ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್1 ಮತ್ತು ಎಸ್1 ಪ್ರೊ ಇವಿ ಸ್ಕೂಟರ್ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಹೊಸ ಉತ್ಪನ್ನಗಳ ಮಾಹಿತಿ ಮತ್ತು ಟೆಸ್ಟ್ ರೈಡ್ ಸೌಲಭ್ಯಕ್ಕಾಗಿ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಆರಂಭದ ನಂತರ ಸಂಪೂರ್ಣವಾಗಿ ಆನ್‌ಲೈನ್ ವ್ಯವಹಾರ ನಡೆಸುತ್ತಿರುವ ಓಲಾ ಕಂಪನಿಯು ಗ್ರಾಹಕರ ಮನೆ ಬಾಗಿಲಿಗೆ ತನ್ನ ಉತ್ಪನ್ನಗಳನ್ನು ತಲುಪಿಸುತ್ತಿದ್ದು, ಇದೇ ಮೊದಲ ಬಾರಿಗೆ ಕಂಪನಿಯು ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ಸ್ಕೂಟರ್ ಕೇಂದ್ರಗಳಲ್ಲಿ ಆಸಕ್ತ ಗ್ರಾಹಕರು ಹೊಸ ಉತ್ಪನ್ನಗಳ ಮಾಹಿತಿ ಜೊತೆ ಟೆಸ್ಟ್ ರೈಡ್ ಪಡೆದುಕೊಳ್ಳುವ ಅವಕಾಶ ನೀಡಲಾಗಿದ್ದು, ನುರಿತ ಉದ್ಯೋಗಿಗಳ ತಂಡವು ಗ್ರಾಹಕರಿಗೆ ಹೊಸ ಉತ್ಪನ್ನಗಳ ನಿಖರ ಮಾಹಿತಿ ಜೊತೆ ಖರೀದಿ ಪ್ರಕ್ರಿಯೆಯ ಕುರಿತಾಗಿ ಮಾಹಿತಿ ಒದಗಿಸುತ್ತದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಸದ್ಯ ಪುಣೆ ಮತ್ತು ಚಂಡೀಗಢದಲ್ಲಿ ಮೊದಲ ಎರಡು ಇವಿ ಪ್ರಚಾರ ಕೇಂದ್ರಗಳನ್ನು ತೆರೆದಿದ್ದು, ಇಲ್ಲಿ ಎಸ್1 ಮತ್ತು ಎಸ್1 ಪ್ರೊ ಮಾದರಿಗಳನ್ನು ಪ್ರದರ್ಶನಗೊಳಿಸಲಾಗುತ್ತಿದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಇವುಗಳನ್ನು ತರಲಾಗಿದ್ದು, ಶೀಘ್ರದಲ್ಲಿಯೇ ದೇಶಾದ್ಯಂತ ಪ್ರಮುಖ ನಗರಗಳಲ್ಲಿ 500ಕ್ಕೂ ಹೆಚ್ಚು ಇವಿ ಪ್ರಚಾರ ಕೇಂದ್ರಗಳನ್ನು ತೆರೆಯಲು ಕಂಪನಿಯು ಯೋಜನೆ ರೂಪಿಸಿದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಹೊಸ ಇವಿ ಸ್ಕೂಟರ್‌ಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವುದರಿಂದ ಕಂಪನಿಗೆ ಹೆಚ್ಚಿನ ಲಾಭವಿದ್ದರೂ ಪರಿಣಾಮಕಾರಿಯಾಗಿ ಗ್ರಾಹಕರನ್ನು ತಲುಪಲು ಮಾಹಿತಿ ಕೇಂದ್ರಗಳ ಮಹತ್ವ ಅರಿತಿರುವ ಕಂಪನಿಯು ಹಂತ-ಹಂತವಾಗಿ ಹೊಸ ಯೋಜನೆ ವಿಸ್ತರಿಸುವ ಯೋಜನೆ ಹೊಂದಿದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಆಸಕ್ತ ಗ್ರಾಹಕರು ಇದೀ ಎಲೆಕ್ಟ್ರಿಕ್ ಸ್ಕೂಟರ್‌ಗಳ ಡೆಮೊ ಮತ್ತು ಟೆಸ್ಟ್ ರೈಡ್ ಅನ್ನು ತೆಗೆದುಕೊಳ್ಳಬಹುದಾಗಿದ್ದು, ಇವಿ ಪ್ರಚಾರ ಕೇಂದ್ರಗಳಲ್ಲಿ ಎಸ್1 ಮತ್ತು ಎಸ್1 ಪ್ರೊ ಮಾದರಿಗಳ ಡೆಮೊ ಮಾದರಿಗಳನ್ನು ಪ್ರದರ್ಶನಗೊಳಿಸಲಾಗುತ್ತಿದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಎಸ್1 ವಿತರಣೆ ಆರಂಭಿಸಿದ ಓಲಾ ಎಲೆಕ್ಟ್ರಿಕ್

