ಡುಕಾಟಿ ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಭಾರತದಲ್ಲಿ ಬಿಡುಗಡೆ

ಇಟಾಲಿಯನ್ ಪ್ರೀಮಿಯಂ ಬೈಕ್ ಉತ್ಪಾದನಾ ಕಂಪನಿಯಾಗಿರುವ ಡುಕಾಟಿ ಭಾರತದಲ್ಲಿ ತನ್ನ ಪ್ರಮುಖ ಬೈಕ್ ಮಾದರಿಗಳ ಹೊಸ ಸರಣಿಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಇದೀಗ ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಡುಕಾಟಿ ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಭಾರತದಲ್ಲಿ ಬಿಡುಗಡೆ

ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 11.49 ಲಕ್ಷ ಬೆಲೆ ಹೊಂದಿದ್ದು, ಹೊಸ ಮಾದರಿಯು ಸ್ಕ್ರ್ಯಾಂಬ್ಲರ್ 800 ಸರಣಿಯನ್ನು ಆಧರಿಸಿ ಅಭಿವೃದ್ದಿಗೊಂಡಿದೆ. ಸ್ಕ್ರ್ಯಾಂಬ್ಲರ್ 800 ಸರಣಿಯಲ್ಲಿನ ಬಹುತೇಕ ತಾಂತ್ರಿಕ ಅಂಶಗಳು ಈ ಹೊಸ ಮಾದರಿಯಲ್ಲಿದ್ದು, ಮಧ್ಯಮ ಕ್ರಮಾಂಕದ ಸೂಪರ್ ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದೆ.

ಡುಕಾಟಿ ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಭಾರತದಲ್ಲಿ ಬಿಡುಗಡೆ

ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಮಾದರಿಯು 803 ಸಿಸಿ ಎಲ್-ಟ್ವಿನ್ ಫ್ಯೂಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, 50 ಎಂಎಂ ಥ್ರೊಟಲ್ ಬಾಡಿ ಸಂರಚನೆಯೊಂದಿಗೆ 71.8 ಬಿಎಚ್‌ಪಿ ಮತ್ತು 66.2 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಡುಕಾಟಿ ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಭಾರತದಲ್ಲಿ ಬಿಡುಗಡೆ

ಹೊಸ ಬೈಕ್ ಮಾದರಿಯಲ್ಲಿ ಕಂಪನಿಯು ಸ್ಟ್ರೇಟ್ ಕಟ್ ಹೊಂದಿರುವ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಹೈಡ್ರಾಲಿಕ್ ನಿಯಂತ್ರಿತ ಸ್ಲಿಪ್ಪರ್ ಮತ್ತು ಸ್ವಯಂ-ಸರ್ವೋ ವೆಟ್ ಮಲ್ಟಿ-ಪ್ಲೇಟ್ ಕ್ಲಚ್ ಜೋಡಣೆ ಮಾಡಿದೆ.

ಡುಕಾಟಿ ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಭಾರತದಲ್ಲಿ ಬಿಡುಗಡೆ

ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಮಾದರಿಯ ಮುಂಭಾಗದಲ್ಲಿ ಟ್ಯೂಬ್ಲರ್ ಸ್ಟೀಲ್ ಟೆಲ್ಲಿಸ್ ಫ್ರೇಮ್ ಜೊತೆಗೆ 41 ಎಂಎಂ ಕಯಾಬ್ ಅಪ್‌ಸೈಡ್ ಡೌನ್ ಫೋರ್ಕ್ ಮತ್ತು ಹಿಂಬದಿಯಲ್ಲಿ ಕಯಾಬ್‌ನೊಂದಿಗೆ ಎರವಲು ಪಡೆದ ಫ್ರೀ ಲೋಡ್ ಅಡ್ಜೆಸ್ಮೆಂಟ್ ಮೊನೊಶಾರ್ಕ್ ಸಸ್ಷಂಷನ್ ಹೊಂದಿರಲಿದೆ.

