ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಯಶಸ್ಸಿನ ಹಿಂದಿನ ಗುಟ್ಟುಗಳು...

ರಾಯಲ್ ಎನ್‌ಫೀಲ್ಡ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಪ್ರೀಮಿಯಂ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿದೆ. ಈ ಜನಪ್ರಿಯ ರಾಯಲ್ ಎನ್‌ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ತಿಂಗಳಿನಲ್ಲಿ ಹೊಸ ಹಂಟರ್ 350 ಬೈಕ್ ಅನ್ನು ಬಿಡುಗಡೆಗೊಳಿಸಿತು.

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಯಶಸ್ಸಿನ ಹಿಂದಿನ ಗುಟ್ಟುಗಳು...

ಭಾರತೀಯ ಮಾರುಕಟ್ಟೆಯಲ್ಲಿ ಹಂಟರ್ 350 ಬೈಕ್ ಅನ್ನು ಬಿಡುಗಡೆಗೊಳಿಸಿದ ಬಳಿಕ ಇಂಡೋನೇಷ್ಯಾದಲ್ಲಿ ತನ್ನ ಚೊಚ್ಚಲ ಕಾರ್ಯಕ್ರಮವನ್ನು ಆಯೋಜಿಸಿದ ನಂತರ ಪರಿಚಯಿಸಿತು. ಭಾರತೀಯ ಮಾರುಕಟ್ಟೆಯಲ್ಲಿ ರೆಟ್ರೊ-ಥೀಮ್ ಹೊಂದಿರುವ ಹಂಟರ್ 350 ಬೈಕ್ ಪ್ರಸ್ತುತ ಸ್ವದೇಶಿ ತಯಾರಕರಿಂದ ಅತ್ಯಂತ ಕೈಗೆಟುಕುವ ಕೊಡುಗೆಯಾಗಿದೆ ಮತ್ತು ಇದು ಮಾರುಕಟ್ಟೆಗೆ ಪ್ರವೇಶಿಸಿದಾಗಿನಿಂದ ಉತ್ತಮ ಮಾರಾಟದ ಪ್ರಮಾಣವನ್ನು ಗಳಿಸುತ್ತಿದೆ. ಈ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ದೊಡ್ಡ ಹಿಟ್ ಆಗಲು ಪ್ರಮುಖ ಕಾರಣಗಳು ಇಲ್ಲಿವೆ:

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಯಶಸ್ಸಿನ ಹಿಂದಿನ ಗುಟ್ಟುಗಳು...

ಬೆಲೆ

ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ನೇರವಾಗಿ ಟಿವಿಎಸ್ ರೋನಿನ್ 225 ಬೈಕಿಗೆ ಪೈಪೋಟಿ ನೀಡುತ್ತದೆ. ಹಂಟರ್ 350 ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಲಭ್ಯವಿದೆ.

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಯಶಸ್ಸಿನ ಹಿಂದಿನ ಗುಟ್ಟುಗಳು...

ಮೆಟ್ರೋ ಮತ್ತು ರೆಟ್ರೋ ಎನ್ನುವ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರುವ ಹೊಸ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 1.69 ಲಕ್ಷ ಬೆಲೆ ಹೊಂದಿವೆ. ಇತರ ರಾಯಲ್ ಎನ್‌ಫೀಲ್ಡ್ ಬೈಕ್ ಗಳಿಗೆ ಹೋಲಿಸಿದರೆ ಬೆಲೆಯು ತುಂಬಾ ಅಗ್ಗವಾಗಿದೆ.

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಯಶಸ್ಸಿನ ಹಿಂದಿನ ಗುಟ್ಟುಗಳು...

ವಿನ್ಯಾಸ

ಈ ಹೊಸ ಬೈಕಿನಲ್ಲಿ ಡ್ವಯಲ್ ಟೋನ್ ಹೊಂದಿರುವ ಟಿಯರ್-ಡ್ರಾಪ್ ವಿನ್ಯಾಸದ ಇಂಧನ ಟ್ಯಾಂಕ್, ಉದ್ದವಾದ ಸಿಂಗಲ್-ಪೀಸ್ ಸೀಟ್, ವೃತ್ತಾಕಾರವಾದ ಹಾಲೋಜೆನ್ ಹೆಡ್‌ಲ್ಯಾಂಪ್‌ಗಳು, ಟರ್ನ್ ಇಂಡಿಕೇಟರ್‌ಗಳು, ರಿಯರ್-ವ್ಯೂ ಮಿರರ್‌ಗಳು ಮತ್ತು ಸ್ವಲ್ಪ ಎತ್ತರದ ವಿನ್ಯಾಸದೊಂದಿಗೆ ಸ್ಕ್ರ್ಯಾಂಬ್ಲರ್ ಮಾದರಿಯಾಗಿರುವುದು ಸ್ಪಷ್ಟವಾಗುತ್ತದೆ.

