ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ 2022ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

2022ರ ಐಕ್ಯೂಬ್ ಇವಿ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ವಿವಿಧ ಬ್ಯಾಟರಿ ಆಯ್ಕೆಗೆ ಅನುಗುಣವಾಗಿ ಹೊಸ ಸ್ಕೂಟರ್ ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ಮತ್ತು ಐಕ್ಯೂಬ್ ಎಸ್‌ಟಿ ವೆರಿಯೆಂಟ್‌ಗಳನ್ನು ಹೊಂದಿದೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೊಸ ಐಕ್ಯೂಬ್ ಸಾಮಾನ್ಯ ಮಾದರಿಯು ಬೆಂಗಳೂರಿನಲ್ಲಿ ಆನ್‌ ರೋಡ್ ಪ್ರಕಾರ ಆರಂಭಿಕವಾಗಿ ರೂ. 1,11,663 ಬೆಲೆ ಹೊಂದಿದ್ದು, ಐಕ್ಯೂಬ್ ಎಸ್ ಮಾದರಿಯು ರೂ. 1,19,663 ಬೆಲೆ ಹೊಂದಿದೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೆಚ್ಚಿನ ಮಟ್ಟದ ಬ್ಯಾಟರಿ ಪ್ಯಾಕ್ ಹೊಂದಿರುವ ಐಕ್ಯೂಬ್ ಎಸ್‌ಟಿ ಮಾದರಿಯ ಬೆಲೆಯನ್ನು ಸದ್ಯಕ್ಕೆ ಬಹಿರಂಗಪಡಿಸದ ಟಿವಿಎಸ್ ಕಂಪನಿಯು ವಿತರಣೆ ಆರಂಭವಾಗುವ ಸಂದರ್ಭದಲ್ಲಿ ಬಹಿರಂಗಪಡಿಸಲಿದ್ದು, ಹೊಸ ಇವಿ ಸ್ಕೂಟರ್ ಮಾದರಿಗಾಗಿ ಕಂಪನಿಯು ರೂ. 999 ಮುಂಗಡದೊಂದಿಗೆ ಬುಕಿಂಗ್ ಆರಂಭಿಸಿದೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೊಸ ಐಕ್ಯೂಬ್ ಇವಿ ಸ್ಕೂಟರ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಐಕ್ಯೂಬ್ ಸ್ಟ್ಯಾಂಡರ್ಡ್, ಐಕ್ಯೂಬ್ ಎಸ್ ವೆರಿಯೆಂಟ್‌ಗಳಲ್ಲಿ ಈ ಹಿಂದಿನ 3.4kwh ಬ್ಯಾಟರಿ ಪ್ಯಾಕ್ ಅನ್ನೇ ನವೀಕರಿಸಿ ಜೋಡಣೆ ಮಾಡಲಾಗಿದ್ದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್‌ನಲ್ಲಿ 5.1kWh ಬ್ಯಾಟರಿ ಪ್ಯಾಕ್ ನೀಡಲಾಗಿದೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

