25 ಸಾವಿರ ಎಸ್1 ಪ್ರೊ ಗ್ರಾಹಕರಿಗೆ ಮೂವ್ಒಎಸ್ 2.0 ನವೀಕರಣ ಒದಗಿಸಿದ ಓಲಾ ಎಲೆಕ್ಟ್ರಿಕ್
ಮೂವ್ಒಎಸ್ 2.0 ನವೀಕಣವು ಓಲಾ ಎಸ್1 ಪ್ರೊ ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ಜೊತೆಗೆ ಪ್ರಮುಖ ವೈಶಿಷ್ಟ್ಯತೆಗಳನ್ನು ನೀಡಿದ್ದು, ಹೊಸ ವೈಶಿಷ್ಟ್ಯತೆಗಳು ಎಸ್1 ಪ್ರೊ ಸವಾರಿಯನ್ನು ಮತ್ತಷ್ಟು ಸುಲಭಗೊಳಿಸುವುದಲ್ಲದೆ ಹೆಚ್ಚಿನ ಸುರಕ್ಷತೆ ಖಾತ್ರಿಪಡಿಸುತ್ತದೆ.

ಮೂವ್ಒಎಸ್ 2.0 ನವೀಕಣವು ಓಲಾ ಎಸ್1 ಪ್ರೊ ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ಜೊತೆಗೆ ಪ್ರಮುಖ ವೈಶಿಷ್ಟ್ಯತೆಗಳನ್ನು ನೀಡಿದ್ದು, ಹೊಸ ವೈಶಿಷ್ಟ್ಯತೆಗಳು ಎಸ್1 ಪ್ರೊ ಸವಾರಿಯನ್ನು ಮತ್ತಷ್ಟು ಸುಲಭಗೊಳಿಸುವುದಲ್ಲದೆ ಹೆಚ್ಚಿನ ಸುರಕ್ಷತೆ ಖಾತ್ರಿಪಡಿಸುತ್ತದೆ.

ಹೊಸ ಮೂವ್ಒಎಸ್ 2.0 ನವೀಕಣವನ್ನು ಸದ್ಯ 25 ಸಾವಿರ ಎಸ್1 ಪ್ರೊ ಗ್ರಾಹಕರು ಈಗಾಗಲೇ ಅಳವಡಿಸಿಕೊಂಡಿದ್ದು, ಇನ್ನುಳಿದ ಎಲ್ಲಾ ಗ್ರಾಹಕರಿಗೂ ಇದೇ ತಿಂಗಳು 30ರ ಒಳಗಾಗಿ ಹೊಸ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ಪರಿಚಯಿಸಿರುವ ಮೂವ್ಒಎಸ್ 2.0 ನವೀಕಣದಲ್ಲಿ ಎಸ್1 ಪ್ರೊ ಮಾಲೀಕರು ಮುಖ್ಯವಾಗಿ ಇಕೋ ಮೋಡ್, ಡಿಜಿಟಲ್ ಲಾಕ್ ಮತ್ತು ಅನ್‌ಲಾಕ್, ಮ್ಯೂಸಿಕ್ ಮತ್ತು ಕ್ರೂಸ್ ಕಂಟ್ರೊಲ್ ಆಯ್ಕೆಗಳು ಇವಿ ಸ್ಕೂಟರ್ ಸವಾರಿಯ ಮೌಲ್ಯವನ್ನು ಹೆಚ್ಚಿಸಲಿವೆ.

ಮೂವ್ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ಮುಖ್ಯವಾಗಿ ಬ್ಯಾಟರಿ ಡ್ರಾಪ್ ಅನ್ನು ಪರಿಹರಿಸಲಿದ್ದು, ಇದು ಹೊಸ ಇಕೋ ಮೋಡ್‌ನೊಂದಿಗೆ ಸಂಪೂರ್ಣವಾಗಿ ಬ್ಯಾಟರಿ ಡೌನ್ ಆತಂಕವನ್ನು ದೂರ ಮಾಡುತ್ತದೆ. ಕಂಪನಿಯ ಪರೀಕ್ಷೆಯ ಪ್ರಕಾರ ಇಕೋ-ಮೋಡ್ ಪ್ರತಿ ಚಾರ್ಜ್‌ಗೆ ಕನಿಷ್ಠ 170 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ.

ಹೊಸ ಅಪ್‌ಡೇಟ್ ನಂತರ ಈಗಾಗಲೇ ಹಲವಾರು ಗ್ರಾಹಕರು ಪ್ರತಿ ಚಾರ್ಜ್‌ನಲ್ಲಿಯೇ ಗರಿಷ್ಠ 200 ಕಿಲೋ ಮೀಟರ್‌ಗಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಸಾಧಿಸಿದ್ದು, ಇನ್ನುಳಿದ ರೈಡ್ ಮೋಡ್‌ಗಳಲ್ಲೂ ಉತ್ತಮ ಮೈಲೇಜ್ ಜೊತೆಗೆ ಉತ್ತಮ ಪರ್ಫಾಮೆನ್ಸ್ ಕೂಡಾ ಒದಗಿಸಲಿದೆ.

