14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇವಿ ಸ್ಕೂಟರ್ ವಿತರಣೆ ಹೆಚ್ಚಳಕ್ಕೆ ಬೃಹತ್ ಯೋಜನೆ ರೂಪಿಸಿದ್ದು, ಇನ್ನುಂದೆ ಕಂಪನಿಯು ಹೊಸ ಸ್ಕೂಟರ್ ಖರೀದಿಸಿದ 14 ದಿನದೊಳಗಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಭರವಸೆ ನೀಡಿದೆ.

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಆರಂಭದಲ್ಲಿ ಕಾರಣಾಂತರಗಳಲ್ಲಿ ವಿತರಣೆಯಲ್ಲಿ ಹಿನ್ನಡೆ ಅನುಭವಿಸಿತ್ತು. ಆದರೆ ಇದೀಗ ಉತ್ಪಾದನಾ ಪ್ರಮಾಣವನ್ನು ಸಾಕಷ್ಟು ಸುಧಾರಿಸುತ್ತಿದ್ದು, ಕಂಪನಿಗಳು ಕಳೆದ ತಿಂಗಳು ಬರೋಬ್ಬರಿ 12 ಸಾವಿರ ಯುನಿಟ್ ಮೂಲಕ ಹೊಸ ದಾಖಲೆಗೆ ಕಾರಣವಾಗಿತ್ತು.

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

ಇದೀಗ ಕಂಪನಿಯು ಉತ್ಪಾದನಾ ಹೆಚ್ಚಳದೊಂದಿಗೆ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳುತ್ತಿದ್ದು, 14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನದ ಮೂಲಕ ಗ್ರಾಹಕರಿಗೆ ಅತಿ ಕಡಿಮೆ ಅವಧಿಯಲ್ಲಿ ಸ್ಕೂಟರ್ ವಿತರಣೆ ಮಾಡುವ ಭರವಸೆ ನೀಡಿದೆ.

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನವನ್ನು ಜೂನ್ 1ರಿಂದ ಆರಂಭಿಸುವ ಸಾಧ್ಯತೆಗಳಿದ್ದು, ಹೊಸ ಅಭಿಯಾನ ಆರಂಭ ನಂತರ ಗ್ರಾಹಕರು ಹೊಸ ಸ್ಕೂಟರ್ ಖರೀದಿಗೆ ಅಂತಿಮ ಹಂತ ಖರೀದಿ ಪ್ರಕ್ರಿಯೆ ಕೈಗೊಂಡ ನಂತರ ಅತಿ ಕಡಿಮೆ ಅವಧಿಯಲ್ಲಿ ಇವಿ ಸ್ಕೂಟರ್ ವಿತರಿಸಲಿದೆ.

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

ಎಸ್1 ಪ್ರೊ ಮೂಲಕ ಇವಿ ಸ್ಕೂಟರ್ ಮೂಲಕ ಇವಿ ಸ್ಕೂಟರ್ ವಿಭಾಗದಲ್ಲಿ ಹಲವು ಹೊಸ ದಾಖಲೆಗಳನ್ನು ನಿರ್ಮಿಸುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ಬುಕಿಂಗ್ ಮಾಡಿರುವ ಗ್ರಾಹಕರಿಗೆ ಮೂರನೇ ಹಂತದ ಖರೀದಿ ಪ್ರಕ್ರಿಯೆ ಆರಂಭಿಸಿದ್ದು, ಹೊಸ ಖರೀದಿ ವಿಂಡೋ ಆರಂಭಿಸುವುದೊಂದಿಗೆ ಸ್ಕೂಟರ್ ಬೆಲೆಯಲ್ಲಿ ಮೊದಲ ಬಾರಿಗೆ ಹೆಚ್ಚಳ ಮಾಡಿದೆ.

