ಇವಿ ಸ್ಕೂಟರ್‌ ಬೆಂಕಿ ಅವಘಡ: ಗ್ರಾಹಕರಿಂದ 3,215 ಯುನಿಟ್‌ಗಳನ್ನು ಹಿಂಪಡೆದ ಒಕಿನಾವಾ

ದೇಶದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಇವಿ ವಾಹನ ಬಳಕೆ ಕುರಿತು ಆತಂಕ ವ್ಯಕ್ತವಾಗುತ್ತಿದ್ದು, ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಕಡಿಮೆಯಾಗುವ ಸಾಧ್ಯತೆಯೂ ಇದೆ. ಇದರಿಂದ ಎಚ್ಚೆತ್ತ ಇವಿ ವಾಹನ ತಯಾರಕ ಕಂಪನಿಗಳು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಇವಿ ಸ್ಕೂಟರ್‌ ಬೆಂಕಿ ಅವಘಡ: ಗ್ರಾಹಕರಿಂದ 3,215 ಯುನಿಟ್‌ಗಳನ್ನು ಹಿಂಪಡೆದ ಒಕಿನಾವಾ

ಇತ್ತೀಚೆಗಷ್ಟೆ ಓಲಾ ಸಿಇಒ ಭವಿಷ್ ಅಗರ್ವಾಲ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಎಲೆಕ್ಟ್ರಿಕ್ ವಾಹನಗಳ ಭವಿಷ್ಯದ ಕುರಿತು ಸುದೀರ್ಘ ಚರ್ಚೆ ನಡೆಸಿ, ಓಲಾ ಸ್ಕೂಟರ್‌ ಬಗ್ಗೆ ವಿವರಿಸಿದ್ದರು. ಬಳಿಕ ಬೆಂಕಿ ಅವಘಡಗಳು ಮರುಕಳಿಸದಂತೆ ಪ್ರಮಾಣಿತ ಸ್ಕೂಟರ್‌ಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದರು.

ಇವಿ ಸ್ಕೂಟರ್‌ ಬೆಂಕಿ ಅವಘಡ: ಗ್ರಾಹಕರಿಂದ 3,215 ಯುನಿಟ್‌ಗಳನ್ನು ಹಿಂಪಡೆದ ಒಕಿನಾವಾ

ಇದೀಗ ಒಕಿನಾವಾ ಕಂಪನಿ ಕೂಡ ಗ್ರಾಹಕರ ನಂಬಿಕೆ ಉಳಿಸಿಕೊಳ್ಳಲು, ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ ನಂತರ ಪ್ರೈಸ್ ಪ್ರೊ ಇ-ಸ್ಕೂಟರ್‌ನ 3,215 ಯುನಿಟ್‌ಗಳನ್ನು ಹಿಂಪಡೆದಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಗ್ರಾಹಕರಿಂದ ಹಿಂಪಡೆಯುತ್ತಿರುವುದು ಇದೇ ಮೊದಲು.

ಇವಿ ಸ್ಕೂಟರ್‌ ಬೆಂಕಿ ಅವಘಡ: ಗ್ರಾಹಕರಿಂದ 3,215 ಯುನಿಟ್‌ಗಳನ್ನು ಹಿಂಪಡೆದ ಒಕಿನಾವಾ

ಕಂಪನಿಯು ಸ್ವಯಂಪ್ರೇರಿತವಾಗಿ ಹಿಂಪಡೆಯುತ್ತಿದ್ದು, ಗ್ರಾಹಕರ ಮೇಲೆ ಒತ್ತಡ ಹೇರಿಲ್ಲ. ಈ ಮರುಪಡೆಯುವಿಕೆಯಿಂದ ಕಂಪನಿಯು ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಹಿಂದಿನ ಕಾರಣವನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತವಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಈ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸುವುದು ಕಂಪನಿಯ ಉದ್ದೇಶವಾಗಿದೆ.