ಇದರ ಜೊತಗೆ ಹೊಸ ಅಪ್‌ಡೇಟ್ ನಂತರ ಡಿಜಿಟಲ್ ಲಾಕ್‌ನೊಂದಿಗೆ ಬರಲಿದ್ದು, ಇದಕ್ಕಾಗಿ ಕಂಪನಿಯು ಓಲಾ ಎಲೆಕ್ಟ್ರಿಕ್ ಕಂಪ್ಯಾನಿಯನ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದು ಸ್ಕೂಟರ್ ಅನ್ನು ಲಾಕ್, ಅನ್‌ಲಾಕ್ ಮಾಡಲು ಸಹಾಯ ಮಾಡುವುದಲ್ಲದೆ ಇದು ಪ್ರಮುಖ ವಾಹನ ಮೆಟ್ರಿಕ್‌ಗಳನ್ನು ಲಾಗಿನ್ ಆಗಲು ಸಹಾಯ ಮಾಡುತ್ತದೆ.

ಇದರೊಂದಿಗೆ ಹೊಸ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮೊದಲ ಬಾರಿಗೆ ಮ್ಯೂಜಿಕ್ ಪ್ಲೇಬ್ಯಾಕ್ ವೈಶಿಷ್ಟ್ಯವನ್ನು ನೀಡಲಾಗಿದ್ದು, ಸವಾರರು ಈಗ ಬ್ಲೂಟೂತ್ ಮೂಲಕ ಅವರ ಫೋನ್‌ಗಳನ್ನು ಕನೆಕ್ಟ್ ಮಾಡಿಕೊಂಡು ಪ್ರಯಾಣದಲ್ಲಿರುವಾಗ ಜಿಯೋಸಾವನ್ ಮತ್ತು ಸ್ಪೋರ್ಟಿಫೈಅಪ್ಲಿಕೇಶನ್‌ಗಳ ಮೂಲಕ ಅವರ ನೆಚ್ಚಿನ ಟ್ಯೂನ್‌ಗಳನ್ನು ಆನಂದಿಸಬಹುದಾಗಿದೆ.

ಹೊಸ ಅಪ್‌ಡೇಟ್‌ನಲ್ಲಿ ಮುಖ್ಯವಾಗಿ ಕ್ರೂಸ್ ಕಂಟ್ರೋಲ್ ಸೇರ್ಪಡೆ ಮಾಡಲಾಗಿದ್ದು, ಇದನ್ನು ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ಮೋಡ್‌ಗಳಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ.

ಇದು ಪ್ರಯಾಣಿಕರ ಇವಿ ಸ್ಕೂಟರ್ ವಿಭಾಗದಲ್ಲಿ ಒಂದು ರೀತಿಯ ಹೊಸ ಅನುಭವ ನೀಡುತ್ತಿದ್ದು, ಇದು ಮುಕ್ತವಾಗಿರುವ ಮಾರ್ಗಗಳಲ್ಲಿ 20 km/h ನಿಂದ 80 km/h ವರೆಗೆ ಹೆಚ್ಚಿನ ಸೌಕರ್ಯ ಮತ್ತು ಸುಗಮ ಸವಾರಿಯ ಅನುಭವವನ್ನು ಖಾತರಿಪಡಿಸಲು ನೇರವಾಗುತ್ತದೆ.

ಕ್ರೂಸ್ ಕಂಟ್ರೋಲ್ ಅನ್ನು ಎಡಭಾಗದ ಡಿಪ್ಯಾಡ್ ಮೇಲಿನ ಬಲಭಾಗದ ಬಟನ್ ಅನ್ನು ದೀರ್ಘವಾಗಿ ಒತ್ತುವ ಮೂಲಕ 20 kmph ಮತ್ತು 80 kmph ನಡುವೆ ಸಕ್ರಿಯಗೊಳಿಸಬಹುದಾಗಿದ್ದು, ಅದರ ಮೇಲೆ ಕ್ರೂಸ್ ಕಂಟ್ರೋಲ್/ರಿವರ್ಸ್ ಐಕಾನ್ ಕೂಡ ಇರುತ್ತದೆ. ಇದನ್ನು ನಾರ್ಮಲ್, ಹೈಪರ್ ಮತ್ತು ಸ್ಪೋರ್ಟ್ ವಿಧಾನಗಳಲ್ಲಿ ಸಕ್ರಿಯಗೊಳಿಸಬಹುದಾಗಿದೆ.

