ಡೀಲರ್‌ಗಳನ್ನು ತಲುಪಲು ಸಜ್ಜಾದ ಹೊಸ ಹೋಂಡಾ CB300F: ಶೀಘ್ರದಲ್ಲೇ ವಿತರಣೆ ಪ್ರಾರಂಭ
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಇತ್ತೀಚೆಗೆ ಬಿಡುಗಡೆಯಾದ ತನ್ನ CB300F ಮೋಟಾರ್‌ಸೈಕಲ್‌ನ ಆಲ್ ಇಂಡಿಯಾ ಡೀಲರ್ ಡಿಸ್ಪಾಚ್ ಅನ್ನು ಸೋಮವಾರ ಪ್ರಕಟಿಸಿದೆ.
Recommended Video
ಕಂಪನಿಯು ಗುಜರಾತ್‌ನ ವಿಠ್ಠಲ್‌ಪುರ (ಅಹಮದಾಬಾದ್)ನಲ್ಲಿರುವ ತನ್ನ ನಾಲ್ಕನೇ ಕಾರ್ಖಾನೆಯಲ್ಲಿ ಮೋಟಾರ್‌ಸೈಕಲ್‌ಗಳನ್ನು ತಯಾರಿಸುತ್ತಿದೆ. ಹೊಸ 2022 ಹೋಂಡಾ CB300F ಅನ್ನು ಕಂಪನಿಯ ಗುಜರಾತ್ ಕಾರ್ಖಾನೆಯಲ್ಲಿ ಮಧ್ಯಮ ಗಾತ್ರದ ಮೋಟಾರ್‌ಸೈಕಲ್‌ಗಳಿಗಾಗಿ ಗೊತ್ತುಪಡಿಸಿದ ವಿಶೇಷ ಸಾಲಿನಲ್ಲಿ ತಯಾರಿಸಲಾಗುತ್ತಿದೆ.

ಇದು ದೇಶೀಯ ಮತ್ತು ರಫ್ತು ಮಾರುಕಟ್ಟೆಗಳ ಬೇಡಿಕೆಯನ್ನು ಸಹ ಪೂರೈಸುತ್ತದೆ. ಹಾಗೆಯೇ ಕಂಪನಿಯು ತನ್ನ ಹೆಚ್ಚಿನ ಬೇಡಿಕೆಯ ಸ್ಕೂಟರ್‌ಗಳಿಗಾಗಿ ಪ್ರಮುಖ ಉತ್ಪಾದನಾ ಮಾರ್ಗಗಳನ್ನು ಕಾಯ್ದಿರಿಸುವುದನ್ನು ಮುಂದುವರಿಸಿದೆ. ಹೊಸ ಹೋಂಡಾ CB300F ಮೋಟಾರ್‌ಸೈಕಲ್‌ನ ಬುಕಿಂಗ್ ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ದಿನದಂದು ಪ್ರಾರಂಭವಾಯಿತು.

ಗ್ರಾಹಕರು ತಮ್ಮ ಮೋಟಾರ್‌ಸೈಕಲ್‌ಗಳನ್ನು ಆನ್‌ಲೈನ್‌ನಲ್ಲಿ ಹೋಂಡಾ ಟೂ-ವೀಲರ್‌ನ ಯಾವುದೇ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಅಥವಾ ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು. ಹೊಸ CB300F 300cc ನಿಂದ 500cc ವಿಭಾಗದಲ್ಲಿ ಕಂಪನಿಯ ನಾಲ್ಕನೇ ಬೈಕ್ ಆಗಿದೆ.