ಇವಿ ಸ್ಕೂಟರ್‌ ಬೆಂಕಿ ಅವಘಡ: ಗ್ರಾಹಕರಿಂದ 3,215 ಯುನಿಟ್‌ಗಳನ್ನು ಹಿಂಪಡೆದ ಒಕಿನಾವಾ

ಮರುಸ್ಥಾಪನೆ ಕಾರ್ಯಕ್ರಮದ ಭಾಗವಾಗಿ, ಕಂಪನಿಯು ಸ್ಕೂಟರ್‌ಗಳ ಬ್ಯಾಟರಿ, ಕನೆಕ್ಟರ್‌ಗಳು ಮತ್ತು ವೈರಿಂಗ್‌ಗಳನ್ನು ಇತರ ಎಲೆಕ್ಟ್ರಾನಿಕ್ ಘಟಕಗಳ ಜೊತೆಗೆ ಪರಿಶೀಲಿಸಲಿದೆ. ಕಂಪನಿಯ ಪ್ರಕಾರ, ಈ ಪರಿಶೀಲನೆ ಪ್ರಕ್ರಿಯೆಯು Praz Pro ಗ್ರಾಹಕರಿಗೆ ಉಚಿತವಾಗಿದೆ. ಗ್ರಾಹಕರು ಹಿಂತಿರುಗಿಸಲು ಓಕಿನಾವಾದಲ್ಲಿನ ಹತ್ತಿರದ ಡೀಲರ್‌ಶಿಪ್ ಅಥವಾ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು.

ಇವಿ ಸ್ಕೂಟರ್‌ ಬೆಂಕಿ ಅವಘಡ: ಗ್ರಾಹಕರಿಂದ 3,215 ಯುನಿಟ್‌ಗಳನ್ನು ಹಿಂಪಡೆದ ಒಕಿನಾವಾ

"ಕಂಪನಿಯು ತನ್ನ ಗ್ರಾಹಕರ ಸುರಕ್ಷತೆಗೆ ಸಮರ್ಪಿತವಾಗಿದೆ. ಹಾಗಾಗಿ ಯಾವುದೇ ತಪ್ಪುಗಳನ್ನು ಮಾಡಲು ಬಯಸುವುದಿಲ್ಲ. ಓಕಿನಾವಾ ಪ್ರೈಸ್ ಪ್ರೊ ಇ-ಸ್ಕೂಟರ್‌ಗಳನ್ನು ಪರೀಕ್ಷಿಸಲು ಮತ್ತು ಹೆಚ್ಚು ಸುರಕ್ಷಿತವಾಗಿಸಲು ಈ ಸ್ವಯಂಪ್ರೇರಿತ ಮರುಸ್ಥಾಪನೆ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು Okinawa ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ."

ಇವಿ ಸ್ಕೂಟರ್‌ ಬೆಂಕಿ ಅವಘಡ: ಗ್ರಾಹಕರಿಂದ 3,215 ಯುನಿಟ್‌ಗಳನ್ನು ಹಿಂಪಡೆದ ಒಕಿನಾವಾ

ಒಕಿನಾವಾದಂತೆ, ಇತರ ತಯಾರಕರು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಗ್ರಾಹಕರು ನಂಬುವಂತೆ ಮರುಸ್ಥಾಪನೆಯನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಕಳೆದ ಎರಡು ವಾರಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸುಮಾರು ಆರಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾಗಿರುವ ಪ್ರಕರಣಗಳು ವರದಿಯಾಗಿವೆ.

ಇವಿ ಸ್ಕೂಟರ್‌ ಬೆಂಕಿ ಅವಘಡ: ಗ್ರಾಹಕರಿಂದ 3,215 ಯುನಿಟ್‌ಗಳನ್ನು ಹಿಂಪಡೆದ ಒಕಿನಾವಾ

ಈ ಘಟನೆಗಳು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಲು ಯೋಜಿಸುತ್ತಿರುವ ಗ್ರಾಹಕರನ್ನು ಬೆಚ್ಚಿಬೀಳಿಸುವಂತೆ ಮಾಡಿದ್ದು, ಎಲೆಕ್ಟ್ರಿಕ್ ಸ್ಕೂಟರ್‌ಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಇಂತಹ ಘಟನೆಗಳು ತುಂಬಾ ಪರಿಣಾಮಕಾರಿಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇವಿ ಸ್ಕೂಟರ್‌ ಬೆಂಕಿ ಅವಘಡ: ಗ್ರಾಹಕರಿಂದ 3,215 ಯುನಿಟ್‌ಗಳನ್ನು ಹಿಂಪಡೆದ ಒಕಿನಾವಾ

ಇದು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ ಉದ್ಯಮವನ್ನು ನಿಧಾನಗೊಳಿಸಬಹುದು. ಕೇಂದ್ರ ಸರ್ಕಾರದ ಅಗ್ನಿಶಾಮಕ ಮತ್ತು ಪರಿಸರ ಸಂಸ್ಥೆ (CFEEA) ವಾಹನಗಳಲ್ಲಿ ಬೆಂಕಿಯ ಕಾರಣವನ್ನು ಕಂಡುಹಿಡಿಯಲು ಎಲೆಕ್ಟ್ರಿಕ್ ವಾಹನ ತಯಾರಕರಿಗೆ ನೋಟಿಸ್ ಕಳುಹಿಸಿದೆ.