ಈ ಮೂಲಕ ಹೊಸ ನವೀಕರಣವನ್ನು ಎಸ್1 ಪ್ರೊ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಗೆ ಒಲವು ತೋರುತ್ತಿದ್ದು, ಹೊಸ ನವೀಕರಣದೊಂದಿಗೆ ಕಂಪನಿಯು ಎಸ್1 ಪ್ರೊ ಇವಿ ಸ್ಕೂಟರ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ. 1.30 ಲಕ್ಷದಿಂದ ರೂ. 1.40 ಲಕ್ಷಕ್ಕೆ ಏರಿಕೆ ಮಾಡಿದೆ.

ಕಳೆದ ಅಗಸ್ಟ್‌ನಲ್ಲಿ ಇವಿ ಸ್ಕೂಟರ್ ಬಿಡುಗಡೆಯ ನಂತರ ಮೊದಲ ಬಾರಿಗೆ ಬೆಲೆ ಹೆಚ್ಚಿಸಿರುವ ಕಂಪನಿಯು ಬಿಡಿಭಾಗಗಳ ವೆಚ್ಚ ನಿರ್ವಹಣೆ ಮತ್ತು ಹೆಚ್ಚುವರಿ ಫೀಚರ್ಸ್ ಸೇರ್ಪಡೆ ಮಾಡಿರುವ ಗ್ರಾಹಕರಿಗೆ ಹೊರೆಯಾದರೂ ಹೊಸ ಫೀಚರ್ಸ್ ರೈಡಿಂಗ್ ಅನುಭವ ಹೆಚ್ಚಿಸಲಿವೆ.

ಹೊಸ ಇವಿ ಸ್ಕೂಟರ್ ಖರೀದಿದಾಗಿ ಓಲಾ ಕಂಪನಿಯು ಪ್ರಮುಖ ಬ್ಯಾಂಕ್‌ಗಳ ಪಾಲುದಾರಿಕೆಯೊಂದಿಗೆ ಗರಿಷ್ಠ ಸಾಲ ಸೌಲಭ್ಯದೊಂದಿಗೆ ಆಕರ್ಷಕ ಇಎಂಐ ಆಯ್ಕೆಗಳನ್ನು ನೀಡುತ್ತಿದ್ದು, ಓಲಾ ಫೈನಾನ್ಸಿಲ್ ಸರ್ವಿಸ್ ಮೂಲಕವೂ ಗ್ರಾಹಕರು ಹೊಸ ಸ್ಕೂಟರ್ ಖರೀದಿ ಮಾಡಬಹುದಾಗಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ಸದ್ಯಕ್ಕೆ ಎಸ್1 ಪ್ರೊ ಮಾದರಿಯನ್ನು ಮಾತ್ರವೇ ಉತ್ಪಾದನೆಗೊಳಿಸುತ್ತಿದ್ದು, ಎಸ್1 ಮಾದರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈಗಾಗಲೇ ಎಸ್1 ಮಾದರಿಗಾಗಿ ಬುಕಿಂಗ್ ಸಲ್ಲಿಸಿರುವ ಗ್ರಾಹಕರಿಗೆ ಕಂಪನಿಯು ಎಸ್1 ಬದಲಾಗಿ ಎಸ್1 ದರಯಲ್ಲಿಯೇ ಎಸ್1 ಪ್ರೊ ಮಾದರಿಯನ್ನೇ ವಿತರಣೆ ಮಾಡುತ್ತಿದ್ದು, ಕೆಲವು ಪ್ರೀಮಿಯಂ ಫೀಚರ್ಸ್‌ಗಳು, ಸಾಫ್ಟ್‌ವೇರ್ ಅಪ್‌ಡೇಟ್, ಅಧಿಕ ಮೈಲೇಜ್ ಬ್ಯಾಟರಿ ರೇಂಜ್ ಮಾತ್ರ ನೀಡಲಾಗಿಲ್ಲ.

ಒಂದು ವೇಳೆ ಎಸ್1 ಮಾದರಿಗಾಗಿ ಬುಕಿಂಗ್ ಮಾಡಿದ್ದರೂ ಅಂತಹ ಗ್ರಾಹಕರಿಗೆ ಕೇವಲ ಎಸ್1 ಪ್ರೊ ಮಾದರಿಯು ಸಾಮಾನ್ಯ ಆವೃತ್ತಿಯನ್ನು ವಿತರಣೆ ನೀಡಲಾಗುತ್ತಿದ್ದು, ಒಂದು ವೇಳೆ ಹೆಚ್ಚುವರಿ ಫೀಚರ್ಸ್ ಮತ್ತು ಅಧಿಕ ಮೈಲೇಜ್ ರೇಂಜ್ ಬಯಸಿದರೆ ಇನ್ನುಳಿದ ಹಣ ಪಾವತಿ ಮಾಡಿ ಹೈ ಎಂಡ್ ಮಾದರಿಗೆ ಉನ್ನತೀಕರಿಸಿಕೊಳ್ಳಬಹುದಾದ ಆಯ್ಕೆ ನೀಡಲಾಗಿದೆ.


Click it and Unblock the Notifications