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಯಶಸ್ಸಿನ ಹಿಂದಿನ ಗುಟ್ಟುಗಳು...

ಫೀಚರ್ಸ್

ಇದರೊಂದಿಗೆ ಹೊಸ ಬೈಕಿನಲ್ಲಿ ಬೆಲೆ ಕಡಿತಕ್ಕಾಗಿ ಕೆಲವು ಪ್ರಮುಖ ಫೀಚರ್ಸ್‌ಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗಿದೆ. ಹಂಟರ್ 350 ಬೈಕಿನಲ್ಲಿ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಟ್ರಿಪ್ಲರ್ ನ್ಯಾವಿಗೇಷನ್ ಅನ್ನು ಹೈ ಎಂಡ್ ಮಾದರಿಯಲ್ಲಿ ಮಾತ್ರ ನೀಡಲಾಗಿದೆ. ಆರಂಭಿಕ ಮಾದರಿಯಲ್ಲಿ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮಾತ್ರ ನೀಡಲಾಗಿದ್ದು, ಟ್ರಿಪ್ಲರ್ ನ್ಯಾವಿಗೇಷನ್ ಅನ್ನು ಆಕ್ಸೆಸರಿಸ್‌ನಲ್ಲಿ ಖರೀದಿ ಮಾಡಬಹುದಾಗಿದೆ.

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಯಶಸ್ಸಿನ ಹಿಂದಿನ ಗುಟ್ಟುಗಳು...

ಕ್ಲಾಸಿಕ್ 350 ಬೈಕಿಗೆ ಹೋಲಿಸಿದರೆ ಹಂಟರ್ ಬೈಕ್ ಮಾದರಿಯು 90 ಎಂಎಂ ಉದ್ದ ಮತ್ತು 35 ಎಂಎಂ ಎತ್ತರದಲ್ಲಿ ಕಡಿಮೆಯಿದ್ದು, 15 ಎಂಎಂ ನಷ್ಟು ಹೆಚ್ಚು ಅಗಲವಾಗಿರುತ್ತದೆ. ಇದರ ವೀಲ್ಹ್ ಬೇಸ್ ಉದ್ದವು ಕ್ಲಾಸಿಕ್‌ಗಿಂತಲೂ 20 ಎಂಎಂ ಉದ್ದವಾಗಿದ್ದು, 181 ಕೆಜಿಯಷ್ಟು ಭಾರವಾಗಿರಲಿದೆ.

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಯಶಸ್ಸಿನ ಹಿಂದಿನ ಗುಟ್ಟುಗಳು...

ಎಂಜಿನ್

ಈ ಹೊಸ ಹಂಟರ್ 350 ಬೈಕ್ ಮಾದರಿಯು ಮಿಟಿಯೊರ್ 350 ಮತ್ತು ಕ್ಲಾಸಿಕ್ 350 ಮಾದರಿಯಲ್ಲಿರುವಂತೆಯೇ 349 ಸಿಸಿ ಸಿಂಗಲ್ ಸಿಲಿಂಡರ್, ಟು ವಾಲ್ವ್, ಎಸ್‌ಓಹೆಚ್‌ಸಿ ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಅಳವಡಿಸಲಾಗಿದೆ ಈ ಹೊಸ ಬೈಕ್ 5-ಸ್ಪೀಡ್ ಗೇರ್‌ಬಾಕ್ಸ್ ಮೂಲಕ 20.2 ಬಿಹೆಚ್‌ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಂಟರ್ ಬೈಕ್ ಮಾದರಿಯು ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಇತರೆ ಮೋಟಾರ್‌ಸೈಕಲ್‌ಗಳಿಂತಲೂ ತುಸು ಹಗುರವಾಗಿದೆ. ಪ್ರತಿ ಗಂಟೆಗೆ 114 ಕಿ.ಮೀ ಟಾಪ್ ಸ್ಪೀಡ್ ಮೂಲಕ ಪ್ರತಿ ಲೀಟರ್‌ಗೆ ಗರಿಷ್ಠ 36.1 ಕಿ.ಮೀ ಮೈಲೇಜ್ ನೀಡುತ್ತದೆ.

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಯಶಸ್ಸಿನ ಹಿಂದಿನ ಗುಟ್ಟುಗಳು...

ಸಸ್ಪೆಕ್ಷನ್

ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಕಂಪನಿಯು 41ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳೊಂದಿಗೆ ಟ್ವಿನ್ ಡೌನ್‌ಟ್ಯೂಬ್ ಸ್ಪೈನ್ ಫ್ರೇಮ್ ಸೆಟಪ್ ಮತ್ತು ಹಿಂಭಾಗದಲ್ಲಿ ಪ್ರಿಲೋಡ್-ಅಡ್ಜಸ್ಟಬಲ್ ಟ್ವಿನ್ ಶಾಕ್‌‌ಗಳನ್ನು ನೀಡಿದೆ.