ಡುಕಾಟಿ ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಭಾರತದಲ್ಲಿ ಬಿಡುಗಡೆ

ಹಾಗೆಯೇ ಅರ್ಬನ್ ಮೋಟಾರ್ಡ್ ಬೈಕಿನಲ್ಲಿ 17-ಇಂಚಿನ ಸ್ಪೋಕ್ಡ್ ಅಲ್ಯೂಮಿನಿಯಂ ವ್ಹೀಲ್ ಜೊತೆ ಪೈರೆಲ್ಲಿ ಡಯಾಬ್ಲೊ ರೊಸ್ಸೊ III ಟೈರ್‌ಗಳನ್ನು ಜೋಡಿಸಲಾಗಿದ್ದು, ಮುಂಭಾಗದ ಚಕ್ರಗಳಲ್ಲಿ 120/70-ಜೆಡ್ಆರ್17 ಮತ್ತು ಹಿಂಬದಿಯ ಚಕ್ರದಲ್ಲಿ 180/55-ಜೆಡ್ಆರ್17 ಪ್ರೊಫೈಲ್ ಟೈರ್‍‌ನೊಂದಿಗೆ 150 ಎಂಎಂ ಟ್ರಾವೆಲ್ ಸಸ್ಷೆಷನ್ ಹೊಂದಿದೆ.

ಡುಕಾಟಿ ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಭಾರತದಲ್ಲಿ ಬಿಡುಗಡೆ

ಇನ್ನು ಡುಕಾಟಿ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬಿಗಿ ಹಿಡಿತಕ್ಕಾಗಿ ಮುಂಭಾಗದಲ್ಲಿ 330 ಎಂಎಂ ಡಿಸ್ಕ್ ಜೋಡಿಸಲಾಗಿದ್ದು, ಇದು ರೇಡಿಯಲ್ 4-ಪಿಸ್ಟನ್ ಕ್ಯಾಲಿಪರ್‌ಗಳಿಂದ ಕ್ಲ್ಯಾಂಪ್ ಮಾಡಲಾಗಿದೆ. ಹಿಂಬದಿಯಲ್ಲಿ ಸಿಂಪಲ್ ಪಿಸ್ಟನ್ ಫ್ಲೋಟಿಂಗ್ ಕ್ಯಾಲಿಪರ್‌ನೊಂದಿಗೆ 245 ಎಂಎಂ ಡಿಸ್ಕ್ ಬ್ರೇಕ್ ಹೊಂದಿದ್ದು, ಅರಾಮದಾಯಕವಾದ ಆಸನ ಸೌಲಭ್ಯವು ಪರ್ಫಾಮೆನ್ಸ್ ಜೊತೆಗೆ ದೂರದ ಪ್ರಯಾಣಕ್ಕೂ ಅನುಕೂಲಕರವಾಗಿದೆ.

ಡುಕಾಟಿ ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಭಾರತದಲ್ಲಿ ಬಿಡುಗಡೆ

ಡುಕಾಟಿ ಕಂಪನಿಯು ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಮಾದರಿಯಲ್ಲಿ ಕೆಲವು ವಿಶಿಷ್ಟವಾದ ವೈಶಿಷ್ಟ್ಯತೆಗಳನ್ನು ನೀಡಿದ್ದು, ಇದು ಇತರೆ ಸ್ಕ್ರ್ಯಾಂಬ್ಲರ್ 800 ಸರಣಿ ಮಾದರಿಗಳಿಂತಲೂ ವಿಭಿನ್ನವಾಗಿ ಕಾಣುವಂತೆ ಮಾಡಲಾಗಿದೆ.