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

ಓಲಾ ಎಲೆಕ್ಟ್ರಿಕ್ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಗಾಗಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದ್ದು, ಬುಕಿಂಗ್ ಆಧರಿಸಿ ವಿತರಣೆ ಪ್ರಕ್ರಿಯೆಯನ್ನು ತೀವ್ರಗೊಳಿಸಿದೆ. ಆರಂಭದಲ್ಲಿ ಉತ್ಪಾದನಾ ಪ್ರಕ್ರಿಯೆಯಲ್ಲಿ ಆದ ಗೊಂದಲಗಳಿಂದ ನಿಧಾನಗೊಂಡಿದ್ದ ವಿತರಣೆಯು ಇದೀಗ ವೇಗ ಪಡೆದುಕೊಂಡಿದ್ದು, ಕಂಪನಿಯು ಇದೀಗ ಬುಕಿಂಗ್ ಸಲ್ಲಿಸಿರುವ ಇನ್ನುಳಿದ ಗ್ರಾಹಕರಿಗೆ ಖರೀದಿಗೆ ಪ್ರಕ್ರಿಯೆಗೆ ಆಹ್ವಾನ ನೀಡುತ್ತಿದೆ.

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

ಬುಕಿಂಗ್ ಸಲ್ಲಿಸಿ ಟೆಸ್ಟ್ ರೈಡ್ ಪಡೆದುಕೊಂಡಿರುವ ಗ್ರಾಹಕರನ್ನು ಸಂಪರ್ಕಿಸಲಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇವಿ ಖರೀದಿಗಾಗಿ ಮುಂದಿನ ಹಂತದ ಪ್ರಕ್ರಿಯೆಗಳಿಗೆ ಒಪ್ಪಿಗೆ ಪಡೆದುಕೊಳ್ಳುತ್ತಿದ್ದು, ಖರೀದಿ ಪ್ರಕ್ರಿಯೆಗೆ ಅಂತಿಮ ಹಂತದ ಹಣಕಾಸು ವ್ಯವಹಾರ ನಂತರ 14 ದಿನದೊಳಗಾಗಿ ವಿತರಣೆಯಾಗಲಿದೆ.

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

ಇದರೊಂದಿಗೆ ಕಂಪನಿಯು ಹೊಸ ಎಸ್1 ಪ್ರೊ ಸ್ಕೂಟರ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 1.30 ಲಕ್ಷದಿಂದ ರೂ. 1.40 ಲಕ್ಷಕ್ಕೆ ಏರಿಕೆ ಮಾಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಕಂಪನಿಯು 2.0 ಕನೆಕ್ಟೆಡ್ ಸೌಲಭ್ಯಗಳನ್ನು ನೀಡುತ್ತಿದೆ.

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

ಕಳೆದ ಅಗಸ್ಟ್‌ನಲ್ಲಿ ಇವಿ ಸ್ಕೂಟರ್ ಬಿಡುಗಡೆಯ ನಂತರ ಮೊದಲ ಬಾರಿಗೆ ಬೆಲೆ ಹೆಚ್ಚಿಸಿರುವ ಕಂಪನಿಯು ಬಿಡಿಭಾಗಗಳ ವೆಚ್ಚ ನಿರ್ವಹಣೆ ಮತ್ತು ಹೆಚ್ಚುವರಿ ಫೀಚರ್ಸ್ ಸೇರ್ಪಡೆ ಮಾಡಿರುವ ಗ್ರಾಹಕರಿಗೆ ಹೊರೆಯಾದರೂ ಹೊಸ ಫೀಚರ್ಸ್ ರೈಡಿಂಗ್ ಅನುಭವ ಹೆಚ್ಚಿಸಲಿವೆ.

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

ಓಲಾ ಕಂಪನಿಯು ಇವಿ ಸ್ಕೂಟರ್ ಖರೀದಿದಾಗಿ ಪ್ರಮುಖ ಬ್ಯಾಂಕ್‌ಗಳ ಪಾಲುದಾರಿಕೆಯೊಂದಿಗೆ ಗರಿಷ್ಠ ಸಾಲ ಸೌಲಭ್ಯದೊಂದಿಗೆ ಆಕರ್ಷಕ ಇಎಂಐ ಆಯ್ಕೆಗಳನ್ನು ನೀಡುತ್ತಿದ್ದು, ಓಲಾ ಫೈನಾನ್ಸಿಲ್ ಸರ್ವಿಸ್ ಮೂಲಕವೂ ಗ್ರಾಹಕರು ಹೊಸ ಸ್ಕೂಟರ್ ಖರೀದಿ ಮಾಡಬಹುದಾಗಿದೆ.