ಹೊಸ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ಸುಮಾರು 20 ಸಾವಿರಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬುಕಿಂಗ್ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಹೊಸ ತಂತ್ರಜ್ಞಾನ ಪ್ರೇರಿತ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 99,999 ಬೆಲೆ ಹೊಂದಿದ್ದು, ಇದು ಎಸ್1 ಪ್ರೊ ಮಾದರಿಗಿಂತ ತುಸು ಕಡಿಮೆ ಫೀಚರ್ಸ್‌ಗಳ ಜೊತೆಗೆ ಕಡಿಮೆ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಎಸ್1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 3KWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಮೂಲಕ ARAI ಪ್ರಮಾಣೀಕೃತ 131 ಕಿಮೀ ಮೈಲೇಜ್ ಹಿಂದಿರುಗಿಸಲಿದೆ. ಇದು ಇಕೋ ಮೋಡ್‌ನಲ್ಲಿ ಗರಿಷ್ಠ 128 ಕಿಮೀ, 101 ಕಿ.ಮೀ ನಾರ್ಮಲ್ ಮೋಡ್‌ನಲ್ಲಿ ಮತ್ತು ಸ್ಪೋರ್ಟ್ ಮೋಡ್‌ನಲ್ಲಿ ಕನಿಷ್ಠ 90 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಪ್ರಕಾರ, ಎಸ್1 ಮಾದರಿಯ ಗರಿಷ್ಠ ವೇಗವು 95 ಕಿ.ಮೀ ಆಗಿದ್ದು, ಈ ಕಾರಣದಿಂದಾಗಿ ಈ ಸ್ಕೂಟರ್ ಅನ್ನು ಹೆದ್ದಾರಿಗಳಲ್ಲಿಯೂ ಸುಲಭವಾಗಿ ಓಡಿಸಬಹುದಾಗಿದೆ. ಜೊತೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರು ರೆಡ್, ಜೆಟ್ ಬ್ಲಾಕ್, ಬ್ರೊಸಲಿನ್ ವೈಟ್, ನಿಯೋ ಮಿಂಟ್, ಲಿಕ್ವಿಡ್ ಸಿಲ್ವರ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಹೊಸ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರು ಪೂರ್ಣ ಮೊತ್ತದೊಂದಿಗೆ ಇಲ್ಲವೆ ವಿವಿಧ ಹಣಕಾಸು ಸೌಲಭ್ಯಗಳೊಂದಿಗೆ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಇವೆಡರ ಜೊತೆಗೆ ಕಂಪನಿಯು ತನ್ನದೇ ಆದ ಓಲಾ ಫೈನಾನ್ಸ್ ಮೂಲಕವೂ ವಿವಿಧ ಹಣಕಾಸು ಸೇವೆಗಳನ್ನು ಒದಗಿಸುತ್ತದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಎಸ್1 ಇವಿ ಸ್ಕೂಟರ್ ಖರೀದಿಗಾಗಿ ರೂ. 2,999 ಗಳಗೆ ಲಭ್ಯವಿರುವ ಇಎಂಐನೊಂದಿಗೆ ಸಾಲ-ಸೌಲಭ್ಯಗಳು ಲಭ್ಯವಿದ್ದು, ಓಲಾ ಕಂಪನಿಯೊಂದಿನ ಪಾಲುದಾರಿಕೆ ಬ್ಯಾಂಕ್‌ಗಳಿಂದಲೂ ಸುಲಭ ಹಣಕಾಸು ಸೌಲಭ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

ಹೊಸ ಎಸ್1 ಇವಿ ಸ್ಕೂಟರ್ ಬೆಲೆಯು ಕೆಲವು ರಾಜ್ಯಗಳಲ್ಲಿ ಸಬ್ಸಡಿ ಆಧರಿಸಿ ತುಸು ಹೆಚ್ಚಳವಾಗಲಿದ್ದು, ಹೊಸ ಇವಿ ಸ್ಕೂಟರ್ ಖರೀದಿಗಾಗಿ ಕಂಪನಿಯು ರೂ. 499 ಮುಂಗಡ ಹಣದೊಂದಿಗೆ ಬುಕಿಂಗ್ ಮಾಡಬಹುದಾಗಿದೆ. ಓಲಾ ಎಲೆಕ್ಟ್ರಿಕ್‌ನ ಅಧಿಕೃತ ವೆಬ್‌ಸೈಟ್‌ (https://book.olaelectric.com/) ಮೂಲಕ ಸ್ಕೂಟರ್ ಅನ್ನು ಬುಕ್ ಮಾಡಬಹುದಾಗಿದ್ದು, ಉತ್ಪಾದನೆ ಹೆಚ್ಚಿರುವುದರಿಂದ ಕಡಿಮೆ ಅವಧಿಯಲ್ಲಿ ವಿತರಣೆಯಾಗಲಿದೆ.

ಇವಿ ಸ್ಕೂಟರ್ ಪ್ರಚಾರ ಕೇಂದ್ರಗಳಿಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್

2021ರ ಅಗಸ್ಟ್ 15ರಂದೇ ಬಿಡುಗಡೆಯಾಗಿದ್ದ ಎಸ್1 ಮಾದರಿಯನ್ನು ಕಂಪನಿಯು ಕಾರಣಾಂತರಗಳಿಂದ ವಿತರಣೆ ಮಾಡಿರಲಿಲ್ಲ. ತದನಂತರ ಕೆಲವು ಹೊಸ ಬದಲಾವಣೆಗಳೊಂದಿಗೆ ಅಭಿವೃದ್ದಿಗೊಳಿಸುವ ಮೂಲಕ ಇದೀಗ ಮತ್ತೆ ಮರುಬಿಡುಗಡೆ ಮಾಡಲಾಗಿದೆ.

More from DriveSpark

Article Published On: Saturday, September 17, 2022, 14:43 [IST]
English summary
Ola electric introduced ev centre details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+