ಡುಕಾಟಿ ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಭಾರತದಲ್ಲಿ ಬಿಡುಗಡೆ

ಹೊಸ ವೈಶಿಷ್ಟ್ಯಗಳಲ್ಲಿ ಗ್ರಾಫಿಟಿ-ಶೈಲಿಯ ಗ್ರಾಫಿಕ್ಸ್‌ನೊಂದಿಗೆ ಸ್ಟಾರ್ಕ್ ವೈಟ್ ಸಿಲ್ಕ್ ಮತ್ತು ಡುಕಾಟಿ ಜಿಪಿ '19 ರೆಡ್ ಪೇಂಟ್ ನೀಡಲಾಗಿದ್ದು, ಕೊಕ್ಕಿನಂತಹ ಎತ್ತರದ ಮುಂಭಾಗದ ಮಡ್‌ಗಾರ್ಡ್ ಮತ್ತು ಸೈಡ್ ನಂಬರ್ ಪ್ಲೇಟ್‌ಗಳನ್ನು ಒಳಗೊಂಡಿವೆ.

ಡುಕಾಟಿ ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಭಾರತದಲ್ಲಿ ಬಿಡುಗಡೆ

ಇತರೆ ವೈಶಿಷ್ಟ್ಯತೆಗಳ ಪಟ್ಟಿಯಲ್ಲಿ ಲೋ ವೇರಿಯಬಲ್ ವಿಭಾಗದ ಅಲ್ಯೂಮಿನಿಯಂ ಹ್ಯಾಂಡಲ್‌ಬಾರ್ ಮತ್ತು ಕಡಿಮೆ ಎತ್ತರದೊಂದಿಗೆ ಫ್ಲಾಟ್ ಸೀಟ್ ಅನ್ನು ಒಳಗೊಂಡಿದ್ದು, ಇದು ಸವಾರರು ಮತ್ತು ಪ್ರಯಾಣಿಕರಿಗೆ ಕ್ರಿಯಾತ್ಮಕವಾಗಿ ಮತ್ತು ಆರಾಮದಾಯಕವಾದ ಸವಾರಿ ಅನುಭವವನ್ನು ನೀಡುತ್ತದೆ.

ಡುಕಾಟಿ ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಭಾರತದಲ್ಲಿ ಬಿಡುಗಡೆ

ಇದಲ್ಲದೇ ಹೊಸ ಬೈಕ್ ಮಾದರಿಯಲ್ಲಿ ಎಲ್ಇಡಿ ಹೆಡ್ಲೈಟ್ ಜೊತೆಗೆ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗಳು ಮತ್ತು ಪರಸ್ಪರ ಬದಲಾಯಿಸಬಹುದಾದ ಅಲ್ಯೂಮಿನಿಯಂ ಫ್ರೇಮ್ ಅನ್ನು ಒಳಗೊಂಡಿದ್ದು, ಇದರಲ್ಲಿ ಎಲ್ಇಡಿ ಟರ್ನ್ ಇಂಡಿಕೇಟರ್ಸ್ ಮತ್ತು ಫುಲ್ ಡಿಫ್ಯೂಷನ್ ಎಲ್ಇಡಿ ಟೈಲ್ಲೈಟ್ ಅನ್ನು ಸಹ ಒಳಗೊಂಡಿದೆ.

ಡುಕಾಟಿ ಹೊಸ ಸ್ಕ್ರ್ಯಾಂಬ್ಲರ್ ಅರ್ಬನ್ ಮೋಟಾರ್ಡ್ ಬೈಕ್ ಭಾರತದಲ್ಲಿ ಬಿಡುಗಡೆ

ಗೇರ್ ಮತ್ತು ಇಂಧನ ಮಟ್ಟದ ಸೂಚಕಗಳಿಗಾಗಿ ಹೊಸ ಬೈಕಿನಲ್ಲಿ ಎಲ್ಇಡಿ ಡಿಸ್‌ಪ್ಲೇ ಉಪಕರಣವನ್ನು ಸಹ ಹೊಂದಿದ್ದು, ಪರ್ಫಾಮೆನ್ಸ್ ಜೊತೆಗೆ ಅರಾಮದಾಯಕವಾದ ಚಾಲನೆಗೂ ಇದು ಅತ್ಯುತ್ತಮ ಆಯ್ಕೆಯಾಗಿದೆ ಎನ್ನಬಹುದು.

Most Read Articles

Kannada
Read more on ಡುಕಾಟಿ ducati
English summary
New ducati scrambler urban motard launched at rs 11 49 lakh details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X