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಯಶಸ್ಸಿನ ಹಿಂದಿನ ಗುಟ್ಟುಗಳು...

ಬ್ರೇಕಿಂಗ್ ಸಿಸ್ಟಂ

ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ ಎರಡು-ಪಿಸ್ಟನ್ ಕ್ಯಾಲಿಪರ್‌ಗಳೊಂದಿಗೆ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್-ಪಿಸ್ಟನ್ ಕ್ಯಾಲಿಪರ್‌ನೊಂದಿಗೆ 270 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಈ ಹಂಟರ್ 350 ಬೈಕಿನಲ್ಲಿ 17-ಇಂಚಿನ ಹಗುರವಾದ ಕಾಸ್ಟ್ ಅಲಾಯ್ ವ್ಹೀಲ್, ಟ್ಯೂಬ್‌ಲೆಸ್ ಟೈರ್‌ ನೀಡಲಾಗಿದ್ದು, ಮುಂಭಾಗದ ಚಕ್ರವು 110/70-17 ಟೈರ್ ಅನ್ನು ಹೊಂದಿದ್ದರೆ ಹಿಂದಿನ ಘಟಕವು 140/70-17 ಮೂಲಕ ಉತ್ತಮ ಪ್ರೊಫೈಲ್ ಹೊಂದಿದೆ.

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಯಶಸ್ಸಿನ ಹಿಂದಿನ ಗುಟ್ಟುಗಳು...

ಹೊಸ ಹಂಟರ್ 350 ಬೈಕಿನಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ಹೊರತಾಗಿಯೂ ಕಂಪನಿಯು ಹೊಸ ಬೈಕ್ ಅಂದವನ್ನು ಹೆಚ್ಚಿಸುವ ಮತ್ತು ಉತ್ತಮ ಸುರಕ್ಷತೆ ಖಾತ್ರಿಪಡಿಸುವ ಆಕ್ಸೆಸರಿಸ್ ಪ್ಯಾಕೇಜ್ ಸಿದ್ದಪಡಿಸಿದ್ದು, ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸಾಕಷ್ಟು ಹೊಸ ಸೌಲಭ್ಯಗಳನ್ನು ನೀಡಲಾಗಿದೆ. ರೈಡರ್‌ಗೆ ಪೂರಕವಾಗಿ ಹೊಸ ಬೈಕಿನಲ್ಲಿ 10ಕ್ಕೂ ಹೆಚ್ಚು ಆಕ್ಸೆಸರಿಸ್‌ಗಳನ್ನು ಪರಿಚಯಿಸಲಾಗಿದ್ದು, ಬ್ಲ್ಯಾಕ್ ಕಮ್ಯೂಟರ್ ಪ್ಯಾನಿಯರ್, ಪ್ಯಾನಿಯರ್ ರೈಲ್, ಬ್ಲ್ಯಾಕ್ ಕಮ್ಯೂಟರ್ ವಾಟರ್‌ಪ್ರೂಫ್, ಹಿಂಬದಿಯ ಸವಾರರಿಗೆ ಬ್ಯಾಕ್ ರೇಸ್ಟ್ ಪ್ಯಾಡ್, ಸಿಗ್ನಿಚೆರ್ ಬೆಂಚ್ ಸೀಟ್, ಬ್ಲ್ಯಾಕ್ ಟೂರಿಂಗ್ ಮಿರರ್, ವಾಟರ್ ರೆಸಿಸ್ಟೆಂಟ್ ಬೈಕ್ ಕವರ್, ಸಿಲ್ವರ್ ಎಲ್ಇಡಿ ಇಂಡಿಕೇಟರ್, ಸಿಲ್ವರ್ ಆಯಿಲ್ ಫಿಲ್ಲರ್ ಕ್ಯಾಪ್ ಮತ್ತು ಸಿಲ್ವರ್ ಸಂಪ್ ಗಾರ್ಡ್ ಲಭ್ಯವಿವೆ.

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಯಶಸ್ಸಿನ ಹಿಂದಿನ ಗುಟ್ಟುಗಳು...

ಹೊಸ ಹಂಟರ್ 350 ಮಾದರಿಯೊಂದಿಗೆ ಈ ವಿಭಾಗದ ಮೋಟಾರ್‌ಸೈಕಲ್‌ ಮಾದರಿಗಳಲ್ಲಿಯೇ ಇದು ಅತ್ಯುತ್ತಮ ಬೈಕ್ ಮಾದರಿಗಳಲ್ಲಿ ಒಂದಾಗಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಬೈಕ್ ಯುವ ಗ್ರಾಹಕರ ಹಾಟ್ ಫೇವರಿಟ್ ಮಾದರಿಯಾಗುವ ವಿಶ್ವಾಸ ವ್ಯಕ್ತಪಡಿಸಿದೆ.

Article Published On: Tuesday, October 11, 2022, 18:40 [IST]
English summary
New royal enfield hunter 350 getting high demand did you know why details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+