಟಿ ಸ್ಕೈಹೂಕ್ ಸಸ್ಪೆಂಕ್ಷನ್ ಇವಿಒ ಸೆಮಿ-ಆಕ್ಟಿವ್ ಸಸ್ಪೆಂಕ್ಷನ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ಸಿಸ್ಟಮ್, ಡುಕಾಟಿ ಕಾರ್ನಿಂಗ್ ಲೈಟ್ಸ್, ಡುಕಾಟಿ ಕ್ವಿಕ್ ಶಿಫ್ಟ್ ಅಪ್ & ಡೌನ್, ಐದು ಇಂಚಿನ ಬಣ್ಣದ ಟಿಎಫ್‌ಟಿ ಡಿಸ್‌ಪ್ಲೇ ಮತ್ತು ಬ್ಯಾಕ್‌ಲಿಟ್ ಹ್ಯಾಂಡಲ್‌ಬಾರ್ ಕಂಟ್ರೋಲ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಅಡ್ವೆಂಚರ್-ಸ್ಪೋರ್ಟ್ಸ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 8 ಎಂಎಂ ಕಯಾಬಾ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಎರಡೂ ಸಂಪೂರ್ಣ ಹೊಂದಾಣಿಕೆ ನೀಡುತ್ತವೆ, ಎರಡೂ ತುದಿಗಳಲ್ಲಿ 170 ಎಂಎಂ ಟ್ರ್ಯಾವೆಲ್ ಅನ್ನು ಹೊಂದಿದೆ,

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಈ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಅಡ್ವೆಂಚರ್-ಸ್ಪೋರ್ಟ್ಸ್ ಬೈಕಿನ ಬೆಸ್ ರೂಪಾಂತರಕ್ಕೆ ಎಕ್ಸ್-ಶೋರೂಂ ಪ್ರಕಾರ ರೂ.13 ಲಕ್ಷದಿಂದ ಆರಂಭವಾಗಬಹುದು. ಇನ್ನು ಈ ಬೈಕಿನ ಟಾಪ್-ಸ್ಪೆಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.15 ಲಕ್ಷಗಳಾಗಿರಬಹುದು ಎಂದು ನಿರೀಕ್ಷಿಸುತ್ತೇವೆ.

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಇನ್ನು ಡುಕಾಟಿ ತನ್ನ ಪಾನಿಗಲೆ ವಿ2 ಬೇಲಿಸ್ ಸ್ಪೆಷಲ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಡುಕಾಟಿ ಪಾನಿಗಲೆ ವಿ2 ಟ್ರಾಯ್ ಬೇಲಿಸ್ ಸ್ಪೆಷಲ್ ಎಡಿಷನ್ ಬೆಲೆಯು ರೂ.21.30 ಲಕ್ಷಗಳಾಗಿದೆ. ಇದೀಗ ಡುಕಾಟಿ ಪಾನಿಗಲೆ ವಿ2 ಟ್ರಾಯ್ ಬೇಲಿಸ್ ಸ್ಪೆಷಲ್ ಎಡಿಷನ್ ಬೈಕಿನ ವಿತರಣೆಯನ್ನು ಪ್ರಾರಂಭಿಸಿದೆ. ಈ ಸೀಮಿತ ಆವೃತ್ತಿಯ ಮೋಟಾರ್‌ಸೈಕಲ್‌ನ ಮೊದಲ ಯುನಿಟ್ ಅನ್ನು ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬಿಪುಲ್ ಚಂದ್ರ ಅವರು ನವದೆಹಲಿಯ ನಾರ್ತ್ ಸ್ಟಾರ್ ಆಟೋಮೋಟಿವ್‌ನಲ್ಲಿ ಅದರ ಮಾಲೀಕರಾದ ಆರ್ಯ ಮುಖರ್ಜಿ ಅವರಿಗೆ ಹಸ್ತಾಂತರಿಸಿದರು. ಡುಕಾಟಿ ಕಂಪನಿಯು ಪಾನಿಗಲೆ ವಿ2 ಬೇಲಿಸ್ 1ನೇ ಚಾಂಪಿಯನ್‌ಶಿಪ್ ಗೆದ್ದ 20ನೇ ವಾರ್ಷಿಕೋತ್ಸವದ ಸಂಭ್ರಮದ ಭಾಗವಾಗಿ ಈ ಲಿಮಿಟೆಡ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ.

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಈ ಡುಕಾಟಿ ಪಾನಿಗಲೆ ವಿ2 ಬೇಲಿಸ್ ಮಾದರಿಯು ಟ್ರಾಯ್ ಬೇಲಿಸ್ ಅವರ ವೃತ್ತಿಜೀವನಕ್ಕೆ ಗೌರವ ಸಲ್ಲಿಸುತ್ತದೆ ಮತ್ತು ಆಸ್ಟ್ರೇಲಿಯಾದ ರೈಡರ್ ಬೇಲಿಸ್ ಗೆದ್ದ ಮೂರು ವಿಶ್ವ ಎಸ್‌ಬಿಕೆ ಪ್ರಶಸ್ತಿಗಳಲ್ಲಿ ಮೊದಲನೆದರ ಸಂಭ್ರಮದ ಭಾಗವಾಗಿದೆ. ಈ ಎಡಿಷನ್ 996ಆರ್ ನಿಂದ ಸ್ಫೂರ್ತಿ ಪಡೆದ ಗ್ರಾಫಿಕ್ಸ್ ನೊಂದಿಗೆ ವಿಶೇಷ ಲೆವೆರಿಯನ್ನು ಪಡೆದುಕೊಂಡಿದೆ. ಬೇಲಿಸ್ ಡುಕಾಟಿ ರೆಡ್ ಆಗಿದ್ದರೆ ಗ್ರೀನ್ ಮತ್ತು ವೈಟ್ ಬಣ್ಣಗಳು ಕಂಪನಿಯ ಸಂಪ್ರದಾಯಿಕ ಬಣ್ಣಗಳಾಗಿವೆ. ಇನ್ನು ಈ ಮಾದರಿಯಲ್ಲಿರುವ 21 ನೇ ಸಂಖ್ಯೆ (ಟ್ರಾಯ್ ಬೇಲಿಸ್ನ ರೇಸ್ ಸಂಖ್ಯೆ), ಶೆಲ್ ಲೋಗೊ ಮತ್ತು ಫ್ಯೂಯಲ್ ಟ್ಯಾಂಕ್‌ನಲ್ಲಿ ಟ್ರಾಯ್‌ನ ಆಟೋಗ್ರಾಫ್ ಅನ್ನು ಸಹ ಒಳಗೊಂಡಿದೆ. ಪ್ರತಿ ಸೀಮಿತ ಆವೃತ್ತಿಯ ಬೈಕ್ ಅದರ ಉತ್ಪಾದನಾ ಸರಣಿ ಸಂಖ್ಯೆಯನ್ನು ಸಹ ಹೊಂದಿದೆ.

ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಬಿಡುಗಡೆ ದಿನಾಂಕ ಬಹಿರಂಗ

ಬಹುನಿರೀಕ್ಷಿತ ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಹೊಸ ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಐಷಾರಾಮಿ ಬೈಕ್ ಪ್ರಿಯರನ್ನು ಸೆಳೆಯಬಹುದು ಎಂದು ನಿರೀಕ್ಷಿಸುತ್ತೇವೆ.

More from DriveSpark

Article Published On: Thursday, April 21, 2022, 19:38 [IST]
English summary
New ducati multistrada v2 india launch date details
Read more on ಡುಕಾಟಿ ducati
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+