ಇದು ಹೊಸ 293cc ಆಯಿಲ್ ಕೂಲ್ಡ್ 4-ವಾಲ್ವ್ SOHC ಎಂಜಿನ್ ಅನ್ನು ಪಡೆದುಕೊಂಡಿದ್ದು, ಇದು 24.4 Bhp ಪವರ್ ಮತ್ತು 25.6 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಾಗೆಯೇ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳ ಜೊತೆಗೆ ಉತ್ತಮ ಬ್ರೇಕಿಂಗ್ ಕಾರ್ಯಕ್ಷಮತೆಗಾಗಿ ಇದು ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಹೊಂದಿದೆ. ಈ ಬೈಕ್‌ನಲ್ಲಿ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಕಾರ್ಯವನ್ನು ನೀಡಲಾಗಿದೆ. ಸಸ್ಪೆನ್ಷನ್ ಕುರಿತು ಮಾತನಾಡುವುದಾದರೆ, ಮುಂಭಾಗದಲ್ಲಿ ಗೋಲ್ಡನ್ USD ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಘಟಕವನ್ನು ನೀಡಲಾಗಿದೆ.

ಹೊಸ ಹೋಂಡಾ CB300F ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಮತ್ತು ಸ್ಪೋರ್ಟ್ಸ್ ರೆಡ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಕಂಪನಿಯು ಇದನ್ನು ಡಿಲಕ್ಸ್ ಮತ್ತು ಡಿಲಕ್ಸ್ ಪ್ರೊ ಎಂಬ ಎರಡು ಟ್ರಿಮ್‌ಗಳಲ್ಲಿ ಪರಿಚಯಿಸಿದೆ. ಹೊಸ ಬೈಕಿನ ಬೆಲೆಗಳು ಡಿಲಕ್ಸ್ ಟ್ರಿಮ್‌ಗಾಗಿ ರೂ. 2.25 ಲಕ್ಷದಿಂದ (ಎಕ್ಸ್-ಶೋ ರೂಂ, ನವದೆಹಲಿ) ಪ್ರಾರಂಭವಾಗುತ್ತವೆ.

ಡಿಲಕ್ಸ್ ಪ್ರೊ ಟ್ರಿಮ್‌ಗಾಗಿ ರೂ 2.29 ಲಕ್ಷ (ಎಕ್ಸ್-ಶೋ ರೂಂ, ದೆಹಲಿ) ವರೆಗೆ ಇರುತ್ತದೆ. ಇನ್ನು ಹೋಂಡಾ ಕಂಪನಿಯ ದ್ವಿಚಕ್ರ ವಾಹನಗಳ ಮಾರಾಟದ ಕುರಿತು ಹೇಳುವುದಾದರೆ, ಹೋಂಡಾ ದ್ವಿಚಕ್ರ ವಾಹನವು ಭಾರತದಲ್ಲಿ ಕಳೆದ ತಿಂಗಳು (ಜುಲೈ 2022) 4,43,643 ವಾಹನಗಳನ್ನು ಮಾರಾಟ ಮಾಡುವ ಮೂಲಕ ಶೇ15 ರಷ್ಟು ಮಾರಾಟ ಬೆಳವಣಿಗೆಯನ್ನು ದಾಖಲಿಸಿದೆ.

ಜುಲೈ 2022 ರಲ್ಲಿ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 4,02,701 ಯುನಿಟ್‌ಗಳನ್ನು ಮಾರಾಟ ಮಾಡಿದ್ದರೆ, 40,942 ಯುನಿಟ್‌ಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಹೋಂಡಾ ಮೋಟಾರ್‌ಸೈಕಲ್‌ಗಳ ಒಟ್ಟು ಮಾರಾಟ 3,85,533 ಯುನಿಟ್‌ಗಳಷ್ಟಿತ್ತು.

ಹೋಂಡಾ ದ್ವಿಚಕ್ರ ವಾಹನಗಳು ಆಕ್ಟಿವಾ 6G ಪ್ರೀಮಿಯಂ ಆವೃತ್ತಿಯನ್ನು ಕಳೆದ ವಾರ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಹೊಸ ಬಣ್ಣದ ಆಯ್ಕೆಗಳು ಮತ್ತು ಕೆಲವು ಆಕರ್ಷಕ ಬದಲಾವಣೆಗಳೊಂದಿಗೆ 75,400 ರೂ., ಎಕ್ಸ್ ಶೋರೂಂ ಬೆಲೆಯಲ್ಲಿ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಗೋಲ್ಡ್ ಬ್ಯಾಡ್ಜ್‌ನೊಂದಿಗೆ ಗೋಲ್ಡ್ ಫಿನಿಶ್ ಸ್ಟೀಲ್ ವೀಲ್‌ಗಳನ್ನು ಸಹ ಪಡೆದುಕೊಂಡಿದೆ.