ಇವಿ ಸ್ಕೂಟರ್‌ ಬೆಂಕಿ ಅವಘಡ: ಗ್ರಾಹಕರಿಂದ 3,215 ಯುನಿಟ್‌ಗಳನ್ನು ಹಿಂಪಡೆದ ಒಕಿನಾವಾ

ಅದೇ ಸಮಯದಲ್ಲಿ, ರಸ್ತೆ ಮತ್ತು ಸಾರಿಗೆ ಸಚಿವಾಲಯವು ಇಂತಹ ಘಟನೆಗಳನ್ನು ತಡೆಗಟ್ಟಲು ಕ್ರಮಗಳನ್ನು ಸೂಚಿಸಲು CFEEAಗೆ ನಿರ್ದೇಶನ ನೀಡಿದೆ. ಬೆಂಕಿ ಪ್ರಕರಣಗಳಲ್ಲದೆ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳಲ್ಲಿ ಸ್ಕೂಟರ್‌ನ ಕಳಪೆ ನಿರ್ಮಾಣ ಗುಣಮಟ್ಟ, ಸಾಫ್ಟ್‌ವೇರ್ ವೈಫಲ್ಯ, ತ್ವರಿತ ಡಿಸ್ಚಾರ್ಜ್ ಇತ್ಯಾದಿಗಳು ಸೇರಿವೆ.

ಇವಿ ಸ್ಕೂಟರ್‌ ಬೆಂಕಿ ಅವಘಡ: ಗ್ರಾಹಕರಿಂದ 3,215 ಯುನಿಟ್‌ಗಳನ್ನು ಹಿಂಪಡೆದ ಒಕಿನಾವಾ

ಕಳೆದ ಎರಡು ವಾರಗಳಲ್ಲಿ, ಓಲಾ ಎಲೆಕ್ಟ್ರಿಕ್, ಓಕಿನಾವಾ, ಪ್ಯೂರ್ ಇವಿ ಮತ್ತು ಜಿತೇಂದ್ರ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪ್ರಕರಣಗಳು ವರದಿಯಾಗಿವೆ. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೆಂಕಿಗೆ ಆಹುತಿಯಾದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರು ತಮ್ಮ ಆತಂಕದ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.

ಇವಿ ಸ್ಕೂಟರ್‌ ಬೆಂಕಿ ಅವಘಡ: ಗ್ರಾಹಕರಿಂದ 3,215 ಯುನಿಟ್‌ಗಳನ್ನು ಹಿಂಪಡೆದ ಒಕಿನಾವಾ

ಇಂತಹ ಅವಘಡಗಳು ಹೀಗೆ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ನಂಬಿಕೆ ಕಡಿಮೆಯಾಗಿ, ಇವಿ ವಾಹನಗಳು ರಸ್ತೆಗಳಲ್ಲಿ ಕಾಣಿಸಿಕೊಳ್ಳುವುದೇ ಅಪರೂಪವಾಗಲಿದೆ. ಇದು ಮುಂದಿನ ಎಲೆಕ್ಟ್ರಿಕ್ ವಾಹನ ಅಭಿವೃದ್ದಿಗೆ ತುಂಬಲಾಗದ ನಷ್ಟವಾಗಿ ಪರಿಣಮಿಸಬಹುದು.

ಇವಿ ಸ್ಕೂಟರ್‌ ಬೆಂಕಿ ಅವಘಡ: ಗ್ರಾಹಕರಿಂದ 3,215 ಯುನಿಟ್‌ಗಳನ್ನು ಹಿಂಪಡೆದ ಒಕಿನಾವಾ

ಈ ನಿಟ್ಟಿನಲ್ಲಿ ಎಲ್ಲಾ ಇವಿ ವಾಹನ ತಯಾರಕ ಕಂಪನಿಗಳು ತಮ್ಮ ಮಾದರಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ದೋಷಗಳು ಕಂಡುಬಂದಿಲ್ಲಿ ಎಚ್ಚರ ವಹಿಸುತ್ತಿದ್ದಾರೆ. ಗ್ರಾಹಕರ ಕೈ ಸೇರುವ ಮುನ್ನವೇ ವಾಹನಗಳನ್ನು ಪರಿಶೀಲಿಸಿ ಯಾವುದೇ ಅವಘಡಗಳು ಸಂಭವಿಸದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

More from DriveSpark

Article Published On: Monday, April 18, 2022, 12:48 [IST]
English summary
Okinawa recalls 3215 units of praise pro electric scooter details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+