ಪ್ರತಿ ಚಾರ್ಜ್‌ಗೆ 190 ಕಿ.ಮೀ ಮೈಲೇಜ್ ಪ್ರೇರಿತ ಆಕ್ಸೆಲೆರೊ ಪ್ಲಸ್ ಇವಿ ಸ್ಕೂಟರ್ ಬಿಡುಗಡೆ
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ವೇಗವಾಗಿ ಹೆಚ್ಚುತ್ತಿದ್ದು, ಅನೇಕ ಸ್ಟಾರ್ಟ್ಅಪ್ ಕಂಪನಿಗಳು ತಮ್ಮ ಹೊಸ ಇವಿ ಮಾದರಿಗಳೊಂದಿಗೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಪ್ರವೇಶಿಸುತ್ತಿವೆ.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಸದ್ಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಅಗ್ರಸ್ಥಾನದಲ್ಲಿದ್ದು, ಕೆಳದ ಎರಡು ವರ್ಷಗಳಲ್ಲಿ ಹಲವಾರು ಸ್ಟಾರ್ಟ್ಅಪ್ ಕಂಪನಿಯು ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿವೆ. ಇದೀಗ ನಿಜ್(NIJ) ಆಟೋಮೊಟಿವ್ ಎಲೆಕ್ಟ್ರಿಕ್ ಕಂಪನಿಯು ತನ್ನ ಬಹನೀರಿಕ್ಷಿತ ಆಕ್ಸೆಲೆರೊ ಪ್ಲಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಬಜೆಟ್ ಬೆಲೆಯೊಂದಿಗೆ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದೆ.

ಹೈ ಸ್ಪೀಡ್ ವೈಶಿಷ್ಟ್ಯತೆ ಹೊಂದಿರುವ ಹೊಸ ಅಕ್ಸೆಲೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎರಡು ಮಾದರಿಗಳಲ್ಲಿ ಬಿಡುಗಡೆಗೊಂಡಿದ್ದು, ಲಿಥಿಯಂ ಐಯಾನ್ ಬ್ಯಾಟರಿ ಮತ್ತು ಲೀಡ್ ಆಸಿಡ್ ಬ್ಯಾಟರಿ ಆಯ್ಕೆ ಹೊಂದಿದೆ.

ಆಕ್ಸೆಲೆರೊ ಪ್ಲಸ್ ಲೀಡ್ ಆಸಿಡ್ ಬ್ಯಾಟರಿ ಆಯ್ಕೆ ಹೊಂದಿರುವ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 53 ಸಾವಿರ ಬೆಲೆ ಹೊಂದಿದ್ದು, ಲಿಥಿಯಂ ಐಯಾನ್ ಬ್ಯಾಟರಿ ಆಯ್ಕೆ ಹೊಂದಿರುವ ಮಾದರಿಯು ರೂ. 69 ಸಾವಿರ ಬೆಲೆ ಹೊಂದಿದೆ.
ಹೊಸ ಇವಿ ಸ್ಕೂಟರ್ ವಾಲ್ವ್ ನಿಯಂತ್ರಿತ ಲಿಡ್-ಆಸಿಡ್ (VRLA) ಮತ್ತು ಲಿಥಿಯಂ ಫೆರೋ ಫಾಸ್ಫೇಟ್ (LFP) ಬ್ಯಾಟರಿ ಪ್ಯಾಕ್ ಹೊಂದಿದ್ದು, ಲಿಡ್-ಆಸಿಡ್ ಮಾದರಿಯಲ್ಲಿ ಒಂದು ವೆರಿಯೆಂಟ್ ಹೊಂದಿದ್ದರೆ ಲೀಥಿಯ ಅಯಾನ್ ಹೊಂದಿರುವ ಮಾದರಿಯಲ್ಲಿ ಮೂರು ವೆರಿಯೆಂಟ್ ಹೊಂದಿದೆ.

ಲೀಥಿಯ ಅಯಾನ್ ಹೊಂದಿರುವ ಮಾದರಿಯಲ್ಲಿ ಕಂಪನಿಯು 1.5kW (48V), 1.5kW (60W) ಮತ್ತು ಡ್ಯುಯಲ್ ಬ್ಯಾಟರಿ 3kW (48V) ಆಯ್ಕೆ ನೀಡಲಾಗಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 190 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.
ಹೊಸ ಇವಿ ಸ್ಕೂಟರ್ ಇಕೋ, ಸಿಟಿ ಮತ್ತು ಸ್ಪೋರ್ಟ್ಸ್ ರೈಡಿಂಗ್ ಮೋಡ್ ಹೊಂದಿದ್ದು, 60 ಕಿ.ಮೀ ಟಾಪ್ ಸ್ಪೀಡ್ ಮೂಲಕ ಸಿಟಿ ಮೋಡ್‌ನಲ್ಲಿ ಕನಿಷ್ಠ 120 ಕಿ.ಮೀ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಕನಿಷ್ಠ 100 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಲೀಡ್ ಆಸಿಡ್ ಬ್ಯಾಟರಿ ಮಾದರಿಯು ಸಂಪೂರ್ಣವಾಗಿ ಚಾರ್ಜ್ ಆಗಲು 6-8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಲಿಥಿಯಂ ಬ್ಯಾಟರಿ ಮಾದರಿಯು ಕೇವಲ 3-4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ.