ಆಕ್ಟಿವಾ ಪ್ರೀಮಿಯಂ ಅನ್ನು ಆಕರ್ಷಕ ವಿನ್ಯಾಸದ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಅಭಿವೃದ್ಧಿಪಡಿಸಲಾಗಿದೆ. ಇದು ಯುವ ಪೀಳಿಗೆಯ ಅಭಿರುಚಿ ಮತ್ತು ಆದ್ಯತೆಗಳಿಗೆ ಅನುಗುಣವಾಗಿದೆ. ಹೊಸ ಹೋಂಡಾ ಆಕ್ಟಿವಾ ಪ್ರೀಮಿಯಂ ಎಡಿಷನ್ ಪ್ರಮುಖ ವೈಶಿಷ್ಟ್ಯವೆಂದರೆ ಗೋಲ್ಡನ್ ಬಣ್ಣದ ವ್ಹೀಲ್ ಗಳು, ಇದು ಸ್ಕೂಟರ್‌ಗೆ ಪ್ರೀಮಿಯಂ ನೋಟ ಮತ್ತು ಅನುಭವವನ್ನು ಖಚಿತಪಡಿಸುತ್ತದೆ.

ಮುಂಭಾಗದಲ್ಲಿ, ಆಕ್ಟಿವಾ ಪ್ರೀಮಿಯಂ ಟರ್ನ್ ಇಂಡಿಕೇಟರ್ ಹೌಸಿಂಗ್‌ನಲ್ಲಿ ಗೋಲ್ಡ್ ಲೇಪಿತ ಕ್ರೋಮ್ ಗಾರ್ನಿಶ್ ಅನ್ನು ಪಡೆಯುತ್ತದೆ. ಮುಂಭಾಗದಲ್ಲಿರುವ ಹೋಂಡಾ ಲೋಗೋ ಕೂಡ ಅದೇ ಛಾಯೆಯನ್ನು ಹೊಂದಿದೆ.

ಗೋಲ್ಡನ್ ಫಿನಿಶ್‌ನಲ್ಲಿ 'ಆಕ್ಟಿವಾ ಪ್ರೀಮಿಯಂ' ಲೋಗೋದೊಂದಿಗೆ ಸೈಡ್ ಪ್ರೊಫೈಲ್ ಅನ್ನು ವರ್ಧಿಸಲಾಗಿದೆ. ಸ್ಕೂಟರ್ ಕಂದು ಬಣ್ಣದ ಒಳಗಿನ ಬಾಡಿ ಮತ್ತು ಹೊಂದಾಣಿಕೆಯ ಸೀಟ್ ಕವರ್ ಅನ್ನು ಸಹ ಪಡೆಯುತ್ತದೆ. ಈ ಕಾಸ್ಮೆಟಿಕ್ ನವೀಕರಣಗಳು ಸ್ಕೂಟರ್‌ಗೆ ಹೆಚ್ಚು ರೋಮಾಂಚಕ ಪ್ರೊಫೈಲ್ ಅನ್ನು ಖಚಿತಪಡಿಸಿಕೊಳ್ಳುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಹೋಂಡಾ ತನ್ನ ಬಿಗ್‌ವಿಂಗ್ ಡೀಲರ್ ನೆಟ್‌ವರ್ಕ್ ಅನ್ನು ದೇಶದಾದ್ಯಂತ ವಿಸ್ತರಿಸಲು ಯೋಜಿಸುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಕೆಲವು ಹೊಸ ಮಾದರಿಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಹೋಂಡಾ ಹೊಸ ಸ್ಕೂಟರ್ ಆಕ್ಟಿವಾ ಪ್ರೀಮಿಯಂ ಎಡಿಷನ್ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.


Click it and Unblock the Notifications