3.4kwh ಬ್ಯಾಟರಿ ಪ್ಯಾಕ್ ಹೊಂದಿರುವ ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ಮಾದರಿಗಳು ಪ್ರತಿ ಚಾರ್ಜ್‌ಗೆ 100 ಕಿ.ಮೀ ಮೈಲೇಜ್ ನೀಡಿದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್ ಪ್ರತಿ ಚಾರ್ಜ್‌ಗೆ ಗರಿಷ್ಠ 140 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೊಸ ಇವಿ ಸ್ಕೂಟರಿನಲ್ಲಿರುವ ಬ್ಯಾಟರಿ ಪ್ಯಾಕ್ UL2271, ISO 12405 ಮತ್ತು UN38.3 ಮಾನದಂಡಗಳೊಂದಿಗೆ IP67 ಮತ್ತು AIS156 ನಿಂದ ಪ್ರಮಾಣೀಕರಿಸಲಾಗಿದ್ದು, ಬ್ರಶ್‌ಲೆಸ್ ಹಬ್ ಮೌಟೆಂಡ್ ಎಲೆಕ್ಟ್ರಿಕ್ ಮೋಟಾರ್ ಸಹ ಸಾಕಷ್ಟು ಸುಧಾರಣೆಗೊಂಡಿದೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಐಕ್ಯೂಬ್ ಮಾದರಿಯಲ್ಲಿ ಸುಧಾರಿತ ಎಲೆಕ್ಟ್ರಿಕ್ ಮೋಟಾರ್ ಇದೀಗ 5.9 ಬಿಎಚ್‌ಪಿ ಮತ್ತು 140 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಕೇವಲ 4.2 ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳುತ್ತವೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಟಿವಿಎಸ್ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ವೆರಿಯೆಂಟ್‌ಗಳಲ್ಲಿ ಪ್ರತಿ ಗಂಟೆಗೆ 78 ಕಿ.ಮೀ ಟಾಪ್ ಸ್ಪೀಡ್ ನೀಡಿದ್ದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್‌ನಲ್ಲಿ ಪ್ರತಿ ಗಂಟೆಗೆ 84 ಕಿ.ಮೀ ಟಾಪ್ ಸ್ಪೀಡ್ ನೀಡಿದೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೊಸ ಇವಿ ಸ್ಕೂಟರ್‌ನಲ್ಲಿ ಚಾರ್ಜಿಂಗ್ ಸೌಲಭ್ಯಕ್ಕಾಗಿ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ವೆರಿಯೆಂಟ್‌ಗಳಿಗಾಗಿ 650W ಮತ್ತು 950W ಹೋಂ ಚಾರ್ಜಿಂಗ್ ಸೌಲಭ್ಯ ನೀಡಿದ್ದರೆ ಐಕ್ಯೂಬ್ ಎಸ್‌ಟಿ ವೆರಿಯೆಂಟ್‌ನಲ್ಲಿ 1.5kW ಸರ್ಪೊಟ್ ಮಾಡುವ ಚಾರ್ಜಿಂಗ್ ಆಯ್ಕೆ ನೀಡಿದ್ದು, ಸಂಪೂರ್ಣ ಚಾರ್ಜಿಂಗ್‌ಗಾಗಿ ಕನಿಷ್ಠ 4 ಗಂಟೆಗಳನ್ನು ತೆಗೆದುಕೊಳ್ಳಲಿದೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ವೆರಿಯೆಂಟ್‌ಗಳು 117.2 ಕೆ.ಜಿ ತೂಕ ಹೊಂದಿದ್ದರೆ ಹೆಚ್ಚಿನ ಬ್ಯಾಟರಿ ಪ್ಯಾಕ್ ಹೊಂದಿರುವ ಐಕ್ಯೂಬ್ ಎಸ್‌ಟಿ ವೆರಿಯೆಂಟ್ 128 ಕೆ.ಜಿ ತೂಕ ಹೊಂದಿದ್ದು, 32 ಲೀಟರ್ ಅಂಡರ್ ಸ್ಟೋರೇಜ್ ಸ್ಪೆಸ್ ಮತ್ತು 157 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇನ್ನು ಹೊಸ ಸ್ಕೂಟರ್‌ನಲ್ಲಿ ಕಂಪನಿಯು ಟೆಲಿಸ್ಕೋಪಿಕ್ ಫ್ರಂಟ್ ಫೋಕ್ಸ್ ಮತ್ತು ಹೊಂದಾಣಿಕೆ ಮಾಡಬಹುದಾದ ಟ್ವಿನ್ ಶಾಕ್ ರಿಯರ್ ಅಬ್ಸಾರ್ವರ್ ನೀಡಲಾಗಿದ್ದು, 220 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯ ಚಕ್ರದಲ್ಲಿ 130 ಎಂಎಂ ಡ್ರಮ್ ಬ್ರೇಕ್‌ನೊಂದಿಗೆ 12 ಇಂಚಿನ ಅಲಾಯ್ ವ್ಹೀಲ್ ನೀಡಿದೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೊಸ ಸ್ಕೂಟರ್‌ನಲ್ಲಿ ಟಿವಿಎಸ್ ಕಂಪನಿಯು ಐಕ್ಯೂಬ್ ಸ್ಟ್ಯಾಂಡರ್ಡ್ ಮತ್ತು ಐಕ್ಯೂಬ್ ಎಸ್ ಮಾದರಿಗಳಿಗಾಗಿ 5 ಇಂಚಿನ ಫುಲ್ ಕಲರ್ ಟಿಎಫ್‌ಟಿ ಡಿಸ್‌ಪ್ಲೇ ನೀಡಿದ್ದರೆ ಐಕ್ಯೂಬ್ ಎಸ್‌ಟಿ ಮಾದರಿಯಲ್ಲಿ 7 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ನೀಡಿದ್ದು, ಎಸ್‌ಟಿ ಮಾದರಿಗಾಗಿ ಮಾತ್ರ ಟಚ್‌ಸ್ಕೀನ್ ಸೌಲಭ್ಯ ನೀಡಲಾಗಿದೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಹೊಸ ಇವಿ ಸ್ಕೂಟರ್‌ನಲ್ಲಿ ಟಿವಿಎಸ್ ಕಂಪನಿಯು ಸ್ಮಾರ್ಟ್ಎಕ್ಸ್‌ಕನೆಕ್ಟ್ ಸಿಸ್ಟಂ ಜೋಡಣೆ ಮಾಡಿದ್ದು, ಹೊಸ ಕನೆಕ್ಟಿವಿಟಿ ಸೌಲಭ್ಯದೊಂದಿಗೆ ಬಳಕೆದಾರರು ವೆಹಿಕಲ್ ಹೆಲ್ತ್, ಕ್ಲೌಂಡ್ ಕನೆಕ್ವಿಟಿ, ಮ್ಯೂಜಿಕ್ ಪ್ಲೇಯರ್, ಬ್ಲೂಟೂತ್ ಮತ್ತು ಸೇಫ್ಟಿ ನೋಟಿಫಿಕೇಷನ್ ಒಳಗೊಂಡಿದೆ.

ಹೆಚ್ಚಿನ ಮೈಲೇಜ್ ಪ್ರೇರಿತ 2022ರ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಐಕ್ಯೂಬ್ ಹೈ ಎಂಡ್ ಮಾದರಿಯು ಅಮೆಜಾನ್ ಅಲೆಕ್ಸಾ ಸರ್ಪೊಟ್ ಹೊಂದಿದ್ದು, ಹೊಸ ಸ್ಕೂಟರ್‌ಗಳು ಒಟ್ಟು 11 ಬಣ್ಣಗಳ ಆಯ್ಕೆ ಹೊಂದಿದೆ. ಪ್ರತಿ ವೆರಿಯೆಂಟ್ ಪ್ರತ್ಯೇಕ ಬಣ್ಣಗಳ ಆಯ್ಕೆಯಿದ್ದು, ಪ್ರಮುಖ ಇವಿ ಸ್ಕೂಟರ್ ಮಾದರಿಗಳಿಗೆ ಇದು ಉತ್ತಮ ಪೈಪೋಟಿ ನೀಡಲಿದೆ.

More from DriveSpark

Article Published On: Wednesday, May 18, 2022, 19:10 [IST]
English summary
New tvs iqube launched in india prices start at rs 98 564 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+