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

ಓಲಾ ಎಲೆಕ್ಟ್ರಿಕ್ ಕಂಪನಿಯು ಸದ್ಯಕ್ಕೆ ಎಸ್1 ಪ್ರೊ ಮಾದರಿಯನ್ನು ಮಾತ್ರವೇ ಉತ್ಪಾದನೆಗೊಳಿಸುತ್ತಿದ್ದು, ಎಸ್1 ಮಾದರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈಗಾಗಲೇ ಎಸ್1 ಮಾದರಿಗಾಗಿ ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಕಂಪನಿಯು ಎಸ್1 ಬದಲಾಗಿ ಎಸ್1 ದರಯಲ್ಲಿಯೇ ಎಸ್1 ಪ್ರೊ ಮಾದರಿಯನ್ನೇ ವಿತರಣೆ ಮಾಡುತ್ತಿದ್ದು, ಕೆಲವು ಪ್ರೀಮಿಯಂ ಫೀಚರ್ಸ್‌ಗಳು, ಸಾಫ್ಟ್‌ವೇರ್ ಅಪ್‌ಡೇಟ್, ಅಧಿಕ ಮೈಲೇಜ್ ಬ್ಯಾಟರಿ ರೇಂಜ್ ಮಾತ್ರ ನೀಡಲಾಗಿಲ್ಲ.

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

ಒಂದು ವೇಳೆ ಎಸ್1 ಮಾದರಿಗಾಗಿ ಬುಕಿಂಗ್ ಮಾಡಿದ್ದರೂ ಅಂತಹ ಗ್ರಾಹಕರಿಗೆ ಕೇವಲ ಎಸ್1 ಪ್ರೊ ಮಾದರಿಯು ಸಾಮಾನ್ಯ ಆವೃತ್ತಿಯನ್ನು ವಿತರಣೆ ನೀಡಲಾಗುತ್ತಿದ್ದು, ಒಂದು ವೇಳೆ ಹೆಚ್ಚುವರಿ ಫೀಚರ್ಸ್ ಮತ್ತು ಅಧಿಕ ಮೈಲೇಜ್ ರೇಂಜ್ ಬಯಸಿದರೆ ಇನ್ನುಳಿದ ಹಣ ಪಾವತಿ ಮಾಡಿ ಹೈ ಎಂಡ್ ಮಾದರಿಗೆ ಉನ್ನತೀಕರಿಸಿಕೊಳ್ಳಬಹುದಾದ ಆಯ್ಕೆ ನೀಡಲಾಗಿದೆ.

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

ಈಗಾಗಲೇ ಎಸ್1 ಪ್ರೊ ಮಾದರಿಗಾಗಿ ಬುಕಿಂಗ್ ಮಾಡಿರುವ ಗ್ರಾಹಕರು ಕಂಪನಿಯು ನಿಗದಿಪಡಿಸಿರುವ ತಾಂತ್ರಿಕ ಅಂಶಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲವಾದರೂ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ 2.0 ಸಾಫ್ಟ್‌ವೇರ್ ಅಪ್‌ಡೇಟ್ ಹೊಂದಿರುವ ಎಸ್1 ಪ್ರೊ ಮಾದರಿಯು ಇದೇ ಕಾರಣಕ್ಕೆ ತುಸು ದುಬಾರಿಯಾಗಿದೆ.

14 ದಿನಗಳ ಗ್ಯಾರಂಟಿ ಡೆಲಿವರಿ ಅಭಿಯಾನ: ಇವಿ ಸ್ಕೂಟರ್ ಮಾರಾಟ ಹೆಚ್ಚಳಕ್ಕೆ ಓಲಾ ಹೊಸ ಪ್ಲ್ಯಾನ್

ಈ ಮೂಲಕ ಅತ್ಯತ್ತಮ ಕಾರ್ಯಕ್ಷಮತೆ, ಗರಿಷ್ಠ ಮೈಲೇಜ್, ಪ್ರೀಮಿಯಂ ಫೀಚರ್ಸ್ ಮತ್ತು ಬಜೆಟ್ ಬೆಲೆಯು ಹೊಸ ಸ್ಕೂಟರ್ ಆಯ್ಕೆ ಮೌಲ್ಯವನ್ನು ಹೆಚ್ಚಿಸಿದ್ದು, ಪ್ರತಿ ಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

More from DriveSpark

Article Published On: Tuesday, May 31, 2022, 13:22 [IST]
English summary
Ola electric commences 14 day guaranteed delivery campaign in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+