ಹೊಸ ನಿಜ್ ಆಟೋಮೊಟಿವ್ ಆಕ್ಸೆಲೆರೊ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ವಿನೂತನ ವಿನ್ಯಾಸದಲ್ಲಿ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್ ಫುಲ್ ಎಲ್ಇಡಿ ಲೈಟ್ಸ್ ಹೊಂದಿದೆ. ಹೊಸ ಸ್ಕೂಟರ್‌ನ ಮುಂಭಾಗದ ಏಪ್ರಾನ್‌ನಲ್ಲಿ ಹೆಡ್‌ಲೈಟ್‌ಗಳನ್ನು ಅಳವಡಿಸಲಾಗಿದ್ದು, ಅದರ ಎರಡೂ ಬದಿಯಲ್ಲಿ ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ನೀಡಲಾಗಿದೆ.

ಹೊಸ ಸ್ಕೂಟರ್‌ನಲ್ಲಿ ಎಲ್‌ಇಡಿ ಡಿಆರ್‌ಎಲ್ ಅನ್ನು 'ವಿ' ಆಕಾರದಲ್ಲಿ ನೀಡಲಾಗಿದ್ದು, ಅದು ಸ್ಕೂಟರ್‌ಗೆ ಉತ್ತಮ ಹೊರ ನೋಟವನ್ನು ನೀಡುತ್ತಿದೆ. ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ಸೀಟ್ ಬ್ಯಾಕ್‌ರೆಸ್ಟ್, ಗ್ರಾಬ್ ರೈಲ್, ವೈಡ್ ಫುಟ್ ಬೋರ್ಡ್, ಸ್ಪೋರ್ಟಿ ರಿಯಲ್ ವ್ಯೂ ಮಿರರ್‌ಗಳು, ಹೈಡ್ರಾಲಿಕ್ ಸಸ್ಪೆನ್ಷನ್ ಮತ್ತು ಡ್ಯುಯಲ್ ಟೋನ್ ಚಕ್ರಗಳನ್ನು ಒದಗಿಸಲಾಗಿದೆ.

ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ಸುರಕ್ಷಾ ವೈಶಿಷ್ಟ್ಯತೆಗಳಾಗಿ ಡಿಜಿಟಲ್ ಡಿಸ್‌ಪ್ಲೇ, ಯುಎಸ್‌ಬಿ ಸಾಕೆಟ್, ಕ್ರೂಸ್ ಕಂಟ್ರೋಲ್, ರಿವರ್ಸ್ ಗೇರ್, ಥೆಫ್ಟ್ ಪ್ರೊಟೆಕ್ಷನ್, ಆಂಟಿ ಥೆಫ್ಟ್ ಅಲಾರಾಂ, ರಿಮೋಟ್ ಲಾಕ್/ಅನ್‌ಲಾಕ್ ಸೇರಿದಂತೆ ಹಲವು ಹೊಸ ಸೌಲಭ್ಯಗಳನ್ನು ಒದಗಿಸಲಾಗಿದೆ.

ಹೊಸ ಸ್ಕೂಟರ್ 1,720 ಎಂಎಂ ಉದ್ದ, 690 ಎಂಎಂ ಅಗಲ ಮತ್ತು 1,100 ಎಂಎಂ ಎತ್ತರ, 1,280 ಎಂಎಂ ವ್ಹೀಲ್‌ಬೇಸ್ ಮತ್ತು 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಎಲೆಕ್ಟ್ರಿಕ್ ಸ್ಕೂಟರ್ 86 ಕೆ.ಜಿ ತೂಕದೊಂದಿಗೆ 150 ಕೆ.ಜಿ ಲೋಡಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಜೊತೆಗೆ ಹೊಸ ಸ್ಕೂಟರ್ ಇಂಪೀರಿಯಲ್ ರೆಡ್, ಬ್ಲ್ಯಾಕ್ ಬ್ಯೂಟಿ, ಪರ್ಲ್ ವೈಟ್ ಮತ್ತು ಗ್ರೇ ಟಚ್ ಸೇರಿದಂತೆ ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಬಿಡುಗಡೆಯೊಂದಿಗೆ ಬುಕಿಂಗ್ ಆರಂಭಿಸಿರುವ ಕಂಪನಿಯು ಶೀಘ್ರದಲ್ಲಿಯೇ ವಿತರಣೆ ಆರಂಭಿಸಲಿದೆ.


Click it and Unblock the Notifications








